ಅನಾವರಣಗೊಂಡ ಪೋರ್ಷೆ 911 ಸ್ಪೀಡ್‍ಸ್ಟರ್ ಉತ್ಪಾದನಾ ಆವೃತ್ತಿ
ಜರ್ಮನ್ ಕಾರು ತಯಾರಕ ಕಂಪನಿ ಪೋರ್ಷೆ ತನ್ನಉತ್ಪಾದನಾ ಆವೃತ್ತಿಯ 911 ಸ್ಪೀಡ್‍ಸ್ಟರ್ ಕಾರನ್ನು 2019ರ ನ್ಯೂಯಾರ್ಕ್ ಆಟೊ ಶೋದಲ್ಲಿ ಅನಾವರಣಗೊಳಿಸಿತು. ಹೊಸ 911 ಸ್ಪೀಡ್‍ಸ್ಟರ್ ಕಾರು 991.2 ಜಿಟಿ 3 ಮೇಲೆ ಅವಲಂಬಿತವಾಗಿದ್ದು, ಮೇ 7, 2019 ರಿಂದ ಶುರುವಾಗಲಿರುವ ಬುಕಿಂಗ್ ಮೂಲಕ ಕೇವಲ 1,948 ಕಾರುಗಳನ್ನು ಪ್ರಪಂಚದಾದ್ಯಂತ ಮಾರಾಟ ಮಾಡಲಾಗುವುದು.

2019ರ 911 ಸ್ಪೀಡ್‍ಸ್ಟರ್ ಕಾರು ಪೋರ್ಷೆ ಕಂಪನಿಯು ಸ್ಪೀಡ್‍ಸ್ಟರ್ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿರುವ 9ನೇ ಕಾರಾಗಿದೆ. 911 ಸ್ಪೀಡ್‍ಸ್ಟರ್ ಕಾರನ್ನು ಈ ಮೊದಲು ಕಾನ್ಸೆಪ್ಟ್ ಆಗಿ ಕಳೆದ ವರ್ಷ ಪ್ಯಾರೀಸ್ ನಲ್ಲಿ ನಡೆದ ಮೋಟಾರ್ ಶೋದಲ್ಲಿ ಕಂಪನಿಯ 70 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿಅನಾವರಣಗೊಳಿಸಲಾಗಿತ್ತು. ಹೊಸದಾಗಿ ಬರಲಿರುವ ಪೋರ್ಷೆ ಟಾಪ್‍ಲೆಸ್ ಕಾರಿಗೆ ಜರ್ಮನಿಯ ಮಾರ್ಕ್‍ನ ಪ್ರಪ್ರಥಮ ಕಾರಾದ 1948ರ ಮಾಡೆಲಿನ 356 ಸ್ಪೀಡ್‍ಸ್ಟರ್ ಕಾರಿನ ನೆನಪಿಗಾಗಿ ಸ್ಪೀಡ್‍ಸ್ಟರ್ ಎಂದು ಹೆಸರಿಡಲಾಗಿದೆ. 911 ಸ್ಪೀಡ್‍ಸ್ಟರ್ ಪೋರ್ಷೆ ಕಾರು ಹಿಂದಿನ ತಲೆಮಾರಿನ 911.2 ಜಿಟಿ 3 ಸ್ಪೋರ್ಟ್ಸ್ ಕಾರಿನ ಟೆಕ್ನಾಲಜಿ ಮೇಲೆ ಅವಲಂಬಿತವಾಗಿದೆ. ಹೊಸ ಸ್ಪೀಡ್‍ಸ್ಟರ್‍ನ ಚಾಸೀಸ್ ಅನ್ನು ಟ್ರ್ಯಾಕ್ ಪೋಕಸ್ ಕಾರಿನಿಂದ ಅಳವಡಿಸಿಕೊಳ್ಳಲಾಗಿದೆ.

ಜಿಟಿ3 ನಂತೆಯೇ 911ಸ್ಪೀಡ್‍ಸ್ಟರ್ ಸಹ 4.0 ಲೀಟರ್ ಫ್ಲಾಟ್ 6 ಎಂಜಿನ್ ಹೊಂದಿದೆ. ಆದರೆ ಪೋರ್ಷೆ ಪವರ್ ಪ್ಲಾಂಟ್ ಅನ್ನು ಎನ್‍ಹ್ಯಾನ್ಸ್ ಮಾಡಲಾಗಿದ್ದು, ಥ್ರಾಟಲ್ ಬಾಡಿಗಳನ್ನು 911 ಜಿಟಿ 3 ಆರ್ ರೇಸ್‍ಕಾರಿನಂತೆ ಇನ್ನೂ ಶಾರ್ಪ್ ಮಾಡಲಾಗಿದೆ.

ಮಾಡಿಫೈ ಮಾಡಿರುವ ಕಾರಣ ಹೊಸ ಎಂಜಿನ್ ಈಗ 502 ಬಿಹೆಚ್‍ಪಿ ಮತ್ತು 469 ಟಾರ್ಕ್ ಉತ್ಪಾದಿಸಿ ಅದನ್ನು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮೂಲಕ ಹಿಂಬದಿಯ ವ್ಹೀಲ್ ಗಳಿಗೆ ಕಳುಹಿಸುತ್ತದೆ. ಇದು ಪೋರ್ಷೆ ಪ್ರಿಯರ ಸಂತೋಷಕ್ಕೆ ಕಾರಣವಾಗಿದೆ. 6 ಸ್ಪೀಡಿನ ಗೇರ್ ಬಾಕ್ಸ್ 911 ಸ್ಪೀಡ್‍ಸ್ಟರ್ ನ ಒಂದು ಭಾಗವಾಗಿದ್ದು ತೂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಮ್ಯಾನುವಲ್ ಗೇರ್ ಬಾಕ್ಸನ್ನು ಸ್ಪೀಡ್‍ಸ್ಟರ್ ನ ಜೊತೆ ಜೋಡಿಸಿರುವುದರಿಂದ ಸುಮಾರು 18 ಕೆಜಿಯಷ್ಟು ತೂಕ ಕಡಿಮೆಯಾಗಲಿದೆ. ಟೆನಾಕ್ಸ್ ಬಟನ್ ಗಳ ಬದಲಾಗಿ ಮ್ಯಾನುವಲ್ ಆಗಿ ಆಪರೇಟ್ ಮಾಡುವ ಟನ್ಯೂ ಕವರನ್ನು ಎಲೆಕ್ಟ್ರಿಕ್ ಆಗಿ ಆಪರೇಟ್ ಮಾಡುವ ಸಾಪ್ಟ್ ಟಾಪ್‍ರೂಫ್ ಬದಲಾಗಿ ಅಳವಡಿಸಿ ತೂಕವನ್ನು ಕಡಿಮೆ ಮಾಡಲಾಗಿದೆ.
MOST READ: ಮರ್ಸಿಡಿಸ್ ಇಕ್ಯೂಸಿ ಎಡಿಷನ್ 1886 ಅನಾವರಣ
ತೂಕ ಬದಲಾವಣೆ ಮಾಡಲು ಮಾಡಿರುವ ಇತರ ಬದಲಾವಣೆಗಳೆಂದರೆ ಫ್ರಂಟ್ ಫೆಂಡರ್, ರೇರ್ ಡೆಕ್‍ಲಿಡ್ ಮತ್ತು ಬೂಟ್. ಪೋರ್ಷೆ ಏರ್ ಕಂಡೀಷನ್ ಅನ್ನು ಸಹ ತೆಗೆದು ಹಾಕಿದೆ, ಆದರೆ ಮಾಲೀಕರು ಇಚ್ಛಿಸಿದಲ್ಲಿ ಅದನ್ನು ಪುನಃ ಅಳವಡಿಸಿಕೊಂಡು ಬಿಸಿಲಿನಲ್ಲಿ ಡ್ರೈವ್ ಮಾಡುವಾಗ ತಮ್ಮನ್ನು ಕೂಲ್ ಆಗಿ ಇಟ್ಟುಕೊಳ್ಳಬಹುದು. ಈ ಎಲ್ಲಾ ತೂಕ ಇಳಿಕೆ ಟ್ರಿಕ್ ಗಳಿಂದ ಪೋರ್ಶ್ 911 ಸ್ಪೀಡ್‍ಸ್ಟರ್ 0 - 100 ಕಿ.ಮೀ ವೇಗವನ್ನು ಕೇವಲ 3.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಇದು ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ 991.2 ಜಿಟಿ3 ಗಿಂತ ಸುಮಾರು ಹತ್ತು ಸೆಕಂಡ್ ಗಳಷ್ಟು ವೇಗವಾಗಿದೆ. 911 ಸ್ಪೀಡ್‍ಸ್ಟರ್ ನ ಟಾಪ್ ಸ್ಪೀಡನ್ನು ಪ್ರತಿ ಗಂಟೆಗೆ 309 ಕಿ.ಮೀ ಎಂದು ನಿಗದಿ ಪಡಿಸಲಾಗಿದೆ.


Click it and Unblock the Notifications








