ಕೇವಲ 20 ದಿನಗಳಲ್ಲಿ ಎಷ್ಟು ಹೋಂಡಾ ಸಿವಿಕ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಹೋಂಡಾ ಸಂಸ್ಥೆಯು ತಮ್ಮ ಮೊದಲನೆಯ ತಲೆಮಾರಿನ ಸಿವಿಕ್ ಕಾರನ್ನು 1972ರಲ್ಲಿ ಬಿಡುಗಡೆಗೊಳಿಸಿದ್ದು, ಇಡೀಗ ಭಾರಾತದಲ್ಲಿ 10ನೆಯ ತಲೆಮಾರಿನ ಸಿವಿಕ್ ಸಿಡಾನ್ ಕಾರನ್ನು ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡು ಇನ್ನು ಒಂದು ತಿಂಗಳು ಸಹ ಆಗಿಲ್ಲ. ಈಗಾಗಲೆ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟವನ್ನು ಕಾಣುತ್ತಿದೆ.

ಕೇವಲ 20 ದಿನಗಳಲ್ಲಿ ಎಷ್ಟು ಹೋಂಡಾ ಸಿವಿಕ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಮಾರ್ಚ್ 7 ರಂದು ಬಿಡುಗಡೆಗೊಂದ 10ನೆಯ ತಲೆಮಾರಿನ ಹೋಂಡಾ ಸಿವಿಕ್ ಕಾರುಗಳು, ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದೆ. ಕೇವಲ 20 ದಿನಗಳಲ್ಲಿ ಸುಮಾರು 1,800 ಕ್ಕು ಅಧಿಕವಾದ ಬುಕ್ಕಿಂಗ್ ಅನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿರುವ ಸ್ಕೋಡಾ ಆಕ್ಟೇವಿಯಾ ಆರ್‍ಎಸ್, ಹ್ಯುಂಡೈ ಎಲಾಂಟ್ರಾ ಮತ್ತು ಟೊಯೊಟಾ ಕೊರೊಲ್ಲಾ ಸೆಡಾನ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

ಕೇವಲ 20 ದಿನಗಳಲ್ಲಿ ಎಷ್ಟು ಹೋಂಡಾ ಸಿವಿಕ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಹೊಸ ಕಾರಿನ ಬೆಲೆ

ಹೋಂಡಾ ಸಿವಿಕ್ ಕಾರುಗಳು 3 ಪೆಟ್ರೋಲ್ ವೆರಿಯಂಟ್ ಹಾಗು ಎರಡು ಡೀಸೆಲ್ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ.17.69 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಆಸಕ್ತ ಗ್ರಾಹಕರು ಹತ್ತಿರದಲ್ಲಿರುವ ಹೋಂಡಾ ಡೀಲರ್‍‍ನ ಬಳಿ 31,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಕೇವಲ 20 ದಿನಗಳಲ್ಲಿ ಎಷ್ಟು ಹೋಂಡಾ ಸಿವಿಕ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಎಂಜಿನ್ ಸಾಮರ್ಥ್ಯ

2019ರ ಹೊಸ ಹೋಂಡಾ ಸಿವಿಕ್ ಕಾರು ಈ ಬಾರಿ ಎರಡು ಎಂಜಿನ್ ಮಾದರಿಗಳಲ್ಲಿ ಬಿಡುಗಡೆಗೊಂಡಿದೆ. ಪೆಟ್ರೋಲ್ ಮಾದರಿಯ ಹೋಂಡಾ ಸಿವಿಕ್ ಕಾರು 1.8 ಲೀಟರ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 139ಬಿಹೆಚ್‍ಪಿ ಮತ್ತು 174ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಪೆಟ್ರೋಲ್ ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕೇವಲ 20 ದಿನಗಳಲ್ಲಿ ಎಷ್ಟು ಹೋಂಡಾ ಸಿವಿಕ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಇನ್ನು ಡೀಸೆಲ್ ಮಾದರಿಯ ಹೋಂಡಾ ಸಿವಿಕ್ ಕಾರುಗಳು 1.6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 118ಬಿಹೆಚ್‍ಪಿ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕೇವಲ 20 ದಿನಗಳಲ್ಲಿ ಎಷ್ಟು ಹೋಂಡಾ ಸಿವಿಕ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಮೈಲೇಜ್

ಹೀಗಾಗಿ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಒಂದು ಹೆಜ್ಜೆ ಮುನ್ನಡೆ ಸಾಧಿಸಿರುವ ಹೋಂಡಾ ಸಂಸ್ಥೆಯು ಹೊಸ ಸಿವಿಕ್ ಕಾರುಗಳ ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು, 47 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯದೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 16.5 ಕಿ.ಮಿ ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ 26.8 ಕಿಮಿ ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

ಕೇವಲ 20 ದಿನಗಳಲ್ಲಿ ಎಷ್ಟು ಹೋಂಡಾ ಸಿವಿಕ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, 17-ಇಂಚಿನ ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

ಕೇವಲ 20 ದಿನಗಳಲ್ಲಿ ಎಷ್ಟು ಹೋಂಡಾ ಸಿವಿಕ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಹಾಗೆಯೇ ಹೊಸ ಕಾರು 4,656-ಎಂಎಂ ಉದ್ದ, 1,799-ಎಂಎಂ ಅಗಲ, 1,433-ಎಂಎಂ ಎತ್ತರ, 2,700-ಎಂಎಂ ವೀಲ್ಹ್ ಬೆಸ್ ಮತ್ತು 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಲ್ಯಾಟಿನಂ ವೈಟ್ ಪರ್ಲ್, ರೆಡಿಯೆಂಟ್ ರೆಡ್, ಮಾರ್ಡನ್ ಸ್ಟೀಲ್, ಲೌನರ್ ಸಿಲ್ವರ್ ಮತ್ತು ಗೋಲ್ಡನ್ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಕೇವಲ 20 ದಿನಗಳಲ್ಲಿ ಎಷ್ಟು ಹೋಂಡಾ ಸಿವಿಕ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಲಭ್ಯವಿರುವ ಬಣ್ಣಗಳು

ಹತ್ತನೆಯ ತಲೆಮಾರಿನ ಹೋಂಡಾ ಸಿವಿಕ್ ಕಾರುಗಳು ಗ್ರಾಹಕರ ರುಚಿಗೆ ಅನುಗುಣವಾಗಿ ಪ್ಲಾಟಿನಂ ವೈಟ್ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಮಾಡರ್ನ್ ಸ್ಟೀಲ್ ಮೆಟಾಲಿಕ್, ಲೂನಾರ್ ಸಿಲ್ವರ್ ಮೆಟಾಲಿಕ್ ಮತು ಗೋಲ್ಡೆನ್ ಬ್ರೌನ್ ಮೆಟಾಲಿಕ್ ಎಂಬ 5 ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

Source: GaadWaadi

More from DriveSpark

Article Published On: Thursday, March 28, 2019, 11:46 [IST]
English summary
New Honda Civic Exceeds Expectations With Phenomenal Booking Numbers. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+