ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮಾರುಕಟ್ಟೆಯಲ್ಲಿ ರೂ. 10 ಲಕ್ಷದೊಳಗೆ ಲಭ್ಯವಿರುವ ಎಲ್ಲಾ ಸೆಗ್ಮೆಂಟ್ ಕಾರುಗಳಲ್ಲಿ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದ್ದು, ಕಳೆದ ಜನವರಿ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ 7 ಕಾರುಗಳು ಮಾರುತಿ ಸುಜುಕಿ ಸಂಸ್ಥೆಯದ್ದೆ ಆಗಿರುವುದು ಗಮನಾರ್ಹ.

ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಾರುತಿ ಸುಜುಕಿ ವ್ಯಾಗನ್ ಆರ್

ಮಿನಿ ಕಾರುಗಳ ಸೆಗ್ಮೆಂಟ್‍ನಲ್ಲಿ ಆಲ್ಟೋ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಮಿಡ್-ಸೈಜ್ ಹ್ಯಾಚ್‍ಬ್ಯಾಕ್ ಕಾರು ಸೆಗ್ಮೆಂಟ್‍ನಲ್ಲಿ ಮಾರುತಿ ಸ್ವಿಫ್ಟ್ ಮತ್ತು ಬಲೆನೊ ಕಾರುಗಳು ಮುನ್ನುಗುತ್ತಿದೆ. ಅಷ್ಟೆ ಅಲ್ಲದೆ ಎಂಪಿವಿ ಕಾರುಗಳ ಸೆಗ್ಮೆಂಟ್‍ನಲ್ಲಿ ಎರ್ಟಿಗಾ ಹಾಗು ಇಕೊ ಕಾರುಗಳು ಸದ್ದು ಮಾಡುತ್ತಿದೆ. ಕಂಪ್ಯಾಕ್ಟ್ ಎಸ್‍ಯುವಿ ಕಾರು ಸೆಗ್ಮೆಂಟ್‍ನಲ್ಲಿ ವಿಟಾರಾ ಬ್ರೆಝಾ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ. ಕೊನೆಯದಾಗಿ ಸಣ್ಣ ಗಾತ್ರದ ಕಾರುಗಳ ಸರಣಿಯಲ್ಲಿ ಹೊಸ ವ್ಯಾಗನ್ ಆರ್ ಮತ್ತು ಸೆಲೆರಿಯೊ ಕಾರುಗಳು ನಿಂತಿವೆ.

ಡಿಸೆಂಬರ್ 2018ರಲ್ಲಿ ಪ್ರತೀ ತಿಂಗಳು ಸುಮಾರು 15,000 ಬುಕ್ಕಿಂಗ್ ಪಡೆಯುತ್ತಿದ್ದ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳು ಕೇವಲ 2,600 ಬುಕ್ಕಿಂಗ್ ಅನ್ನು ಮಾತ್ರ ಪಡೆದುಕೊಂಡಿತ್ತು. ಇದಕ್ಕೆ ಕಾರಣ ಹೊಸ ವ್ಯಾಗನ್ ಆರ್ ಕಾರನ್ನು ಪರಿಚಯಿಸುವುದರ ಸಲುವಾಗಿ ಸಂಸ್ಥೆಯು ಹಿಂದಿನ ತಲೆಮಾರಿನ ವ್ಯಾಗನ್ ಆರ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಆದರೆ 2019ರ ಜನವರಿ ತಿಂಗಳಿನಲ್ಲಿ ಮತ್ತೆ ರೀ ಎಂಟ್ರಿ ಕೊಟ್ಟ ಹೊಸ ತಲೆಮಾರಿನ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳು ಸುಮಾರು 10,048 ಬುಕ್ಕಿಂಗ್ ಅನ್ನು ಪಡೆದುಕೊಂಡಿದ್ದು, ತನ್ನ ಎದುರಾಳಿಯಾದ ಹ್ಯುಂಡೈ ಸ್ಯಾಂಟ್ರೋ ಕಾರನ್ನು ಹಿಂದಿಕ್ಕಿದೆ.

ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಾರುತಿ ಸುಜುಕಿ ವ್ಯಾಗನ್ ಆರ್

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 4.19 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಖರೀದಿಸಲು ಬಯಸುವ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ಮಾರುತಿ ಸುಜುಕಿ ಡೀಲರ್‍‍ಗಳ ಬಳಿ ರೂ. 11,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ವೈಶಿಷ್ಟ್ಯತೆಗಳು ಹೊಸ ವ್ಯಾಗನ್ ಆರ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 7 ಇಂಚಿನ ಟಚ್‍ಸ್ಕ್ರೀನ್ ಒನ್ಫೋಟೈನ್ಮೆಂಟ್ ಸಿಸ್ಟಂ, ಮ್ಯಾನುವಲ್ ಎಸಿ ಕಂಟ್ರೋಲ್ಸ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ಪವರ್ ಮೀಟರ್ ಮತ್ತು ಅನಾಲಾಗ್ ಸ್ಪೀಡೊಮೀಟರ್ ಅನ್ನು ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
2019ರ ಹೊಸ ವ್ಯಾಗನ್ ಆರ್ ಕಾರಿನ ಎಲ್ಲಾ ವೇರಿಯಂಟ್‍ಗಳು 1.0 ಲೀಟರ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂಡ 67ಬಿಹೆಚ್‍ಪಿ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಮತ್ತು ಕಾರಿನ ವಿಎಕ್ಸ್ಐ ಹಾಗು ಜೆಡ್ಎಕ್ಸ್ಐ ವೇರಿಯಂಟ್ ಕಾರುಗಳು 1.2 ಲೀಟರ್ 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 90 ಬಿಹೆಚ್‍ಪಿ ಮತ್ತು 113ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಾರುತಿ ಸುಜುಕಿ ವ್ಯಾಗನ್ ಆರ್

ಎರಡೂ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗು 1.2 ಲೀಟರ್ ಎಂಜಿನ್ ಅನ್ನು ಮಾರುತಿ ಸುಜುಕಿ ಸಂಸ್ಥೆಯ ಮಾರುತಿ ಎಜಿಎಸ್ (ಆಟೋ ಗೇರ್ ಶಿಫ್ಟ್) ಎಂಬ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಸುರಕ್ಷಾ ಸಾಧನಗಳು
ಮಾರುತಿ ಸುಜುಕಿ ವ್ಯಾಗನ್ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು, ಎಬಿಎಸ್‍ನೊಂದಿಗೆ ಇಬಿಡಿ, ಡ್ಯುಯಲ್ ಏರ್‍‍ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಅಳವಡಿಸಲಾಗಿದೆ.

image courtesy: RushLane

Article Published On: Thursday, February 14, 2019, 11:46 [IST]
English summary
New Maruti Suzuki WagonR Beats Hyundai Santro In 2019 January Sales. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+