ಇದು ವರ್ಷದ ಅತಿದೊಡ್ಡ ಆಫರ್- ಕ್ಯಾಪ್ಚರ್ ಕಾರು ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!
ಎಸ್‌ಯುವಿ ವಿಭಾಗದಲ್ಲಿ ಭಾರೀ ನೀರಿಕ್ಷೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ರೆನಾಲ್ಟ್ ಕ್ಯಾಪ್ಚರ್ ಕ್ರಾಸ್ ಓವರ್ ಎಸ್‌ಯುವಿ ಕಾರು ಹೇಳಿಕೊಳ್ಳುವಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಸುಳ್ಳಲ್ಲ. ಹೀಗಾಗಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕ್ಯಾಪ್ಚರ್ ಕಾರು ಖರೀದಿ ಮೇಲೆ ಮೇಲೆ ಹೊಸ ಆಫರ್‌ಗಳನ್ನು ಘೋಷಣೆ ಮಾಡಲಾಗಿದೆ.

ಕ್ಯಾಪ್ಚರ್ ಕ್ರಾಸ್ ಓವರ್ ಕಾರು ಸದ್ಯ ವಿವಿಧ 7 ವೆರಿಯೆಂಟ್ ಜೊತೆಗೆ 5 ಪ್ರಮುಖ ಬಣ್ಣಗಳ ಆಯ್ಕೆಗಳನ್ನು ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ. ಹೀಗಿದ್ದರೂ ನೀರಿಕ್ಷಿತ ಮಟ್ಟದ ಬೇಡಿಕೆ ಪಡೆಯುವಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದು, ಈ ಕಾರಣಕ್ಕೆ ಹೊಸ ಕ್ಯಾಪ್ಚರ್ ಖರೀದಿ ಮೇಲೆ ಬರೋಬ್ಬರಿ ರೂ.3 ಲಕ್ಷದ ತನಕ ಡಿಸ್ಕೌಂಟ್ ನೀಡಲಾಗುತ್ತಿದೆ.

ಕ್ಯಾಪ್ಚರ್ ಕಾರುಗಳು ಉಳಿದೆಲ್ಲಾ ಮಧ್ಯಮ ಗಾತ್ರದ ಎಸ್‌ಯುವಿಯಲ್ಲೇ ಉತ್ತಮ ಚಾರ್ಸಿ ವ್ಯವಸ್ಥೆಯನ್ನು ಹೊಂದಿರುವ ಕಾರು ಮಾದರಿಯಾಗಿದ್ದು, ಆರಂಭದಲ್ಲಿ ಹ್ಯುಂಡೈ ಕ್ರೆಟಾ ಹಾಗೂ ಟಾಟಾ ಹೆಕ್ಸಾ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಿತ್ತು. ಆದ್ರೆ ಇತ್ತೀಚೆಗೆ ಕ್ಯಾಪ್ಚರ್ ಬೇಡಿಕೆಯಲ್ಲಿ ಇಳಿಕೆಯಾಗುತ್ತಿದ್ದು, ಕಾರು ಖರೀದಿದಾರರನ್ನು ಸೆಳೆಯಲು ಅತ್ಯುತ್ತಮ ಆಫರ್ ಘೋಷಣೆ ಮಾಡಲಾಗಿದೆ.

ರೆನಾಲ್ಟ್ ಕ್ಯಾಪ್ಚರ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಗ್ರಾಹಕರ ತಮ್ಮ ಬೇಡಿಕೆಯಂತೆ ವಿವಿಧ ಮಾದರಿಗಳನ್ನು ಡಿಸ್ಕೌಂಟ್ ದರಗಳಲ್ಲೇ ಆಯ್ಕೆ ಮಾಡಬಹುದಾಗಿದೆ.

ಕ್ಯಾಪ್ಚರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.49 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಕಾರಿನ ಬೆಲೆಯು ರೂ.12.99 ಲಕ್ಷ ಬೆಲೆ ಹೊಂದಿದ್ದು, ಇದೀಗ ಡಿಸ್ಕೌಂಟ್ ನಂತರ ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.44 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಬೆಲೆಯು 9.94 ಲಕ್ಷಕ್ಕೆ ಖರೀದಿ ಮಾಡಬಹುದಾಗಿದೆ. ಭರ್ಜರಿ ಡಿಸ್ಕೌಂಟ್ ಜೊತೆಗೆ ಕೆಲವು ಆಯ್ದ ಮಾದರಿಗಳ ಮೇಲೆ ಇನ್ನು ಹೆಚ್ಚಿನ ಆಫರ್‌ಗಳು ಕೂಡಾ ಲಭ್ಯವಿವೆ ಎನ್ನಲಾಗಿದೆ.

ಇನ್ನು ಡಸ್ಟರ್ ಕಾರು ಮಾದರಿಯಲ್ಲೇ ಕ್ಯಾಪ್ಚರ್ ಕಾರುಗಳು 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಪೆಟ್ರೋಲ್ ಕಾರುಗಳು 105-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಕಾರುಗಳು 119-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಜೊತೆಗೆ ಪೆಟ್ರೋಲ್ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 17-ಇಂಚಿನ ಅಲಾಯ್ ಚಕ್ರಗಳನ್ನು ಅಳವಡಿಕೆ ಮಾಡಲಾಗಿದೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ಒಳ ಮತ್ತು ಹೊರ ವಿನ್ಯಾಸದಲ್ಲಿ ಗಮನಸೆಳೆಯುವ ಕ್ಯಾಪ್ಚರ್ ಕಾರು 310-ಲೀಟರ್ ಬೂಟ್ ಸ್ಪೆಸ್, 50 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಡ್ಯುಯಲ್ ಟೋನ್ ಬಣ್ಣದೊಂದಿಗೆ ಹೊಸ ಲುಕ್ ಪಡೆದುಕೊಂಡಿರುವ ಕ್ಯಾಪ್ಚರ್ ಕಾರುಗಳು ಬ್ಲ್ಯಾಕ್ ಆ್ಯಂಡ್ ವೈಟ್ ಥೀಮ್ ಪಡೆದಿವೆ.
MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಜೊತೆಗೆ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲರ್, ಬ್ಲ್ಯೂಟಥ್ ಕನೆಕ್ವಿಟಿ, ಧ್ವನಿ ನಿಯಂತ್ರಣ ಘಟಕ ಪಡೆದುಕೊಂಡಿದ್ದು, ಮೂನ್ ಲೈಟ್ ಸಿಲ್ವರ್, ಪ್ಲ್ಯಾನೆಟ್ ಗ್ರೇ, ಕೆಯೆನಿ ಆರೆೇಂಜ್, ಮೊಹೊಗೆನಿ ಬ್ರೌನ್ ಮತ್ತು ಪರ್ಲ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಒಟ್ಟಿನಲ್ಲಿ ರೆನಾಲ್ಟ್ ಸಂಸ್ಥೆಯು ಎಸ್‌ಯುವಿ ಪ್ರಿಯರನ್ನು ಸೆಳೆಯುವ ಉದ್ದೇಶದೊಂದಿಗೆ ಕ್ಯಾಪ್ಚರ್ ಕಾರುಗಳ ಖರೀದಿ ಮೇಲೆ ವಿಶೇಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕ್ಯಾಪ್ಚರ್ ಕಾರು ಯಾವ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳಲಿವೆ ಎಂಬುವುದನ್ನು ಕಾಯ್ದುನೋಡಬೇಕಿದೆ.


Click it and Unblock the Notifications