ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ರೆನಾಲ್ಟ್ ಸಂಸ್ಥೆಯು ಕಳೆದ ವಾರವಷ್ಟೇ ತನ್ನ ಜನಪ್ರಿಯ ಕ್ವಿಡ್ ಹ್ಯಾಚ್‌ಬ್ಯಾಕ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಹೊಸ ಕಾರಿಗಾಗಿ ಗ್ರಾಹಕರ ಬೇಡಿಕೆ ಅನುಸಾರ ಹಲವು ಪ್ರೀಮಿಯಂ ಅಕ್ಸೆಸರಿಸ್‌ಗಳನ್ನು ಬಿಡುಗಡೆಗೊಳಿಸಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿರುವ ಕ್ವಿಡ್ ಫೇಸ್‌ಲಿಫ್ಟ್ ಕಾರಿನಲ್ಲಿ ರೆನಾಲ್ಟ್ ಸಂಸ್ಥೆಯು ಅತಿ ಕಡಿಮೆ ಬೆಲೆಯಲ್ಲಿ ಹಲವು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಿದ್ದರೂ ಗ್ರಾಹಕರ ಬೇಡಿಕೆ ಮೇರೆಗೆ ಮತ್ತಷ್ಟು ಪ್ರೀಮಿಯಂ ಆಕ್ಸೆಸರಿಸ್‌ಗಳನ್ನು ಪರಿಚಯಿಸಲಾಗಿದ್ದು, ಕಾರಿನ ಅಂದವನ್ನು ಹೆಚ್ಚಿಸಲು ಇವು ಸಹಕಾರಿಯಾಗಿವೆ. ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಹೆಚ್ಚುವರಿ ಆಕ್ಸೆಸರಿಸ್ ಖರೀದಿ ಮೇಲೆ ತುಸು ದುಬಾರಿ ದರಗಳನ್ನು ವಿಧಿಸಲಾಗಿದ್ದು, ಇವು ಕಾರಿನ ಗುಣಮಟ್ಟಕ್ಕೆ ಮತ್ತಷ್ಟು ಮೆರಗು ತರಲಿವೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಫ್ರಂಟ್ ಗ್ರಿಲ್ ಕ್ರೋಮ್ ಗಾರ್ನಿಷ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಹೆಡ್‌‌ಲ್ಯಾಂಪ್ ಕ್ರೋಮ್, ORVM ಕ್ರೋಮ್, ರೂಫ್ ರೈಲ್, ಸ್ಪಾಯ್ಲರ್, ಟೈಲ್ ಗೇಟ್ ಕ್ರೋಮ್, ಟೈಲ್ ಲ್ಯಾಂಪ್ ಕ್ರೋಮ್, ವಿಂಡ್ ಡಿಫ್ಲೆಕ್ಟರ್, ವಿಂಡೋ ಫ್ರೇಮ್ ಕಿಟ್, ಬಾಡಿ ಸೈಡ್ ಕ್ಲ್ಯಾಡಿಂಗ್ ಖರೀದಿಸಬಹುದಾಗಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಜೊತೆಗೆ ಅಲಾಯ್ ವೀಲ್ಹ್, ಫ್ಲೆಂಡರ್ ಕ್ಲ್ಯಾಡಿಂಗ್, ಫ್ರಂಟ್ ಬಂಪರ್ ಕಾರ್ನ್ ಪ್ರೋಜೆಕ್ಟರ್, ಗೇರ್ ಬೆಝಲ್ ಕ್ರೋಮ್, ಲೋವರ್ ಡೋರ್ ಕ್ಲ್ಯಾಡಿಂಗ್, ಮಡ್ ಫ್ಯಾಪ್, ORVM ಬ್ಲಿಂಕರ್, ಅಂಡರ್ ಬಾಡಿ ಲೈಟ್, ಕಾರ್ಪೆಟ್ ಮ್ಯಾಟ್, ಕಾರ್ ಕವರ್, 3ಡಿ ಮ್ಯಾಟ್ ಕೂಡಾ ಖರೀದಿಗೆ ಲಭ್ಯವಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಇನ್ನು ಮಾರುತಿ ಸುಜುಕಿ ನಿರ್ಮಾಣದ ಎಸ್-ಪ್ರೆಸ್ಸೊ ಬಿಡುಗಡೆಯಾದ ಬೆನ್ನಲ್ಲೇ ರೆನಾಲ್ಟ್ ಕ್ವಿಡ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಬೆಲೆ ವಿಚಾರವಾಗಿ ಎಂಟ್ರಿ ಲೆವಲ್ ಕಾರು ಮಾದರಿಗಳಲ್ಲಿ ಕ್ವಿಡ್ ಫೇಸ್‌ಲಿಫ್ಟ್ ಮತ್ತಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ಕ್ವಿಡ್ ಫೇಸ್‌ಲಿಫ್ಟ್ ಆವೃತ್ತಿಯು ಸ್ಟ್ಯಾಂಡರ್ಡ್ ಮತ್ತು ಕ್ಲಿಂಬರ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ಪ್ರಮುಖ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ವಿವಿಧ ಮಾದರಿಯ ಬೆಲೆಗಳನ್ನು ಪಡೆದುಕೊಂಡಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿರುವ ಕ್ವಿಡ್ ಮಾದರಿಯು ಫೇಸ್‌ಲಿಫ್ಟ್ ಮೂಲಕ ಮತ್ತಷ್ಟು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.2.83 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.4.84 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಸ್ಟ್ಯಾಂಡರ್ಡ್ ಮಾದರಿಯಲ್ಲಿ 0.8-ಲೀಟರ್ ಸಾಮರ್ಥ್ಯದ ಎಸ್‌ಟಿಡಿ 0.8 ಲೀಟರ್, ಆರ್‌ಎಕ್ಸ್ಇ 0.8 ಲೀಟರ್, ಆರ್‌ಎಕ್ಸ್ಎಲ್ 0.8 ಲೀಟರ್, ಆರ್‌ಎಕ್ಸ್‌ಟಿ 0.8 ಲೀಟರ್, ಆರ್‌ಎಕ್ಸ್‌ಟಿ 1.0-ಲೀಟರ್, ಆರ್‌ಎಕ್ಸ್‌ಟಿ ಇಸಿ-ಆರ್ ಮತ್ತು ಕ್ಲಿಂಬರ್ ಆವೃತ್ತಿಯಲ್ಲಿ ಕ್ಲಿಂಬರ್ ಎಟಿ, ಕ್ಲಿಂಬರ್ ಇಸಿ-ಆರ್ ಆವೃತ್ತಿಗಳನ್ನು ಖರೀದಿಸಬಹುದು.

ಕ್ವಿಡ್ ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳು

ಈ ಬಾರಿ ಹಲವು ಬದಲಾವಣೆಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಕ್ವಿಡ್ ಫೇಸ್‌ಲಿಫ್ಟ್ ಮಾದರಿಯಲ್ಲಿ ಸ್ಲಿಕ್ ಎಲ್ಇಡಿ ಡಿಆರ್‌ಎಸ್, ಮುಂಭಾಗದ ಬಂಪರ್‌‌ಗೆ ತಾಗುವಂತೆ ಮರುವಿನ್ಯಾಸಗೊಳಿಸಲಾದ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟ್‌ಅಪ್ ಈ ಬಾರಿ ಪ್ರಮುಖ ಆಕರ್ಷಣೆಯಾಗಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಹಾಗೆಯೇ ಮುಂಭಾಗದ ಗ್ರಿಲ್ ಕೂಡಾ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಗ್ರಿಲ್‌ಗೆ ಹೊಂದಿಕೊಂಡಂತೆ ನೀಡಲಾಗಿರುವ ತಿಳುವಾದ ಕ್ರೋಮ್ ಸ್ಟ್ರೀಪ್, ಏರ್ ಇನ್‌ಟೆಕ್, ಕಪ್ಪು ಬಣ್ಣದ ಫ್ಲಕ್ಸ್ ಸ್ಕಫ್ ಪ್ಲೇಟ್ ನೀಡಿರುವುದು ಎಸ್‌ಯುವಿ ಕಾರಿನ ವಿನ್ಯಾಸಕ್ಕೆ ಕಾರಣವಾಗಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಇನ್ನು ಕಾರಿನ ಸೈಡ್ ಪ್ರೋಫೈಲ್ ಬಗೆಗೆ ಹೇಳುವುದಾದರೇ ಕ್ವಿಡ್ ಫೇಸ್‌ಲಿಫ್ಟ್‌ನಲ್ಲಿ ಸ್ಟೀಲ್ ವೀಲ್ಹ್, ಕಾಟ್ರಾಸ್ಟ್ ಕಲರ್ಡ್ ಒಆರ್‌ವಿಎಂಎಸ್, ಸಿ-ಶೇಫ್ಡ್ ಎಲ್ಇಡಿ ಟೈಲ್‌ಗೆಟ್ಸ್ ಮತ್ತು ಹೊಸ ಡಿಸೈನ್ ಪ್ರೇರಿತ ರಿಯರ್ ಬಂಪರ್ ನೀಡಲಾಗಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಹೊಸ ಕಾರಿನಲ್ಲಿ ಹೊರಭಾಗದ ವಿನ್ಯಾಸದಲ್ಲಿ ಮಾತ್ರವಲ್ಲದೇ ಒಳಭಾಗದ ವಿನ್ಯಾಸದಲ್ಲೂ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, 0.8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ರೈಬರ್‌ನಿಂದ ಎರವಲು ಪಡೆಯಲಾದ ಸ್ಟೀರಿಂಗ್ ವೀಲ್ಹ್, ಹೊಸ ವಿನ್ಯಾಸದ ಫ್ಯಾಬ್ರಿಕ್ ಸೀಟ್‌ಗಳನ್ನು ನೀಡಲಾಗಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಖರೀದಿಗೆ ಲಭ್ಯವಿರುವ ಬಣ್ಣಗಳು

ಒಟ್ಟು ಆರು ಬಣ್ಣಗಳಲ್ಲಿ ಲಭ್ಯವಿರುವ ಕ್ವಿಡ್ ಫೇಸ್‌ಲಿಫ್ಟ್ ಮಾದರಿಯು ಬ್ಲ್ಯೂ, ಫ್ಲೈರಿ ರೆಡ್, ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಬ್ರೊನ್ಜ್ ಮತ್ತು ಎಲೆಕ್ಟ್ರಿಕ್ ಬ್ಲ್ಯೂ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಕ್ವಿಡ್ ಫೇಸ್‌ಲಿಫ್ಟ್ ಕಾರಿಗಾಗಿ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ

ಈ ಮೂಲಕ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್‌ ಕಾರುಗಳಲ್ಲಿ ವಿಶೇಷ ಎನ್ನಿಸಲಿರುವ ಕ್ವಿಡ್ ಫೇಸ್‌ಲಿಫ್ಟ್ ಮಾದರಿಯು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮತ್ತು ಹ್ಯುಂಡೈ ಸ್ಯಾಂಟ್ರೊ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಸತತ ಕುಸಿತ ಕಂಡಿರುವ ರೆನಾಲ್ಟ್ ಕಾರು ಮಾರಾಟ ಪ್ರಮಾಣವನ್ನು ಸುಧಾರಿಸಲು ಇದು ನೆರವಾಗಲಿದೆ.

More from DriveSpark

Article Published On: Thursday, October 17, 2019, 16:39 [IST]
English summary
Renault Kwid Facelift Accessories Details Revealed In New Video. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+