ಹೀಗಿರಲಿದೆ ನೋಡಿ ಮಾರುತಿ ಸುಜುಕಿಯ ಹೊಸ ಎಕ್ಸ್ ಎಲ್6
ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಎಂಪಿವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಪ್ರೀಮಿಯಂ ಎಂಪಿವಿ 6 ಸೀಟುಗಳನ್ನು ಹೊಂದಿರಲಿದೆ. ಈ ಎಂಪಿವಿಗೆ ಎಕ್ಸ್ ಎಲ್6 ಎಂದು ಹೆಸರಿಡಲಾಗಿದೆ. ಈ ಎಂಪಿವಿಯನ್ನು ಬಿಡುಗಡೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಈ ವಾಹನದ ವಿನ್ಯಾಸ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಹೊಸ ಎಕ್ಸ್ ಎಲ್6 ಎಂಪಿವಿಯನ್ನು ಆಗಸ್ಟ್ 21ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ವಾಹನವು ಮಾರುತಿ ಕಂಪನಿಯ ಜನಪ್ರಿಯ ವಾಹನವಾದ ಎರ್ಟಿಗಾ ವಾಹನದ ಮೇಲೆ ಆಧಾರಿತವಾಗಿದೆ. ಈ ಪ್ರೀಮಿಯಂ ಎಂಪಿವಿಯನ್ನು ಕಂಪನಿಯ ನೆಕ್ಸಾ ಡೀಲರ್‍ಗಳ ಮೂಲಕ ಮಾರಾಟ ಮಾಡಲಾಗುವುದು. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‍ನ ಮಾರ್ಕೆಟಿಂಗ್ ಹಾಗೂ ಸೇಲ್ಸ್ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವಾಸ್ತವರವರು ಈ ಬಗ್ಗೆ ಮಾತನಾಡಿದ್ದಾರೆ.

ಮಾರುತಿ ಸುಜುಕಿ ಕಂಪನಿಯು ಮುಂದಿನ ಹಂತದ ಎಕ್ಸೈಸ್‍ಮೆಂಟ್ ಅನ್ನು ಪ್ರೀಮಿಯಂ ಎಂಪಿವಿಯಾದ ಎಕ್ಸ್ ಎಲ್6 ನೊಂದಿಗೆ ನೀಡಲು ಸಿದ್ಧವಾಗಿದ್ದು, ಈ ಎಂಪಿವಿಯನ್ನು ದೇಶಾದ್ಯಂತವಿರುವ ನೆಕ್ಸಾ ಶೋರೂಂಗಳ ಮೂಲಕ ಮಾರಾಟ ಮಾಡಲಾಗುವುದು. ಗ್ರಾಹಕರು ಬಯಸುವ ಹೆಚ್ಚು ಜಾಗ ಹಾಗೂ ಪರ್ಫಾಮೆನ್ಸ್ ಜೊತೆಗೆ ಹೊಸ ಎಕ್ಸ್ ಎಲ್6 ವಾಹನವು ಅನೇಕ ಸ್ಪೋರ್ಟಿ ಡಿಸೈನ್ ಹಾಗೂ ಪ್ರಿಮಿಯಂ ಇಂಟಿರಿಯರ್‍ಗಳನ್ನು ನೀಡಲಿದೆ. ಇದರಿಂದಾಗಿ ಎಂಪಿವಿ ಸೆಗ್‍ಮೆಂಟಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯಲಿದೆ ಎಂದು ಹೇಳಿದ್ದಾರೆ.

ಹೊಸ 6 ಸೀಟರ್‍ನ ಪ್ರೀಮಿಯಂ ಎಂಪಿವಿ, ಜನಪ್ರಿಯ ಎರ್ಟಿಗಾದ ಮೇಲೆ ಆಧಾರಿತವಾಗಿದೆ. ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿರುವ ಸ್ಕೆಚ್‍ಗಳ ಪ್ರಕಾರ ಈ ವಾಹನದಲ್ಲಿ ಅನೇಕ ಅಪ್‍ಡೇಟ್‍ಗಳನ್ನು ಕಾಣಬಹುದು. ಈ ಅಪ್‍ಡೇಟ್‍ಗಳೆಂದರೆ ಮುಂಭಾಗದಲ್ಲಿರುವ ಹೊಸ ವಿನ್ಯಾಸದ ಗ್ರಿಲ್, ಅಪ್‍ಡೇಟ್ ಆಗಿರುವ ಬ್ಲಾಕ್ ಇನ್ಸರ್ಟ್‍ಗಳಿರುವ ಹೆಡ್‍ಲ್ಯಾಂಪ್ ಕ್ಲಸ್ಟರ್‍ಗಳು ಹಾಗೂ ಹೊಸ ವಿನ್ಯಾಸದ ಎಲ್‍ಇಡಿ ಡಿಆರ್‍ಎಲ್‍ಗಳು.

ಇನ್ನಿತರ ಅಪ್‍ಡೇಟ್‍ಗಳೆಂದರೆ ರೂಫ್ ರೇಲ್‍ಗಳು, ಕಾರಿನ ಸುತ್ತಲೂ ಅಳವಡಿಸಿರುವ ಮಸಲ್ ಹಾಗೂ ನವೀಕರಣಗೊಂಡಿರುವ ಎಲ್‍ಇಡಿ ಟೇಲ್‍ಲೈಟ್‍ಗಳು. ಕಾರಿನ ಒಳಭಾಗದಲ್ಲಿ ಟಾಪ್ ಮಾದರಿಯ ಎರ್ಟಿಗಾ ಎಂಪಿಯಲ್ಲಿದ್ದಂತಹ ಎಕ್ವಿಪ್‍ಮೆಂಟ್‍ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿ ಫೀಚರ್‍ಗಳನ್ನು ಅಳವಡಿಸಲಾಗಿದೆ.

ಕ್ಯಾಬಿನ್ ಹಾಗೂ ಡ್ಯಾಶ್‍ಬೋರ್ಡ್‍ಗಳು ಕಪ್ಪು ಬಣ್ಣವನ್ನು ಹಾಗೂ ಸಿಲ್ವರ್ ಅಸೆಂಟ್‍ಗಳನ್ನು ಹೊಂದಿವೆ. ಇವುಗಳು ಈ ಪ್ರೀಮಿಯಂ ಎಂಪಿವಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಪ್ರಮುಖವಾದ ಅಪ್‍ಡೇಟ್ ಎಂದರೆ ಎರಡನೇ ಸಾಲಿನಲ್ಲಿರುವ ಪ್ರತ್ಯೇಕವಾದ ಕ್ಯಾಪ್ಟನ್ ಸೀಟುಗಳು.

ಮೆಕಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ಎಕ್ಸ್ ಎಲ್6 ವಾಹನದಲ್ಲಿಯೂ 1.5 ಲೀಟರ್‍ನ ಕೆ15 ಸೀರಿಸ್‍ನ ಪೆಟ್ರೋಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ. ಈ ಎಂಜಿನ್ 104 ಬಿಹೆಚ್‍ಪಿ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡ್‍ನ ಮ್ಯಾನುವಲ್ ಅಥವಾ 4 ಸ್ಫೀಡ್‍ನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ಗಳಿರಲಿವೆ.

ಮಾರುತಿ ಸುಜುಕಿ ಕಂಪನಿಯು ಬಿಎಸ್6 ಎಂಜಿನ್ ಹೊಂದಿದ್ದ, ಎರ್ಟಿಗಾ ಎಂಪಿವಿಯನ್ನು ಬಿಡುಗಡೆಗೊಳಿಸಿತ್ತು. ಈ ಎಂಪಿವಿ 1.5 ಲೀಟರ್‍ನ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರಿಂದ ಮಾರುತಿ ಸುಜುಕಿ ಕಂಪನಿಯು ಹೊಸ ಎಕ್ಸ್ ಎಲ್6 ಎಂಪಿವಿಯಲ್ಲೂ ಸಹ ಬಿಎಸ್6 ಎಂಜಿನ್ ಅಳವಡಿಸುವುದು ಖಚಿತವಾಗಿದೆ. ಈ ಪೆಟ್ರೋಲ್ ಎಂಜಿನ್ ಅನ್ನು ಮಾರುತಿ ಸುಜುಕಿಯ ಎಸ್‍ಹೆಚ್‍ವಿಎಸ್ (ಮೈಲ್ಡ್ ಹೈಬ್ರಿಡ್) ಟೆಕ್ನಾಲಜಿಯ ಜೊತೆಗೆ ನೀಡಲಾಗುವುದು.

ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಹಲವು ಬಾರಿ ಎಕ್ಸ್ ಎಲ್6 ಎಂಪಿವಿಯನ್ನು ಸ್ಪಾಟ್ ಟೆಸ್ಟ್ ಮಾಡಿದೆ. ಈ ವಾಹನವನ್ನು ವಿವಿಧ ಬಣ್ಣಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಕೊನೆಯ ಬಾರಿಗೆ ಡೀಪ್ ಮೆಟಾಲಿಕ್ ಬ್ರೌನ್ ಬಣ್ಣದ ಎಂಪಿವಿಯನ್ನು ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಹೆಚ್ಚು ಗ್ರಾಹಕರನ್ನು ಸೆಳೆಯಲು ಈ ಎಂಪಿವಿಯನ್ನು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಎಕ್ಸ್ ಎಲ್6 ಎಂಪಿವಿ ಮಾರುತಿ ಸುಜುಕಿ ಕಂಪನಿಯ ಸರಣಿಯಲ್ಲಿ ಎರ್ಟಿಗಾ ಮಾದರಿಗಿಂತ ಮೇಲಿನ ಸ್ಥಳದಲ್ಲಿರಲಿದೆ. ಈ ಎಂಪಿವಿಯನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಎರಡೂ ಮಾದರಿಗಳ ಬೆಲೆಯು ಸ್ಟಾಂಡರ್ಡ್ ಎರ್ಟಿಗಾ ಬೆಲೆಗಿಂತ ಸ್ವಲ್ಪ ಹೆಚ್ಚಿರಲಿದೆ. ಬಿಡುಗಡೆಯಾದ ನಂತರ ಎಕ್ಸ್ ಎಲ್6 ವಾಹನವು ಎರ್ಟಿಗಾ ವಾಹನದಂತೆಯೇ ಮಹೀಂದ್ರಾ ಕಂಪನಿಯ ಮರಾಜೋ ಹಾಗೂ ಟೊಯೊಟಾ ಇನ್ನೋವಾ ಕ್ರಿಸ್ಟಾ ವಾಹನಗಳಿಗೆ ಪೈಪೋಟೀ ನೀಡಲಿದೆ.
Image Courtesy: GaadiWaadi


Click it and Unblock the Notifications