ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಹ್ಯುಂಡೈ ಹೊಸ ಎಲೈಟ್ ಐ20

ಹ್ಯುಂಡೈ ಕಂಪನಿಯು ಹೊಸ ತಲೆಮಾರಿನ ಎಲೈಟ್ ಐ20 ಹ್ಯಾಚ್‌ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಸಲುವಾಗಿ ಅಭಿವೃದ್ಧಿ ಪಡಿಸುತ್ತಿದೆ. ಹೊಸ ಹ್ಯುಂಡೈ ಎಲೈಟ್ ಐ20 ಕಾರು 2020ರಿಂದ ಭಾರತದಲ್ಲಿ ಮಾರಾಟವಾಗಲಿದೆ. ಅಭಿವೃದ್ಧಿ ಹಂತದಲ್ಲಿರುವ ಹೊಸ ತಲೆಮಾರಿನ ಎಲೈಟ್ ಐ20 ಹ್ಯಾಚ್‌ಬ್ಯಾಕ್ ಕಾರು, ರೋಡ್ ಟೆಸ್ಟಿಂಗ್ ಮಾಡುವಾಗ ಕ್ಯಾಮರಾದಲ್ಲಿ ಸೆರೆಯಾಗಿದೆ.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಹ್ಯುಂಡೈ ಹೊಸ ಎಲೈಟ್ ಐ20

ಮೋಟಾರ್ ವಿಕಾತನ್ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ಕಾಣುವಂತೆ, ಸಂಪೂರ್ಣವಾಗಿ ಮರೆಮಾಚಿರುವ, ಹೊಸ ಹ್ಯುಂಡೈ ಎಲೈಟ್ ಐ20 ಅನ್ನು ತಮಿಳುನಾಡಿನಲ್ಲಿ ರೋಡ್ ಟೆಸ್ಟಿಂಗ್ ಮಾಡಲಾಗಿದೆ. ಹೊಸ ಎಲೈಟ್ ಐ20 ಹ್ಯಾಚ್‌ಬ್ಯಾಕ್ ಕಾರಿನ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್‍‍ಗಳಲ್ಲಿ ವ್ಯಾಪಕ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಅನ್ನು ಹ್ಯುಂಡೈ ಕಂಪನಿಯ ಹೊಸ ಡಿಸೈನ್ ಲ್ಯಾಂಗ್ವೇಜ್‍‍‍ನಿಂದ ನವೀಕರಿಸಲಾಗುವುದು.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಹ್ಯುಂಡೈ ಹೊಸ ಎಲೈಟ್ ಐ20

ಇದರಿಂದಾಗಿ ಈ ಕಾರು ಇತ್ತೀಚೆಗಷ್ಟೇ ಬಿಡುಗಡೆಯಾದ ವೆನ್ಯೂ ಕಾರಿನಂತೆಯೇ ಕಾಣಲಿದೆ. ಎಲೈಟ್ ಐ 20 ಕಾರಿನಲ್ಲಿ ಮುಖ್ಯವಾಗಿ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗುವುದು. ಇದರ ಜೊತೆಗೆ ಪರಿಷ್ಕೃತ ಎಂಜಿನ್ ಹಾಗೂ ಮುಂಬರುವ ಬಿಎಸ್6 ಮಾನದಂಡಗಳನ್ನು ಅಳವಡಿಸಲಾಗುವುದು. ಮೇಲ್ನೋಟಕ್ಕೆ ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಕಂಡು ಬಂದಿಲ್ಲವಾದರೂ, ಚಿತ್ರಗಳಲ್ಲಿ ಹೆಚ್ಚು ಸ್ಪಷ್ಟತೆಯಿಲ್ಲದಿದ್ದರೂ, ಅಂತರರಾಷ್ಟ್ರೀಯ ಮಾದರಿಯಲ್ಲಿರುವ ಮುಂಭಾಗದ ಗ್ರಿಲ್, ಪಕ್ಕದಲ್ಲಿರುವ ರೇಖೆಗಳು ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಪ್ರದರ್ಶಿಸುತ್ತವೆ.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಹ್ಯುಂಡೈ ಹೊಸ ಎಲೈಟ್ ಐ20

ಇದರಲ್ಲಿ ಹೊಸ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳಿವೆ. ಹೊಸ ಹ್ಯುಂಡೈ ಎಲೈಟ್ ಐ20 ಕಾರಿನ ಇಂಟಿರಿಯರ್‍‍ನಲ್ಲಿ ನವೀಕರಣಗೊಂಡ ಕ್ಯಾಬಿನ್ ಇರಲಿದೆ. ಹೊಸ ರೀತಿಯ ಬ್ಲೂ ಲಿಂಕ್ ಕನೆಕ್ಟಿವಿಟಿಯ ಈ ಫೀಚರ್ ಅನ್ನು ವೆನ್ಯೂ ಎಸ್‌ಯುವಿಯಿಂದ ಪಡೆಯಲಾಗಿದೆ. ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಎಲೈಟ್ ಐ20 ಕಾರಿನಲ್ಲಿ 1.2-ಲೀಟರ್‍‍ನ ಕಪಾ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 83 ಬಿಹೆಚ್‌ಪಿ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಹ್ಯುಂಡೈ ಹೊಸ ಎಲೈಟ್ ಐ20

ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್‍‍ನ ಜೊತೆಗೆ, ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು ನೀಡಲಾಗಿದೆ. ಎಲೈಟ್ ಐ20 ನಲ್ಲಿರುವ ಡೀಸೆಲ್ ಎಂಜಿನ್ 1.4-ಲೀಟರ್ ಸಿ‍ಆರ್‍‍ಡಿ‍ಐ ಡೀಸೆಲ್ ಎಂಜಿನ್ ಹೊಂದಿದ್ದು, 90 ಬಿಹೆಚ್‌ಪಿ ಹಾಗೂ 220 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು, ಯಾವುದೇ ಆಟೋಮ್ಯಾಟಿಕ್ ಆಯ್ಕೆಗಳನ್ನು ನೀಡಲಾಗುವುದಿಲ್ಲ.

MOST READ: ಇನ್ಮುಂದೆ ಹೊಸ ವಾಹನಗಳ ನೋಂದಣಿ ಅಷ್ಟು ಸುಲಭವಲ್ಲ..!

ರೋಡ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಹ್ಯುಂಡೈ ಹೊಸ ಎಲೈಟ್ ಐ20

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೊರಿಯಾ ಮೂಲದ ಹ್ಯುಂಡೈ ಕಂಪನಿಯು ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಜನಪ್ರಿಯ ಕಾರುಗಳಲ್ಲಿ ಎಲೈಟ್ ಐ20 ಕಾರು ಸಹ ಒಂದಾಗಿದೆ. ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರಿನ ನಂತರ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಇದಾಗಿದೆ. ಬಿಡುಗಡೆಯಾದ ನಂತರ, ಹ್ಯುಂಡೈ ಕಂಪನಿಯು, ಹೊಸ ಎಲೈಟ್ ಐ20 ಕಾರಿನ ಬೆಲೆಯನ್ನು ಸ್ವಲ್ಪ ಪ್ರಮಾಣದಲ್ಲಿ ಏರಿಸಬಹುದು. ಈ ಕಾರು ಮಾರುತಿ ಸುಜುಕಿಯ ಬಲೆನೊ, ಹೋಂಡಾ ಜಾಜ್ ಹಾಗೂ ಫೋಕ್ಸ್‌ವ್ಯಾಗನ್ ಪೊಲೊ ಕಾರುಗಳಿಗೆ ಪೈಪೋಟಿ ನೀಡಲಿದೆ.

Source: Vikatan

Article Published On: Saturday, June 29, 2019, 9:54 [IST]
English summary
New Hyundai Elite i20 Spied Testing In India — Next-Generation Elite i20 Launch Expected In 2020 - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+