ಬ್ಲೂ ಲಿಂಕ್ ಫೀಚರ್ಸ್ ಹೊತ್ತುಬರಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹ್ಯುಂಡೈ ಜನಪ್ರಿಯ ಸೆಡಾನ್ ಆವೃತ್ತಿಯಾದ ಎಲಾಂಟ್ರಾ ಕಾರಿನ ಫೇಸ್‌ಲಿಫ್ಟ್ ಆವೃತ್ತಿಯು ಮುಂದಿನ ತಿಂಗಳು ಅಕ್ಟೋಬರ್ 3ಕ್ಕೆ ಬಿಡುಗಡೆಗೊಳ್ಳುತ್ತಿದ್ದು, ಹೊಸ ಕಾರಿನಲ್ಲಿ ಇದೇ ಮೊದಲ ಬಾರಿಗೆ ವಿವಿಧ 33 ಫೀಚರ್ಸ್ ಹೊಂದಿರುವ ಬ್ಲೂ ಲಿಂಕ್ ಪ್ಯಾಕೇಜ್ ಸೌಲಭ್ಯ ಹೊಂದಿರಲಿದೆ ಎಂದು ಹೇಳಲಾಗಿದೆ.

ಬ್ಲೂ ಲಿಂಕ್ ಫೀಚರ್ಸ್ ಹೊತ್ತುಬರಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹ್ಯುಂಡೈ ಸಂಸ್ಥೆಯು ಎಲಾಂಟ್ರಾ ಫೇಸ್‌ಲಿಫ್ಟ್ ಮಾದರಿಯು ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಸಾಂತಾ ಫೇ ಎಸ್‌ಯುವಿ ಕಾರಿನ ಕುರಿತಾದ ಮಾಧ್ಯಮ ಪ್ರತಿನಿಧಿಗಳ ಸಭೆ ವೇಳೆಯೇ ತನ್ನ ಬಹುನೀರಿಕ್ಷಿತ ಎಲಾಂಟ್ರಾ ಫೇಸ್‌ಲಿಫ್ಟ್ ಬಗೆಗಿನ ಕೆಲವು ಮಹತ್ವದ ಮಾಹಿತಿಯನ್ನ ಹೊರಹಾಕಿತ್ತು. ಇದರಲ್ಲಿ ಕಾರಿಗೆ ಗರಿಷ್ಠ ಭದ್ರತೆ ನೀಡಬಲ್ಲ ಬ್ಲೂ ಲಿಂಕ್ ಪ್ಯಾಕೇಜ್ ನೀಡುವ ಮಾಹಿತಿ ನೀಡಿತ್ತು.

ಬ್ಲೂ ಲಿಂಕ್ ಫೀಚರ್ಸ್ ಹೊತ್ತುಬರಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹಳೆಯ ಮಾದರಿಯ ಕಾರುಗಳಿಂತಲೂ ಹೊಸ ಎಲಾಂಟ್ರಾ ಕಾರು ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡೆದಿದ್ದು, ಅಗಲವಾದ ಹೆಡ್‍‍ಲ್ಯಾಂಪ್ಸ್, ಹೊಸ ಬಂಪರ್, ಹೊಸ ಕೇಸ್‍ ಕೇಡಿಂಗ್ ಗ್ರಿಲ್ ವಿನ್ಯಾಸ ಮತ್ತು ಎಲ್ಇಡಿ ಅಂಶಗಳನ್ನು ಪಡೆದಿದೆ.

ಬ್ಲೂ ಲಿಂಕ್ ಫೀಚರ್ಸ್ ಹೊತ್ತುಬರಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಹಾಗೆಯೇ ಕಾರಿನ ಬಂಪರ್‍‍ಗಳನ್ನು ಹೆಚ್ಚು ಆಕ್ರಮಣಕಾರಿ, ಹೆಡ್‍‍ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್‌ಗಳ ನಡುವೆ ಹೊಸ ಕ್ರಿಸ್ ಲೈನ್ ಅನ್ನು ಅಳವಡಿಸಲಾಗಿದ್ದು, ಇದು ಫಾಗ್ ಲ್ಯಾಂಪ್ ತ್ರಿಭುಜದ ಆಕಾರದಲ್ಲಿದೆ. ಹೀಗಾಗಿ ಹೊಸ ಕಾರಿನ ಏರ್ ವೆಂಟ್ ಸಹ ಪರದೆಯ ದ್ವಾರಗಳಿಂದ ಸುತ್ತುವರಿದಿದ್ದು, ಕಾರಿನ ನಂಬರ್ ಪ್ಲೇಟ್‍ ಅನ್ನು ಹಿಂಭಾಗದ ಬಂಪರ್‍‍ಗೆ ಸ್ಥಳಾಂತರಗೊಳಿಸಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಬ್ಲೂ ಲಿಂಕ್ ಫೀಚರ್ಸ್ ಹೊತ್ತುಬರಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಇನ್ನು ಎಲಾಂಟ್ರಾ ಫೇಸ್‍ಲಿಫ್ಟ್ ಕಾರುಗಳಲ್ಲಿ ಟೈಲ್ ದೀಪಗಳು ತೀಕ್ಷ್ಣವಾದ ನೋಟ, ಕಡಿಮೆ ಹಿಂಭಾಗದ ಬಂಪರ್‍‍ನ ಉದ್ದಕ್ಕೂ ಚಲಿಸುವ ದಪ್ಪದಾದ ಕ್ರೋಮ್ ಬ್ಯಾಂಡ್ ಅನ್ನು ನೀಡುತ್ತದೆ. ಇದರಿಂದ ಹಿಂಭಾಗದಲ್ಲಿ ಪ್ರಮುಖ ಪ್ರತಿಫಲಕಗಳು, ರಿವರ್ಸ್ ದೀಪಗಳು ಮತ್ತು ಹಿಂಭಾಗದ ಫಾಗ್ ಲ್ಯಾಂಪ್ ಅನ್ನು ಸಹ ಕಾಣಬಹುದಾಗಿದೆ. ಅಂತೆಯೇ ಕಾರಿನ ಒಳಭಾಗದಲ್ಲಿಯೂ ಸಹ ಬದಲಾವಣೆಗಳನ್ನು ಮಾಡಲಾಗಿದ್ದು, ವಿನೂತನವಾದ ವೈಶಿಷ್ಟ್ಯತೆಗಳನ್ನು ಅಳವಡಿಸಿರುವುದು ಕಂಡುಬಂದಿದೆ.

ಬ್ಲೂ ಲಿಂಕ್ ಫೀಚರ್ಸ್ ಹೊತ್ತುಬರಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಈ ಬಾರಿ ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರಿನಲ್ಲಿ ವೈರ್‍‍ಲೆಸ್ ಚಾರ್ಜಿಂಗ್ ವೈಶಿಷ್ಟ್ಯತೆಯನ್ನು ಸಹ ಕಾಣಬಹುದಾಗಿದ್ದು, ಇದರ ಹೊರತಾಗಿ ಇನ್ನಿತರೆ ವೈಶಿಷ್ಟ್ಯತೆಗಳ ಬಗ್ಗೆ ಹ್ಯುಂಡೈ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

ಬ್ಲೂ ಲಿಂಕ್ ಫೀಚರ್ಸ್ ಹೊತ್ತುಬರಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರುಗಳು ಕೊರಿಯಾ ಸೇರಿದಂತೆ ವಿದೇಶಿ ಮಾರುಕಟ್ಟೆಗಳಿಗಾಗಿ 1.4-ಲೀಟರ್ ಮತ್ತು 1.6-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದ್ದು, 1.4-ಲೀಟರ್ ಪೆಟ್ರೋಲ್ ಕಾರುಗಳು 123-ಬಿಹೆಚ್‍‍ಪಿ ಮತ್ತು 1.6-ಲೀಟರ್ ಪೆಟ್ರೋಲ್ ಕಾರುಗಳು 201-ಬಿಎಚ್‌ಪಿ ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದೆ.

MOST READ: ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಬ್ಲೂ ಲಿಂಕ್ ಫೀಚರ್ಸ್ ಹೊತ್ತುಬರಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಆದರೆ ಭಾರತದಲ್ಲಿ ಮಾರಾಟವಾಗುವ ಎಲಾಂಟ್ರಾ ಕಾರುಗಳು 1.6-ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಮತ್ತು 2.0-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಈ ಬಾರಿ ಫೇಸ್‌ಲಿಫ್ಟ್ ಕಾರು 2.0-ಲೀಟರ್ ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರವೇ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

MOST READ: ಭಾರೀ ದಂಡಕ್ಕೆ ಬ್ರೇಕ್ ಹಾಕಿದ ಸಚಿವ ನಿತಿನ್ ಗಡ್ಕರಿ..!

ಬ್ಲೂ ಲಿಂಕ್ ಫೀಚರ್ಸ್ ಹೊತ್ತುಬರಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‌ಲಿಫ್ಟ್

ಇದಕ್ಕೆ ಕಾರಣ, ಎಲಾಂಟ್ರಾ ಡೀಸೆಲ್ ಕಾರುಗಳಿಂತ ಪೆಟ್ರೋಲ್ ಕಾರುಗಳಿಗೆ ಶೇ.80ರಷ್ಟು ಗ್ರಾಹಕರು ಆದ್ಯತೆ ನೀಡುತ್ತಿದ್ದು, ಈ ಬಾರಿ ಡೀಸೆಲ್ ಆಯ್ಕೆ ನೀಡುತ್ತಿಲ್ಲ ಎನ್ನುವ ಮಾಹಿತಿ ಇದೆ. ಈ ಮೂಲಕ ಎಲಾಂಟ್ರಾ ಫೇಸ್‍‍ಲಿಫ್ಟ್ ಕಾರು ಸ್ಕೋಡಾ ಒಕ್ಟಿವಿಯಾ ಮತ್ತು ಟೊಯೊಟಾ ಕೊರೊಲ್ಲಾ ಅಲ್ಟೀಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದ್ದು, ಹೊಸ ಕಾರಿನಲ್ಲಿ ಬಿಎಸ್-6 ಎಂಜಿನ್ ಹೊಂದಿದೆಯಾ ಎನ್ನುವುದು ಬಿಡುಗಡೆಯ ದಿನದಂದೆ ತಿಳಿಯಬೇಕು.

Article Published On: Saturday, September 28, 2019, 8:45 [IST]
English summary
Hyundai Elantra facelift modee will get connected car feature, making it the country's first fully connected executive sedan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+