ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

ಮಾರುತಿ ಡಿಜೈರ್ ಕಾರ್ ಅನ್ನು ಮೊದಲ ಬಾರಿಗೆ 2008ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರ್ ಅನ್ನು ಆಗ ಹೆಚ್ಚು ಜನಪ್ರಿಯವಾಗಿದ್ದ ಎಸ್ಟೀಮ್ ಕಾರಿನ ಬದಲಿಗೆ ಬಿಡುಗಡೆಗೊಳಿಸಲಾಗಿತ್ತು. ಈ ಕಾರು ಸಿ 1 ಸೆಗ್‍‍ಮೆಂಟ್‍‍ನಲ್ಲಿ ಹ್ಯುಂಡೈ ಅಸೆಂಟ್, ಫೋರ್ಡ್ ಇಕಾನ್, ಒಪೆಲ್ ಕೊರ್ಸಾ ಹಾಗೂ ಟಾಟಾ ಇಂಡಿಗೋ ಕಾರುಗಳಿಗೆ ಪೈಪೋಟಿ ನೀಡುತ್ತಿತ್ತು.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

ಬಿಡುಗಡೆಯ ನಂತರ ಎಲ್ಲಾ ನಿರೀಕ್ಷೆಗಳನ್ನು ಮೀರಿ, ಎಸ್ಟೀಮ್ ಕಾರಿಗಿಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆಯಿತು. ಈಗ ಮೂರನೇ ತಲೆಮಾರಿನ ಕಾರ್ ಅನ್ನು ಹೊಂದಿರುವ ಸ್ವಿಫ್ಟ್ ಕಾರಿನ ಮೇಲೆ ಆಧಾರಿತವಾಗಿರುವ ಈ ಸೆಡಾನ್ ಕಾರು, ಆಲ್ಟೊ ಕಾರ್ ಅನ್ನು ಹಿಂದಿಕ್ಕಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಕಾರು ಇಷ್ಟು ಜನಪ್ರಿಯವಾಗಲು ಕಾರಣವಾದ 9 ಅಂಶಗಳನ್ನು ನೋಡೋಣ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

1. ವಿಶ್ವಾಸಾರ್ಹ ಎಂಜಿನ್

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರುತಿ ಡಿಜೈರ್ ಕಾರನ್ನು ಮಾರಾಟ ಮಾಡಲಾಗುತ್ತಿದ್ದು, ಉತ್ತಮ ಪರ್ಫಾಮೆನ್ಸ್ ಹಾಗೂ ಫ್ಯೂಯಲ್ ಎಫಿಶಿಯನ್ಸಿ ನೀಡುತ್ತದೆ. ಈ ಎಂಜಿನ್‌ಗಳು ಹೆಚ್ಚು ವಿಶ್ವಾಸಾರ್ಹವಾಗಿದ್ದು, ರಿ-ವರ್ಕ್ ಅಗತ್ಯವಿಲ್ಲದೇ ಲಕ್ಷಾಂತರ ಕಿಲೋಮೀಟರ್‌ಗಳಷ್ಟು ದೂರ ಚಲಿಸುತ್ತವೆ. ಇದರ ಜೊತೆಗೆ ಈ ಎಂಜಿನ್‍‍ಗಳು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದು ಡಿಜೈರ್ ಅನ್ನು ಉದ್ಯಮದ ಅತ್ಯಂತ ವಿಶ್ವಾಸಾರ್ಹ ಕಾರು ಬ್ರಾಂಡ್‌ಗಳಲ್ಲಿ ಒಂದನ್ನಾಗಿ ಮಾಡಿವೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

ಮಾರುತಿ ಡಿಜೈರ್‌ನ ಪೆಟ್ರೋಲ್ ಎಂಜಿನ್ ಗರಿಷ್ಠ 81.80 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 73.75 ಬಿಹೆಚ್‌ಪಿ ಪವರ್ ಹಾಗೂ 190 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍‍ಗಳು 5 ಸ್ಪೀಡ್ ಮ್ಯಾನುವಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ಗಳನ್ನು ಹೊಂದಿವೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

2. ಕೈಗೆಟುಕುವ ಬೆಲೆ

ಡಿಜೈರ್ ಕಾರು ರೂ.5.83-9.58 ಲಕ್ಷ ಬೆಲೆಯಲ್ಲಿ ಮಾರಾಟವಾದರೆ, ಹೋಂಡಾ ಅಮೇಜ್ ರೂ.5.93-9.79 ಬೆಲೆಯನ್ನು ಹೊಂದಿದೆ. ಈ ಸೆಗ್‍‍ಮೆಂಟಿನಲ್ಲಿ ಮಾರಾಟವಾಗುವ ಏಕೈಕ ಫೋಕ್ಸ್ ವ್ಯಾಗನ್ ಕಾರ್ ಆದ ಆಮಿಯೊ ರೂ.10 ಲಕ್ಷ ಬೆಲೆಯನ್ನು ಹೊಂದಿದೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಡಿಜೈರ್ ಜನಪ್ರಿಯವಾಗಲು ಕಾರಣವಾದ ಮತ್ತೊಂದು ಅಂಶವೆಂದರೆ, ಈ ಕಾರು ಬಹುತೇಕ ಮಾರುತಿ ಬಲೆನೊ ಕಾರಿನ ಬೆಲೆಯನ್ನೇ ಹೊಂದಿದೆ. ಬಲೆನೊ ಕಾರಿನ ಬೆಲೆ ರೂ.5.68 - 9 ಲಕ್ಷಗಳಾಗಿದೆ. ಆದ ಕಾರಣ, ಅನೇಕ ಬಿ 2 ಹ್ಯಾಚ್‌ಬ್ಯಾಕ್ ಖರೀದಿದಾರರು ಬಲೆನೊ ಬದಲಿಗೆ ಡಿಜೈರ್‌ ಕಾರನ್ನು ಖರೀದಿಸುತ್ತಾರೆ. ಹ್ಯಾಚ್‍‍ಬ್ಯಾಕ್ ಕಾರಿನ ಬೆಲೆಯಲ್ಲಿ ಸೆಡಾನ್ ಕಾರು ಖರೀದಿಸಬಹುದು.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

3. ಹೆಚ್ಚಿನ ಸ್ಥಳ

ಬೇರೆ ಸೆಡಾನ್ ಕಾರುಗಳಿಗೆ ಹೋಲಿಸಿದರೆ, ಡಿಜೈರ್ ಕಾರು ದೊಡ್ಡ ಗಾತ್ರವನ್ನು ಹೊಂದಿದೆ. ಡಿಜೈರ್ 1,735 ಎಂಎಂ ಅಗಲವನ್ನು ಹೊಂದಿದ್ದರೆ, ಸಿಯಾಜ್ 1,730 ಎಂಎಂ ಅಗಲವನ್ನು ಹೊಂದಿದೆ. ಸಬ್ 4ಮೀಟರ್ ಆಗಿದ್ದರೂ, ಈ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿ ಮೂರು ಮಂದಿ ಹಿಂದಿನ ಸೀಟಿನಲ್ಲಿ ಸುಲಭವಾಗಿ ಕುಳಿತು ಕೊಳ್ಳಬಹುದು. ಇದರ ಜೊತೆಗೆ ಎರಡೂ ಸಾಲುಗಳ ಪ್ರಯಾಣಿಕರಿಗೆ ಸಾಕಷ್ಟು ಲೆಗ್ ರೂಂ ಇದೆ. ಸಬ್ 4ಮೀಟರ್ ಮಾದರಿಯ ಕಾರುಗಳಲ್ಲಿ ಸಾಕಷ್ಟು ದೊಡ್ಡದಾದ 378 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

4. ಸುಲಭ ನಿರ್ವಹಣೆ

ಹೆಚ್ಚಿನ ಮಾರುತಿ ಸುಜುಕಿ ಕಾರುಗಳ ದೊಡ್ಡ ಅನುಕೂಲವೆಂದರೆ ಅವುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಡಿಜೈರ್ ಸಹ ಈ ಅಂಶದಿಂದ ಹೊರತಾಗಿಲ್ಲ. ಸ್ವಿಫ್ಟ್ ಕಾರಿನ ಮೇಲೆ ಮಾಡುವ ಖರ್ಚಿನಲ್ಲಿ ಈ ಕಾಂಪ್ಯಾಕ್ಟ್ ಸೆಡಾನ್ ಅನ್ನು ನಿರ್ವಹಿಸಬಹುದು. ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ ಕಾರಿನಲ್ಲಿರುವ ಹೆಚ್ಚಿನ ಬಿಡಿಭಾಗಗಳು, ಡಿಜೈರ್ ಬಿಡಿಭಾಗಗಳು ಬಹುತೇಕ ಒಂದೇ ಆಗಿವೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

5. ಮೈಲೇಜ್

ಡೀಸೆಲ್ ಚಾಲಿತ ಮಾರುತಿ ಡಿಜೈರ್ ಕಾರು, ಎಆರ್‍‍ಎಐ ಪರೀಕ್ಷೆಯ ಪ್ರಕಾರ ಪ್ರತಿ ಲೀಟರಿಗೆ 28.4 ಕಿ.ಮೀ ಮೈಲೇಜ್ ನೀಡುತ್ತದೆ. ಇದು ದೇಶದಲ್ಲಿ ಮಾರಾಟವಾಗುವ ಯಾವುದೇ ಐಸಿಇ ಚಾಲಿತ ಕಾರುಗಳಿಗಿಂತ ಹೆಚ್ಚಾಗಿದೆ. ಪೆಟ್ರೋಲ್ ಮಾದರಿಯ ಕಾರು ಪ್ರತಿ ಲೀಟರಿಗೆ 22 ಕಿ.ಮೀ ಮೈಲೇಜ್ ನೀಡುತ್ತದೆ. ನಗರದ ಟ್ರಾಫಿಕ್‍‍ಗಳಲ್ಲಿಯೂ ಸಹ, ನೀವು ಡೀಸೆಲ್ ಮಾದರಿಯಿಂದ 24 ಕಿ.ಮೀ ಹಾಗೂ ಪೆಟ್ರೋಲ್ ಮಾದರಿಯಿಂದ 21 ಕಿ.ಮೀ ಮೈಲೇಜ್ ಪಡೆಯಬಹುದು. ಈ ರೀತಿಯ ಮೈಲೇಜ್‍‍ನಿಂದಾಗಿ ಭಾರತದ ಕಾರು ಪ್ರಿಯರ ಮನ ಗೆದ್ದಿದೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

6. ರಿ-ಸೇಲ್ ವ್ಯಾಲ್ಯೂ

ಮಾರುತಿ ಡಿಜೈರ್ ಹೊಸ ಹಾಗೂ ಬಳಸಿದ ಕಾರು ಮಾರುಕಟ್ಟೆಯಲ್ಲಿ ಉತ್ತಮ ಜನಪ್ರಿಯತೆಯನ್ನು ಹೊಂದಿದೆ. ಇದರ ಅರ್ಥವೇನೆಂದರೆ, ಡಿಜೈರ್‌ ಕಾರಿನ ಮಾಲೀಕರು ಬಳಸಿದ ಕಾರಿನ ಮೇಲೆ ಹೆಚ್ಚಿನ ಪ್ರಮಾಣದ ಹಣವನ್ನು ಮರಳಿ ಪಡೆಯಬಹುದು.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

7. ವೈಡೆಸ್ಟ್ ಸರ್ವಿಸ್ ನೆಟ್‌ವರ್ಕ್

ಮಾರುತಿ ಡಿಜೈರ್‌ಗೆ ಹೆಚ್ಚಿನ ಬೇಡಿಕೆಯಿರುವ ಮತ್ತೊಂದು ಕಾರಣವೆಂದರೆ, ಮಾರುತಿ ಕಂಪನಿಯು ಉದ್ಯಮದಲ್ಲಿ ಹೊಂದಿರುವ ಅತ್ಯುತ್ತಮ ಸೇವಾ ಜಾಲ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಾವಿರಾರು ಟಚ್ ಪಾಯಿಂಟ್‌ಗಳೊಂದಿಗೆ ವಿಶಾಲ ಸೇವಾ ಜಾಲವನ್ನು ಹೊಂದಿದೆ. ನಾವು ಎಲ್ಲಿಗೇ ಹೋದರೂ ಮಾರುತಿ ಸುಜುಕಿಯ ಅಧಿಕೃತ ಸೇವಾ ಕೇಂದ್ರವನ್ನು ಕಾಣಬಹುದು. ಈ ಕೇಂದ್ರಗಳು ತುರ್ತು ಸಮಸ್ಯೆ ಎದುರಾದಲ್ಲಿ ಸಹಾಯಕ್ಕೆ ಬರುತ್ತವೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

8. ವಿನ್ಯಾಸ

ಹಿಂದಿನ ಎರಡು ತಲೆಮಾರುಗಳಲ್ಲಿ ಇದ್ದ ವಿನ್ಯಾಸವೇ ಬೇರೆ, ಈಗಿನ ತಲೆಮಾರಿನ ವಿನ್ಯಾಸವೇ ಬೇರೆ ಎಂದು ಹೇಳಬಹುದು. ಹಿಂದಿನ ಎರಡು ತಲೆಮಾರಿನ ಕಾರುಗಳ ವಿನ್ಯಾಸದಂತೆಯೇ ಮೂರನೇ ತಲೆಮಾರಿನ ವಿನ್ಯಾಸವನ್ನು ಸಹ ಸ್ವಿಫ್ಟ್‌ ಕಾರಿನಿಂದ ಪಡೆಯಲಾಗಿದೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

ಸ್ವಿಫ್ಟ್‌ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದರೂ ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದೆ. ವಿಶಾಲವಾದ ಟ್ರ್ಯಾಕ್, ಕ್ರೋಮ್ ಇನ್‍‍ಫ್ಯೂಸ್ಡ್ ಗ್ರಿಲ್ ಹಾಗೂ ಕಿಜಾಶಿ ತರಹದ ಹಿಂಭಾಗವು ಡಿಜೈರ್ ಅನ್ನು ಅತ್ಯಂತ ಆಕರ್ಷಕವಾದ ಸಬ್4 ಮೀಟರ್ ಕಾಂಪ್ಯಾಕ್ಟ್ ಸೆಡಾನ್‍‍ಗಳಲ್ಲಿ ಒಂದನ್ನಾಗಿ ಮಾಡುತ್ತದೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

9. ಟೂರ್ ಆವೃತ್ತಿ

ಟ್ಯಾಕ್ಸಿ ಟೂರ್ ಮಾದರಿಯನ್ನು ಹೊಂದಿರುವುದು ಸಹ ಡಿಜೈರ್‍ ಕಾರಿನ ಜನಪ್ರಿಯತೆಗೆ ಕಾರಣವಾಗಿದೆ. ಡಿಜೈರ್ ಟೂರ್ ಎನ್ನುವುದು ಸಾಮಾನ್ಯ ವಾಹನಗಳಿಂದ ಹೊರತೆಗೆಯಲಾದ ಆವೃತ್ತಿಯಾಗಿದ್ದು ಅದು ವಾಣಿಜ್ಯ ವಾಹನಗಳನ್ನು ಪೂರೈಸುತ್ತದೆ.

ಮಾರುತಿ ಡಿಜೈರ್ ಜನಪ್ರಿಯತೆಗೆ ಕಾರಣಗಳಿವು

ವಿಶಾಲವಾದ ಕ್ಯಾಬಿನ್ ಹಾಗೂ ಕಡಿಮೆ ಎನ್‌ವಿಹೆಚ್ ಲೆವೆಲ್ ಸಹ ಡಿಜೈರ್‍‍ನ ಜನಪ್ರಿಯತೆಗೆ ಕಾರಣವಾಗಿದೆ. ಕಮರ್ಷಿಯಲ್ ಸೆಗ್‍‍ಮೆಂಟಿನಲ್ಲಿ ಜನಪ್ರಿಯತೆಯು ಮೈಲೇಜ್ ಹಾಗೂ ವಿಶ್ವಾಸಾರ್ಹ ಎಂಜಿನ್‌ನ ಕಾರಣಗಳಿಂದ ಬರುತ್ತದೆ.

Article Published On: Wednesday, July 24, 2019, 17:04 [IST]
English summary
What Makes Maruti Dzire Sedan So Popular In India? – 9 Reasons - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+