ಹ್ಯುಂಡೈ ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ತಲೆಮಾರಿನ ವ್ಯಾಗನ್ ಆರ್ ಹ್ಯಾಚ್‍ಬ್ಯಾಕ್ ಕಾರನ್ನು ಇದೇ ಜನವರಿ 23 ರಂದು ಬಿಡುಗಡೆ ಮಾಡಲಾಗಿದ್ದು, ಈಗಾಗಲೆ ಮಾರುಕಟ್ಟೆಯಲ್ಲಿ ಜನಪ್ರೀಯತೆಯನ್ನು ಪಡೆದಿರುವ ಸ್ಯಾಂಟ್ರೋ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ಮೊದಲ ತಲೆಮಾರಿನ ವ್ಯಾಗನ್ ಆರ್ ಕಾರುಗಳು 1999ರಲ್ಲಿ ಬಿಡುಗಡೆಗೊಂಡಿದ್ದು, ಇದೀಗ ಸುಮಾರು 20 ವರ್ಷಗಳಲ್ಲಿ 22 ಲಕ್ಷಕ್ಕ್ಕು ಅಧಿಕವಾಗಿ ಮಾರಾಟಗೊಂಡಿದೆ. ಬಿಡುಗಡೆಯ ಅವಧಿಯಲ್ಲಿ ಸಂಸ್ಥೆಯು ಈ ಕಾರಿನ ಸಿಎನ್‍ಜಿ ವೇರಿಯಂಟ್ ಅನ್ನು ಶೀಘ್ರವೇ ಪರಿಚಯಿಸುವುದಾಗಿ ಹೇಳಿಕೊಂಡಿದ್ದು, ಇದೀಗ ಸಿಎನ್‍ಜಿ ಕಾರಿನ ಬಗ್ಗೆ ಹೆಚ್ಚು ಮಾಹಿತಿಯು ಲಭ್ಯವಾಗಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ಒಟ್ಟು ಎರಡು ವೇರಿಯಂಟ್‍ಗಳಲ್ಲಿ ಲಭ್ಯ

ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆಗೊಳಿಸಲಿರುವ ವ್ಯಾಗನ್ ಆರ್ ಕಾರಿನ ಸಿಎನ್‍ಜಿ ಆವೃತ್ತಿಯು ಕಾರಿನ ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ (O) ವೇರಿಯಂಟ್‍‍ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಶೀಘ್ರವೇ ಸಿಎನ್‍ಜಿ ವೇರಿಯಂಟ್‍‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರು ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ಬೆಲೆ (ಅಂದಾಜು)

ಸಿಎನ್‍ಜಿ ಆಧಾರಿತ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ರೂ. 4.90 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದಿರಬಹುದೆಂದು ಅಂದಾಜಿಸಲಾಗಿದ್ದು, ಪೆಟ್ರೋಲ್ ಆಧಾರಿತ ಕಾರಿಗಿಂತಲೂ ಬೆಲೆಯಲ್ಲಿ ರೂ. 75,000 ಅಧಿಕ ಇರಬಹುದು ಎನ್ನಲಾಗಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ಬೆಲೆಯಲ್ಲಿ ಹ್ಯುಂಡೈ ಸ್ಯಾಂಟ್ರೋಗಿಂತಲೂ ಕಡಿಮೆ

ಹೌದು, ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಸಿಎನ್‍ಜಿ ಆವೃತ್ತಿಗಳು ಮಾರುಕಟ್ಟೆಯಲ್ಲಿ ತನ್ನ ಎದುರಾಳಿ ಹ್ಯುಂಡೈ ಸ್ಯಾಂಟ್ರೋ ಕಾರಿಗಿಂತಲೂ ಕಡಿಮೆ ಇರಲಿದೆ. ಏಕೆಂದರೆ ಸಿಎನ್‍ಜಿ ಆವೃತ್ತಿಯ ಹ್ಯುಂಡೈ ಸ್ಯಾಂಟ್ರೋ ಕಾರು ರೂ. 5.23 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ಸಿಎನ್‍ಜಿ ಆವೃತ್ತಿಯ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಕೇವಲ ಒಂದೇ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಕೆ10ಬಿ 1.0 ಲೀಟರ್, 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 67ಬಿಹೆಚ್‍ಪಿ 90ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದ್ದು, ಸಿಎನ್‍ಜಿ ಆಧಾರಿತ ವ್ಯಾಗನ್ ಆರ್ ಕಾರು ಪೆಟ್ರೋಲ್ ಆವೃತ್ತಿಗಳಿಗಿಂಗಲೂ ಕಡಿಮೆ ಸಾಮರ್ಥ್ಯವನ್ನು ಹೊರಹಾಕಲಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಸಂಸ್ಥೆಯ ಸ್ವಿಫ್ಟ್, ಎರ್ಟಿಗಾ ಮತ್ತು ಇಗ್ನಿಸ್ ಕಾರುಗಳಲ್ಲಿ ಬಳಸಲಾದ ಹಾರ್ಟ್‍ಟೆಕ್ಶ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದ್ದು, ಹಳೆಯ ವ್ಯಾಗನ್ ಆರ್ ಕಾರಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ಹೊಸ ವ್ಯಾಗನ್ ಆರ್ ವಿನ್ಯಾಸ

ಬಿಡುಗಡೆಯಾದ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಮುಂಭಾಗದಲ್ಲಿ ಈ ಬಾರಿ ಹೊಸ ಗ್ರಿಲ್ ಡಿಸೈನ್, ನವೀಕರಿಸಲಾದ ಬಂಪರ್ ಮತ್ತು ಫಾಗ್ ಲ್ಯಾಂಪ್ ಅನ್ನು ಪಡೆದುಕೊಂಡಿದೆ. ಇದಲ್ಲದೇ ಅಪ್ಡೇಟೆಡ್ ವರ್ಟಿಕಲ್ ಟೈಲ್‍ಲೈಟ್ಸ್, ಕ್ರೋಮ್ ಸ್ಟ್ರಿಪ್ ಅನ್ನು ನೀಡಲಾಗಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ಇನ್ನು ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಈ ಕಾರು 14 ಇಂಚಿನ ಅಲಾಯ್ ವ್ಹೀಲ್ಸ್, ಪ್ಲೋಟಿಂಗ್ ರೂಫ್ ಡಿಸೈನ್, ಮತ್ತು ಒಆರ್‍‍ವಿಎಂನ ಮೇಲೆ ಇಂಟಿಗ್ರೇಟೆಡ್ ಇಂಡಿಕೇಟರ್‍‍ಗಳನ್ನು ನೀಡಲಾಗಿದೆ. ಕಾರಿನ ಹಿಂಭಾಗದಲ್ಲಿರುವ ನಂಬರ್ ಪ್ಲೇಟ್‍ನ ಮೇಲೆ ಕ್ರೋಮ್ ಸ್ಟ್ರಿಪ್ ಹಾಗು 'Wagon R' ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ವೇರಿಯಂಟ್‍ಗಳು ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮಾರುಕಟ್ಟೆಯಲ್ಲಿರುವ ಹ್ಯುಂಡಾಯ್ ಸ್ಯಾಂಟ್ರೋ, ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್ ಮತ್ತು ದಟ್ಸನ್ ಗೋ ಕಾರುಗಳಿಗೆ ಪೈಪೋಟಿ ನೀಡಲಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ವೈಶಿಷ್ಟ್ಯತೆಗಳು

ಹೊಸ ವ್ಯಾಗನ್ ಆರ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 7 ಇಂಚಿನ ಟಚ್‍ಸ್ಕ್ರೀನ್ ಒನ್ಫೋಟೈನ್ಮೆಂಟ್ ಸಿಸ್ಟಂ, ಮ್ಯಾನುವಲ್ ಎಸಿ ಕಂಟ್ರೋಲ್ಸ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ಪವರ್ ಮೀಟರ್ ಮತ್ತು ಅನಾಲಾಗ್ ಸ್ಪೀಡೊಮೀಟರ್ ಅನ್ನು ಅಳವಡಿಸಲಾಗಿದೆ.

ಸ್ಯಾಂಟ್ರೋ ಕಾರಿನ ಬೆಲೆಗಿಂತಲೂ ಕಡಿಮೆ ಇರಲಿವೆ ವ್ಯಾಗನ್ ಆರ್ ಸಿಎನ್‍ಜಿ ಕಾರಿನ ಬೆಲೆ

ಸುರಕ್ಷಾ ಸಾಧನಗಳು

ಮಾರುತಿ ಸುಜುಕಿ ವ್ಯಾಗನ್ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು, ಎಬಿಎಸ್‍ನೊಂದಿಗೆ ಇಬಿಡಿ, ಡ್ಯುಯಲ್ ಏರ್‍‍ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಅಳವಡಿಸಲಾಗಿದೆ.

Source: Ujjwal Saxena

Kannada
English summary
2019 Maruti Wagon R CNG Prices Revealed – More Afforable Than The Hyundai Santro. Read In Kannada
Story first published: Friday, March 1, 2019, 12:15 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more