ವೆನ್ಯೂ ಮತ್ತು ಬ್ರೆಝಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಕಾರುಗಳ ಮಾರಾಟ ತಂತ್ರದಲ್ಲಿ ಸಾಕಷ್ಟು ಬದಲಾವಣೆ ತರುತ್ತಿರುವ ರೆನಾಲ್ಟ್ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಸದ್ಯಕ್ಕೆ ಬಿಡುಗಡೆಯಾಗಲಿರುವ ಟ್ರೈಬರ್ ಎಂಪಿವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕ್ವಿಡ್ ಫೇಸ್‌ಲಿಫ್ಟ್ ಸೇರಿದಂತೆ ಹ್ಯುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾ ಕಾರಿಗೆ ಪ್ರತಿಸ್ಪರ್ಧಿಯಾಗಿ ವಿನೂತನ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿಯೊಂದನ್ನು ಸಹ ಮಾರುಕಟ್ಟೆಗೆ ಪರಿಚಯಿಸುವ ಇರಾದೆಯಲ್ಲಿದೆ.

ಸದ್ಯ ರೆನಾಲ್ಟ್ ಸಂಸ್ಥೆಯು ಕ್ವಿಡ್ ಮತ್ತು ಡಸ್ಟರ್ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಕಾರು ಉತ್ಪಾದನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ಮೂಲಕ ದೇಶಿ ಮತ್ತು ವಿದೇಶಿ ಮಾರುಕಟ್ಟೆಗಳ ಬೇಡಿಕೆ ಅನುಸಾರವಾಗಿ ಹೊಸ ಕಾರು ಉತ್ಪನ್ನಗಳನ್ನು ಹೊರತರಲು ಯೋಜನೆ ರೂಪಿಸಿದೆ.

ವೆನ್ಯೂ ಮತ್ತು ಬ್ರೆಝಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಇದರ ಮೊದಲ ಭಾಗವಾಗಿ ಟ್ರೈಬರ್ ಉತ್ಪಾದನಾ ಆವೃತ್ತಿಯು ಬಹಿರಂಗಗೊಳ್ಳುವ ಮೂಲಕ ಫ್ಯಾಮಿಲಿ ಎಂಪಿವಿ ಮಾದರಿಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದ್ದು, ಟ್ರೈಬರ್ ಬಿಡುಗಡೆಯ ನಂತರ ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಯ ಕಾರು ಮಾದರಿಯು ಭಾರತದಲ್ಲಿ ಮತ್ತಷ್ಟು ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ವೆನ್ಯೂ ಮತ್ತು ಬ್ರೆಝಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಸದ್ಯಕ್ಕೆ ಹೆಚ್‌ಬಿಸಿ ಕೋಡ್‌ನೆಮ್ ಆಧಾರದ ಮೇಲೆ ಹೊಸ ಕಾರುನ್ನು ಟೆಸ್ಟಿಂಗ್ ಮಾಡಲಾಗುತ್ತಿದ್ದು, ಮಾರುತಿ ಬ್ರೆಝಾ ಮತ್ತು ಹ್ಯುಂಡೈ ಸಂಸ್ಥೆ ಹೊಸದಾಗಿ ಬಿಡುಗಡೆ ಮಾಡಿರುವ ವೆನ್ಯೂ ಕಾರುಗಳಿಗೆ ರೆನಾಲ್ಟ್ ಹೊಸ ಕಾರು ಭರ್ಜರಿಯಾಗಿ ಪೈಪೋಟಿ ನೀಡಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡಸ್ಟರ್ ಕಾರಿಗಿಂತ ತುಸು ಸಣ್ಣ ಗಾತ್ರವನ್ನು ಹೊಂದಲಿರುವ ಹೆಚ್‌ಬಿಸಿ ಕಾರು ನಗರ ಪ್ರದೇಶದಲ್ಲಿನ ಪ್ರಯಾಣಕ್ಕಾಗಿ ಸೂಕ್ತ ಆಯ್ಕೆಯಾಗಲಿದೆ.

ವೆನ್ಯೂ ಮತ್ತು ಬ್ರೆಝಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಗ್ರಾಹಕರ ಬೇಡಿಕೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಸದ್ಯ ಭಾರೀ ಪ್ರಮಾಣದ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದು, ಇದೇ ಕಾರಣಕ್ಕಾಗಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಿರುವ ರೆನಾಲ್ಟ್ ಸಂಸ್ಥೆಯು ಹೆಚ್‌ಬಿಸಿ ಎನ್ನುವ ಕಾನ್ಸೆಪ್ಟ್ ಆವೃತ್ತಿಯನ್ನು ಬಿಡುಗಡೆಗಾಗಿ ಅಂತಿಮ ಹಂತದ ನಿರ್ಧಾರ ಕೈಗೊಂಡಿದೆ.

ವೆನ್ಯೂ ಮತ್ತು ಬ್ರೆಝಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿರುವ ಹೊಸ ಕಾರ ಐದು ಆಸನ ಮಾದರಿಯಲ್ಲಿ ಬಿಡುಗಡೆಯಾಗಲಿದೆ.

ವೆನ್ಯೂ ಮತ್ತು ಬ್ರೆಝಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಟ್ರೈಬರ್ ಕಾರಿನಲ್ಲಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿರುವ ಹೊಸ ಕಂಪ್ಯಾಕ್ಟ್ ಎಸ್‌ಯುನಿ ಕಾರು ನೋಡಲು ಆಕರ್ಷಕವಾಗಿರುವಂತೆ ತಾಂತ್ರಿಕವಾಗಿಯೂ ಬಲಿಷ್ಠವಾಗಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವಲ್ಲದ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

MOST READ: ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ವೆನ್ಯೂ ಮತ್ತು ಬ್ರೆಝಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ರೆನಾಲ್ಟ್ ಸಂಸ್ಥೆಯು ಆಗಸ್ಟ್ ಹೊತ್ತಿಗೆ ಟ್ರೈಬರ್ ಬಿಡುಗಡೆ ಮಾಡಲಿದ್ದು, ತದನಂತರ ಫೇಸ್‌ಲಿಫ್ಟ್ ಆವೃತ್ತಿಗಳಾದ ಕ್ವಿಡ್ ಮತ್ತು ಡಸ್ಟರ್ ಕಾರುಗಳನ್ನು ಬಿಡುಗಡೆ ಮಾಡಲಿದೆ. ತದನಂತರವಷ್ಟೇ 2020ರ ಮಧ್ಯಂತರದಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಲಿದ್ದು, ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡುವ ನೀರಿಕ್ಷೆಯಿದೆ.

Article Published On: Tuesday, June 25, 2019, 14:11 [IST]
English summary
Renault Confirms Plans Of New Compact-SUV For India — To Rival The Hyundai Venue. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+