ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಮಾರುತಿ ಸುಜುಕಿ ತನ್ನ ಜನಪ್ರಿಯ ಎಂಪಿವಿ ಮಾದರಿಯಾದ ಎರ್ಟಿಗಾ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಹೊಸ ವೇರಿಯೆಂಟ್‌ವೊಂದನ್ನು ಅಭಿವೃದ್ಧಿಗೊಳಿಸಿದ್ದು, ಹೊಸ ಆವೃತ್ತಿಯು ಮುಂದಿನ ತಿಂಗಳು ಅಗಸ್ಟ್ 21ಕ್ಕೆ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಸಾಮಾನ್ಯ ಮಾದರಿಯ ಎರ್ಟಿಗಾಗಿಂತಲೂ ತುಸು ಭಿನ್ನವಾಗಿರುವ ಎರ್ಟಿಗಾ ಎಕ್ಸ್ಎಲ್6 ಮಾದರಿಯು ಹಲವು ಹೊಸ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಸದ್ಯ ಮಾರುಕಟ್ಟೆಯಲ್ಲಿರುವ 7 ಸೀಟರ್ ಎರ್ಟಿಗಾಗಿಂತ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ 6 ಸೀಟರ್ ಎರ್ಟಿಗಾ ಎಕ್ಸ್ಎಲ್6 ಮಾದರಿಯು ವ್ಯಯಕ್ತಿಕ ಕಾರು ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದ್ದು, 2+2+2 ವಿನ್ಯಾಸದಲ್ಲಿ ಆಸನ ಸೌಲಭ್ಯವನ್ನು ಹೊಂದಿದೆ. ಹಾಗೆಯೇ ಕಾರಿನ ಮಧ್ಯದಲ್ಲಿರುವ ಸೀಟ್‍‍ಗಳು ಸಹ ಈ ಬಾರಿ ಕ್ಯಾಪ್ಟನ್ ಸೀಟ್‍ ವೈಶಿಷ್ಟ್ಯತೆ ಹೊಂದಿದ್ದು, ಅರಾಮಾಮದಾಯಕ ಪ್ರಮಾಣವನ್ನು ಒದಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಇನ್ನು ಬಿಡುಗಡೆಯಾಗಲಿರುವ ಎರ್ಟಿಗಾ ಎಕ್ಸ್ಎಲ್6 ಮಾದರಿಯು ಆಲ್ಫಾ ಮತ್ತು ಜೆಟಾ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರಿನಲ್ಲಿ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಎಕ್ಸ್ಎಲ್6 ಕಾರು ವಿಶೇಷವಾಗಿ ನೆಕ್ಸಾ ಶೋರೂಂನಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿರಲಿದೆ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಎರಡು ಹಂತದ ಕಾರು ಮಾರಾಟ ಪ್ರಕ್ರಿಯೆಯನ್ನು ಹೊಂದಿದ್ದು, ಅರೆನಾ ಶೋರೂಂಗಳ ಮೂಲಕ ಸಾಮಾನ್ಯ ಕಾರುಗಳನ್ನು ಮತ್ತು ಪ್ರೀಮಿಯಂ ಕಾರುಗಳನ್ನು ನೆಕ್ಸಾ ಶೋರೂಂ ಮೂಲಕ ಕಾರು ಮಾರಾಟವನ್ನು ಮಾಡುತ್ತಿದೆ. ಇದರಲ್ಲಿ ಇದೀಗ ಬಿಡುಗಡೆಯಾಗುತ್ತಿರುವ ಎರ್ಟಿಗಾ ಎಕ್ಸ್ಎಲ್6 ಮಾದರಿಯ ಕೂಡಾ ನೆಕ್ಸಾದಲ್ಲಿ ಮಾತ್ರವೇ ಖರೀದಿಸಬಹುದಾಗಿದೆ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಇನ್ನುಳಿದಂತೆ ಸಾಮಾನ್ಯ ಮಾದರಿಯ ಎರ್ಟಿಗಾ ಆವೃತ್ತಿಯು ಅರೆನಾದಲ್ಲಿಯೇ ಖರೀದಿಗೆ ಲಭ್ಯವಿರಲಿದ್ದು, ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಇಷ್ಟಪಡುವ ಗ್ರಾಹಕರಿಗೆ ಎರ್ಟಿಗಾ ಎಕ್ಸ್ಎಲ್6 ಮಾದರಿಯು ಖರೀದಿಗೆ ಅತ್ಯುತ್ತಮ ಮಾದರಿಯಾಗಲಿದೆ. ಜೊತೆಗೆ ಹೊಸ ಎಕ್ಸ್ಎಲ್6 ಮಾದರಿಯು ನೆಕ್ಸಾ ಬ್ಲ್ಯೂ ಬಣ್ಣದಲ್ಲಿ ಖರೀದಿ ಲಭ್ಯವಾಗುತ್ತಿರುವುದು ಹೊಸ ಕಾರಿಗೆ ಮತ್ತಷ್ಟು ಮೆರಗು ತಂದಿದ್ದು, ಹೊಸ ಭಾಗದ ವಿನ್ಯಾಸವನ್ನು ಹೆಚ್ಚಿಸಲು ನೀಡಲಾಗಿರುವ ಕ್ರೋಮ್ ಮತ್ತು ಕ್ಲ್ಯಾಡಿಂಗ್ ಸೌಲಭ್ಯವು ಕೂಡಾ ಗಮನಸೆಳೆಯುತ್ತವೆ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಇವುಗಳಲ್ಲದೇ ಆ್ಯಪಲ್ ಕಾರ್‍ ‍ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ನ್ಯಾವಿಗೇಷನ್ ಸಪೋರ್ಟ್ ಮಾಡುವ ಸ್ಮಾರ್ಟ್‍ ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಎಂಬ ಹೊಸ ಸುರಕ್ಷಾ ಸಾಧನಗಳನ್ನು ಕೂಡಾ ಹೊಂದಿರಲಿದೆ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಹಾಗೆಯೇ ಹಿಂಭಾಗದ ವಿನ್ಯಾಸವನ್ನು ಗಮನಿಸಿದ್ದಲ್ಲಿ ಮಾರುತಿ ಸುಜುಕಿ ಎಕ್ಸ್ಎಲ್6 ಮಾದರಿಯು ಸಾಮಾನ್ಯ ಆವೃತ್ತಿಯ ಹೋಲಿಕೆಯನ್ನೇ ಪಡೆದಿದ್ದು, ಕಾರಿನ ಹಿಂಭಾಗದಲ್ಲಿ ನೆಕ್ಸಾ ಸ್ಟಿಕ್ಕರ್ ಅನ್ನು ಸಹ ನೀಡಲಾಗಿದೆ. ಇದರೊಂದಿಗೆ 15 ಇಂಚಿನ ಅಲಾಯ್ ವ್ಹೀಲ್ಸ್, ರೂಫ್ ರೈಲ್ಸ್, ವಿಂಗ್ ಮಿರರ್ಸ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಸೌಲಭ್ಯದೊಂದಿಗೆ ವಿಭಿನ್ನವಾದ ಎಂಪಿವಿಯಾಗಿ ಕಾಣಿಸಿಕೊಂಡಿದೆ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಹೊಸ ಕಾರಿನಲ್ಲಿ ಫ್ಲೇರ್ಡ್ ವ್ಹೀಲ್ ಆರ್ಚೆಸ್, ಹೊಸ ಕ್ರೋಮ್ ಗ್ರಿಲ್, ಆಕರ್ಷಕವಾದ ಹೆಡ್‍ಲೈಟ್‍ಗಳು ಮತ್ತು ಎಲ್ಇಡಿ ಡಿಆರ್‍ಎಲ್ ಅನ್ನು ಅಳವಡಿಸಲಾಗಿದ್ದು, ಉತ್ತಮ ಡ್ರೈವ್ ಅನುಭವಕ್ಕಾಗಿ ಹೈ ಗ್ರೌಂಡ್ ಕ್ಲಿಯರೆನ್ಸ್, ರೂಫ್ ರೈಲ್ಸ್ ಮತ್ತು ಇನ್ನಿತರೆ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಎಕ್ಸ್ಎಲ್6 ಕಾರು ಮಾದರಿಯು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಇದು 104-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ. ಹಾಗೆಯೇ ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರಲಿದೆ ಎನ್ನಲಾಗಿದೆ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಎರಡನೇ ತಲೆಮಾರಿನ ಎರ್ಟಿಗಾ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 11.21 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಎಕ್ಸ್ಎಲ್6 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಮಾರುತಿ ಎರ್ಟಿಗಾ ಹೊಸ ಆವೃತ್ತಿ..!

ಇದೀಗ ಬಿಡುಗಡೆಯಾಗುತ್ತಿರುವ ಹೊಸ ಎರ್ಟಿಗಾ ಎಕ್ಸ್ಎಲ್6 ವೇರಿಯೆಂಟ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ 13 ವೆರಿಯೆಂಟ್‌ಗಳಿಂತಲೂ ತುಸು ಭಿನ್ನವಾಗಿರಲಿದೆ. ವಿಶೇಷವಾಗಿ ಇದು ವ್ಯಯಕ್ತಿಕ ಕಾರು ಬಳಕೆದಾರರ ಬೇಡಿಕೆಯೆಂತೆ ಎರ್ಟಿಗಾ ಎಕ್ಸ್ಎಲ್6 ಮಾದರಿಯನ್ನು ಅಭಿವೃದ್ಧಿಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Image Source: Gaadiwaadi

Most Read Articles

Kannada
English summary
Maruti Suzuki XL6 Variants Confirmed. Read in Kannada.
Story first published: Friday, July 26, 2019, 13:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X