ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ನಿರ್ಮಾಣದ ಎರ್ಟಿಗಾ ಫೇಸ್‌ಲಿಫ್ಟ್ ಆವೃತ್ತಿ ಈಗಾಗಲೆ ಬಿಡುಗಡೆಗೊಂಡಿದ್ದು, ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೊ ಕಾರುಗಳಿಗೆ ತಿವ್ರ ಪೈಪೋಟಿಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಎರ್ಟಿಗಾ ಎಂಪಿವಿ ಕಾರಿನ ಸ್ಪೋರ್ಟ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರು

ಹೌದು, ಈಗಾಗಲೆ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರುಗಳು ಬೇರೆ ದೇಶಗಳಲ್ಲಿ ಮಾರಾಟವಾಗುತ್ತಿದ್ದು, ಆಗಸ್ಟ್ 2018ರಲ್ಲಿ ಇಂಡೋನೇಷ್ಯಾದಲ್ಲಿ ಮೊದಲಬಾರಿಗೆ ಅನಾವಣಗೊಳಿಸಲಾಯಿತು. ಹೀಗಾಗಿ ಮಾರುತಿ ಸುಜುಕಿ ಸಂಸ್ಥೆಯು ಇದೇ ವರ್ಷದಲ್ಲಿ ಎರ್ಟಿಗಾ ಸ್ಪೋರ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದೂ, ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸುವಾಗ ಇದೇ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರು

ಸ್ಪೋರ್ಟಿ ಮಾದರಿಯಾಗಿರುವುದರಿಂದ ಕಾರಿನ ಬಹುತೇಕ ವಿನ್ಯಾಸಗಳು ಸ್ಪೋರ್ಟಿ ಲುಕ್ ಪಡೆದುಕೊಂಡಿದ್ದು, ಸ್ಮೋಕ್ಡ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, 16-ಇಂಚಿನ ಅಲಾಯ್ ವೀಲ್ಹ್, ಬ್ಯಾಕ್ ನೆಕ್ಡ್ ಗ್ರಿಲ್‌ನೊಂದಿಗೆ ಸಾಮಾನ್ಯ ಕಾರಿಗಿಂತ ವಿಭಿನ್ನವಾಗರಲಿದ್ದು, ಫೇಸ್‌ಲಿಫ್ಟ್ ಎರ್ಟಿಗಾ ಕಾರುಗಳ ಬಿಡುಗಡೆಯ ನಂತರ ಸ್ಪೋರ್ಟಿ ವರ್ಷನ್ ಮಾದರಿಗಳನ್ನ ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾರುತಿ ಸುಜುಕಿ ಸಂಸ್ಥೆಯೇ ಈ ಕುರಿತು ಸ್ಪಪ್ಟಪಡಿಸಬೇಕಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರು

ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಚಾರ ಅಂದ್ರೆ, ಹೊರ ವಿನ್ಯಾಸಗಳಲ್ಲಿ ಮಾತ್ರವೇ ಸ್ಪೋರ್ಟಿ ಲುಕ್ ಪಡೆದಿರುವ ಎರ್ಟಿಗಾ ಸ್ಪೋರ್ಟ್ ಕಾರುಗಳು ತಾಂತ್ರಿಕವಾಗಿ ಯಾವುದೇ ಬದಲಾವಣೆಯಿಲ್ಲ ಮೂಲ ಮಾದರಿಯಲ್ಲಿರುವ ವೈಶಿಷ್ಟ್ಯತೆಗಳನ್ನೇ ಪಡೆದುಕೊಂಡಿದೆ ಎನ್ನಬಹುದು.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರು

ಇದರ ಜೊತೆಗೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಿರುವ ಎರ್ಟಿಗಾ ಟಾಪ್ ಎಂಡ್‌ಗಳಲ್ಲಿ ಸ್ಪೋರ್ಟಿ ವರ್ಷನ್‌ಗಳನ್ನ ಈಗಾಗಲೇ ಖರೀದಿಸಬಹುದಾಗಿದ್ದು, ಇದೀಗ ಸುಜುಕಿ ಸಂಸ್ಥೆಯು ಜಾಗತಿಕವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ಪೋರ್ಟಿ ವರ್ಷನ್ ಪ್ರತ್ಯೇಕಗೊಳಿಸಿ ಮಾರಾಟ ಮಾಡುವುದಕ್ಕಾಗಿಯೇ ಕಾನ್ಸೆಪ್ಟ್ ಮಾದರಿಯನ್ನಅನಾವರಣಗೊಳಿಸಿದೆ.

ಕಳೆದ ಬಾರಿ ನಡೆದ ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಲಾಗಿದ್ದ ಎರ್ಟಿಗಾ ಫೇಸ್‌ಲಿಫ್ಟ್‌ಗೂ ಮತ್ತು ಸ್ಪೋರ್ಟಿ ಎರ್ಟಿಗಾ ಕಾರಿಗಳ ನಡುವಿನ ವಿನ್ಯಾಸಗಳು ಬೇರೆ ಬೇರೆಯಾಗಿದ್ದರೂ ಎಂಜಿನ್ ವೈಶಿಷ್ಟ್ಯತೆ ಒಂದೇ ಆಗಿದ್ದು, ಫೇಸ್‌ಲಿಫ್ಟ್ ವರ್ಷನ್‌ಗಳು ಪ್ರಿಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರು

ಜೊತೆಗೆ ಸ್ಪ್ಲಿಟ್ ಎಲ್ ಶೇಪ್ ಟೈಲ್ ಲೈಟ್ ಕ್ಲಸ್ಟರ್, ಎಲ್ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್, ರೀ ಡಿಸೈನ್ ಟೈಲ್‌ಗೇಟ್ ಮತ್ತು ಬಂಪರ್ ಹೊಂದಿರಲಿವೆ. ಅದೇ ರೀತಿಯಾಗಿ ಕಾರಿನ ಒಳಭಾಗದಲ್ಲಿ ಫ್ಲಕ್ಸ್ ವುಡ್‌ನೊಂದಿಗೆ 6.8-ಇಂಚಿನ ಟಚ್ ಸ್ಟ್ರೀನ್ ಇನ್ಪೋಟೈನ್‌ಮೆಂಟ್, ಲೆದರ್ ವ್ಯಾರ್ಪ್ ಇರುವ ಸ್ಟೀರಿಂಗ್ ಮತ್ತು ನ್ಯೂ ಇನ್ಟ್ರುಮೆಂಟಲ್ ಕ್ಲಸ್ಟರ್ ಪಡೆದಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರು

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಎರ್ಟಿಗಾದಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿಸಲಾಗಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರು

ಬಿಡುಗಡೆಗೊಳ್ಳಂಡ ಹೊಸ ಮಾರುತಿ ಎರ್ಟಿಗಾ ಎಮ್‍‍ಪಿವಿ ಫೇಸ್‌ಲಿಫ್ಟ್ ಕಾರುಗಳು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಸಹಾಯದಿಂದ 105-ಬಿಹೆಚ್‍‍ಪಿ ಮತ್ತು 198-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರು

ಇದೀಗ ಮಾರುಕಟ್ಟೆಯಲ್ಲಿ ಅಧಿಕವಾಗುತ್ತಿರುವ ಎಂಪಿವಿ ಕಾರುಗಳ ಬೇದಿಕೆಯಿಂದಾಗಿ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಎರ್ಟಿಗಾ ಕಾರಿನ ಸ್ಪೋರ್ಟ್ ಮಾದರಿಯನ್ನು ಬಿಡುಗಡೆ ಮಾಡುವ ತವಕದಲಿದ್ದು, ಎರ್ಟಿಗಾ ಮತ್ತು ಎರ್ಟಿಗಾ ಫೇಸ್‍ಲಿಫ್ಟ್ ಕಾರುಗಳಂತೆಯೆ ಹೆಚ್ಚಿನ ಜನಪ್ರೀಯತೆಯನ್ನು ಪಡೆಯಲಿದೆಯೆ ಎಂದು ಕಾಯ್ದು ನೋಡಬೇಕಿದೆ.

Source: Cartoq editor

Most Read Articles

Kannada
English summary
New Maruti Suzuki Ertiga Spied For The First Time In India. Read In Kannada
Story first published: Saturday, April 20, 2019, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X