7 ಸೀಟರ್‌ ಸೌಲಭ್ಯದೊಂದಿಗೆ ಬರಲಿದೆಯೆಂತೆ ಹ್ಯುಂಡೈ ಕ್ರೇಟಾ ಎಸ್‌ಯುವಿ..!

ಮಾರುತಿ ಸುಜುಕಿ ನಂತರ ಭಾರತದಲ್ಲಿ 2ನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿರುವ ಹ್ಯುಂಡೈ ಸಂಸ್ಥೆಯು ಮುಂದಿನ 2 ವರ್ಷದೊಳಗಾಗಿ 6 ಹೊಸ ಎಸ್‌ಯುವಿ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಲಿರುವ ಸಬ್ ಕಂಪ್ಯಾಕ್ಟ್ ಎಸ್‌ಯುವಿ ವೆನ್ಯೂ ಮತ್ತು ಕೊನಾ ಎಲೆಕ್ಟ್ರಿಕ್ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

7 ಸೀಟರ್‌ ಸೌಲಭ್ಯದೊಂದಿಗೆ ಬರಲಿದೆಯೆಂತೆ ಹ್ಯುಂಡೈ ಕ್ರೇಟಾ ಎಸ್‌ಯುವಿ..!

ಹ್ಯುಂಡೈ ಹೊಸ ಎಸ್‌ಯುವಿ ಕಾರುಗಳ ಬಿಡುಗಡೆ ಕುರಿತಂತೆ ಎಕಾನಮಿಕ್ ಟೈಮ್ಸ್ ಆಟೋ ಸುದ್ದಿಸಂಸ್ಥೆಯು ವರದಿ ಮಾಡಿದ್ದು, 2019ರ ಮೇ ಅವಧಿಯಲ್ಲಿ ವೆನ್ಯೂ ಮತ್ತು ಅಗಸ್ಟ್ ಹೊತ್ತಿಗೆ ಕೊನಾ ಬಿಡುಗಡೆಯಾಗಲಿವೆಯೆಂತೆ. ಹಾಗೆಯೇ 2020ರ ಅವಧಿಯಲ್ಲಿ ನೆಕ್ಸ್ ಜನರೇಷನ್ ಕ್ರೆಟಾ, ಐ20 ಕ್ರಾಸ್ ಹ್ಯಾಚ್‌ಬ್ಯಾಕ್ ಬಿಡುಗಡೆಯಾಗಿದ್ದಲ್ಲಿ 2021ರ ಆರಂಭದಲ್ಲಿ ನೆಕ್ಸ್ ಜನರೇಷನ್ ಸಾಂತಾ ಫೆ, 7 ಸೀಟರ್ ಕ್ರೆಟಾ ಎಸ್‌ಯುವಿ ಕಾರುಗಳ ಸಹ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ ಎಂದಿದೆ.

7 ಸೀಟರ್‌ ಸೌಲಭ್ಯದೊಂದಿಗೆ ಬರಲಿದೆಯೆಂತೆ ಹ್ಯುಂಡೈ ಕ್ರೇಟಾ ಎಸ್‌ಯುವಿ..!

ಹ್ಯುಂಡೈ ಹೊಸ ಎಸ್‌ಯುವಿ ಕಾರುಗಳ ಬಿಡುಗಡೆ ಕುರಿತಂತೆ ಎಕಾನಮಿಕ್ ಟೈಮ್ಸ್ ಆಟೋ ಸುದ್ದಿಸಂಸ್ಥೆಯು ವರದಿ ಮಾಡಿದ್ದು, 2019ರ ಮೇ ಅವಧಿಯಲ್ಲಿ ವೆನ್ಯೂ ಮತ್ತು ಅಗಸ್ಟ್ ಹೊತ್ತಿಗೆ ಕೊನಾ ಬಿಡುಗಡೆಯಾಗಲಿವೆಯೆಂತೆ.

7 ಸೀಟರ್‌ ಸೌಲಭ್ಯದೊಂದಿಗೆ ಬರಲಿದೆಯೆಂತೆ ಹ್ಯುಂಡೈ ಕ್ರೇಟಾ ಎಸ್‌ಯುವಿ..!

ಹಾಗೆಯೇ 2020ರ ಅವಧಿಯಲ್ಲಿ ನೆಕ್ಸ್ ಜನರೇಷನ್ ಕ್ರೆಟಾ, ಐ20 ಕ್ರಾಸ್ ಹ್ಯಾಚ್‌ಬ್ಯಾಕ್ ಬಿಡುಗಡೆಯಾಗಿದ್ದಲ್ಲಿ 2021ರ ಆರಂಭದಲ್ಲಿ ನೆಕ್ಸ್ ಜನರೇಷನ್ ಸಾಂತಾ ಫೆ, 7 ಸೀಟರ್ ಕ್ರೆಟಾ ಎಸ್‌ಯುವಿ ಕಾರುಗಳ ಸಹ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ ಎಂದಿದೆ.

7 ಸೀಟರ್‌ ಸೌಲಭ್ಯದೊಂದಿಗೆ ಬರಲಿದೆಯೆಂತೆ ಹ್ಯುಂಡೈ ಕ್ರೇಟಾ ಎಸ್‌ಯುವಿ..!

ಇದರಲ್ಲಿ ಸದ್ಯ ಬಿಡುಗಡೆಯಾಗಲಿರುವ ವೆನ್ಯೂ ಕಾರು ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದು, ಹಲವು ವಿಶೇಷತೆಗಳಿಗಳಿಗೆ ಕಾರಣವಾಗಿರುವ ಹೊಸ ಕಾರು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವುದು ಮಧ್ಯಮ ವರ್ಗದ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ. ವೆನ್ಯೂ ಕಾರು ಡ್ಯುಯಲ್ ಟೋನ್ ಬಣ್ಣ ಮತ್ತು ಸನ್‍ರೂಫ್ ಪಡೆದುಕೊಳ್ಳುವ ಮೂಲಕ ಗ್ರಾಹಕರಲ್ಲಿ ಮತ್ತಷ್ಟು ಕುತೂಹಲ ಹುಟ್ಟುಹಾಕಿದ್ದು, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ.

7 ಸೀಟರ್‌ ಸೌಲಭ್ಯದೊಂದಿಗೆ ಬರಲಿದೆಯೆಂತೆ ಹ್ಯುಂಡೈ ಕ್ರೇಟಾ ಎಸ್‌ಯುವಿ..!

ಹಾಗೆಯೇ ಕ್ರೆಟಾ 7 ಸೀಟರ್ ಕೂಡಾ ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ 5-ಸೀಟರ್ ಕ್ರೆಟಾ ಮಾದರಿಗಿಂತಲೂ ದೊಡ್ಡದಾಗಿರುವುದಲ್ಲದೇ ಎಂಜಿನ್ ಸಾಮರ್ಥ್ಯದಲ್ಲೂ ಭಾರೀ ಬದಲಾವಣೆ ಪಡೆದುಕೊಳ್ಳಲಿದೆ.

7 ಸೀಟರ್‌ ಸೌಲಭ್ಯದೊಂದಿಗೆ ಬರಲಿದೆಯೆಂತೆ ಹ್ಯುಂಡೈ ಕ್ರೇಟಾ ಎಸ್‌ಯುವಿ..!

ಕ್ರೆಟಾ 7 ಸೀಟರ್ ನಿರ್ಮಾಣ ಕುರಿತಂತೆ ಸದ್ಯ ಮಾರುಕಟ್ಟೆ ಅಧ್ಯಯನ ನಡೆಸಿರುವ ಹ್ಯುಂಡೈ ಸಂಸ್ಥೆಯು ಸಾಂತಾ ಫೆ ಕಾರಿನಿಂದ ಕೆಲವು ವಿನ್ಯಾಸಗಳನ್ನು ಹೊಸ ಕಾರು ನಿರ್ಮಾಣಕ್ಕಾಗಿ ಎರವಲು ಪಡೆದುಕೊಳ್ಳಲಿದ್ದು, 2020ರ ಹೊತ್ತಿಗೆ ಹೊಸ ಕಾರು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

7 ಸೀಟರ್‌ ಸೌಲಭ್ಯದೊಂದಿಗೆ ಬರಲಿದೆಯೆಂತೆ ಹ್ಯುಂಡೈ ಕ್ರೇಟಾ ಎಸ್‌ಯುವಿ..!

ಸದ್ಯ ಮಾರುಕಟ್ಟೆಯಲ್ಲಿರುವ ಕ್ರೆಟಾ ಕಾರುಗಳು 1.6-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಮಾದರಿಯಲ್ಲಿ 1.4-ಲೀಟರ್, 1.6-ಲೀಟರ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 9.60 ಲಕ್ಷದಿಂದ ರೂ.15.64 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: 6 ಕೋಟಿ ರೂಪಾಯಿ ಕಾರನ್ನು ಮಾಡಿಫೈ ಮಾಡಲು 10 ಕೋಟಿ ಖರ್ಚು

7 ಸೀಟರ್‌ ಸೌಲಭ್ಯದೊಂದಿಗೆ ಬರಲಿದೆಯೆಂತೆ ಹ್ಯುಂಡೈ ಕ್ರೇಟಾ ಎಸ್‌ಯುವಿ..!

ಹೀಗಾಗಿ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ 7 ಸೀಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18 ಲಕ್ಷದಿಂದ ರೂ.22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಂತೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

Article Published On: Tuesday, April 16, 2019, 19:35 [IST]
English summary
Hyundai Creta 7-Seater Launching Late 2020 — More Seats, More Merry!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+