ಅನಾವರಣಗೊಂಡ 2020ರ ಹೋಂಡಾ ಜಾಝ್

ಜಪಾನಿನ ಟೋಕಿಯೊದಲ್ಲಿ ನಡೆಯುತ್ತಿರುವ ಮೋಟಾರು ಶೋನಲ್ಲಿ ಹೋಂಡಾ ತಮ್ಮ ನಾಲ್ಕನೇ ತಲೆಮಾರಿನ ಜಾಝ್ ಹ್ಯಾಚ್‍‍ಬ್ಯಾಕ್ ಅನ್ನು ಅನಾವರಣಗೊಳಿಸಿದೆ. 2020ರ ಹೋಂಡಾ ಜಾಝ್ ಸಂಪೂರ್ಣವಾಗಿ ಹೊಸ ವಿನ್ಯಾಸ, ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ಉಪಕರಣಗಳು ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಅನಾವರಣಗೊಂಡ 2020ರ ಹೋಂಡಾ ಜಾಝ್

ಕಂಪನಿಯು ಹೋಂಡಾ ಜಾಝ್ ವಿನ್ಯಾಸವನ್ನು ಬದಲಾಯಿಸಿದೆ. ಹೋಂಡಾ ಜಾಝ್ ಮುಂಭಾಗದಲ್ಲಿ ಪ್ರಮುಖ ಬದಲಾವಣೆಗಳನ್ನು ನಡೆಸಿದೆ. ಮುಂಭಾಗದ ಗ್ರಿಲ್, ಹೊಸ ವಿನ್ಯಾಸದ ಹೆಡ್‍‍‍ಲ್ಯಾಂಪ್, ಎಲ್ಇ‍ಡಿ ಪ್ರೊಜೆಕ್ಟರ್ ಲ್ಯಾಂಪ್‍‍ನೊಂದಿಗೆ ಇಂಟಿ‍ಗ್ರೇಟೆಡ್ ಎಲ್‍ಇ‍ಡಿ ಡಿಆರ್‍ಎಲ್ ಅನ್ನು ಹೊಂದಿದೆ. ಮುಂಭಾಗದ ಬಂಪರ್‍ ಅನ್ನು ಕೂಡ ನವೀಕರಿಸಲಾಗಿದೆ. ಬಂಪರ್‍‍ನ ಎರಡು ತುದಿಯಲ್ಲಿ ಫಾಗ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

ಅನಾವರಣಗೊಂಡ 2020ರ ಹೋಂಡಾ ಜಾಝ್

ಹೊಸ ಹ್ಯಾಚ್‍‍ಬ್ಯಾಕ್‍‍ನ ಸೈಡ್ ಮತ್ತು ರೇರ್ ಫ್ರೋಫೊಲ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಪ್ರಸ್ತುತ ತಲೆಮಾರಿನ ಮಾದರಿಯಂತೆಯೇ ಅದೇ ಸಿಲೂಯೆಟ್ ಅನ್ನು ಮುಂದುವರೆಸಿದೆ. ಮಾರುಕಟ್ಟೆಯಲ್ಲಿರುವ ಮಾದರಿಗಿಂತ ಹೊಸ ಜಾಝ್ ದುಂಡಾದ ವಿನ್ಯಾಸವನ್ನು ಹೊಂದಿದೆ. ಹಿಂಭಾಗದಲ್ಲಿರುವ ಟೈಲ್‍ಲೈ‍ಟ್‍ಗಳು ಮತ್ತು ಎಲ್‍ಇ‍ಡಿ ಲೈಟಿಂಗ್ ಹೊಂದಿದ್ದರೆ, ಉಳಿದ ಭಾಗ ಮತ್ತು ಹಿಂಭಾಗದ ಫ್ರೋಫೈಲ್ ಅನ್ನು ಬದಲವಣೆ ನಡಿಸಿ ಸರಳವಾಗಿ ವಿನ್ಯಾಸಗೊಳಿಸಿದ್ದಾರೆ.

ಅನಾವರಣಗೊಂಡ 2020ರ ಹೋಂಡಾ ಜಾಝ್

ಹೊಸ ಹೋಂಡಾ ಜಾಝ್‍‍ನ ಇಂಟಿರಿಯರ್‍‍ನಲ್ಲಿ ಸರಳವಾದ ವಿನ್ಯಾಸವನ್ನು ಮುಂದುವರೆಸಿದೆ. ಇಂಟಿರಿಯರ್ ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳಲ್ಲಿ ಟಚ್‍‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹೊಂದಿದ್ದು, ಅಲ್ಲದೇ ಕಂಪನಿಯ ಇತ್ತೀಚಿನ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಕೂಡ ಅಳವಡಿಸಿದ್ದಾರೆ. ಇದರಲ್ಲಿ ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್‍‍ಪ್ಲೇ, ಕ್ಲೈಮೆಂಟ್ ಕಂಟ್ರೋಲ್ ಸೇರಿದಂತೆ ಇತರ ಹಲವು ವೈಶಿಷ್ಟ್ಯಗಳಿವೆ.

ಅನಾವರಣಗೊಂಡ 2020ರ ಹೋಂಡಾ ಜಾಝ್

ನಾಲ್ಕನೇ ತಲೆಮಾರಿನ ಹೋಂಡಾ ಜಾಝ್ ಪೆಟ್ರೋಲ್ ಹೈಬ್ರಿಡ್ ಪವರ್‍‍ಟ್ರೀನ್ ಅನ್ನು ಒಳಗೊಂಡ ಬ್ರ್ಯಾಂಡ್‍‍ನ ಮೊದಲ ಹ್ಯಾಚ್‍‍ಬ್ಯಾಕ್ ಇದಾಗಿದೆ. ಈ ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದನ್ನು ಎರಡು ಎಲೆಕ್ಟ್ರಿಕ್ ಮೋಟಾರ್‍‍ಗಳಿಗೆ ಜೋಡಿಸಲಾಗಿದೆ (ಸಿ‍ಆರ್-ವಿನಲ್ಲಿ ಬಳಸಿದ ಒಂದಕ್ಕಿಂತ ಕಡಿಮೆ ಮಾಡಲಾಗಿದೆ) .

ಅನಾವರಣಗೊಂಡ 2020ರ ಹೋಂಡಾ ಜಾಝ್

ಕೆಲವು ಅಂತರರಾಷ್ಟೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಿರುವ ಹೋಂಡಾ ಜಾಝ್‍ನಲ್ಲಿ 1.0 ಲೀಟರ್ ಟರ್ಬೋ‍ಚಾರ್ಜ್ಡ್ ಪೆಟ್ರೋಲ್ ಯು‍ನಿಟ್‍‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅನಾವರಣಗೊಂಡ 2020ರ ಹೋಂಡಾ ಜಾಝ್

ಹೊಸ ಹೋಂಡಾ ಜಾಝ್ ಕಂಪನಿಯ 2025ರ ಎಲೆಕ್ಟ್ರಿಫಿಕೇಷನ್ ಒಂದು ಭಾಗವಾಗಿದೆ. ಹೋಂಡಾದ ಎಲ್ಲಾ ಭವಿಷ್ಯದ ಹೈಬ್ರಿಡ್ ಮಾದರಿಗಳನ್ನು ಅವರ ಹೊಸ ಉಪ - ಬ್ರ್ಯಾಂಡ್ ಇ: ಎಚ್‍ಇ‍ವಿ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಜಾಝ್ ನಾಲ್ಕನೇ ತಲೆಮಾರಿನ ಆವೃತ್ತಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹೋಂಡಾ ಅದೇ ಮಾದರಿಯನ್ನು ಅಥವಾ 2020ರ ಜಾಝ್ ಕೆಲವು ಬದಲಾವಣೆಗಳನ್ನು ನಡೆಸಿ ಬಿಡುಗಡೆಗೊಳಿಸುತ್ತಾ ಎಂಬುವುದುರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಅನಾವರಣಗೊಂಡ 2020ರ ಹೋಂಡಾ ಜಾಝ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಹೋಂಡಾ ಜಾಝ್ ಸಂಪೂರ್ಣವಾಗಿ ಆಕರ್ಷಕ ವಿನ್ಯಾಸದೊಂದಿಗೆ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹಿಂದಿನ ಆವೃತ್ತಿಗಳ ರೀತಿಯ ಸಿಲೂಯೆಟ್ ಅನ್ನು ಮುಂದುವರೆಸಿದೆ. ಹೊಸ ಹೋಂಡಾ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಮಾರುತಿ ಸುಜುಕಿ ಬಾಲೆನೊ, ಟೊಯೋಟಾ ಗ್ಲಾಂಝಾ, ಹ್ಯುಂಡೈ ಎಲೈಟ್ ಐ20 ಮತ್ತು ಫೋಕ್ಸ್ ವ್ಯಾಗನ್ ಪೊಲೊ ಕಾರುಗಳಿಗೆ ಪೈಪೋಟಿ ನೀಡಲಿದೆ. ಆದರೆ ಹೊಸ ಹೋಂಡಾ ಜಾಝ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಹೋಂಡಾ ಯಾವುದೇ ಮಾಹಿತಿಯನ್ನು ಘೋಷಿಸಿಲ್ಲ.

Most Read Articles

Kannada
Read more on ಹೋಂಡಾ honda
English summary
New (2020) Honda Jazz Revealed At Tokyo Motor Show: Will It Enter The Indian Market? - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X