ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ರೆನಾಲ್ಟ್ ಸಂಸ್ಥೆಯು ತನ್ನ ಜನಪ್ರಿಯ ಕಾರು ಆವೃತ್ತಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಡಸ್ಟರ್ ಎಸ್‌ಯುವಿ ಮೇಲೆ ಗರಿಷ್ಠ ಮಟ್ಟದ ಆಫರ್‌ಗಳನ್ನು ನೀಡುತ್ತಿದೆ. ರೆನಾಲ್ಟ್ ಸದ್ಯ ಫೇಸ್‌ಲಿಫ್ಟ್ ಆವೃತ್ತಿಗಳ ಬಿಡುಗಡೆಯ ಸಿದ್ದತೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಸ್ಟಾಕ್ ಪ್ರಮಾಣವನ್ನು ಕರಗಿಸಲು ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ.

ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ಫೇಸ್‌ಲಿಫ್ಟ್ ಆವೃತ್ತಿಗಳ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲು ಮುಂದಾಗಿರುವ ರೆನಾಲ್ಟ್ ಸಂಸ್ಥೆಯು ಡಸ್ಟರ್, ಕ್ವಿಡ್ ಮತ್ತು ಕ್ಯಾಚ್ಟರ್ ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆಯ ತವಕದಲ್ಲಿದ್ದು, ಇದರಿಂದಾಗಿಯೇ ಹಳೆಯ ಸ್ಟಾಕ್ ಮೇಲೆ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದೆ. ಹಾಗಾದ್ರೆ ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದ ಡಿಸ್ಕೌಂಟ್ ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ಡಸ್ಟರ್ ಕಂಪ್ಯಾಕ್ಟ್ ಎಸ್‌ಯುವಿ

ರೆನಾಲ್ಟ್ ಸಂಸ್ಥೆಯು ಡಸ್ಟರ್ ಮಾದರಿ ಮೇಲೆ ಗರಿಷ್ಠ ರೂ.1 ಲಕ್ಷದ ತನಕ ಡಿಸ್ಕೌಂಟ್ ನೀಡಲಾಗಿದ್ದು, ಪ್ರತಿ ಡೀಸೆಲ್ ವೆರಿಯೆಂಟ್ ಮೇಲೂ ಈ ಡಿಸ್ಕೌಂಟ್ ಲಭ್ಯವಿದೆ. ಹಾಗೆಯೇ ಡಸ್ಟರ್ ಪೆಟ್ರೋಲ್ ಆವೃತ್ತಿಗಳ ಮೇಲೆ ರೂ.30 ಸಾವಿರ ಡಿಸ್ಕೌಂಟ್ ಲಭ್ಯವಿರಲಿದೆ.

ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ಕ್ಯಾಪ್ಚರ್ ಮತ್ತು ಲೊಡ್ಜಿ

ಕ್ರಾಸ್ಓವರ್ ಎಸ್‌ಯುವಿ ಮಾದರಿಯಾದ ಕ್ಯಾಚ್ಚರ್ ಮತ್ತು ಲೊಡ್ಜಿ ಎಂಪಿವಿ ಮೇಲೆ ರೂ.50 ಸಾವಿರ ಗರಿಷ್ಠ ಮಟ್ಟದ ಡಿಸ್ಕೌಂಟ್ ನೀಡಲಾಗಿದ್ದು, ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳು ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಬಿಡುಗಡೆಯಾಗುತ್ತಿವೆ.

ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ಕ್ವಿಡ್ ಹ್ಯಾಚ್‌ಬ್ಯಾಕ್

ಎಂಟ್ರಿ ಲೆವಲ್ ಕಾರುಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ಕ್ವಿಡ್ ಕಾರು ಆಕರ್ಷಕ ಬೆಲೆ ಮತ್ತು ಹೆಚ್ಚಿನ ಮಟ್ಟದ ಮೈಲೇಜ್‌ನೊಂದಿಗೆ ಹ್ಯಾಚ್‌ಬ್ಯಾಕ್ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಕಾರಿನ ಮೇಲೆ ರೆನಾಲ್ಟ್ ಸಂಸ್ಥೆಯು ರೂ.20 ಸಾವಿರ ಡಿಸ್ಕೌಂಟ್ ಜೊತೆಗೆ ಸೀಮಿತ ಅವಧಿಯಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ 4 ವರ್ಷಗಳ ಕಾಲ ಉಚಿತ ಸರ್ವಿಸ್ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ.

ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ಪೇಟಿಎಂನಲ್ಲಿ ಬುಕ್ ಮಾಡಿದ್ರೆ ಹೆಚ್ಚು ಲಾಭ..!

ಹೌದು, ರೆನಾಲ್ಟ್ ಸಂಸ್ಥೆಯ ಕಾರುಗಳ ಮೇಲೆ ಇನ್ನು ಹೆಚ್ಚಿನ ಡಿಸ್ಕೌಂಟ್ ಬಯಸುವ ಗ್ರಾಹಕರಿಗೆ ಸುವರ್ಣವಕಾಶ ನೀಡಲಾಗಿದ್ದು, ಪೇಟಿಮಿಂ ಮೂಲಕ ಬುಕ್ಕ್ ಮಾಡಿದ್ದಲ್ಲಿ ಹೆಚ್ಚುವರಿ ರೂ.5 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ.

ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ಈ ಮೇಲಿನ ಆಫರ್‌ಗಳು ಸೀಮಿತ ಅವಧಿಗೆ ಮಾತ್ರವೇ ಲಭ್ಯವಿರಲಿದ್ದು, ಡೀಲರ್ಸ್ ಮಟ್ಟದಲ್ಲಿ ಇನ್ನು ಕೆಲವು ಹೆಚ್ಚುವರಿ ಆಫರ್‌ಗಳು ದೊರೆಯುವ ಸಾಧ್ಯತೆಗಳಿವೆ. ಹೀಗಾಗಿ ಕಾರು ಖರೀದಿಗೂ ಮುನ್ನ ಆಫರ್ ಬೆಲೆಗಳ ಮೇಲೆ ಕೂಲಂಕುಶವಾಗಿ ವಿಚಾರಿಸದ ನಂತರವೇ ಮುಂದಿನ ವ್ಯವಹಾರ ಕೈಗೊಳ್ಳಿ.

ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ಇನ್ನು ರೆನಾಲ್ಟ್ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಫೇಸ್‌ಲಿಫ್ಟ್ ಆವೃತ್ತಿಗಳು ಸೇರಿದಂತೆ ಒಟ್ಟು ಐದು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಇದೀಗ ಮುಂದಿನ ವಾರ ಬಿಡುಗಡೆಯಾಗಲಿರುವ ಡಸ್ಟರ್ ಫೇಸ್‌ಲಿಫ್ಟ್ ಕೂಡಾ ಒಂದಾಗಿದ್ದು, ವಿನೂತನ ಸೌಲಭ್ಯಗಳನ್ನು ಹೊತ್ತು ಬರುತ್ತಿರುವ ಫೇಸ್‌ಲಿಫ್ಟ್ ಆವೃತ್ತಿಯು ಹಲವು ಕಾರಣಗಳಿಂದಾಗಿ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಡಸ್ಟರ್ ಆವೃತ್ತಿಯು ಈಗಾಗಲೇ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್ ಮಾದರಿಯಲ್ಲೇ ಹೊಸ ಡಸ್ಟರ್ ಫೇಸ್‌ಲಿಫ್ಟ್‌ನ್ಲಲೂ ತುಸು ಬದಲಾವಣೆ ತರಲಾಗಿದೆ. 2020ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮಗಳಿಗೆ ಅನುಗುಣವಾಗಿಯೇ ಹೊಸ ಕಾರನ್ನು ಅಭಿವೃದ್ಧಿಗೊಳಿಸಲಾಗಿದ್ದು, ಉತ್ಪಾದನಾ ಗುಣಮಟ್ಟದ ಜೊತೆಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಗಮನಹರಿಸಲಾಗಿದೆ.

ರೆನಾಲ್ಟ್ ಡಸ್ಟರ್ ಖರೀದಿ ಮೇಲೆ ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್

ಫೇಸ್‌ಲಿಫ್ಟ್ ಡಸ್ಟರ್ ಕಾರು ಈ ಬಾರಿ ಹೊಸದಾಗಿ ತ್ರಿ ಸ್ಲಾಟ್ ಕ್ರೋಮ್ ಗ್ರಿಲ್ ಡಿಸೈನ್ ಪಡೆದುಕೊಂಡಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡ್ಯುಯಲ್ ಟೋನ್ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ಸ್ ಮತ್ತು ಕ್ರೋಮ್ ಸ್ಟ್ರಿಪ್, ಏರ್ ಡ್ಯಾಮ್ ಮತ್ತು ಸ್ಕೀಡ್ ಪ್ಲೇಟ್ ಪಡೆದುಕೊಂಡಿದೆ.

Article Published On: Saturday, July 6, 2019, 11:21 [IST]
English summary
Renault Offering Massive discounts. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+