ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಮೊದಲ ಟೀಸರ್ ಇಲ್ಲಿದೆ ನೋಡಿ..

ರೆನಾಲ್ಟ್ ಇಂಡಿಯಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಲಿದ್ದು, ಕೆಲವು ಹಿಂದಷ್ಟೆ ತಮ್ಮ ಸಬ್ 4 ಮೀಟರ್ ಎಂಪಿವಿ ಕಾರಿಗೆ ಟ್ರೈಬರ್ ಎಂಬ ಹೆಸರನ್ನು ಇಡಲಾಯಿತು. ರೆನಾಲ್ಟ್ ಸಂಸ್ಥೆಯು ತಮ್ಮ ಟ್ರೈಬರ್ ಎಂಪಿವಿ ಕಾರನ್ನು ಇದೇ ವರ್ಷದ ಜುಲೈ ಮಾಸದಲ್ಲಿ ಬಿಡುಗಡೆ ಮಾಡುವ ಆಲೋಚನೆಯಲಿದ್ದು, ತನ್ನ ಗ್ರಾಹಕರಿಗಾಗಿ ಈ ಕಾರಿನ ಅಧಿಕೃತ ಟೀಸರ್ ಒಂದನ್ನು ಹೊರ ಹಾಕಿದೆ.

ಮಧ್ಯಮ ಗಾತ್ರದ ಹಲವು ಕಾರು ಮಾದರಿಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿರುವ ರೆನಾಲ್ಟ್ ಸಂಸ್ಥೆಯು ಲೊಡ್ಜಿ ಎಂಪಿವಿ ಕಾರುಗಳ ಮಾರಾಟದಲ್ಲಿ ತುಸು ಹಿನ್ನೆಡೆ ಅನುಭವಿಸಿದೆ ಅಂದ್ರೆ ತಪ್ಪಾಗುವುದಿಲ್ಲ. ಇದೇ ಕಾರಣಕ್ಕಾಗಿ ಕಾರು ಮಾರಾಟದಲ್ಲಿ ಭಾರೀ ಬದಲಾವಣೆಗೆ ನಿರ್ಧರಿಸಿರುವ ರೆನಾಲ್ಟ್ ಈ ಬಾರಿ ಹೊಸ ಯೋಜನೆಗೆ ಕೈಹಾಕಿದೆ. ಹೊಸ ಕಾರು ಉತ್ಪನ್ನದೊಂದಿಗೆ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿರುವ ರೆನಾಲ್ಟ್ ಸಂಸ್ಥೆಯು ವಿನೂತನ ಶೈಲಿಯ 7 ಸೀಟರ್ ಮಾದರಿಯ ಮಿನಿ ಎಂಪಿವಿ ಕಾರು ಮಾದರಿಯೊಂದನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಮೊದಲ ಟೀಸರ್ ಇಲ್ಲಿದೆ ನೋಡಿ..

ರೆನಾಲ್ಟ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಹೊಸ ಎಂಪಿವಿ ಟ್ರೈಬರ್ ಕಾರನ್ನು ಸದ್ಯಕ್ಕೆ ಆರ್‌ಬಿಸಿ ಎನ್ನುವ ಕೋಡ್ ನೆಮ್ ಆಧಾರ ಮೇಲೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಕೆಲವು ಮಹತ್ವದ ಮಾಹಿತಿಗಳನ್ನು ಈ ಹಿಂದೆ ಬಹಿರಂಗ ಪಡೆಸಿತ್ತು.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಮೊದಲ ಟೀಸರ್ ಇಲ್ಲಿದೆ ನೋಡಿ..

ರೆನಾಲ್ಟ್ ಹೊಸ ಮಿನಿ ಎಂಪಿವಿ ಟ್ರೈಬರ್ ಕಾರು ಕ್ವಿಡ್‌ ಕಾರಿನ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಆಧರಿಸಿ ಸಿದ್ದಗೊಂಡಿದ್ದು, ಕ್ವಿಡ್ ಕಾರಿಗಿಂತಲೂ ತುಸು ದೊಡ್ಡದಾಗಿರಲಿದೆ. ಹಾಗೆಯೇ ಲೊಡ್ಜಿ ಕಾರಿಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ನೀರಿಕ್ಷೆಯಲ್ಲಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಮೊದಲ ಟೀಸರ್ ಇಲ್ಲಿದೆ ನೋಡಿ..

ಈಗಾಗಲೇ ತಮಿಳುನಾಡಿನ ಪ್ರಮುಖ ಕಡೆಗಳಲ್ಲಿ ರೆನಾಲ್ಟ್ ಹೊಸ ಎಂಪಿವಿ ಕಾರು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ರೆನಾಲ್ಟ್ ಸಂಸ್ಥೆಯ ಸಿಎಂಎಫ್ ಎ ಪ್ಲಸ್ ಕಾರು ಉತ್ಪಾದನಾ ಪ್ಯಾರ್ಟ್‌ಫಾರ್ಮ್ ಅಡಿಯಲ್ಲಿ ಈ ಹೊಸ ಕಾರನ್ನು ಅಭಿವೃದ್ಧಿ ಮಾಡಲಾಗಿದೆಯೆಂತೆ. ಹೀಗಾಗಿ ಕಾರಿನ ವಿನ್ಯಾಸವು ಎಂಪಿವಿ ಕಾರು ಖರೀದಿದಾರರ ಗಮನಸೆಳೆಯಲಿದ್ದು, ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರಿಗೆ ತೀವ್ರ ಪೈಪೋಟಿ ನೀಡಲಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಮೊದಲ ಟೀಸರ್ ಇಲ್ಲಿದೆ ನೋಡಿ..

ಜೊತೆಗೆ ಎಂಪಿವಿ ಮಾದರಿಗಳಲ್ಲೇ ಸಣ್ಣ ಗಾತ್ರದ ಕಾರು ಆವೃತ್ತಿಯಾಗಿರುವ ರೆನಾಲ್ಟ್ ಹೊಸ ಕಾರು ಬೆಲೆ ಮತ್ತು ಎಂಜಿನ್ ಗಾತ್ರದಲ್ಲೂ ತುಸು ಬದಲಾವಣೆಯೊಂದಿಗೆ ಗ್ರಾಹಕರನ್ನು ಸೆಳೆಯುವ ವಿಶ್ವಾಸದಲ್ಲಿದ್ದು, ಲೊಡ್ಜಿ ಕಾರುಗಳ ಮಾರಾಟದಲ್ಲಿ ಆದ ಹಿನ್ನಡೆಯನ್ನು ಈ ಕಾರಿನ ಮೂಲಕ ಗ್ರಾಹಕರ ಬೇಡಿಕೆಯನ್ನು ಕಾಯ್ದುಕೊಳ್ಳಲು ಇದು ನೆರವಾಗಲಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಮೊದಲ ಟೀಸರ್ ಇಲ್ಲಿದೆ ನೋಡಿ..

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, 7 ಸೀಟರ್ ಸೌಲಭ್ಯವನ್ನು ಹೊಂದಿರುವ ರೆನಾಲ್ಟ್ ಹೊಸ ಎಂಪಿವಿ ಕಾರು ಗುಣಮಟ್ಟದ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲ್‌ಇಡಿ ಡಿಆರ್‌ಎಸ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ಪುಶ್ ಬಟನ್ ಸ್ಟಾರ್ಟ್ ಸೌಲಭ್ಯಗಳು ಇದರಲ್ಲಿವೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಮೊದಲ ಟೀಸರ್ ಇಲ್ಲಿದೆ ನೋಡಿ..

ಎಂಜಿನ್ ಸಾಮರ್ಥ್ಯ

ಹೊಸ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್ ಒದಗಿಸುವ ಸಾಧ್ಯತೆಗಳಿದ್ದು, ಇದು ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆ ಕಾಯ್ದುಕೊಳ್ಳವು ನೆರವಾಗಲಿದೆ ಎನ್ನಬಹುದು.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಮೊದಲ ಟೀಸರ್ ಇಲ್ಲಿದೆ ನೋಡಿ..

ಕಾರಿನ ಬೆಲೆಗಳು(ಅಂದಾಜು)

ಕಾರಿನ ಗುಣಮಟ್ಟ ಮತ್ತು ಎಂಜಿನ್ ಸಾಮರ್ಥ್ಯವನ್ನು ನೋಡಿದಾಗ ಹೊಸ ಕಾರಿನ ಬೆಲೆಯು ರೂ. 7 ಲಕ್ಷದಿಂದ ರೂ. 9.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹೊಸ ಕಾರುಗಳು 2019ರ ಜುಲೈ ಅಂತ್ಯಕ್ಕೆ ಖರೀದಿಗೆ ಲಭ್ಯವಾಗುವ ಬಗ್ಗೆ ರೆನಾಲ್ಟ್ ಇಂಡಿಯಾ ಸಿಇಒ ಎಂ. ವೆಂಕಟರಾಮ್ ಸುಳಿವು ನೀಡಿದ್ದಾರೆ.

Most Read Articles

Kannada
English summary
Renault Released Their First Teaser Video Of New Triber MPV. Read In Kannada
Story first published: Tuesday, May 21, 2019, 9:49 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more