ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರಿನ ಬಿಡುಗಡೆಯ ಅವಧಿ ಬಹಿರಂಗ

ಮಾರುತಿ ಸುಜುಕಿ ವಿಟಾರಾ ಬ್ರಿಝಾ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದ್ದು, ಅತ್ಯಧಿಕವಾಗಿ ಮಾರಾಟವಾಗುವ ವಾಹನಗಳ ಪೈಕಿ ಮುಂಚೂಣಿಯಲ್ಲಿದೆ. ಸದ್ಯ ವಿಟಾರಾ ಬ್ರಿಝಾ ಡೀಸೆಲ್ ಎಂಜಿನ್ ಅವೃತ್ತಿಯಲ್ಲಿ ಮಾತ್ರ ಮಾರಾಟವಾಗುತ್ತಿದ್ದು, ಇದೇ ವರ್ಷದ ಹಬ್ಬದ ಋತುವಿನಲ್ಲಿ ಪೆಟ್ರೋಲ್ ಮಾದರಿಯ ಬ್ರೆಝಾ ಕಾರುಗಳು ಬಿಡುಗಡೆಯಾಗಲಿವೆ.

ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಬಿಡುಗಡೆಯ ಅವಧಿ ಬಹಿರಂಗ

ಮಾರುತಿ ಸುಜುಕಿಯು ವಿಟಾರಾ ಬ್ರೆಝಾ ಎಸ್‍ಯುವಿಯ ಪೆಟ್ರೊಲ್ ಅವೃತ್ತಿಯ ಉತ್ಪಾದನೆಯಲ್ಲಿ ತೊಡಗಿದ್ದು, ಸಿಯಾಜ್ ಸೆಡಾನ್ ನಂತೆ ವಿಟಾರಾ ಬ್ರೆಝಾ ಸಹ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಮಾರುತಿ ಸುಜುಕಿಯು ಇತ್ತೀಚಿಗಷ್ಟೆ ಹೊಸ 1.5 ಲೀಟರ್ ಪೆಟ್ರೊಲ್ ಎಂಜಿನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಳೆದ ವರ್ಷದ ಕೊನೆಯಲ್ಲಿ ದೇಶಿಯವಾಗಿ ನಿರ್ಮಿಸಿದ್ದ ಪೆಟ್ರೋಲ್ ಎಂಜಿನನ್ನು ಮೊದಲ ಬಾರಿಗೆ ಸಿಯಾಝ್ ಸೆಡಾನ್‍ನಲ್ಲಿ ಅಳವಡಿಸಲಾಗಿತ್ತು. ಈಗ ಈ ಎಂಜಿನನ್ನು ವಿಟಾರಾ ಬ್ರಿಝಾ ಸೇರಿದಂತೆ ಬೇರೆ ಮಾದರಿಯ ವಾಹನಗಳಲ್ಲೂ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಬಿಡುಗಡೆಯ ಅವಧಿ ಬಹಿರಂಗ

ಗಾಡಿವಾಡಿ ವರದಿ ಪ್ರಕಾರ, ವಿಟಾರಾ ಬ್ರೆಝಾವನ್ನು1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ನೊಂದಿಗೆ ಪೆಟ್ರೊಲ್ ಎಸ್‍ಯುವಿ ಯನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಜನಪ್ರಿಯ ಮಾದರಿಯ ಎಸ್‍ಯುವಿ ಇಂಧನದ ವಿಷಯದಲ್ಲಿ ದುಬಾರಿಯಾಗಬಹುದೆಂಬ ಕಾರಣದಿಂದ ಈ ಯೋಜನೆಯನ್ನು ಕೈಬಿಡಲಾಯಿತು.

ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಬಿಡುಗಡೆಯ ಅವಧಿ ಬಹಿರಂಗ

ಮಾರುತಿ ಸುಜುಕಿ ಕಂಪನಿಯು ಹೊಸ ಪೆಟ್ರೋಲ್ ಎಂಜಿನನ್ನು ವಿಟಾರಾ ಬ್ರೆಝಾದಲ್ಲಿ ಅಳವಡಿಸುವ ಮೊದಲು ಎರಡನೇ ತಲೆಮಾರಿನ ಎರ್ಟಿಗಾ ಎಂಪಿವಿಯಲ್ಲಿ ಅಳವಡಿಸುವುದು. ನಾಲ್ಕು ಸಿಲಿಂಡರ್ ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್, 1,462 ಸಿಸಿ ಹೊಂದಿದ್ದು 105 ಬಿಹೆಚ್‍ಪಿ ಮತ್ತು138 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಬಿಡುಗಡೆಯ ಅವಧಿ ಬಹಿರಂಗ

ಪೆಟ್ರೋಲ್ ಇಂಜಿನ್ ಜೊತೆಯಲ್ಲಿ ಮಾರುತಿ ವಿಟಾರಾ ಬ್ರೆಝಾ ಮಾರುತಿಯ ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ ಹೊಂದಿರಲಿದೆ. ಮಾರುತಿಯ ವಿಟಾರಾ ಬ್ರಿಝಾ ಪೆಟ್ರೋಲ್ ಅವೃತ್ತಿಯು ಸ್ಟಾಂಡರ್ಡ್ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಭವಿಷ್ಯದ ಯೋಜನೆಗಳಿಗಾಗಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಫೋರ್ ಸ್ಪೀಡ್ ಟಾರ್ಕ್ ಕನ್ವರ್ಟರ್‍‍ಗಳನ್ನು ನೀಡಲಾಗಿದೆ. ಇದೇ ರೀತಿಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸಿಯಾಜ್ ಸೆಡಾನ್ ನಲ್ಲೂ ಅಳವಡಿಸಲಾಗಿದೆ.

ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಬಿಡುಗಡೆಯ ಅವಧಿ ಬಹಿರಂಗ

ಪೆಟ್ರೋಲ್ ಎಂಜಿನನ್ನು ಅಳವಡಿಸುವ ಹೊರತಾಗಿ ಮಾರುತಿ ವಿಟಾರಾ ಬ್ರೆಝಾದಲ್ಲಿ ಇನ್ನೂ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ನೋಡಬಹುದು, ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಬಿಡುಗಡೆಯ ಅವಧಿ ಬಹಿರಂಗ

ಮಾರುತಿ ಸುಜುಕಿಯು ಇದೇ ವಿಧಾನವನ್ನು ವಿಟಾರಾ ಬ್ರೆಝಾ ಡೀಸೆಲ್ ಅವೃತ್ತಿಯಲ್ಲೂ ಪರಿಚಯಿಸುವ ಯೋಜನೆಯಲ್ಲಿದೆ. ಮಾಲಿನ್ಯ ತಡೆಗೆ ಸಂಬಂಧಪಟ್ಟಂತೆ ಏಪ್ರಿಲ್ 2020ರ ಗಡುವು ನೀಡಲಾಗಿದ್ದು, ಮಾರುತಿ ಸುಜುಕಿ ಈಗ ಚಾಲ್ತಿಯಲ್ಲಿರುವ 1.3 ಲೀಟರ್ ಡೀಸೆಲ್ ಯೂನಿಟನ್ನು ಹೊಸ ವಿಟಾರಾ ಬ್ರಿಝಾ 1.5 ಲೀಟರ್ ಡಿಡಿಐಎಸ್ 225 ಯೂನಿಟ ಮೂಲಕ ಬದಲಾಯಿಸುವ ಸಾಧ್ಯತೆ ಇದೆ.

MOST READ: ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಬಿಡುಗಡೆಯ ಅವಧಿ ಬಹಿರಂಗ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುತಿ ವಿಟಾರಾ ಬ್ರೆಝಾ ಪೆಟ್ರೋಲ್ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲಿದೆ. ಈ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚು ಮಾರಾಟವಾಗುತ್ತಿದ್ದು, ಮಾರುತಿಯು ಪೆಟ್ರೋಲ್ ಇಂಜಿನ್ ಪರಿಚಯಿಸಿ ಇನ್ನಷ್ಟು ಸುಧಾರಿಸಲು ನಿರ್ಧರಿಸಿದೆ.

MOST READ: ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುವುದು ಇದೀಗ ಟ್ರೆಂಡ್

ಪೆಟ್ರೋಲ್ ಮಾದರಿಯ ಮಾರುತಿ ಸುಜುಕಿ ಬ್ರೆಝಾ ಕಾರುಗಳ ಬಿಡುಗಡೆಯ ಅವಧಿ ಬಹಿರಂಗ

ಈ ಮೂಲಕ ಮಾರುತಿ ವಿಟಾರಾ ಬ್ರೆಝಾ ಪೆಟ್ರೋಲ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾದ ನಂತರ ಫೋರ್ಡ್‍ನ 1.5 ಲೀಟರ್ ಪೆಟ್ರೋಲ್ ಸಾಮರ್ಥ್ಯದ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ನ 1.2 ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಮತ್ತು ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ಮಹೀಂದ್ರಾ ಎಕ್ಸ್ ಯುವಿ300 1.2 ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ವಾಹನಗಳಿಗೆ ಪ್ರಮುಖ ಸ್ಪರ್ಧಿಯಾಗಲಿದೆ.

Article Published On: Tuesday, June 4, 2019, 9:28 [IST]
English summary
Petrol Version Of Maruti Suzuki Brezza Will Launch In This Festive Season. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+