ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸಿ ಕಾರಣಾಂತರಗಳಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದ ಹೋಂಡಾ ಸಿವಿಕ್ ಸೆಡಾನ್ ಕಾರುಗಳು ಇದೀಗ ಮತ್ತೆ ಖರೀದಿಗೆ ಲಭ್ಯವಾಗುತ್ತಿದ್ದು, ಪ್ರತಿಸ್ಪರ್ಧಿ ಕಾರುಗಳಿಗೆ ಭಾರೀ ಪೈಪೋಟಿ ನೀಡುವ ಸುಳಿವು ನೀಡಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು

2018ರ ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಸಿವಿಕ್ ಕಾರುಗಳು ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಕಾರಿಗೆ ಪೈಪೋಟಿ ನೀಡುವ ಸುಳಿವು ನೀಡಿದ್ದು, ಸೆಡಾನ್ ಕಾರುಗಳಲ್ಲೇ ಬೆಸ್ಟ್ ಫೀಚರ್ಸ್ ಹೊತ್ತುಬರುವುದು ಬಹುತೇಕ ಖಚಿತವಾಗಿದೆ.

ಸೆಡಾನ್ ಆವೃತ್ತಿಗಳಿಗೆ ವಿಶೇಷ ಬೇಡಿಕೆ ಹಿನ್ನೆಲೆ ಹೋಂಡಾ ಇಂಡಿಯಾ ಸಂಸ್ಥೆಯು ತನ್ನ ಸಿವಿಕ್ ಮಾದರಿಗಳನ್ನು ಹೊಸತನದೊಂದಿಗೆ ಮರು ಅಭಿವೃದ್ಧಿಗೊಳಿಸಿದ್ದು, ಮುಂದಿನ ಮಾರ್ಚ್ ಅಂತ್ಯಕ್ಕೆ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

10ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಸಿವಿಕ್ ಕಾರುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಸಿವಿಕ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿನ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ವಿನ್ಯಾಸಗಳೊಂದಿಗೆ ಪರಿಚಯಿಸಲಾಗುತ್ತಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು

ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಸಿವಿಕ್ ಕಾರುಗಳು 4 ಸಿಲಿಂಡರ್ ಸೌಲಭ್ಯದೊಂದಿಗೆ ಮೂರು ವಿವಿಧ ಪೆಟ್ರೋಲ್ ಆವೃತ್ತಿಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ ಒಂದು ಆವೃತ್ತಿ ಲಭ್ಯವಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಸಿವಿಕ್ ಕಾರುಗಳು ತುಸು ಬದಲಾವಣೆ ಹೊಂದಲಿವೆ.

ಮಾಹಿತಿಗಳ ಪ್ರಕಾರ ಭಾರತೀಯ ಮಾದರಿಯ ಸಿವಿಕ್ ಕಾರುಗಳು 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1. 6- ಡೀಸೆಲ್ ಎಂಜಿನ್ ಹೊಂದಿರಲಿದ್ದು, ಪೆಟ್ರೋಲ್ ವರ್ಷನ್ 158 ಬಿಎಚ್‌ಪಿ, 187 ಎನ್ಎಂ ಟಾರ್ಕ್ ಮತ್ತು ಡೀಸೆಲ್ ವರ್ಷನ್ 118 ಬಿಎಚ್‌ಪಿ, 300 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಒಂದು ಹೆಜ್ಜೆ ಮುನ್ನಡೆ ಸಾಧಿಸಿರುವ ಹೋಂಡಾ ಸಂಸ್ಥೆಯು ಹೊಸ ಸಿವಿಕ್ ಕಾರುಗಳ ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ 30 ಕಿಮಿ ಮೈಲೇಜ್ ನೀಡಲಿವೆ ಎಂದು ಹೇಳಿಕೊಂಡಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು

ಜೊತೆಗೆ 10ನೇ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಸಿವಿಕ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಕೆ ಇರಲಿದ್ದು, ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಇರಲಿದೆ.

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

More from DriveSpark

Article Published On: Tuesday, February 12, 2019, 14:53 [IST]
English summary
New Honda Civic (2019) Bookings Open Unofficially For Rs 51,000 — Launch In Early-March. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+