ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊತ್ತು ಬರಲಿದೆ ಹ್ಯುಂಡೈ ವೆನ್ಯೂ
ಹ್ಯುಂಡೈ ಸಂಸ್ಥೆಯಲ್ಲಿ ಸದ್ಯ ಕ್ರೆಟಾ ಕಾರು ಉತ್ತಮ ಬೇಡಿಕೆಯನ್ನು ಪಡೆಯುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆಯಾದ ವೆನ್ಯೂ ಎಸ್‍ಯುವಿ ಕಾರು ಕೂಡಾ ಅದಕ್ಕಿಂತ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ಮೇ ತಿಂಗಳಿನಲ್ಲಿ ಬಿಡುಗಡೆಯಾದ ಹ್ಯುಂಡೈ ವೆನ್ಯೂ ಕಾರು ಇಲ್ಲಿಯವರೆಗು ಸುಮಾರು 50,000ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಸಂಸ್ಥೆಯು 20,000 ಕಾರುಗಳನ್ನು ವಿತರಣೆ ಮಾಡಲಾಗಿದೆ.

ದೆಹಲಿಯ ಎಕ್ಸ್ ಶೂರುಂ ಪ್ರಕಾರ ರೂ. 6.50 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದ ಹ್ಯುಂಡೈ ವೆನ್ಯೂ ಕಾರು ಸಧ್ಯಕ್ಕೆ 1.0 ಲೀಟರ್ ಟರ್ಬೋಚಾರ್ಜ್ಡ್ ಜಿಡಿಐ ಪೆಟ್ರೋಲ್, 1.2 ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಎಂಬ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರಿನಲ್ಲಿರುವ 1.0 ಲೀಟರ್ ಪೆಟ್ರೋಲ್ ಮಾದರಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಅಧಿಕವಾಗಿದ್ದು, ಈ ಎಂಜಿನ್ 120 ಬಿಹೆಚ್‍ಪಿ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನು ಹೊಂದಿದೆ. ಹಾಗೆಯೆ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಬರುತ್ತದೆ.

ವರದಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ವೆನ್ಯೂ ಕಾರಿಗೆ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿಯನ್ನು ನೀಡಿ ಹೊಸ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ತನ್ನ ಎದುರಾಳಿಯದ ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ತಮ್ಮ ಸಿಯಾಜ್, ಎರ್ಟಿಗಾ ಮತ್ತು ವಿಟಾರಾ ಬ್ರೆಝಾ ಕಾರುಗಳಿಗೆ ಹೈಬ್ರಿಡ್ ಎಂಜಿನ್ ಅನ್ನು ನೀಡಿ ಇದೇ ವರ್ಷದ ನವೆಂಬರ್ ತಿಂಗಳೊಳಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಹೀಗಾಗಿ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊತ್ತುಬರಲಿರುವ ಹ್ಯುಂಡೈ ವೆನ್ಯೂ ಕಾರುಗಳು ಮಾರುಕಟ್ಟೆಯಲಿರುವ ತನ್ನ ಎದುರಾಳಿ ಮಾರುತಿ ಸುಜುಕಿ ಬ್ರೆಝಾ ಕರುಗಳಿಗೆ ತೀವ್ರ ಪೈಪೋಟಿ ನೀಡುವ ಹೆಚ್ಚಿನ ಸಾಧ್ಯತೆಗಳಿದ್ದು, ಇದೇ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ಹ್ಯುಂಡೈ ಸಂಸ್ಥೆಯು ಬಿಡುಗಡೆ ಮಾಡಲಿರುವ ಎಲೈಟ್ ಐ20 ಕಾರಿನಲ್ಲಿಯೂ ಸಹ ಅಳವಡಿಸುವ ಸಾಧ್ಯತೆಗಳಿವೆ.

ಎಂಜಿನ್ ಪರ್ಫಾಮೆನ್ಸ್
ಇನ್ನು ಐ20 ಕಾರಿನಿಂದ ಎರವಲು ಪಡೆಯಲಾದ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, 1.4-ಲೀಟರ್ ಡೀಸೆಲ್ ಮಾದರಿಯು ಕ್ರೆಟಾದಿಂದ ಎರವಲು ಪಡೆಯಲಾದ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 89-ಬಿಎಚ್‌ಪಿ, 220-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹಾಗೆಯೇ ಟಾಪ್ ಎಂಡ್ ಮಾದರಿಯಾದ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 120-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿದ್ದು, ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆ ಮಾಡಬಹುದಾಗಿದೆ.

ವೆನ್ಯೂ ತಾಂತ್ರಿಕ ವೈಶಿಷ್ಟ್ಯತೆ
ಹ್ಯುಂಡೈ ವೆನ್ಯೂ ಕಾರಿನಲ್ಲಿ 33 ಫೀಚರ್ಸ್‌ಗಳನ್ನು ಹೊಂದಿರುವ ಬ್ಯೂ ಲಿಂಕ್ ಕನೆಕ್ಟಿವಿಟಿ ಸೌಲಭ್ಯವನ್ನು ಜೋಡಿಸಲಾಗಿದ್ದು, ಪ್ಯಾಕೇಜ್ ಮಾದರಿಯನ್ನು ಹೊಂದಿರುವ ಈ ಸೌಲಭ್ಯವು ಹೊಸ ಕಾರಿಗೆ ಗರಿಷ್ಠ ಸುರಕ್ಷತೆಯ ಜೊತೆಗೆ ಕಾರು ಪ್ರಯಾಣವನ್ನು ಸುಖವಾಗಿಸಲು ಹಲವು ಮಾಹಿತಿಗಳನ್ನು ನೀಡಲಿದೆ.

ಬ್ಲೂ ಲಿಂಕ್ ಪ್ಯಾಕೇಜ್‌ನಲ್ಲಿ ಜಿಯೋ ಫೆನ್ಸ್, ಎರ್ಮಜೆನ್ಸಿ ಅಸಿಸ್ಟ್, ಕಾರ್ ಟ್ರಾಕಿಂಗ್ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಸಿಗ್ನಿಚೆಕ್ ಕಾಸ್‌ಕ್ಲ್ಯಾಡಿಂಗ್ ಹೆಕ್ಸಾಗೊನಲ್ ಫ್ರಂಟ್ ಗ್ರಿಲ್, ಡ್ಯುಯಲ್ ಹೆಡ್‌ಲ್ಯಾಂಪ್ ಕ್ಲಸ್ಟರ್, ಸಣ್ಣ ಎಳೆಯಂತಿರುವ ಲೈಟ್ ಸ್ಟ್ರಿಪ್, ಹೆಡ್‌ಲ್ಯಾಂಪ್ ಕ್ಲಸ್ಟರ್ ಕಳೆಭಾಗದಲ್ಲಿ ಹೊಂದಿಕೊಂಡಂತಿರುವ ಎಲ್ಇಡಿ ಡಿಆರ್‌ಎಲ್ಎಸ್ ಮತ್ತು 16-ಇಂಚಿನ ಟೈರ್ ಸೌಲಭ್ಯವು ಎಸ್‌ಯುವಿ ಪ್ರಿಯರನ್ನು ಸೆಳೆಯಲಿವೆ.

ಇದಲ್ಲದೇ ಹೊಸ ಕಾರಿನ ಒಳಾಂಗಣ ವಿನ್ಯಾಸದ ಬಗೆಗೆ ಹೇಳುವುದಾದರೇ, 5-ಸೀಟರ್ ಸೌಲಭ್ಯ ಹೊಂದಿರುವ ವೆನ್ಯೂ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದಿದ್ದು, ಬ್ಲ್ಯಾಕ್ ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್, 8-ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್ಪೈ, ಸೆಂಟರ್ ಕನ್ಸೊಲ್, ಡ್ಯಾಶ್‌ಬೋರ್ಡ್ ಸುತ್ತಲೂ ಸಿಲ್ವರ್ ಎಕ್ಸೆಂಟ್, ಉತ್ತಮ ದರ್ಜೆಯ ಲೆದರ್ ಸೀಟುಗಳು, ವೈರ್‌ಲೆಸ್ ಚಾರ್ಚಿಂಗ್ ಪಾಯಿಂಟ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವಿದೆ.

ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್, ಹೊಂದಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

ಖರೀದಿಗೆ ಲಭ್ಯವಿರುವ ಬಣ್ಣಗಳು
ವೆನ್ಯೂ ಕಾರು ಒಟ್ಟು 10 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, 7 ಸಿಂಗಲ್ ಟೋನ್ ಮತ್ತು 3 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಸಿಂಗಲ್ ಟೋನ್‌ನಲ್ಲಿ ಪೊಲಾರ್ ವೈಟ್, ಸಿಲ್ವರ್, ಫ್ಲೆರಿ ರೆಡ್, ಡೆನಿಮ್ ಬ್ಲ್ಯೂ, ಲಾವಾ ಆರೆಂಜ್, ಸ್ಟಾರ್ ಡಸ್ಟ್, ಡೀಪ್ ಫಾರೆಸ್ಟ್ ಮತ್ತು ಡ್ಯುಯಲ್ ಟೋನ್‌ನಲ್ಲಿ ಡೆನಿಮ್ ಬ್ಲ್ಯೂ ಜೊತೆ ಪೊಲಾರ್ ವೈಟ್ ರೂಫ್, ಪೊಲಾರ್ ವೈಟ್ ಜೊತೆ ಬ್ಲ್ಯಾಕ್ ರೂಫ್ ಮತ್ತು ಲಾವಾ ಆರೇಂಜ್ ಜೊತೆ ಬ್ಲ್ಯಾಕ್ ರೂಫ್ ನೀಡಲಾಗಿದೆ.


Click it and Unblock the Notifications








