ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

ವರ್ಷದ ಆರಂಭದಲ್ಲಿ ಬಿಡುಗಡೆಗೊಂಡಿದ್ದ ನ್ಯೂ ಜನರೇಷನ್ ವ್ಯಾಗನ್‌ಆರ್ ಹ್ಯಾಚ್‌ಬ್ಯಾಕ್ ಆವೃತ್ತಿಯು ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಬಿಡುಗಡೆಯಾದ 10 ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ಯುನಿಟ್ ಮಾರಾಟಗೊಂಡಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

ಮಾರುತಿ ಸುಜುಕಿ ನಿರ್ಮಾಣದ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ವ್ಯಾಗನ್ಆರ್ ಕಾರು ಸದ್ಯ ಟಾಲ್ ಬಾಯ್ ಡಿಸೈನ್ ಪ್ರೇರಣೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ನ್ಯೂ ಜನರೇಷನ್ ಆವೃತ್ತಿಯ ಬಿಡುಗಡೆಯ ನಂತರ ವ್ಯಾಗನ್ಆರ್ ಕಾರು ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಶೇ. 29.5 ರಷ್ಟು ಹೆಚ್ಚಳವಾಗಿದೆ. ಹಳೆಯ ಕಾರು ಆವೃತ್ತಿಗಿಂತಲೂ ಹೊಸ ಕಾರಿನ ಹೊಸ ಭಾಗದ ಡಿಸೈನ್ ಸಾಕಷ್ಟು ಆಕರ್ಷಣೆಯಾಗಿದ್ದು, ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಕಡ್ಡಾಯ ಬಿಎಸ್-6 ಎಂಜಿನ್ ಜೋಡಣೆ ಹೊಂದಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

ವ್ಯಾಗನ್‌ಆರ್ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 67-ಬಿಎಚ್‌ಪಿ ಪ್ರೇರಿತ 1.0-ಲೀಟರ್ ಪೆಟ್ರೋಲ್ ಮತ್ತು 90-ಬಿಎಚ್‌ಪಿ ಪ್ರೇರಿತ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಖರೀದಿಗೆ ಲಭ್ಯವಿರುವ ವ್ಯಾಗನ್‌ಆರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.4.42 ಲಕ್ಷದಿಂದ ರೂ.5.91 ಲಕ್ಷ ಬೆಲೆ ಹೊಂದಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್‌ಗಳು ಈ ಕಾರಿನಲ್ಲಿವೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

ಹಾಗೆಯೇ ವ್ಯಾಗನ್ಆರ್ ಆಯ್ದ ಮಾದರಿಗಳಲ್ಲಿ 1.0-ಲೀಟರ್ ಸಿಎನ್‌ಜಿ ಯುನಿಟ್ ಜೋಡಿಸಲಾಗಿದ್ದು, ಸಿಎನ್‌ಜಿ ವ್ಯಾಗನ್ಆರ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.4.99 ಲಕ್ಷದಿಂದ ರೂ.5.06 ಲಕ್ಷ ಬೆಲೆ ಪಡೆದುಕೊಂಡಿದೆ. ಈ ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ವ್ಯಾಗನ್‌ಆರ್ ಕಾರು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳಲಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

ಇನ್ನು ದೇಶದ ನಂ.1 ಕಾರು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿರುವ ಮಾರುತಿ ಸುಜುಕಿಯು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರು ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, 2014ರಿಂದ ಇದುವರೆಗೆ ಬರೋಬ್ಬರಿ 6 ಲಕ್ಷ ಯುನಿಟ್ ಮಾರಾಟ ಮಾಡಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

2014ರಲ್ಲಿ ಮೊದಲ ಬಾರಿಗೆ ಸೆಲೆರಿಯೊ ಹ್ಯಾಚ್‌ಬ್ಯಾಕ್ ಆವೃತ್ತಿಯಲ್ಲಿ ಆಟೋ ಗೇರ್ ಶಿಫ್ಟ್(ಎಜಿಎಸ್) ತಂತ್ರಜ್ಞಾನ ಪರಿಚಯಿಸುವ ಮೂಲಕ ಆಟೋ ಉದ್ಯಮ ಹೊಸ ಸಂಚಲನಕ್ಕೆ ಕಾರಣವಾಗಿದ್ದ ಮಾರುತಿ ಸುಜುಕಿಯು ಇದೀಗ 6 ಲಕ್ಷ ಯುನಿಟ್ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

ಗ್ರಾಹಕರ ಬೇಡಿಕೆಯೆಂತೆ ಮೂರು ವಿವಿಧ ಮಾದರಿಯ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್ ತಂತ್ರಜ್ಞಾನ ಹೊಂದಿರುವ ಮಾರುತಿ ಸುಜುಕಿಯು ಆಟೋ ಗೇರ್ ಶಿಫ್ಟ್(ಎಜಿಎಸ್), ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮತ್ತು ಕಂಟಿನ್ಯೂಸ್ ವೆರಿಬಲ್ ಟ್ರಾನ್ಸ್‍ಮಿಷನ್(ಸಿವಿಟಿ) ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಒದಗಿಸುತ್ತಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

ಇವುಗಳಲ್ಲಿ ಆಟೋ ಗೇರ್ ಶಿಫ್ಟ್(ಎಜಿಎಸ್) ಪ್ರೇರಿತ ವಾಹನ ಮಾರಾಟವು ಅಧಿಕ ಬೇಡಿಕೆ ಹೊಂದಿದ್ದು, ಎಜಿಎಸ್ ಪ್ರೇರಿತ ಕಾರುಗಳ ಮಾರಾಟವೇ ಬರೋಬ್ಬರಿ 5 ಲಕ್ಷ ಯುನಿಟ್ ಮಾರಾಟ ಗುರಿತಲುಪಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಲ್ ಬಾಯ್ ವ್ಯಾಗನ್‌ಆರ್

ಇನ್ನುಳಿದ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮತ್ತು ಕಂಟಿನ್ಯೂಸ್ ವೆರಿಬಲ್ ಟ್ರಾನ್ಸ್‍ಮಿಷನ್(ಸಿವಿಟಿ) ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳ ಮಾರಾಟ ಎರಡನೇ ಮತ್ತು ಮೂರನೇ ಸ್ಥಾನ ಹೊಂದಿದ್ದು, ನಗರಪ್ರದೇಶಗಳಲ್ಲಿ ವಾಹನ ಚಾಲನೆಯನ್ನು ಸುಲಭವಾಗಿಸಿರುವುದೇ ಇಷ್ಟೊಂದು ಜನಪ್ರಿಯತೆ ಕಾರಣವಾಗಿದೆ.

Most Read Articles

Kannada
English summary
Maruti Wagon R Sales Milestone: Tall-Boy Crosses 1 Lakh Units Since Launch In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X