ಬಿಡುಗಡೆಯಾಯ್ತು ಜನಪ್ರಿಯ ಬೆಂಝ್ ಜಿ 350ಡಿ

ಜರ್ಮನ್ ಮೂಲದ ವಾಹನ ಉತ್ಪಾದನಾ ಸಂಸ್ಥೆ ಮರ್ಸಿಡಿಸ್ ಬೆಂಝ್ ಹೊಸ ಜಿ 350ಡಿ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಭಾರತದ ಎಕ್ಸ್ ಶೋರೂಂ ಪ್ರಕಾರ ಹೊಸ ಮರ್ಸಿಡಿಸ್ ಬೆಂಝ್ ಜಿ 350ಗೆ ರೂ.1.5 ಕೋಟಿ ಬೆಲೆಯನ್ನು ಹೊಂದಿದೆ.

ಬಿಡುಗಡೆಯಾಯ್ತು ಜನಪ್ರಿಯ ಬೆಂಝ್ ಜಿ 350ಡಿ

ಹೊಸ ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಅಥವಾ ಜಿ 350 ಡಿ ಎಸ್‍‍ಯು‍ವಿ 3.0 ಲೀಟರ್ ಇನ್ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್‍ ಅನ್ನು ಹೊಂದಿದೆ. ಈ ಎಂಜಿನ್ 282 ಬಿಎಚ್‍ಪಿ ಪವರ್ ಮತ್ತು 600 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೆ ಮಾದರಿಯ ಎಂಜಿನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿರುವ ಎಸ್-ಕ್ಲಾಸ್ 350 ಡಿಗೆ ಅಳವಡಿಸಿದ್ದಾರೆ. ಈ ಎಂಜಿನ್ ಮೊದಲೆ ಬಿಎಸ್-6 ಎಂಜಿನ್ ಆಗಿದೆ. ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 9ಜಿ-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಪ್ರತಿಗಂಟೆಗೆ 199 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಜನಪ್ರಿಯ ಬೆಂಝ್ ಜಿ 350ಡಿ

ಹೊಸ ಬೆಂಝ್ ಪೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಅಥವಾ ಜಿ 350 ಡಿ ಎಸ್‍‍ಯು‍ವಿ ಆಫ್ ರೋಡ್ ವಾಹನವಾಗಿದೆ. ಇದು ತಗ್ಗು ಪ್ರದೇಶ ಅಥವಾ ಇತರ ಕಠಿಣ ರಸ್ತೆಗಳಲ್ಲಿಯು ಸಲೀಸಾಗಿ ಚಲಿಸುತ್ತದೆ. ಕಂಪನಿಯು ಈಗಾಗಲೇ ಭಾರತದಲ್ಲಿ ಕಾರ್ಯಕ್ಷಮತೆ ಆಧಾರಿತ ಮರ್ಸಿಡಿಸ್ಎಎಂ‍ಜಿ ಜಿ 63 ಅನ್ನು ರೂ.2.19 ಕೋಟಿ ಬೆಲೆ ಮಾರುಕಟ್ಟೆಗೆ ಬಿಡುಗಡೆ‍ಗೊಳಿಸಿದ್ದಾರೆ.

ಬಿಡುಗಡೆಯಾಯ್ತು ಜನಪ್ರಿಯ ಬೆಂಝ್ ಜಿ 350ಡಿ

ಹೊಸ ಬೆಂಝ್ 241 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿ 350 ಡಿ ಜಿ-ವ್ಯಾಗನ್‌ ವಿನ್ಯಾಸ ಅದೇ ಬಾಕ್ಸೀ ಮತ್ತು ಐಕಾನಿಕ್ ಆಗಿದೆ. ಈ ಬೆಂಝ್ ಮುಂಭಾಗದಲ್ಲಿ ದೊಡ್ಡ ಪ್ಯಾನ್ ಅಮೆರಿಕಾನಾ ಗ್ರಿಲ್, ವೃತ್ತಕಾರದ ಹೆಡ್‍‍ಲ್ಯಾಂಪ್ ಯು‍ನಿ‍ಟ್ ಮತ್ತು ದೊಡ್ಡ 20 ಇಂಚಿನ ಅಲಾಯ್ ವ್ಹೀಲ್‍ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಜನಪ್ರಿಯ ಬೆಂಝ್ ಜಿ 350ಡಿ

ಜಿ ವ್ಯಾಗನ್ ಇಂಟಿರಿಯರ್‍‍ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿ 350 ಡಿ ಇಂಟಿರಿಯರ್‍‍ನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ಪೋಟೈನ್‍‍ಮೆಂಟ್ ಸಿಸ್ಟಂ, ಲೆದರ್ ಸೀಟ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳು, ತ್ರಿ ಝೋನ್ ಕ್ಲಮೇಂಟ್ ಕಂಟ್ರೋಲ್, ಮಲ್ಟಿ ಪಂಕ್ಷನಲ್ ಸ್ಟಿರೀಂಗ್ ವ್ಹೀಲ್ ಜೊತೆಯಲ್ಲಿ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಜನಪ್ರಿಯ ಬೆಂಝ್ ಜಿ 350ಡಿ

ಹೊಸ ಬೆಂಝ್ 350 ಡಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಎ‍ಬಿಎಸ್ ಜೊತೆ ಇ‍ಬಿಡಿ,ಬ್ರೇಕ್ ಅಸಿಸ್ತ್, ಟ್ರ್ಯಾಕ್ಷನ್ ಕಂಟ್ರೋಲ್, ಇಎಸ್‍ಸಿ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಜನಪ್ರಿಯ ಬೆಂಝ್ ಜಿ 350ಡಿ

ಮರ್ಸಿಡಿಸ್ ಬೆಂಝ್ ಇಂಡಿಯಾದ ಎಂಡಿ ಮತ್ತು ಸಿಇಒ ಮಾರ್ಟಿನ್ ಶೈಂಜ್ ಅವರು ಮಾತನಾಡಿ, ಇಂದು ಮರ್ಸಿಡಿಸ್ ಬೆಂಝ್ ಭಾರತದ ಬೆಂಝ್ ಪ್ರಿಯರಿಗೆ ಮತ್ತು ಗ್ರಾಹಕರಿಗಾಗಿ ಮೊದಲ ಬಾರಿಗೆ ಡೀಸೆಲ್ ಜಿ-ಕ್ಲಾಸ್ ಮರ್ಸಿಡಿಸ್ ಬೆಂಝ್ ಜಿ 350 ಅನ್ನು ಬಿಡುಗಡೆಗೊಳಿಸಿದ್ದೇವೆ. ಇದು ಗ್ರಾಹಕರ ಜೀವನಶೈಲಿಗೆ ಹೊಂದಿಕೊಳ್ಳುವ ವಾಹನವಾಗಲಿದೆ. ಜಿ-ಕ್ಲಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ಐಷಾರಾಮಿ ಆಫ್ ರೋಡರ್ ಅನ್ನು ಉತ್ಸಾಹದಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಯಾಯ್ತು ಜನಪ್ರಿಯ ಬೆಂಝ್ ಜಿ 350ಡಿ

ನಮ್ಮ ಅಪ್ರತಿಮ ಜಿ-ಕ್ಲಾಸ್ ಅನ್ನು ಹೊರತುಪಡಿಸಿ ಉತ್ತಮ ಪ್ರಭಾವ ಬೀರಲು ಇನ್ನೋಂದು ಉತ್ತಮ ವಾಹನ ಇರಲು ಸಾಧ್ಯವಿಲ್ಲ. ಹೊಸ ಬೆಂಝ್ ಜಿ 350 ಡಿ ಯೊಂದಿಗೆ ನಾವು 15 ಕ್ಕೂ ಹೆಚ್ಚು ವಿಶೇಷತೆಗಳನ್ನು ನೀಡಲು ಸಂತೋಷಪಡುತ್ತೇವೆ. ಜಿ-ಕ್ಲಾಸ್ ಉತ್ತಮವಾದ ಆಫ್-ರೋಡ್ ವಾಹನವಾಗಿದೆ ಮತ್ತು ಈ ವಾಹನ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಜನಪ್ರಿಯ ಬೆಂಝ್ ಜಿ 350ಡಿ

ಮರ್ಸಿಡಿಸ್ ಬೆಂಝ್ ಜಿ 350 ಡಿ ಅನ್ನು ಸಿಬಿ‍ಯು ಮಾರ್ಗದ ಮೂಲಕ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುವುದು. ಮರ್ಸಿಡಿಸ್ ಬೆಂಝ್ ಜಿ 350 ಡಿ ದೇಶಿಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಸ್ಪೋರ್ಟ್ ಮತ್ತು ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍ಸಿ 200, ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

More from DriveSpark

Article Published On: Wednesday, October 16, 2019, 16:50 [IST]
English summary
Mercedes-Benz G 350d Launched In India: Priced At Rs 1.5 Crore - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+