ಭಾರತಕ್ಕೂ ಬರಲಿದೆ ಹೊಸ ಸ್ಕೋಡಾ ಆಕ್ಟೇವಿಯಾ

ಸ್ಕೋಡಾ ಆಕ್ಟೇವಿಯಾ ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಖಚಿತವಾಗಿದೆ. ಮುಂದಿನ ತಿಂಗಳು 11ಕರಂದು ಸ್ಕೋಡಾ ಅಧಿಕೃತವಾಗಿ ಹೊಸ ತಲೆಮಾರಿನ ಸ್ಕೋಡಾ ಆಕ್ಟೇವಿಯಾಯವನ್ನು ಅನಾವರಣಗೊಳಿಸಲಿದೆ ಎಂದು ನಿರೀಕ್ಷಿಸುತ್ತೇವೆ.

ಭಾರತಕ್ಕೂ ಬರಲಿದೆ ಹೊಸ ಸ್ಕೋಡಾ ಆಕ್ಟೇವಿಯಾ

ಹೊಸ ತಲೆಮಾರಿನ ಸ್ಕೋಡಾ ಆಕ್ಟೇವಿಯಾ ಸೆಡಾನ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ಆಕ್ಟೇವಿಯಾ ಬಿಡುಗಡೆಯಾದ ಬಳಿಕ ಸೆಡಾನ್ ಸೆಗ್‍ಮೆಂಟ್‍ನಲ್ಲಿ ಉತ್ತಮ ಆಯ್ಕೆಗಳಲ್ಲಿ ಒಂದಾಗಲಿದೆ. ಈ ಕಾರು ಆಕರ್ಷಕ ವಿನ್ಯಾಸ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಎಂಜಿನ್ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು.

ಭಾರತಕ್ಕೂ ಬರಲಿದೆ ಹೊಸ ಸ್ಕೋಡಾ ಆಕ್ಟೇವಿಯಾ

ಹೊಸ ತಲೆಮಾರಿನ ಸ್ಕೋಡಾ ಆಕ್ಟೇವಿಯಾ ಕಳೆದ ತಿಂಗಳಲ್ಲಿ ನಡೆದ ಫ್ರಾಂಕ್‍‍ಫರ್ಟ್ ಮೋಟಾರ್ ಶೋನಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿತ್ತು. ಆದರೆ ಇತ್ತೀಚೆಗಿನ ವರದಿಯ ಪ್ರಕಾರ ಹೊಸ ತಲೆಮಾರಿನ ಸ್ಕೋಡಾ ಆಕ್ಟೇವಿಯಾ ಮುಂದಿನ ತಿಂಗಳಲ್ಲಿ ಸ್ಕೋಡಾ ಕಂಪನಿಯು ಅಧಿಕೃತವಾಗಿ ಪ್ರದರ್ಶನ ಪಡಿಸಲಿದೆ.

ಭಾರತಕ್ಕೂ ಬರಲಿದೆ ಹೊಸ ಸ್ಕೋಡಾ ಆಕ್ಟೇವಿಯಾ

ಮೂರನೇ ತಲೆಮಾರಿನ ಸ್ಕೋಡಾ ಆಕ್ಟೇವಿಯಾ 2013ರಿಂದಲೇ ಮಾರಾಟದಲ್ಲಿದೆ. ಈ ಸಮಯದಲ್ಲಿ ಸ್ಕೋಡಾ ಆಕ್ಟೇವಿಯಾದ ಹೊಸ ತಲೆಮಾರಿನ ಮಾದರಿಯನ್ನು ಅಭಿವೃದ್ದಿಪಡಿಸಲಾಗುತ್ತಿತ್ತು. ಪ್ರಸ್ತುತ ಕಾರಿನ ರೀತಿಯ ಸ್ಪ್ಲಿಟ್ ಹೆಡ್‌ಲೈಟ್ ಮತ್ತು ಗ್ರಿಲ್ ವಿನ್ಯಾಸವು ಹೆಚ್ಚು ಸಾಂಪ್ರದಾಯಿಕ ಹೆಡ್‌ಲೈಟ್ ವಿನ್ಯಾಸವನ್ನು ಮತ್ತು ವೈಡರ್ ಗ್ರಿಲ್ ಹೊಂದಿರಬಹುದು.

ಭಾರತಕ್ಕೂ ಬರಲಿದೆ ಹೊಸ ಸ್ಕೋಡಾ ಆಕ್ಟೇವಿಯಾ

ಪೋಕ್ಸ್ ವ್ಯಾಗನ್ ಗ್ರೂಪಿನ ಎಂಕ್ಯೂಬಿ ಪ್ಲಾಟ್‍‍‍ಫಾರ್ಮ್‍‍ನ ಅಡಿಯಲ್ಲಿ ಹೊಸ ಮಾದರಿಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಹೊಸ ಕಾರಿನ ಉದ್ದ, ಅಗಲ ಮತ್ತು ಎತ್ತರವು ಪ್ರಸ್ತುತ ಮಾದರಿಗಿಂತ ಸ್ವಲ್ಪ ಹೆಚ್ಚಾಗಿದೆ. ಹೀಗಾಗಿ ಹೊಸ ಮಾದರಿಯಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿರಲಿದೆ.

ಭಾರತಕ್ಕೂ ಬರಲಿದೆ ಹೊಸ ಸ್ಕೋಡಾ ಆಕ್ಟೇವಿಯಾ

ಹೊಸ ತಲೆಮಾರಿನ ಸ್ಕೋಡಾ ಆಕ್ಟೇವಿಯಾ ಕಾರಿನ ಇಂಟಿರಿಯರ್ ಆಕರ್ಷಕವಾಗಿದೆ. ಈ ಕಾರಿನಲ್ಲಿ ಎ‍‍ಸ್‍ಯುವಿಯಲ್ಲಿ ಕಾಣಿಸಿಕೊಂಡಿರುವ ಕೆಲವು ವಿನ್ಯಾಸ ವೈಶಿಷ್ಟ್ಯಗಳನ್ನು ಸಹ ಹೊಂದಿರಲಿದೆ. ಇಂಟಿರಿಯರ್ ಹೊಸ ಲುಕ್ ಅನ್ನು ಹೊಂದಿರಲಿದೆ. ಈ ಕಾರು ಎರಡು ರೂಪಾಂತರಗಳೊಂದಿಗೆ ಬರಲಿದೆ. ಎರಡು ಸ್ಪೋಕ್ ಸ್ಟೀರಿಂಗ್ ವ್ಹೀಲ್, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೋಮೆಂಟ್ ಕ್ಲಸರ್ ಮತ್ತು ಆಕರ್ಷಕ ಡ್ಯಾಶ್‍ಬೋರ್ಡ್, ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭಾರತಕ್ಕೂ ಬರಲಿದೆ ಹೊಸ ಸ್ಕೋಡಾ ಆಕ್ಟೇವಿಯಾ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನಲ್ಲಿ 1.5 ಲೀಟರ್ ಟಿಎಸ್ಐ-ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ. ಪ್ರಸ್ತುತ ಪೆಟ್ರೋಲ್ ಮಾದರಿಗಳಲ್ಲಿ 6 ಸ್ಪೀಡ್ ಮ್ಯಾನುವಲ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಭಾರತಕ್ಕೂ ಬರಲಿದೆ ಹೊಸ ಸ್ಕೋಡಾ ಆಕ್ಟೇವಿಯಾ

ಹೊಸ ಸ್ಕೋಡಾ ಆಕ್ಟೇವಿಯಾವನ್ನು ಮುಂದಿನ ವರ್ಷದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಸ್ಕೋಡಾ ಆಕ್ಟೇವಿಯಾ ಕಾರು ಬಿಡುಗಡೆಯ ಬಳಿಕ ಹೋಂಡಾ ಸಿವಿಕ್, ಹ್ಯುಂಡೈ ಎಲೆಂಟ್ರಾ ಮತ್ತು ಟೊಯೋಟಾ ಕೊರೊಲ್ಲಾ ಆಲ್ಟಿಸ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

More from DriveSpark

Article Published On: Tuesday, October 8, 2019, 19:32 [IST]
English summary
Next-gen Skoda Octavia to be unveiled on November 11 - Read in Kannada
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+