ಹೊಸ ಫೀಚರ್ಸ್‍ಗಳೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಥಾರ್
ಮಹೀಂದ್ರಾ ಕಂಪನಿಯು ತನ್ನ 2020ರ ಥಾರ್ ಅನ್ನು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಿದೆ. ಮಹೀಂದ್ರಾ ಥಾರ್ ಹೊಸ ಫೀಚರ್ಸ್‍ಗಳನ್ನು ಹೊಂದಿರಲಿದೆ. ಹೊಸ ಎಸ್‍ಯುವಿಯ ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

2020ರ ಮಹೀಂದ್ರಾ ಥಾರ್ ಎಸ್‍ಯುವಿಯ ಇಂಟಿರಿಯರ್‍ನ ಕೆಲವು ಮಾಹಿತಿಗಳು ಬಹಿರಂಗವಾಗಿವೆ. ಇದರಲ್ಲಿ ಮುಂಬರುವ ಥಾರ್ ಹಲವಾರು ಹೊಸ ಫೀಚರ್ಸ್‍ಗಳನ್ನು ಹೊಂದಿರುವುದು ತಿಳಿದು ಬರುತ್ತದೆ. ಮಹೀಂದ್ರಾ ಸ್ಕಾರ್ಪಿಯೋ ಮಾದರಿಯ ಹಲವಾರು ಫೀಚರ್ಸ್‍ಗಳನ್ನು ಹೊಸ ಥಾರ್ ಎಸ್‍ಯುವಿಯಲ್ಲಿ ಅಳವಡಿಸಲಾಗಿದೆ.

2020ರ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಸಾಫ್ಟ್ ಟಾಪ್ ಹಾಗೂ ಹಾರ್ಡ್ ಟಾಪ್ - ಎಂಬ ಎರಡು ಡೋರ್ ಬಾಡಿ ಸ್ಟೈಲ್‌ಗಳಲ್ಲಿ ನೀಡಲಾಗುವುದು. ಎಸ್‍ಯುವಿಯ ಹೊರಭಾಗವು ಜೀಪ್ ಶೈಲಿಯ ವಿನ್ಯಾಸವನ್ನು ಹೊಂದಿದ್ದರೆ, ಇಂಟಿರಿಯರ್ ಅನ್ನು ಹೆಚ್ಚು ಅಪ್‍ಡೇಟ್ ಮಾಡಲಾಗಿದೆ.

ಹೊಸ ಥಾರ್ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡಾಯ್ಡ್ ಆಟೋವನ್ನು ಹೊಂದಿರುವ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಹೊಸ ಸ್ಟೀಯರಿಂಗ್ ವ್ಹೀಲ್‍ನ ಹಿಂದೆ ಡಿಜಿಟಲ್ ಎಂಐಡಿ(ಮಲ್ಟಿ-ಇನ್ಫಾರ್ಮಶನ್ ಡಿಸ್‍ಪ್ಲೇಯೊಂದಿಗೆ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

ಹೊಸ ಮಹೀಂದ್ರಾ ಥಾರ್‍ನ 4×4 ಲಿವರ್ ವಿಭಿನ್ನವಾಗಿದೆ. ಇದರಲ್ಲಿ 2ಡಬ್ಲ್ಯುಡಿ(ಆರ್‍ಡಬ್ಲ್ಯುಡಿ) ಹೈ, 4ಡಬ್ಲ್ಯುಡಿ ಹೈ ಮತ್ತು 4 ಡಬ್ಲ್ಯು ಡಿ ಲೋ ಎಂಬ ಮೂರು ಮೋಡ್‍ಗಳಿವೆ.

ಮಾರುಕಟ್ಟೆಯಲ್ಲಿರುವ ಥಾರ್ 2.5 ಲೀಟರ್ ಡೀಸೆಲ್ ಬಿಎಸ್ 4 ಎಂಜಿನ್ ಹೊಂದಿದೆ. ಈ ಎಂಜಿನ್ 105 ಬಿಹೆಚ್‌ಪಿ ಪವರ್ ಹಾಗೂ 247 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಈ ಎಸ್‍ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.64 ಲಕ್ಷದಿಂದ 10.1 ಲಕ್ಷಗಳಾಗಿದೆ.

ಹೊಸ ಥಾರ್ ಹೆಚ್ಚು ಬಲಶಾಲಿಯಾದ 120 ಬಿಹೆಚ್‌ಪಿ ಪವರ್ ಉತ್ಪಾದಿಸುವ 2.0 ಲೀಟರ್ ಡೀಸೆಲ್ ಬಿಎಸ್ 6 ಎಂಜಿನ್ ಹೊಂದಿರಲಿದೆ. ಹೊಸ ಫೀಚರ್, ದೊಡ್ಡ ಗಾತ್ರದ ಬಾಡಿ, ಬಲಶಾಲಿಯಾದ ಬಿಎಸ್ 6 ಡೀಸೆಲ್ ಎಂಜಿನ್ ಹೊಂದಲಿರುವ ಹೊಸ ಥಾರ್‌ನ ಬೆಲೆಯು ಮಾರುಕಟ್ಟೆಯಲ್ಲಿರುವ ಥಾರ್‌ಗಿಂತ ಹೆಚ್ಚಿರುವ ಸಾಧ್ಯತೆಗಳಿವೆ.
MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍ಗಳೆಷ್ಟು ಗೊತ್ತಾ?

ಹೊಸ 2020ರ ಥಾರ್ 2 ಡೋರಿನ ರೂಪಾಂತರವಾಗಿದೆ. ಹೊಸ ಥಾರ್‍ನಲ್ಲಿ 5 ಸ್ಪೋಕ್ ವಿನ್ಯಾಸದ ದೊಡ್ಡ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಅಲಾಯ್ ವ್ಹೀಲ್‍ಗಳಲ್ಲಿ 235 ಅಥವಾ 245 ಸೆಕ್ಷನ್ ಟಯರ್‍ಗಳಿವೆ.
MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಹೊಸ ಥಾರ ಮಾರುಕಟ್ಟೆಯಲ್ಲಿರುವ ಥಾರ್‍ಗಿಂತ ಹೆಚ್ಚು ಬೆಲೆಯನ್ನು ಹೊಂದಿರಲಿದೆ. ಹೊಸ ಮಹೀಂದ್ರಾ ಎಸ್‍ಯುವಿಯು ಶೀಘ್ರದಲ್ಲೇ ಹೊಸ ಫೀಚರ್ಸ್‍ಗಳೊಂದಿಗೆ ಬಿಡುಗಡೆಯಾಗಲಿದೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಥಾರ್ ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ.
Source: Motorworldindia


Click it and Unblock the Notifications