ಸೆಪ್ಟೆಂಬರ್ ಅಂತ್ಯಕ್ಕೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಬಿಡುಗಡೆ ಪಕ್ಕಾ

ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ ಅತ್ಯಧಿಕ ಕಾರು ಮಾರಾಟದೊಂದಿಗೆ ಮೊದಲ ಸ್ಥಾನದಲ್ಲಿದ್ದು, ಶೇ.42 ರಷ್ಟು ಕಾರು ಮಾರಾಟ ಪಾಲನ್ನು ತನ್ನದಾಗಿಸಿಕೊಂಡಿದೆ. ಹೀಗಿರುವಾಗ ಇತ್ತೀಚೆಗೆ ಬಿಡುಗಡೆಯಾಗಿರುವ ಕೆಲವು ಹೊಸ ಕಾರು ಮಾದರಿಗಳು ಮಾರುತಿ ಸುಜುಕಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಪ್ರತಿಸ್ಪರ್ಧಿಗಳಿಗೆ ಟಕ್ಕರ್ ನೀಡಲು ಎಸ್-ಪ್ರೆಸ್ಸೊ ಎನ್ನುವ ಮತ್ತೊಂದು ಸಣ್ಣ ಕಾರನ್ನು ಬಿಡುಗಡೆ ಮಾಡುತ್ತಿದೆ.

ಹ್ಯುಂಡೈ ವೆನ್ಯೂಗೆ ಟಕ್ಕರ್‌ಗೆ ನೀಡಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಹೌದು, ದೇಶಿಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಪ್ಯಾಸೆಂಜರ್ ಕಾರುಗಳಿಂದಲೇ ಭಾರೀ ಜನಪ್ರಿಯತೆಯನ್ನು ಗಳಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರಸ್ತಕ ವರ್ಷದಲ್ಲಿ ಕೆಲವು ಹೊಸ ನಮೂನೆಯ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಪ್ರದರ್ಶನಗೊಳಿಸಲಾಗಿದ್ದ ಮೈಕ್ರೊ ಎಸ್‌ಯುವಿ ಫ್ಯೂಚರ್ ಎಸ್ ಕಾನ್ಸೆಪ್ಟ್ ಮಾದರಿಯನ್ನೇ ಇದೀಗ ಎಸ್-ಪ್ರೆಸ್ಸೊ ಎನ್ನುವ ಹೆಸರಿನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ.

ಹ್ಯುಂಡೈ ವೆನ್ಯೂಗೆ ಟಕ್ಕರ್‌ಗೆ ನೀಡಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರುನ್ನು ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಮಹೀಂದ್ರಾ ಕೆಯುವಿ100 ನೆಕ್ಸ್ ಮತ್ತು ರೆನಾಲ್ಟ್ ಹೊಸದಾಗಿ ಬಿಡುಗಡೆ ಮಾಡುತ್ತಿರುವ ಕ್ವಿಡ್ ಫೇಸ್‌ಲಿಫ್ಟ್ ಕಾರುಗಳಿಗೆ ಪೈಪೋಟಿಯಾಗಿ ಮಾರುತಿ ಸುಜುಕಿ ಎಸ್‌-ಪ್ರೆಸ್ಸೊ ರಸ್ತೆಗಿಳಿಯಲಿದೆ.

ಹ್ಯುಂಡೈ ವೆನ್ಯೂಗೆ ಟಕ್ಕರ್‌ಗೆ ನೀಡಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಾದರಿಯು ಮೈಕ್ರೋ ಎಸ್‍ಯುವಿ ವೈಶಿಷ್ಟ್ಯತೆಗಳೊಂದಿಗೆ ಕೇಂದ್ರ ಸರ್ಕಾರವು 2020ರ ಎಪ್ರಿಲ್ 1ರಿಂದ ಜಾರಿಗೆ ತರುತ್ತಿರುವ ಬಿಎಸ್-6 ಹೊಸ ನಿಯಮಾವಳಿ ಪ್ರಕಾರ ಹೊಸ ಎಂಜಿನ್ ಅನ್ನು ಹೊತ್ತು ಬರಲಿದೆ ಎನ್ನಲಾಗಿದೆ.

ಹ್ಯುಂಡೈ ವೆನ್ಯೂಗೆ ಟಕ್ಕರ್‌ಗೆ ನೀಡಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಸ್‍-ಪ್ರೆಸ್ಸೊ ಕಾರು ಬಿಎಸ್‍-6 ಆಧಾರಿತ 1.2-ಲೀಟರ್(1,200 ಸಿಸಿ) ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದ್ದು, ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5- ಸ್ಪೀಡ್ ಆಟೋಮ್ಯಾಟಿಕ್ ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿರಲಿದೆ. ಮಾಹಿತಿಗಳ ಪ್ರಕಾರ ಎಸ್-ಪ್ರೆಸ್ಸೊ ಕಾರು 2019ರ ಸೆಪ್ಟೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗುವುದು ಖಚಿತ ಎನ್ನಲಾಗಿದ್ದು, ಮಾರುತಿ ಸುಜುಕಿಯ ಜನಪ್ರಿಯ ಬ್ರೆಝಾ ಕಾರಿಗಿಂತ ಕೆಳಹಂತದ ಕಾರು ಆವೃತ್ತಿಯಾಗಿ ಮಾರಾಟವಾಗಲಿದೆ.

ಹ್ಯುಂಡೈ ವೆನ್ಯೂಗೆ ಟಕ್ಕರ್‌ಗೆ ನೀಡಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಕೈಗೆಟುಕುವ ಬೆಲೆಯ ಕಾರು ಮಾದರಿಗಳನ್ನು ಪರಿಚಯಿಸುವುದರಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ಸಂಸ್ಥೆಯು ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಆರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಬಿಡುಗಡೆಯಾಗುತ್ತಿರುವ ಮತ್ತೊಂದು ಗೇಮ್‌ಚೆಂಜರ್ ಕಾರು ಎಸ್-ಪ್ರೆಸ್ಸೊ ಮಾದರಿಯು ಮತ್ತಷ್ಟು ಸದ್ದು ಮಾಡಲಿದೆ.

ಹ್ಯುಂಡೈ ವೆನ್ಯೂಗೆ ಟಕ್ಕರ್‌ಗೆ ನೀಡಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಎಸ್-ಪ್ರೆಸ್ಸೊ ಕಾರಿನ ವಿನ್ಯಾಸಗಳನ್ನು ಗಮನಿಸಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ವಿಭಿನ್ನ ಎನ್ನಿಸಲಿದ್ದು, ಮೈಕ್ರೊ ಎಸ್‌ಯುವಿ ಕಾರಿನ ಗುಣಲಕ್ಷಣಗಳಾದ 4 ಮೀಟರ್‌ಗಿಂತಲೂ ಕಡಿಮೆ ಉದ್ದಳತೆ ಹೊಂದಿರಲಿದೆ. ಎ-ಪಿಲ್ಲರ್ ವಿಭಾಗದಲ್ಲಿನ ಹೊಸ ವಿನ್ಯಾಸದೊಂದಿಗೆ ಚಾಲಕನಿಗೆ ಅನುಕೂಲಕರ ಚಾಲನಾ ಸೌಲಭ್ಯಗಳನ್ನು ಒದಗಿಸಲಿದ್ದು, ಹಿಂಬದಿಯ ಸವಾರರಿಗೂ ಅನುಕೂಲಕರ ಆಸನ ವ್ಯವಸ್ಥೆ ಹೊಂದಿದೆ.

ಹ್ಯುಂಡೈ ವೆನ್ಯೂಗೆ ಟಕ್ಕರ್‌ಗೆ ನೀಡಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಹೀಗಾಗಿ ವಿಟಾರಾ ಬ್ರೆಝಾ ಕಾರುಗಳಂತೆ ವಿಶೇಷ ಸೌಲಭ್ಯ ಹೊಂದಲಿರುವ ಎಸ್-ಪ್ರೆಸ್ಸೊ ಎಸ್‌ಯುವಿ ಕಾರುಗಳು ಗಾತ್ರದಲ್ಲಿ ಚಿಕ್ಕದಾದರೂ ಅತ್ಯುತ್ತಮ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಿರಲಿದ್ದು, ನಗರ ಪ್ರದೇಶಗಳಲ್ಲಿ ವ್ಯಯಕ್ತಿಕ ಕಾರು ಬಳಕೆಗಾಗಿ ಇದು ಅತಿಹೆಚ್ಚು ಬೇಡಿಕೆ ಸೃಷ್ಠಿಸುವ ನೀರಿಕ್ಷೆಯಿದೆ.

ಹ್ಯುಂಡೈ ವೆನ್ಯೂಗೆ ಟಕ್ಕರ್‌ಗೆ ನೀಡಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಈ ಮೂಲಕ ನಗರ ಪ್ರದೇಶಗಳಲ್ಲಿನ ಟ್ರಾಫಿಕ್ ದಟ್ಟಣೆಯಲ್ಲೂ ಸಲೀಸಾಗಿ ಸಾಗಬಲ್ಲ ಗುಣಹೊಂದಿರುವ ಎಸ್-ಪ್ರೆಸ್ಸೊ ಎಸ್‌ಯುವಿ ಮಾದರಿಯು ಸ್ಪೋರ್ಟಿ ಕಾರು ಪ್ರಿಯರನ್ನು ಸೆಳೆಯಬಹುದಾದ ಅಲಾಯ್ ಚಕ್ರಗಳು, ಹೈ ಮೌಟೆಂಡ್ ಲೈಟ್ಸ್ ಒದಗಿಸಿರುವುದು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಹ್ಯುಂಡೈ ವೆನ್ಯೂಗೆ ಟಕ್ಕರ್‌ಗೆ ನೀಡಲು ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರಿನ ಬೆಲೆಗಳು(ಅಂದಾಜು)

ಸಣ್ಣ ಗಾತ್ರದ ಕಾರುಗಳಲ್ಲೇ ವಿಭಿನ್ನ ಎನ್ನಿಸಲಿರುವ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮೈಕ್ರೊ ಎಸ್‌ಯುವಿ ಕಾರುಗಳು ದೇಶದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 4.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.50 ಲಕ್ಷಕ್ಕೆ ಖರೀದಿಗೆ ಲಭ್ಯವಾಗಬಹುದು ಎನ್ನಲಾಗಿದೆ.

Most Read Articles

Kannada
English summary
New Maruti Suzuki S-Presso Micro-SUV Launch Details Revealed. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more