ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಹೋಂಡಾ ಸಂಸ್ಥೆಯು ಮಾರ್ಚ್ 7ರಂದು ತಮ್ಮ 10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದರೂ ಸಹ, ಅದರ ಮುನ್ನವೇ ಫೆಬ್ರುವರಿ ತಿಂಗಳಿನಲ್ಲಿ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು. ಬುಕ್ಕಿಂಗ್ ಪ್ರಾರಂಭಗೊಂಡ ಎರಡು ವಾರಗಳಲ್ಲಿ ಸುಮಾರು 1,600ಕ್ಕು ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಖರೀದಿ ಮಾಡಲಾಗಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಸ್ಕೋಡಾ ಆಕ್ಟೇವಿಯಾ, ಟೊಯೊಟಾ ಚೊರೊಲ್ಲಾ ಮತ್ತು ಹ್ಯುಂಡೈ ಎಲಾಂಟ್ರಾ ಕಾರುಗಳುಗೆ ಪೈಪೋಟಿ ನೀಡುತ್ತಿರುವ ಹೋಂಡಾ ಸಿವಿಕ್ ಕಾರು ಆಟೋಪಂಡಿತ್ಸ್ ವರದಿ ಪ್ರಕಾರ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದೆ. ಹಾಗಾದರೆ ಏಪ್ರಿಲ್ 2019ರಲ್ಲಿ ತನ್ನ ಎದುರಾಳಿಗಳು ಮತ್ತು ಹೋಂಡಾ ಸಿವಿಕ್ ಕಾರು ಎಷ್ಟು ಮಾರಾಟವಾಗಿದೆ, ಹಾಗು ಹತ್ತನೆಯ ತಲೆಮಾರಿನ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು ಎಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ..

ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

Model No. Of Units Sold

Honda Civic

369

Skoda Octavia

227

Toyota Corolla

177

Hyundai Elantra

85

ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಹೊಸ ಕಾರಿನ ಬೆಲೆ

ಹೋಂಡಾ ಸಿವಿಕ್ ಕಾರುಗಳು 3 ಪೆಟ್ರೋಲ್ ವೆರಿಯಂಟ್ ಹಾಗು ಎರಡು ಡೀಸೆಲ್ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ.17.69 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಆಸಕ್ತ ಗ್ರಾಹಕರು ಹತ್ತಿರದಲ್ಲಿರುವ ಹೋಂಡಾ ಡೀಲರ್‍‍ನ ಬಳಿ 31,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಎಂಜಿನ್ ಸಾಮರ್ಥ್ಯ

2019ರ ಹೊಸ ಹೋಂಡಾ ಸಿವಿಕ್ ಕಾರು ಈ ಬಾರಿ ಎರಡು ಎಂಜಿನ್ ಮಾದರಿಗಳಲ್ಲಿ ಬಿಡುಗಡೆಗೊಂಡಿದೆ. ಪೆಟ್ರೋಲ್ ಮಾದರಿಯ ಹೋಂಡಾ ಸಿವಿಕ್ ಕಾರು 1.8 ಲೀಟರ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 139ಬಿಹೆಚ್‍ಪಿ ಮತ್ತು 174ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಪೆಟ್ರೋಲ್ ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಇನ್ನು ಡೀಸೆಲ್ ಮಾದರಿಯ ಹೋಂಡಾ ಸಿವಿಕ್ ಕಾರುಗಳು 1.6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 118ಬಿಹೆಚ್‍ಪಿ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಮೈಲೇಜ್

ಹೀಗಾಗಿ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಒಂದು ಹೆಜ್ಜೆ ಮುನ್ನಡೆ ಸಾಧಿಸಿರುವ ಹೋಂಡಾ ಸಂಸ್ಥೆಯು ಹೊಸ ಸಿವಿಕ್ ಕಾರುಗಳ ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು, 47 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯದೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 16.5 ಕಿ.ಮಿ ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ 26.8 ಕಿಮಿ ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, 17-ಇಂಚಿನ ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಹಾಗೆಯೇ ಹೊಸ ಕಾರು 4,656-ಎಂಎಂ ಉದ್ದ, 1,799-ಎಂಎಂ ಅಗಲ, 1,433-ಎಂಎಂ ಎತ್ತರ, 2,700-ಎಂಎಂ ವೀಲ್ಹ್ ಬೆಸ್ ಮತ್ತು 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಲ್ಯಾಟಿನಂ ವೈಟ್ ಪರ್ಲ್, ರೆಡಿಯೆಂಟ್ ರೆಡ್, ಮಾರ್ಡನ್ ಸ್ಟೀಲ್, ಲೌನರ್ ಸಿಲ್ವರ್ ಮತ್ತು ಗೋಲ್ಡನ್ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ತನ್ನ ಎದುರಾಳಿಗಳನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಲಭ್ಯವಿರುವ ಬಣ್ಣಗಳು

ಹತ್ತನೆಯ ತಲೆಮಾರಿನ ಹೋಂಡಾ ಸಿವಿಕ್ ಕಾರುಗಳು ಗ್ರಾಹಕರ ರುಚಿಗೆ ಅನುಗುಣವಾಗಿ ಪ್ಲಾಟಿನಂ ವೈಟ್ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಮಾಡರ್ನ್ ಸ್ಟೀಲ್ ಮೆಟಾಲಿಕ್, ಲೂನಾರ್ ಸಿಲ್ವರ್ ಮೆಟಾಲಿಕ್ ಮತು ಗೋಲ್ಡೆನ್ ಬ್ರೌನ್ ಮೆಟಾಲಿಕ್ ಎಂಬ 5 ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

More from DriveSpark

Article Published On: Saturday, May 4, 2019, 10:37 [IST]
English summary
New Generation Honda Civic Beats All Its Rivals In Sales Of April 2019. Read In Kannada
Read more on ಹೋಂಡಾ honda sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+