ಬಹುನೀರಿಕ್ಷಿತ ನೆಕ್ಸ್ಟ್ ಜನರೇಷನ್ ವ್ಯಾಗನ್ ಆರ್ ಕಾರು ಹೇಗಿರಲಿದೆ ಗೊತ್ತಾ?
ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿಯು ತಮ್ಮ ಜನಪ್ರಿಯ ವ್ಯಾಗನ್ ಆರ್ ಕಾರಿನ ನೆಕ್ಸ್ಟ್ ಜನರೇಷನ್ ಆವೃತ್ತಿಯನ್ನು ಇದೇ ತಿಂಗಳು ಬಿಡುಗಡೆ ಮಾಡುತ್ತಿದ್ದು, ಬಿಡುಗಡೆಯಾಗುವ ಹೊಸ ಕಾರಿನ ವಿನ್ಯಾಸಗಳ ಕುರಿತಾದ ಮಹತ್ವದ ಮಾಹಿತಿ ಲಭ್ಯವಾಗಿದೆ.

ಮಾರುತಿ ಸುಜುಕಿಯು ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಕಾರು ಉತ್ಪನ್ನಗಳಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದ್ದು, ಈ ಹಿಂದಿನ ವ್ಯಾಗನ್ ಆರ್ ಕಾರಿಗೂ ನೆಕ್ಸ್ಟ್ ಜನರೇಷನ್ ವ್ಯಾಗನ್ ಆರ್ ಕಾರಿನ ವಿನ್ಯಾಸ ಮತ್ತು ನೀಡಲಾಗಿರುವ ಸುರಕ್ಷಾ ಸೌಲಭ್ಯಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ಸದ್ಯ ಹ್ಯಾಚ್‍ಬ್ಯಾಕ್ ಕಾರು ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ವ್ಯಾಗನ್ ಆರ್ ಕಾರು ಹಳೆಯ ಮಾದರಿಗಿಂತ ತುಸು ಹೆಚ್ಚಿನ ಮಟ್ಟದ ಒಳವಿನ್ಯಾಸ ಹೊಂದಿರುವುದು ಕಾರು ಮಾರಾಟದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಠಿಸುವ ತವಕದಲ್ಲಿದೆ .

ಸುಜುಕಿ ಸಂಸ್ಥೆಯ ಹಾರ್ಟ್‍ಟೆಕ್ ಪ್ಲಾಟ್‍ಫಾರ್ಮ್ ಅಡಿಯಲ್ಲಿ ಈ ಹೊಸ ವ್ಯಾಗನ್ ಆರ್ ಕಾರನ್ನು ನಿರ್ಮಾಣ ಮಾಡಲಾಗಿದ್ದು, ಜಪಾನ್ ಮಾರುಕಟ್ಟೆಯಲ್ಲಿ ಪ್ರಸ್ತುತ ತಲೆಮಾರಿನ ವ್ಯಾಗನ್ ಆರ್ ಕಾರಿನ ಹೋಲಿಕೆಯನ್ನೇ ಪಡೆದುಕೊಂಡಿರಲಿದೆ.

ಜಪಾನ್ ಮಾರುಕಟ್ಟೆಯಲ್ಲಿರುವ ಟಾಲ್-ಬಾಯ್ ವಿನ್ಯಾಸವನ್ನು ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ವ್ಯಾಗನ್ ಆರ್ ಕಾರು ಕೂಡಾ ಪಡೆದುಕೊಳ್ಳಲಿದ್ದು, ಈ ಕಾರಿನಲ್ಲಿ ಹೊಸ ಹೆಡ್‍ಲ್ಯಾಂಪ್ ಕ್ಲಸ್ಟರ್, ಏರ್ ಇಂಟೇಕ್ಸ್ ನೊಂದಿಗೆ ಮರುವಿನ್ಯಾಸ ಮಾಡಲಾದ ಬಂಪರ್, ಫಾಗ್ ಲ್ಯಾಂಪ್, ದೊಡ್ಡ ಗಾತ್ರದ ಹಾರಿಜೆಂಟಲ್ ಕ್ರೋಮ್ ಮತ್ತು ಮಧ್ಯಭಾಗದಲ್ಲಿ ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

ಇದು ಕಾರಿನ ಹೊರ ವಿನ್ಯಾಸಗಳು ಮತ್ತು ಒಳವಿನ್ಯಾಸದಲ್ಲಿ ಪ್ರಸ್ತುತ ತಲೆಮಾರಿನ ಕಾರಿಗಿಂತ ವಿಭಿನ್ನವಾದ ಅಪ್ಡೇಟ್ ಅನ್ನು ಪಡೆದುಕೊಳ್ಳಲಿದ್ದು, ಕಾರಿನ ಒಳಭಾಗದ ಬಹುತೇಕ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇದು ಪ್ರೀಮಿಯಂ ಅನುಭವವನ್ನು ನೀಡಲಿದ್ದು, ಡ್ಯುಯಲ್ ಕಲರ್ ಡ್ಯಾಶ್‍ಬೋರ್ಡ್, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸಲಾಗಿದೆ.

ಅಷ್ಟೆ ಅಲ್ಲದೋ ಕೀ ಲೆಸ್ ಎಂಟ್ರಿ, ಟಿಲ್ಟ್ ಟೆಲಿಸ್ಕೋಪಿಕ್ ಅಡೆಸ್ಟೆಬಲ್ ಸ್ಟೀರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕಂಟ್ರೋಲ್ ಮತ್ತು ಕ್ಯಾಮೆರಾದೊಂದಿಗೆ ಪಾರ್ಕಿಂಗ್ ಸೆನ್ಸಾರ್‍ಗಳನ್ನು ಪಡೆದುಕೊಳ್ಳಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍ಬ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‍ಗಳನ್ನು ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ
ಬಿಡಗಡೆಗೊಳ್ಳಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳು ಪ್ರಸ್ತುತ ತಲೆಮಾರಿನ ಕಾರಿನಲ್ಲಿ ಬಳಸಲಾದ ಎಂಜಿನ್ ಮಾದರಿಯನ್ನೇ ಪಡೆದುಕೊಂಡಿದ್ದು, 1.0-ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 67-ಬಿಹೆಚ್‍ಪಿ ಮತ್ತು 91-ಎನ್ಎಮ್ ಟಾರ್ಕ್ ಉತ್ಪಾದನೆ ಮಾಡಬಲ್ಲವು.
MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಂಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ನಗರ ಪ್ರದೇಶದಲ್ಲಿ 16 ರಿಂದ 18 ಕಿ.ಮಿ ಮತ್ತು ಹೆದ್ದಾರಿಗಳಲ್ಲಿ 22 ಕಿ.ಮೀ ಮೈಲೇಜ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ.

ಕಾರಿನ ಬೆಲೆ ಮತ್ತು ಬಿಡುಗಡೆ
ಮಾಹಿತಿಗಳ ಪ್ರಕಾರ ನೆಕ್ಸ್ಟ್ ಜನರೇಷನ್ ವ್ಯಾಗನ್ ಆರ್ ಕಾರು ಇದೇ ತಿಂಗಳು 23ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, ಹಳೆಯ ವರ್ಷನ್ ಕಾರಿಗಳಿಂತ ಹೊಸ ಕಾರಿನ ಬೆಲೆಯು ರೂ.1.50 ಲಕ್ಷದಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುವುದು ಖಚಿತವಾಗಿದೆ.
MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ವಿಶೇಷ ವಿನ್ಯಾಸದೊಂದಿಗೆ ಸುಧಾರಿತ ಮಾದರಿಯ ಸೌಲಭ್ಯಗಳನ್ನು ಹೊತ್ತುಬಂದಿರುವ ವ್ಯಾಗನ್ ಆರ್ ಕಾರು ಹ್ಯುಂಡೈ ನ್ಯೂ ಸ್ಯಾಂಟ್ರೋ ಕಾರಿಗೆ ತೀವ್ರ ಪೈಪೋಟಿ ನೀಡಲಿದ್ದು, ಜನವರಿ 23ರಂದು ಬಿಡುಗಡೆಯ ನಂತರವಷ್ಟೇ ಹೊಸ ಕಾರಿನ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.
Image Source: 4 & 8


Click it and Unblock the Notifications