ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ತನ್ನ ಜನಪ್ರಿಯ ಡಸ್ಟರ್ ಎಸ್‌ಯುವಿ ಕಾರಿನ 2019ರ ಆವೃತ್ತಿಯನ್ನು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ನವೀಕರಿಸಿ ಬಿಡುಗಡೆ ಮಾಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆರ್‌ಎಕ್ಸ್ಎಸ್ ಡೀಸೆಲ್ ಆವೃತ್ತಿಯಲ್ಲಿ ಎಎಂಟಿ ಆಯ್ಕೆಯನ್ನು ಪರಿಚಯಿಸಿದೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಡಸ್ಟರ್ ಆವೃತ್ತಿಯು ಈಗಾಗಲೇ ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಡಸ್ಟರ್ ಸರಣಿಯಲ್ಲಿ ತುಸು ಬದಲಾವಣೆ ತರಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

ಡಸ್ಟರ್ ಹೊಸ ಕಾರುಗಳಲ್ಲಿ ಅಂಡ್ರಾಯಿಡ್ ಆಟೋ ಪ್ಲೇ ಮತ್ತು ಆ್ಯಪಲ್ ಕಾರ್‌ಪ್ಲೇ ಗಳಿಗೆ ಸರ್ಪೊಟ್ ಮಾಡಬಲ್ಲ ಟಚ್‌ಸ್ಕೀನ್ ಇನ್ಫೋಟೈನ್‌ಮೆಂಟ್ ಸೌಲಭ್ಯವನ್ನು ಸೇರಿಸಲಾಗಿದ್ದು, ಖರೀದಿಗೆ ಲಭ್ಯವಿರುವ ಒಟ್ಟು 9 ವೆರಿಯೆಂಟ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ಎಬಿಎಸ್ ಮತ್ತು ಇಬಿಡಿ ಅಳವಡಿಸಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

ಡಸ್ಟರ್ ಕಾರುಗಳಲ್ಲಿ ಒಟ್ಟು 3 ಪೆಟ್ರೋಲ್ ಆವೃತ್ತಿಗಳು ಮತ್ತು 6 ಡೀಸೆಲ್ ಆವೃತ್ತಿಗಳು ಖರೀದಿಗೆ ಲಭ್ಯವಿದ್ದು, ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7,99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 13.09 ಲಕ್ಷಕ್ಕೆ ಖರೀದಿಸಬಹುದು.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

2019ರ ಡಸ್ಟರ್ ಕಾರಿನ ಬೆಲೆಗಳು(ದೆಹಲಿ ಎಕ್ಸ್‌ಶೋರೂಂ)

ಕಾರು ಆವೃತ್ತಿಗಳು ಬೆಲೆಗಳು
ಪೆಟ್ರೋಲ್ ಆರ್‌ಎಕ್ಸ್ಇ ರೂ. 7,99,900
ಪೆಟ್ರೋಲ್ ಆರ್‌ಎಕ್ಸ್ಎಸ್ ರೂ. 9,19,900
ಪೆಟ್ರೋಲ್ ಆರ್‌ಎಕ್ಸ್‌ಎಸ್ ಸಿವಿಟಿ ರೂ. 9,99,900
ಡೀಸೆಲ್ 85ಪಿಎಸ್ ಆರ್‌ಎಕ್ಸ್‌ಇ ರೂ. 9,19,900
ಡೀಸೆಲ್ 85ಪಿಎಸ್ ಆರ್‌ಎಕ್ಸ್ಎಸ್ ರೂ. 9,99,900
ಡೀಸೆಲ್ 85ಪಿಎಸ್ ಆರ್‌ಎಕ್ಸ್‌ಜೆಡ್ ರೂ. 11,19,900
ಡೀಸೆಲ್ 110ಪಿಎಸ್ ಆರ್‌ಎಕ್ಸ್‌ಎಸ್ (ಆಟೋಮ್ಯಾಟಿಕ್) ರೂ. 12,09,900
ಡೀಸೆಲ್ 110ಪಿಎಸ್ ಆರ್‌ಎಕ್ಸ್‌ಜೆಡ್ ರೂ. 12,09,900
ಡೀಸೆಲ್ 110ಪಿಎಸ್ ಆರ್‌ಎಕ್ಸ್‌ಜೆಡ್ (ಆಲ್ ವೀಲ್ಹ್ ಡ್ರೈವ್) ರೂ. 13,09,900
ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

ಇನ್ನು ಹೊಸ ಡಸ್ಟರ್ ಪರಿಚಯಿಸಿರುವ ರೆನಾಲ್ಟ್ ಸಂಸ್ಥೆಯು ಬೇಡಿಕೆಯಿಲ್ಲದ ಡಸ್ಟರ್ ಆವೃತ್ತಿಯ ಕೆಲವು ಡೀಸೆಲ್ ಆವೃತ್ತಿಗಳನ್ನು ತೆಗೆದು ಹಾಕಿದ್ದು, ಇದರಲ್ಲಿ ಹೊಸದಾಗಿ ಪೆಟ್ರೋಲ್ ಮಾದರಿಯ ಆರ್‌ಎಕ್ಸ್ಎಸ್ ಆವೃತ್ತಿಯಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಆರ್‌ಎಕ್ಸ್ಎಸ್ ಡೀಸೆಲ್ ಆವೃತ್ತಿಯಲ್ಲಿ ಎಎಂಟಿ ಆಯ್ಕೆ ನೀಡಿದೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

ಎಂಜಿನ್ ಸಾಮರ್ಥ್ಯ

ಡಸ್ಟರ್ ಕಾರಿನಲ್ಲಿ 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಪೆಟ್ರೋಲ್ ಆವೃತ್ತಿಗಳು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ 105-ಬಿಎಚ್‌ಪಿ ಮತ್ತು 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

ಹಾಗೆಯೇ ಡೀಸೆಲ್ ಕಾರುಗಳು 1.5-ಲೀಟರ್ ಎಂಜಿನ್ ಹೊಂದಿದ್ದರೂ ಸಹ ಎರಡು ಮಾದರಿಯ ಪವರ್ ಮೋಡ್‌ಗಳನ್ನು ಹೊಂದಿದ್ದು, ಕಡಿಮೆ ಪವರ್ ಮಾದರಿಯ ಎಂಜಿನ್ 84-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಮತ್ತು ಹೆಚ್ಚು ಪವರ್ ಪ್ರೇರಿತ ಎಂಜಿನ್ ಮಾದರಿಯು 108-ಬಿಎಚ್‌ಪಿ, 248-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

ಡೀಸೆಲ್ ಕಾರುಗಳಲ್ಲೂ ಸಹ ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಕೂಡಾ ತುಸು ದುಬಾರಿ ಎನ್ನಿಸುತ್ತವೆ.

MOST READ: 102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ರೆನಾಲ್ಟ್ ಡಸ್ಟರ್

ಒಟ್ಟಿನಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಗರಿಷ್ಠ ಮಟ್ಟದ ಮಾರಾಟವಾಗದಿದ್ದರೂ ಬೇಡಿಕೆಯಲ್ಲಿ ನಿರ್ದಿಷ್ಟ ಮಟ್ಟದ ಮಾರಾಟ ಪ್ರಮಾಣವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿರುವ ಡಸ್ಟರ್ ಕಾರುಗಳು ಈ ಬಾರಿ ಹೊಸತನಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಮಾರುತಿ ಸುಜುಕಿ ಎಸ್ ಕ್ರಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಟಿಯುವಿ300 ಪೈಪೋಟಿ ನೀಡುವ ತವಕದಲ್ಲಿದೆ.

Article Published On: Thursday, February 7, 2019, 11:27 [IST]
English summary
2019 Renault Duster Launched In India At Rs 7.99 Lakh. Read in Kannda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+