ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಕಳೆದ ತಿಂಗಳ ಹಿಂದಷ್ಟೇ ರೆನಾಲ್ಟ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಟ್ರೈಬರ್ ಎಂಪಿವಿ ಕಾರನ್ನು ಅನಾವರಣಗೊಳಿಸಿದ್ದು, ಅಗಸ್ಟ್ ಆರಂಭದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಈ ನಡುವೆ ಹೊಸ ಕಾರಿನ ಅಧಿಕೃತ ಬೆಲೆಗಳ ಮಾಹಿತಿ ಕೂಡಾ ಸೋರಿಕೆಯಾಗಿದ್ದು, ಎಂಪಿವಿ ಕಾರುಗಳಲ್ಲೇ ಅತಿ ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಖಚಿತವಾಗಿದೆ.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರುಗಳಿಗೆ ವಿಶೇಷ ಬೇಡಿಕೆಯಿದ್ದು, ಕುಟುಂಬ ಸಮೇತರಾಗಿ ಪ್ರಯಾಣಿಸುವುದಕ್ಕಾಗಿ ಎಂಪಿವಿ ಕಾರುಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿಯೇ ವ್ಯಯಕ್ತಿಕ ಕಾರು ಬಳಕೆದಾರರನ್ನು ಗಮನದಲ್ಲಿಟ್ಟು ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ಸ್ ಸೌಲಭ್ಯವುಳ್ಳ ಹೊಸ ಎಂಪಿವಿ ಅಭಿವೃದ್ಧಿಗೊಳಿಸಲು ಯತ್ನಿಸಿರುವ ರೆನಾಲ್ಟ್ ಸಂಸ್ಛೆಯು ಟ್ರೈಬರ್ ಎನ್ನುವ ಹೊಸ ಕಾರು ಮಾದರಿಯನ್ನು ರಸ್ತೆಗಿಳಿಸುತ್ತಿದೆ.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಮಾಹಿತಿಗಳ ಪ್ರಕಾರ, ಹೊಸ ಟ್ರೈಬರ್ ಕಾರು ತಾಂತ್ರಿಕ ಸೌಲಭ್ಯಗಳ ಜೋಡಣೆಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.4 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಆವೃತ್ತಿಯು ರೂ. 5.8 ಲಕ್ಷ ಬೆಲೆ ಪಡೆದುಕೊಂಡಿರಲಿದ್ದು, ಮೂರನೇ ಸಾಲಿನ ಆಸನ ವ್ಯವಸ್ಥೆಯನ್ನು ಖರೀದಿಸುವ ಆಸಕ್ತ ಗ್ರಾಹಕರು ಹೆಚ್ಚುವರಿ ರೂ.6 ಸಾವಿರ ಪಾವತಿಸಬೇಕಿದೆ ಎನ್ನಲಾಗಿದೆ.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಡ್, ಡಸ್ಟರ್, ಕ್ಯಾಚ್ಚರ್ ಮತ್ತು ಲೊಡ್ಜಿ ಕಾರುಗಳನ್ನು ಮಾರಾಟ ಮಾಡುತ್ತಿರುವ ರೆನಾಲ್ಟ್ ಸಂಸ್ಥೆಯು ಕ್ವಿಡ್ ಮತ್ತು ಡಸ್ಟರ್ ಹೊರತುಪಡಿಸಿ ಇನ್ನುಳಿದ ಕಾರುಗಳ ಮಾರಾಟದಲ್ಲಿ ಅಷ್ಟಾಗಿ ಯಶಸ್ಸು ಸಾಧಿಸಿಲ್ಲ. ಇದಕ್ಕಾಗಿಯೇ ಕಾರುಗಳ ವಿನ್ಯಾಸವನ್ನು ಬದಲಿಸುತ್ತಿರುವ ರೆನಾಲ್ಟ್ ಸಂಸ್ಥೆಯು ಫೇಸ್‌ಲಿಫ್ಟ್ ಆವೃತ್ತಿಗಳನ್ನು ಅಭಿವೃದ್ದಿಗೊಳಿಸುತ್ತಿದೆ.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಹೀಗಾಗಿ ರೆನಾಲ್ಟ್ ಫೇಸ್‌ಲಿಫ್ಟ್ ಕಾರುಗಳ ಚಾರ್ಸಿ ತಂತ್ರಜ್ಞಾನವು ಸಂಪೂರ್ಣ ಬದಲಾವಣೆಗೊಂಡಿದ್ದು, ಫೇಸ್‌ಲಿಫ್ಟ್ ಕ್ವಿಡ್ ಮಾದರಿಯಲ್ಲೇ ಇದೀಗ ಅನಾವರಣಗೊಳಿಸಲಾದ ಟ್ರೈಬರ್ ಎಂಪಿವಿ ಕಾರು ಕೂಡಾ ಅಭಿವೃದ್ಧಿ ಹೊಂದಿದೆ. ಹೊಸ ಕಾರುಗಳ ಅಭಿವೃದ್ಧಿಗಾಗಿ ರೆನಾಲ್ಟ್ ಸಿಎಂಎಫ್-ಎ ಪ್ಲಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಕ್ವಿಡ್ ಮಾದರಿಯಲ್ಲೇ ಇರುವ ಟ್ರೈಬರ್ ಕಾರಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ 7 ಸೀಟರ್ ಸೌಲಭ್ಯವನ್ನು ಜೋಡಿಸಲಾಗಿದೆ.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಕಾರಿನ ಉದ್ದಳತೆ ಮತ್ತು ತೂಕ

ಹೊಸ ಕಾರಿನ ಮೇಲೆ ತೆರಿಗೆ ತಗ್ಗಿಸಲು ಹೊಸ ಕಾರನ್ನು 4 ಮೀಟರ್‌ಗಿಂತಲೂ ಹೆಚ್ಚು ವಿಸ್ತರಣೆ ಮಾಡದಿರಲು ನಿರ್ಧರಿಸಿರುವ ರೆನಾಲ್ಟ್ ಸಂಸ್ಥೆಯು ಟ್ರೈಬರ್ ಕಾರನ್ನು 3,990-ಎಂಎಂ ಉದ್ದ, 1,739-ಎಂಎಂ ಅಗಲ, 1,643-ಎಂಎಂ ಎತ್ತರ, 2,636-ಎಂಎಂ ವೀಲ್ಹ್‌ಬೆಸ್ ಮತ್ತು 182-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಒದಗಿಸಿದ್ದು, ಸಿಎಂಎಫ್-ಎ ಪ್ಲಾಟ್‌ಫಾರ್ಮ್ ಬಳಕೆಯಿಂದಾಗಿ ಹೊಸ ಕಾರು 947 ಕೆಜಿ ತೂಕ ಪಡೆದುಕೊಂಡಿದೆ.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಇನ್ನು ಹೊಸ ಟ್ರೈಬರ್ ಕಾರಿನಲ್ಲಿ 15-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ರೂಫ್ ರೈಲ್ಸ್, ಮ್ಯಾಟೆ ಬ್ಲ್ಯಾಕ್ ಕ್ಲ್ಯಾಡಿಂಗ್, ವೀಲ್ಹ್ ಆರ್ಚ್, ಸಿಗ್ನಲ್ ಇಂಡಿಕೇಟರ್, ರೀವರ್ಸ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಮನಸೆಳೆಯಲಿದ್ದು, ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ(ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್) ಖರೀದಿಗೆ ಲಭ್ಯವಿರಲಿದೆ.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಕಾರಿನ ಒಳಾಂಗಣ ವಿನ್ಯಾಸ

ಟ್ರೈಬರ್ ಕಾರು ಡ್ಯುಯಲ್ ಟೋನ್ ಇಂಟಿರಿಯರ್ ಜೋಡಿಸಲಾಗಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸಿಲ್ವರ್ ಟ್ರಿಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌‌ಪ್ಲೇ, 7.8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಲಾಗಿದೆ.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಆಸನ ಸೌಲಭ್ಯ

7-ಸೀಟರ್ ಸೀಟರ್ ಮಾದರಿಯಾಗಿರುವ ಟ್ರೈಬರ್ ಕಾರು ದೂರದ ಪ್ರಯಾಣಕ್ಕೆ ಅಷ್ಟಾಗಿ ಅನುಕೂಲಕರವಾಗಿಲ್ಲವಾದರೂ 5 ಜನ ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದಾಗಿದ್ದು, 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ನಿರ್ಮಾಣ ಮಾಡಿಕೊಳ್ಳಬಹುದು.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಎಂಜಿನ್ ಸಾಮರ್ಥ್ಯ

1.0-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟ್ರೈಬರ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಬಿಡುಗಡೆಯಾದ ನಂತರವಷ್ಟೇ ಗ್ರಾಹಕರ ಬೇಡಿಕೆ ಮೇರೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಿದೆ.

ಅಗಸ್ಟ್ ಆರಂಭದಲ್ಲಿ ರೆನಾಲ್ಟ್ 7 ಸೀಟರ್ ಟ್ರೈಬರ್ ಬಿಡುಗಡೆ ಪಕ್ಕಾ

ಸುರಕ್ಷಾ ಸೌಲಭ್ಯಗಳು

ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್, ಕೀ ಲೆಸ್ ಎಂಟ್ರಿ, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ಗಳನ್ನು ನೀಡಲಾಗಿದೆ.

Source:autocarindia

Article Published On: Tuesday, July 9, 2019, 20:03 [IST]
English summary
Renault Triber India launch slated for August 2019. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+