ಬಿಡುಗಡೆಯ ಸನಿಹದಲ್ಲಿ ಹೊಸ ಡಿಸೈನ್ ಪ್ರೇರಿತ ನೆಕ್ಸ್ಟ್ ಜನರೇಷನ್ ಹ್ಯುಂಡೈ ಕ್ರೆಟಾ

ನೆಕ್ಸ್ಟ್ ಜನರೇಷನ್ ಕ್ರೆಟಾ ಎಸ್‍ಯುವಿ ಕಾರನ್ನು 2019ರ ಶಾಂಘೈ ಮೋಟಾರ್ ಶೋನಲ್ಲಿ ಐಎಕ್ಸ್25 ಎಂಬ ಹೆಸರಿನಲ್ಲಿ ಪ್ರದರ್ಶನ ಮಾಡಿದ್ದ ಹ್ಯುಂಡೈ ಸಂಸ್ಥೆಯು ಭಾರತ ಸೇರಿದಂತೆ ಯುರೋಪ್ ಪ್ರಮುಖ ಮಾರುಕಟ್ಟೆಗಳಲ್ಲೂ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಇದೀಗ ಮೊದಲ ಬಾರಿಗೆ ಚೆನ್ನೈ ಹೊರವಲಯದಲ್ಲಿ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸುವಾಗ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಹೊಸ ಕಾರು ಪ್ರಸ್ತುತ ಕ್ರೆಟಾ ಮಾದರಿಗಿಂತಲೂ ಹಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಆವೃತ್ತಿಗಿಂತಲೂ ಸುಧಾರಿತ ಎಂಜಿನ್ ಮತ್ತು ವಿಸ್ತರಿತ ವೀಲ್ಹ್‌ಬೆಸ್ ಸೌಲಭ್ಯವನ್ನು ಪಡೆದುಕೊಂಡಿದ್ದು, 5 ಸೀಟರ್ ಜೊತೆಗೆ 7 ಸೀಟರ್ ಮಾದರಿ ಕೂಡಾ ಆಯ್ಕೆ ಮಾಡಬಹುದಾಗಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಡಿಸೈನ್ ಪ್ರೇರಿತ ನೆಕ್ಸ್ಟ್ ಜನರೇಷನ್ ಹ್ಯುಂಡೈ ಕ್ರೆಟಾ

ಬಿಡುಗಡೆಯಾಗಲಿರುವ ಹೊಸ ಕ್ರೆಟಾ ಕಂಪ್ಯಾಕ್ಟ್ ಎಸ್‍ಯುವಿ ಕಾರು ಈ ಬಾರಿ 4,300-ಎಂಎಂ ಉದ್ದ, 1,790-ಎಂಎಂ ಅಗಲ, 1,622-ಎಂಎಂ ಎತ್ತರ ಮತ್ತು 2,610ಎಂಎಂ ವ್ಹೀಲ್‍‌ಬೇಸ್ ಹೊಂದಿರಲ್ಲಿದ್ದು, ಪ್ರಸ್ತುತ ಕ್ರೆಟಾ ಕಾರಿಗಿಂತ ಇದು 30-ಎಂಎಂ ಉದ್ದ, 10-ಎಂಎಂ ಅಗಲ, 8-ಎಂಎಂ ಎತ್ತರ ಮತ್ತು 20-ಎಂಎಂ ವ್ಹೀಲ್‍‍ಬೇಸ್ ಅನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಡಿಸೈನ್ ಪ್ರೇರಿತ ನೆಕ್ಸ್ಟ್ ಜನರೇಷನ್ ಹ್ಯುಂಡೈ ಕ್ರೆಟಾ

2020ರ ಎಪ್ರಿಲ್ 1 ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ತಲೆಮಾರಿನ ಕ್ರೆಟಾ ಕಾರಿನ ಎಂಜಿನ್ ಅಭಿವೃದ್ದಿಗೊಳಿಸಲಾಗಿದ್ದು, ಈ ಹಿಂದಿನ 1.4-ಲೀಟರ್ ಮತ್ತು 1.6-ಲೀಟರ ಡೀಸೆಲ್ ಎಂಜಿನ್ ಹಾಗೂ 1.5-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ 1.-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿರಲಿದೆ. ಇದೇ ಎಂಜಿನ್ ಈಗಾಗಲೇ ಹ್ಯುಂಡೈ ಸಹೋದರ ಸಂಸ್ಥೆಯ ಕಿಯಾ ಸೆಲ್ಟೊಸ್ ಕಾರಿನಲ್ಲೂ ಕೂಡಾ ಬಳಕೆ ಮಾಡಲಾಗಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಡಿಸೈನ್ ಪ್ರೇರಿತ ನೆಕ್ಸ್ಟ್ ಜನರೇಷನ್ ಹ್ಯುಂಡೈ ಕ್ರೆಟಾ

ಡೀಸೆಲ್ ಮಾದರಿಯ ಕಾರು 1.5 ಲೀಟರ್ 4 ಸಿಲೆಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 115-ಬಿಹೆಚ್‍ಪಿ ಮತ್ತು 250-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದ್ದು, ಪೆಟ್ರೋಲ್ ಮಾದರಿಯ 1.5-ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಸಿವಿಟಿ ಅಥವಾ ಡಿಸಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಣೆ ಹೊಂದಿರಲಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಡಿಸೈನ್ ಪ್ರೇರಿತ ನೆಕ್ಸ್ಟ್ ಜನರೇಷನ್ ಹ್ಯುಂಡೈ ಕ್ರೆಟಾ

ಇದರಲ್ಲದೇ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರುಗಳು ಈ ಬಾರಿ ವೃತ್ತಾಕಾರದ ಡಿಸೈನ್ ಅನ್ನು ಪಡೆಯಲಿದ್ದು, ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಲ್ಯಾಂಪ್ಸ್ ಅನ್ನು ಸೆಪರೇಟ್ ಯೂನಿಟ್ ಆಗಿ ನೀಡಲಾಗಿದೆ. ಹೆಡ್‍ಲ್ಯಾಂಪ್ಸ್ ಮಾದರಿಯಲ್ಲಿಯೇ ಸ್ಪ್ಲಿಟ್ ಟೈಲ್‍‍ಲ್ಯಾಂಪ್ಸ್ ಅನ್ನು ಸಹ ಪಡೆದುಕೊಳ್ಳಲಿದ್ದು, ಕಾರಿನ ಉದ್ದಳತೆಗೆ ತಕ್ಕ ಹಾಗೆ ಎಲ್ಇಡಿ ಲೈಟ್ಸ್ ಅನ್ನು ಮತ್ತು ಬ್ರೇಕ್ ಹಾಗು ಟರ್ನ್ ಇಂಡಿಕೇಟರ್‍‍ಗಳನ್ನು ಒದಗಿಸಲಾಗಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಡಿಸೈನ್ ಪ್ರೇರಿತ ನೆಕ್ಸ್ಟ್ ಜನರೇಷನ್ ಹ್ಯುಂಡೈ ಕ್ರೆಟಾ

ಇನ್ನು ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍ಯುವಿ ಕಾರಿನ ಒಳಭಾಗದಲ್ಲಿ ಪ್ರೀಮಿಯಂ ಕ್ಯಾಬಿನ್ ಅನ್ನು ನೀಡಲಾಗಿದ್ದು, ಎಂಜಿನ್ ಹೆಕ್ಟರ್ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಟಕ್ಕರ್ ನೀಡುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಎಂಜಿನ್ ಹೆಕ್ಟರ್ ಕಾರಿನಲ್ಲಿ ನೀಡಿದ ಹಾಗೆಯೇ ಕ್ರೆಟಾ ಕಾರು ಕೂಡಾ ಅಗಲವಾದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆಯಲಿದೆ.

MOST READ: ಸೆಲ್ಟೊಸ್ ಕಾರಿಗೆ ಭರ್ಜರಿ ಬೇಡಿಕೆ- ಮತ್ತೈದು ಹೊಸ ಕಾರುಗಳ ಬಿಡುಗಡೆಗೆ ಸಜ್ಜಾದ ಕಿಯಾ

ಬಿಡುಗಡೆಯ ಸನಿಹದಲ್ಲಿ ಹೊಸ ಡಿಸೈನ್ ಪ್ರೇರಿತ ನೆಕ್ಸ್ಟ್ ಜನರೇಷನ್ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಎಸ್‍ಯುವಿ ಕಾರು ಈ ಬಾರಿ ಎರಡೂ ಆಸನ ವಿಧಾನದಲ್ಲಿ ದೊರೆಯಲಿದ್ದು, 5 ಮತ್ತು 7 ಆಸನಗಳ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರುಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲವಾದರೂ ಈ ಕಾರು ಎಕ್ಸ್ ಶೋರುಂ ಪ್ರಕಾರ ಪ್ರಸ್ತುತ ಇರುವ ಕ್ರೆಟಾ ಕಾರಿಗಿಂತಲೂ ಸುಮಾರು ರೂ. 1.50 ಲಕ್ಷದ ಅಧಿಕ ಬೆಲೆಯನ್ನು ಹೊಂದಿರಲಿದೆ.

MOST READ: ತೆರಿಗೆ ಹೊರೆ ಇಳಿಸಿದ ಕೇಂದ್ರ ಸರ್ಕಾರ- ಕಾರುಗಳ ಬೆಲೆ ಇಳಿಕೆ ಮಾಡುವುದಾಗಿ ಘೋಷಿಸಿದ ಮಾರುತಿ ಸುಜುಕಿ

ಬಿಡುಗಡೆಯ ಸನಿಹದಲ್ಲಿ ಹೊಸ ಡಿಸೈನ್ ಪ್ರೇರಿತ ನೆಕ್ಸ್ಟ್ ಜನರೇಷನ್ ಹ್ಯುಂಡೈ ಕ್ರೆಟಾ

ಮಾಹಿತಿಗಳ ಪ್ರಕಾರ ಹೊಸ ಕಾರು 2020ರ ಫೆಬ್ರುವರಿನಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಬಿಡುಗಡೆಯಾಗಲಿದ್ದು, ಬಿಡುಗಡೆಯ ಹೊತ್ತಿಗೆ ಹೊಸ ಕಾರಿನ ಇನ್ನು ಕೆಲವು ತಾಂತ್ರಿಕ ಸೌಲಭ್ಯಗಳನ್ನು ಬದಲಾವಣೆಯಾಗಬಹುದು.

Source: Team-BHP

Most Read Articles

Kannada
English summary
New (2020) Hyundai Creta Spied Testing Ahead Of Its India Launch: Spy Pics & Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X