ಹೊಸ ಅಪ್ಡೇಟ್ ಪಡೆಯಲಿದೆ ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಸಬ್-4 ಮೀಟರ್ ಕಂಪ್ಯಾಕ್ಟ್ ಎಸ್‍ಯುವಿ ಕಾರುಗಳಿಗೆ ಬೇದಿಕೆಯು ಹೆಚ್ಚುತ್ತಿದ್ದುಮ್ ಸಧ್ಯ ಈ ಸೆಗ್ಮೆಂಟ್‍ನಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮೊದಲನೆಯ ಸ್ಥಾನದಲ್ಲಿದೆ. 2015ರಲ್ಲಿ ಬಿಡುಗಡೆಗೊಂಡ ಬ್ರೆಝಾ ಕಾರು ಇಂದಿಗೂ ಸಹ ಮಾರುಕಟ್ಟೆಯಲಿ ಸದ್ದು ಮಾಡುತ್ತಿದ್ದು, ಇಲ್ಲಿಯವರೆಗು ಕೇವಲ ಡೀಸೆಲ್ ಎಂಜಿನ್ ಮಾದರಿಯಲ್ಲಿ ದೊರೆಯುತ್ತಿದ್ದ ಬ್ರೆಝಾ ಕಾರನ್ನು ಪೆಟ್ರೋಲ್ ಮಾದರಿಯಲ್ಲಿಯು ಬಿಡುಗಡೆ ಮಾಡುವುದಾಗಿ ಸಂಸ್ಥೆಯು ಹೇಳಿಕೊಂಡಿತ್ತು.

ಹೊಸ ಅಪ್ಡೇಟ್ ಪಡೆಯಲಿದೆ ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರು

ಬಿಡುಗಡೆಯಾಗಲಿರುವ ಪೆಟ್ರೋಲ್ ಆಧಾರಿತ ಮಾರುತಿ ಸುಜುಕಿ ಬ್ರೆಝಾ ಫೇಸ್‍ಲಿಫ್ಟ್ ಕಾರುಗಳು ಈ ಬಾರಿ ಕೇವಲ ಎಂಜಿನ್‍ನಲ್ಲಿ ಮಾತ್ರವಲ್ಲದೆಯೆ ಕೆಲ ಎಕ್ಸ್ಟ್ರಾ ಉಪಕರಣಗಳನ್ನು ಸಹ ಪಡೆದುಕೊಳ್ಳಲಿದ್ದು, ಟೀಂ ಬಿಹೆಚ್‍ಪಿ ವರದಿ ಪ್ರಕಾರ ಹೊಸ ಮಾರುತಿ ಸುಜುಕಿ ಬ್ರೆಝಾ ಕಾರು ಈ ಬಾರಿ ಒಟ್ಟು 4 ಏರ್‍‍‍ಬ್ಯಾಗ್‍ಗಳು ಮತ್ತು ಸನ್‍ರೂಫ್ ಅನ್ನು ಪಡೆಯಲಿದೆ. ಅಂದರೆ ಈಗಾಗಲೇ ಡ್ಯುಯಲ್ ಏರ್‍‍‍ಬ್ಯಾಗ್ ಆಯ್ಕೆಯಲ್ಲಿ ಲಭ್ಯವಿರುವ ಈ ಕಾರು ನಂತರ ಸೈಡ್ ಏರ್‍‍ಬ್ಯಾಗ್‍ಗಳನ್ನು ಸಹ ಪಡೆಯಲಿದೆಯಂತೆ.

ಹೊಸ ಅಪ್ಡೇಟ್ ಪಡೆಯಲಿದೆ ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರು

ಎರಡು ಏರ್‍‍ಬ್ಯಾಗ್‍ಗಳು ಅಂದರೆ ಡ್ರೈವರ್‍‍ಗೆ ಮತ್ತು ಕೋ ಪ್ಯಾಸೆಂಜರ್‍‍ಗೆ ಏರ್‍‍ಬ್ಯಾಗ್ ಅನ್ನು ನೀಡಲಿದೆಯೆ ಅಥವಾ ಒಟ್ಟಾರೆಯಾಗಿ ಸಂಸ್ಥೆಯು ತಮ್ಮ ಮುಂದಿನ ಬ್ರೆಝಾ ಕಾರಿಗೆ ಒಟ್ಟಾರೆಯಾಗಿ 6 ಏರ್‍‍ಬ್ಯಾಗ್‍ಗಳನ್ನು ನೀಡಲಿದೆಯೆ ಎಂದು ಇನ್ನು ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಒಟ್ಟಿನಲ್ಲಿ 6 ಏರ್‍‍ಬ್ಯಾಗ್ ಅನ್ನು ನೀಡಿದ್ದೆ ಆದಲಿ ಈ ಕಾರಿನ ಬೆಲೆಯು ಕೊಂಚ ಅಧಿಕವಾಗಿರಬಹುದಾಗಿದೆ ಮತ್ತು ಮೇಲೆ ಹೇಳಿರುವ ಹಾಗೆ ಸನ್ ರೂಫ್ ಅನ್ನು ಸಹ ನೀಡಲಾಗುತ್ತಿದೆ.

ಹೊಸ ಅಪ್ಡೇಟ್ ಪಡೆಯಲಿದೆ ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರು

ಮಾರುತಿ ಸುಜುಕಿಯು ವಿಟಾರಾ ಬ್ರೆಝಾ ಎಸ್‍ಯುವಿಯ ಪೆಟ್ರೊಲ್ ಅವೃತ್ತಿಯ ಉತ್ಪಾದನೆಯಲ್ಲಿ ತೊಡಗಿದ್ದು, ಸಿಯಾಜ್ ಸೆಡಾನ್ ನಂತೆ ವಿಟಾರಾ ಬ್ರೆಝಾ ಸಹ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಮಾರುತಿ ಸುಜುಕಿಯು ಇತ್ತೀಚಿಗಷ್ಟೆ ಹೊಸ 1.5 ಲೀಟರ್ ಪೆಟ್ರೊಲ್ ಎಂಜಿನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಳೆದ ವರ್ಷದ ಕೊನೆಯಲ್ಲಿ ದೇಶಿಯವಾಗಿ ನಿರ್ಮಿಸಿದ್ದ ಪೆಟ್ರೋಲ್ ಎಂಜಿನನ್ನು ಮೊದಲ ಬಾರಿಗೆ ಸಿಯಾಝ್ ಸೆಡಾನ್‍ನಲ್ಲಿ ಅಳವಡಿಸಲಾಗಿತ್ತು.

ಹೊಸ ಅಪ್ಡೇಟ್ ಪಡೆಯಲಿದೆ ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರು

ಈಗ ಈ ಎಂಜಿನನ್ನು ವಿಟಾರಾ ಬ್ರಿಝಾ ಸೇರಿದಂತೆ ಬೇರೆ ಮಾದರಿಯ ವಾಹನಗಳಲ್ಲೂ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ವರದಿ ಪ್ರಕಾರ, ವಿಟಾರಾ ಬ್ರೆಝಾವನ್ನು1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ನೊಂದಿಗೆ ಪೆಟ್ರೊಲ್ ಎಸ್‍ಯುವಿ ಯನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಜನಪ್ರಿಯ ಮಾದರಿಯ ಎಸ್‍ಯುವಿ ಇಂಧನದ ವಿಷಯದಲ್ಲಿ ದುಬಾರಿಯಾಗಬಹುದೆಂಬ ಕಾರಣದಿಂದ ಈ ಯೋಜನೆಯನ್ನು ಕೈಬಿಡಲಾಯಿತು.

ಹೊಸ ಅಪ್ಡೇಟ್ ಪಡೆಯಲಿದೆ ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರು

ಮಾರುತಿ ಸುಜುಕಿ ಕಂಪನಿಯು ಹೊಸ ಪೆಟ್ರೋಲ್ ಎಂಜಿನನ್ನು ವಿಟಾರಾ ಬ್ರೆಝಾದಲ್ಲಿ ಅಳವಡಿಸುವ ಮೊದಲು ಎರಡನೇ ತಲೆಮಾರಿನ ಎರ್ಟಿಗಾ ಎಂಪಿವಿಯಲ್ಲಿ ಅಳವಡಿಸುವುದು. ನಾಲ್ಕು ಸಿಲಿಂಡರ್ ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್, 1,462 ಸಿಸಿ ಹೊಂದಿದ್ದು 105 ಬಿಹೆಚ್‍ಪಿ ಮತ್ತು138 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೊಸ ಅಪ್ಡೇಟ್ ಪಡೆಯಲಿದೆ ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರು

ಪೆಟ್ರೋಲ್ ಇಂಜಿನ್ ಜೊತೆಯಲ್ಲಿ ಮಾರುತಿ ವಿಟಾರಾ ಬ್ರೆಝಾ ಮಾರುತಿಯ ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ ಹೊಂದಿರಲಿದೆ. ಮಾರುತಿಯ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿಯು ಸ್ಟಾಂಡರ್ಡ್ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಭವಿಷ್ಯದ ಯೋಜನೆಗಳಿಗಾಗಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಫೋರ್ ಸ್ಪೀಡ್ ಟಾರ್ಕ್ ಕನ್ವರ್ಟರ್‍‍ಗಳನ್ನು ನೀಡಲಾಗಿದೆ. ಇದೇ ರೀತಿಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸಿಯಾಜ್ ಸೆಡಾನ್ ನಲ್ಲೂ ಅಳವಡಿಸಲಾಗಿದೆ.

ಹೊಸ ಅಪ್ಡೇಟ್ ಪಡೆಯಲಿದೆ ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರು

ಪೆಟ್ರೋಲ್ ಎಂಜಿನನ್ನು ಅಳವಡಿಸುವ ಹೊರತಾಗಿ ಮಾರುತಿ ವಿಟಾರಾ ಬ್ರೆಝಾದಲ್ಲಿ ಇನ್ನೂ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ನೋಡಬಹುದು, ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಮಾರುತಿ ಸುಜುಕಿಯು ಇದೇ ವಿಧಾನವನ್ನು ವಿಟಾರಾ ಬ್ರೆಝಾ ಡೀಸೆಲ್ ಅವೃತ್ತಿಯಲ್ಲೂ ಪರಿಚಯಿಸುವ ಯೋಜನೆಯಲ್ಲಿದೆ. ಮಾಲಿನ್ಯ ತಡೆಗೆ ಸಂಬಂಧಪಟ್ಟಂತೆ ಏಪ್ರಿಲ್ 2020ರ ಗಡುವು ನೀಡಲಾಗಿದ್ದು, ಮಾರುತಿ ಸುಜುಕಿ ಈಗ ಚಾಲ್ತಿಯಲ್ಲಿರುವ 1.3 ಲೀಟರ್ ಡೀಸೆಲ್ ಯೂನಿಟನ್ನು ಹೊಸ ವಿಟಾರಾ ಬ್ರಿಝಾ 1.5 ಲೀಟರ್ ಡಿಡಿಐಎಸ್ 225 ಯೂನಿಟ ಮೂಲಕ ಬದಲಾಯಿಸುವ ಸಾಧ್ಯತೆ ಇದೆ.

ಹೊಸ ಅಪ್ಡೇಟ್ ಪಡೆಯಲಿದೆ ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುತಿ ವಿಟಾರಾ ಬ್ರೆಝಾ ಪೆಟ್ರೋಲ್ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲಿದೆ. ಈ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚು ಮಾರಾಟವಾಗುತ್ತಿದ್ದು, ಮಾರುತಿಯು ಪೆಟ್ರೋಲ್ ಇಂಜಿನ್ ಪರಿಚಯಿಸಿ ಇನ್ನಷ್ಟು ಸುಧಾರಿಸಲು ನಿರ್ಧರಿಸಿದೆ.

Article Published On: Tuesday, June 25, 2019, 10:53 [IST]
English summary
New Maruti Suzuki Brezza To Get More Airbags And Sunroof. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+