ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ‍‍ರವರು ಇತ್ತೀಚೆಗೆ ತಮ್ಮ ಕಂಪನಿಯ ಕಾರಿನಲ್ಲಿ ಪೋಪ್ ಫ್ರಾನ್ಸಿಸ್‍‍ರವರು ಪ್ರಯಾಣಿಸುತ್ತಿದ್ದ ಫೋಟೋಗಳು ಹಾಗೂ ವೀಡಿಯೊಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್ ಮಾಡಿದ್ದರು.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಅವರು ಟ್ವೀಟ್ ಮಾಡಿರುವ ಫೋಟೋಗಳಲ್ಲಿ ಹಾಗೂ ವೀಡಿಯೊದಲ್ಲಿ ಆಫ್ರಿಕಾದ ಮೊಜಾಂಬಿಕ್‍‍ನಲ್ಲಿ ಪೋಪ್ ಫ್ರಾನ್ಸಿಸ್‍‍ರವರು ಮಹೀಂದ್ರಾ ಕೆಯುವಿ100 ಕಾರಿನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಸಿಲ್ವರ್ ಬಣ್ಣದ ಕೆಯುವಿ100 ಕಾರಿನಲ್ಲಿ ಪೋಪ್‍‍ರವರು ಹಿಂಬದಿಯ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾರೆ.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಆನಂದ್ ಮಹೀಂದ್ರಾರವರು ತಮ್ಮ ಟ್ವೀಟ್‍‍ನಲ್ಲಿ, ಪೋಪ್‍‍ರವರು ನಮ್ಮ ಮಹೀಂದ್ರಾ ಕೆಯುವಿ 100 ಕಾರಿನಲ್ಲಿ ಪ್ರಯಾಣಿಸಿದ್ದು ನಮ್ಮ ಕಂಪನಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಮೊಜಾಂಬಿಕ್‍‍ನಲ್ಲಿರುವ ಮಹೀಂದ್ರಾ ಕಂಪನಿಯ ವಿತರಕರಾದ, ಮಾಪುಟೊ, ಪೋಪ್‍‍ರವರ ಫೀಡ್ ಯೋಜನೆಗಾಗಿ ಕೆಯುವಿ100 ಕಾರ್ ಅನ್ನು ವ್ಯವಸ್ಥೆ ಮಾಡಿದ್ದರು.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಇದು ಮಹೀಂದ್ರಾ ಕಂಪನಿಗೆ ಸಂದ ಗೌರವವಾಗಿದೆ ಎಂದು ಹೇಳಿದ್ದಾರೆ. ಮತ್ತೊಂದು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾರವರು ತಮ್ಮ ಕಂಪನಿಯ ವಾಹನವನ್ನು ಈ ಹಿಂದೆಯೂ ಇಂತಹ ಸಂದರ್ಭಗಳಲ್ಲಿ ಬಳಸಿ ಕೊಳ್ಳಲಾಗಿತ್ತು.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

1964ರಲ್ಲಿ ಆಗಿನ ಪೋಪ್‍‍ರವರು ಯೂಕರಿಸ್ಟಿಕ್ ಕಾಂಗ್ರೆಸ್‍‍ನಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಹೀಂದ್ರಾ ಕಾರನ್ನು ಬಳಸಿದ್ದರು ಎಂದು ಹೇಳಿದ್ದಾರೆ. ಆಗ ಪೋಪ್‍‍ರವರು ಮಹೀಂದ್ರಾ ಕಂಪನಿಯ ಒಪನ್ ಟಾಪ್ ಯುವಿಯಲ್ಲಿ ಪ್ರಯಾಣಿಸಿದ್ದರು.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಕಂಡಿವಾಲಿಯಲ್ಲಿರುವ ಮಹೀಂದ್ರಾ ಕಂಪನಿಯ ಆಟೋ ಮ್ಯೂಸಿಯಂನಲ್ಲಿ ಈ ವಾಹನವನ್ನು ಹೆಮ್ಮೆಯಿಂದ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕೆಯುವಿ100 ಕಾರ್ ಅನ್ನು ಮಹಾರಾಷ್ಟ್ರದ ಕಂಪನಿಯ ಚಕನ್ ಘಟಕದಲ್ಲಿ ತಯಾರಿಸಲಾಗುತ್ತಿದೆ.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಈ ಕಾರ್ ಅನ್ನು ವಿಶ್ವದ ವಿವಿಧ ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಯುವಿ100 ಕಾರ್ ಅನ್ನು ಸದ್ಯಕ್ಕೆ 82 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುವ 1.2 ಲೀಟರಿನ ಪೆಟ್ರೋಲ್ ಎಂಜಿನ್ ಹಾಗೂ 77 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುವ 1.2 ಲೀಟರಿನ ಟರ್ಬೊ ಡೀಸೆಲ್ ಎಂಜಿನ್‍‍ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಈ ಎರಡೂ ಎಂಜಿನ್‍‍ಗಳಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅಳವಡಿಸಲಾಗಿದೆ. ಆನಂದ್ ಮಹೀಂದ್ರಾರವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅನೇಕ ಸ್ಪೂರ್ತಿದಾಯಕ ವಿಷಯಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಜೊತೆ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಮಹೀಂದ್ರಾರವರು ಈ ಹಿಂದೆ 11 ವರ್ಷದ ಬಾಲಕಿ ಬರೆದಿದ್ದ ಪತ್ರಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಮಹಿಕಾ ಮಿಶ್ರಾ ಎಂಬ ಬಾಲಕಿ ಭಾರತದ ರಸ್ತೆಗಳಲ್ಲಿ ಅನಗತ್ಯವಾಗಿ ಹಾರ್ನ್ ಮಾಡುವ ಮೂಲಕ ಶಬ್ದ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಬರೆದಿದ್ದಳು.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಅದಕ್ಕೆ ಟ್ವೀಟ್‍‍ನಲ್ಲಿ ಉತ್ತರಿಸಿದ್ದ ಆನಂದ್ ಮಹೀಂದ್ರಾರವರು, ಸುಸ್ತಾಗಿರುವ ದಿನದ ಕೊನೆಯಲ್ಲಿ, ನೀವು ಇ-ಮೇಲ್‍‍ನಲ್ಲಿ ಈ ರೀತಿಯ ಸಂದೇಶವನ್ನು ನೋಡಿದಾಗ ಬೇಸರ ಕಾಣೆಯಾಗುತ್ತದೆ. ಉತ್ತಮ ಮತ್ತು ನಿಶ್ಯಬ್ದ ಜಗತ್ತನ್ನು ಬಯಸುವ ಇಂತಹವರಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ನನಗೆ ತಿಳಿದಿದೆ ಎಂದು ಹೇಳಿದ್ದರು.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಈ ಟ್ವೀಟ್‌ಗೆ ಅಭಿಮಾನಿಗಳು ಹಾಗೂ ಪರಿಸರವಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಹೀಂದ್ರಾರವರು ಯುವ ಪೀಳಿಗೆಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿರುವ ಖಾತೆಯ ಮೂಲಕ, ಪ್ರಭಾವಶಾಲಿ ಪೋಸ್ಟ್‌ಗಳನ್ನು ಮಾಡುವ ಮೂಲಕ ಸರಿಯಾದ ದಾರಿಯನ್ನು ತೋರಿಸುತ್ತಿದ್ದಾರೆ.

ಮಹೀಂದ್ರಾ ಕಾರಿನಲ್ಲಿ ಸಂಚರಿಸಿದ ಪೋಪ್ ಫ್ರಾನ್ಸಿಸ್

ಡ್ರೈವ್‍‍‍ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಕಂಪನಿಯ ಸಾಧನೆಗೆ ಮತ್ತೊಂದು ಗರಿ ಮೂಡಿದೆ. ದ್ವಿಚಕ್ರ ವಾಹನಗಳ ಮೊಟೊ 3 ಕ್ಲಾಸ್ ರೇಸ್‍‍ನಲ್ಲಿ ಗೆಲುವು ಸೇರಿದಂತೆ ಮಹೀಂದ್ರಾ ಕಂಪನಿಯು ಈ ಹಿಂದೆ ವಿವಿಧ ಸಾಧನೆಗಳನ್ನು ಮಾಡಿದೆ. ಮಹೀಂದ್ರಾ ಕಂಪನಿಯು ಫಾರ್ಮುಲಾ ಇ ವಿಶ್ವ ವೇದಿಕೆಯಲ್ಲಿ ಬಿಎಂಡಬ್ಲ್ಯು, ಆಡಿ ಹಾಗೂ ಜಾಗತಿಕ ವಾಹನ ತಯಾರಕ ಕಂಪನಿಗಳ ಜೊತೆ ಸ್ಪರ್ಧಿಸುತ್ತಿದೆ. ಈ ಮೂಲಕ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಮಾಡಿದೆ.

Article Published On: Sunday, September 8, 2019, 9:00 [IST]
English summary
Pope Francis Travels In A Mahindra KUV100 In Mozambique: Anand Mahindra Tweets With A Video - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+