ಪರ್ಫಾಮೆನ್ಸ್ ಪ್ರಿಯರಿಗಾಗಿ ಹೊಸ ಎಂಜಿನ್ ಆಯ್ಕೆ ಪಡೆಯಲಿದೆ ನ್ಯೂ ಜನರೇಷನ್ ಹೋಂಡಾ ಸಿಟಿ?
2020ರ ಮಾರ್ಚ್ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿರುವ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ ಕಾರು ಮಾದರಿಯು ಕಳೆದ ವಾರವಷ್ಟೇ ಥೈಲ್ಯಾಂಡ್‌ನಲ್ಲಿ ಅನಾವರಣಗೊಂಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿವಿಧ ಮಾದರಿಯ ಎಂಜಿನ್ ಆಯ್ಕೆ ಹೊಂದಿರುವ ಸಿಟಿ ಕಾರು ಭಾರತದಲ್ಲೂ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಮಾಹಿತಿಗಳ ಪ್ರಕಾರ, ಹೋಂಡಾ ಸಂಸ್ಥೆಯು ಹೊಸ ಸಿಟಿ ಸೆಡಾನ್‌ನಲ್ಲಿ ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯ ಜೊತೆಗೆ ಥೈಲ್ಯಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಭಾರತದಲ್ಲೂ ಬಿಡುಗಡೆ ಮಾಡುವ ಸುಳಿವು ನೀಡಿದೆ. ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಸಿದ್ದವಾಗಿರುವ 123-ಬಿಎಚ್‌ಪಿ ಪ್ರೇರಿತ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ಸಿಟಿ ಸೆಡಾನ್ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಇದರ ಜೊತೆಗೆ ಥೈಲ್ಯಾಂಡ್‌ನಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್ ಹೈಬ್ರಿಡ್ ಆವೃತ್ತಿಯನ್ನು ಭಾರತದಲ್ಲೂ ಪರಿಚಯಿಸುವ ಇರಾದೆಯಲ್ಲಿದ್ದು, ಹೊಸ ಎಂಜಿನ್ ಆಯ್ಕೆ ಕುರಿತು ಇದುವರೆಗೂ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಇನ್ನು ಹೊಸ ತಲೆಮಾರಿನ ಸಿಟಿ ಕಾರು ಹಳೆಯ ಕಾರು ಆವೃತ್ತಿಗಿಂತಲೂ 100-ಎಂಎಂ ಹೆಚ್ಚುವರಿ ಉದ್ದ, 53-ಎಂಎಂ ಅಗಲವಾದ ವಿಸ್ತರಣೆ ಹೊಂದಿದ್ದು, ಅನಕೂಲಕರ ಆಸನ ಸೌಲಭ್ಯ ಜೋಡಣೆಗಾಗಿ 11-ಎಂಎಂ ನಷ್ಟು ಕಡಿಮೆ ವೀಲ್ಹ್ ಬೇಸ್ ಮತ್ತು 28-ಎಂಎಂ ಎತ್ತರವನ್ನು ತಗ್ಗಿಸಲಾಗಿದೆ.

ಹಾಗೆಯೇ ಹೊಸ ಕಾರಿನ ಮುಂಭಾಗ ಗ್ರೀಲ್ ಡಿಸೈನ್ ಕೂಡಾ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, ಸಿವಿಕ್ ಮತ್ತು ಅಮೆಜ್ ಕಾರಿನ ಡಿಸೈನ್ ಮಾದರಿಯನ್ನು ಸಮ್ಮಿಶ್ರಗೊಳಿಸಿ ಹೊಸ ಲುಕ್ ನೀಡಲಾಗಿದೆ. ಈ ಮೂಲಕ ಮಷ್ಟಷ್ಟು ಶಾರ್ಪ್ ಲುಕಿಂಗ್ ಪಡೆದುಕೊಂಡಿರುವ ಹೊಸ ಸಿಟಿ ಕಾರಿನಲ್ಲಿ ಎಲ್ಇಡಿ ಫ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್, ಗಮನಸೆಳೆಯುವ ಸ್ಪೋರ್ಟಿ ಸ್ಟೈಲ್ ಬಂಪರ್ ಪಡೆದುಕೊಂಡಿರುವುದು ಬೆಲೆ ತುಸು ದುಬಾರಿಯಾಗಿರಲಿದೆ.

ಹೊಸ ಕಾರಿನ ಒಳಭಾಗದ ಡಿಸೈನ್‌ಗಳು ಹಳೆಯ ಆವೃತ್ತಿಗಿಂತಲೂ ಸ್ಪೋರ್ಟಿ ಲುಕ್ ಪಡೆದುಕೊಂಡಿದ್ದು, ವಿವಿಧ ಪ್ರೀಮಿಯಂ ಸೌಲಭ್ಯಗಳೊಂದಿಗೆ ಆಲ್ ಬ್ಲ್ಯಾಕ್ ಇಂಟಿರಿಯರ್, 8.0-ಇಂಚಿನ ಟಚ್ ಸ್ಕ್ರೀನ್, ಲೆದರ್ ಹೊದಿಕೆಯುಳ್ಳ ಮಲ್ಟಿ ಫಂಕ್ಷನಲ್ ತ್ರಿ ಸ್ಪೋಕ್ ಸ್ಟಿರಿಂಗ್ ವೀಲ್ಹ್ ನೀಡಲಾಗಿದೆ.

ಜೊತೆಗೆ ಹೊಸ ಕಾರಿನಲ್ಲಿ ಅಲ್ಯುನಿಯಂ ಪೆಡಲ್, ಇಕೋ ಡ್ರೈವ್ ಮೋಡ್, ಆಟೋಮ್ಯಾಟಿಕ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ, ಮಲ್ಟಿ ಇನ್‌ಫಾರ್ಮೆಷನ್ ಡಿಸ್ಪೈ, 17-ಇಂಚಿನ ಟೈರ್‌ನೊಂದಿಗೆ ಗಮನಸೆಳೆಯಲಿದ್ದು, 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ಎಂಜಿನ್ ಹೊಂದಿರಲಿದೆ.
MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಹೊಸ ಸಿಟಿ ಕಾರು ಮೊದಲು ಥೈಲ್ಯಾಂಡ್ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದ್ದು, ತದನಂತರಷ್ಟೇ ಭಾರತಕ್ಕೆ ಪ್ರವೇಶಿಸಲಿರುವ ಹೊಸ ಕಾರು ಮಾರ್ಚ್ ಹೊತ್ತಿಗೆ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದೆ.
MOST READ: ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಳಿಂತಲೂ ಪೆಟ್ರೋಲ್ ಮಾದರಿಯು ರೂ.15 ಸಾವಿರದಿಂದ 20 ಸಾವಿರ ಮತ್ತು ಡೀಸೆಲ್ ಎಂಜಿನ್ ಮಾದರಿಯು ರೂ.80 ಸಾವಿರದಿಂದ ರೂ.2 ಲಕ್ಷದ ತನಕ ದುಬಾರಿಯಾಗಿರಲಿದೆ ಎನ್ನಲಾಗಿದೆ.


Click it and Unblock the Notifications