ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ರೆನಾಲ್ಟ್ ನಿರ್ಮಾಣದ ಟ್ರೈಬರ್ ಮಿನಿ ಎಂಪಿವಿ ಕಾರು ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬಿಡುಗಡೆಗೊಂಡು ಐದು ತಿಂಗಳ ಬಳಿಕ ಮೊದಲ ಬಾರಿಗೆ ಹೊಸ ಕಾರಿನ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ಬೆಲೆ ಏರಿಕೆ ಮುಂದಾಗಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಮುಂಬರುವ ಜನವರಿ 1ರಿಂದಲೇ ಬೆಲೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದು, ಇದೀಗ ರೆನಾಲ್ಟ್ ಕೂಡಾ ಟ್ರೈಬರ್ ಕಾರಿನ ಬೆಲೆಯಲ್ಲಿ ರೂ.10 ಸಾವಿರ ಏರಿಕೆ ಮಾಡಿದೆ. ಬೆಲೆ ಹೆಚ್ಚಳವು ಹೊಸ ವರ್ಷದ ಆರಂಭದಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹೊಸ ವರ್ಷದ ಸಂಭ್ರಮಕ್ಕಾಗಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ಟ್ರೈಬರ್ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಎಸ್ ಮತ್ತು ಎರ್‌ಎಕ್ಸ್‌ಜೆಡ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.95 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು 6.49 ಲಕ್ಷ ಬೆಲೆ ಹೊಂದಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ಬೆಲೆ ಏರಿಕೆಯ ನಂತರ ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.95 ಲಕ್ಷ ಬೆಲೆಯನ್ನೇ ಮುಂದುವರಿಸಲಾಗಿದ್ದು, ಇನ್ನುಳಿದ ಮೂರು ವೆರಿಯೆಂಟ್‌ಗಳ ಬೆಲೆಗಳಲ್ಲಿ ಮಾತ್ರವೇ ರೂ.10 ಸಾವಿರ ಏರಿಕೆ ಮಾಡಲಾಗಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ಟ್ರೈಬರ್ ವೆರಿಯೆಂಟ್‌ಗಳು ಮತ್ತು ಬದಲಾದ ಬೆಲೆಗಳು

ವೆರಿಯೆಂಟ್‌ಗಳು - ಬೆಲೆ ಏರಿಕೆಗೂ ಮೊದಲು - ಬೆಲೆ ಏರಿಕೆ ನಂತರ

ಆರ್‌ಎಕ್ಸ್ಇ - ರೂ. 4.95 ಲಕ್ಷ - ರೂ. 4.95 ಲಕ್ಷ

ಆರ್‌ಎಕ್ಸ್ಎಲ್ - ರೂ.5.49 ಲಕ್ಷ - ರೂ. 5.59 ಲಕ್ಷ

ಆರ್‌ಎಕ್ಸ್‌ಟಿ - ರೂ.5.99 ಲಕ್ಷ - ರೂ. 6.09 ಲಕ್ಷ

ಆರ್‌ಎಕ್ಸ್‌ಜೆಡ್ - ರೂ. 6.53 ಲಕ್ಷ - ರೂ. 6.63 ಲಕ್ಷ

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಟ್ರೈಬರ್ ಕಾರು 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ರೆನಾಲ್ಟ್ ಸಂಸ್ಥೆಯು ಫೇಸ್‌ಲಿಫ್ಟ್ ಕಾರುಗಳ ಚಾರ್ಸಿ ತಂತ್ರಜ್ಞಾನವನ್ನು ಸಂಪೂರ್ಣ ಬದಲಾವಣೆಗೊಳಿಸಿದ್ದು, ಫೇಸ್‌ಲಿಫ್ಟ್ ಕ್ವಿಡ್ ಮಾದರಿಯಲ್ಲೇ ಇದೀಗ ಟ್ರೈಬರ್ ಎಂಪಿವಿ ಕಾರು ಕೂಡಾ ಹೊಸ ತಂತ್ರಜ್ಞಾನದಡಿಯಲ್ಲೇ ಅಭಿವೃದ್ಧಿಗೊಳಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರಿಂದಲೇ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿರುವ ಹೊಸ ಕಾರು ಇದುವರೆಗೆ 18,500 ಯುನಿಟ್ ಮಾರಾಟ ದಾಖಲಿಸಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ಹೊಸ ಕಾರು ತಾಂತ್ರಿಕವಾಗಿ ಬಲಿಷ್ಠವಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, ಪವರ್ ವಿಂಡೋ, ಕೀ ಲೆಸ್ ಎಂಟ್ರಿ, ಮೂರು ಸಾಲುಗಳಲ್ಲೂ ಎಸಿ ವೆಂಟ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ ಮತ್ತು ರಿಯರ್ ವಾಷ್ ವೈಪರ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ಟ್ರೈಬರ್ ಕಾರು ಡ್ಯುಯಲ್ ಟೋನ್ ಇಂಟಿರಿಯರ್ ಜೋಡಣೆ ಹೊಂದಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸಿಲ್ವರ್ ಟ್ರಿಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌‌ಪ್ಲೇ, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಲಾಗಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ಹಾಗೆಯೇ ಹೊಸ ಕಾರಿನಲ್ಲಿ 15-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ರೂಫ್ ರೈಲ್ಸ್, ಮ್ಯಾಟೆ ಬ್ಲ್ಯಾಕ್ ಕ್ಲ್ಯಾಡಿಂಗ್, ವೀಲ್ಹ್ ಆರ್ಚ್, ಸಿಗ್ನಲ್ ಇಂಡಿಕೇಟರ್, ರೀವರ್ಸ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಮನಸೆಳೆಯಲಿದ್ದು, ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ(ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್) ಖರೀದಿಗೆ ಲಭ್ಯವಿರಲಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬೆಲೆಯಲ್ಲಿ ಮತ್ತೆ ಏರಿಕೆ

ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.

Most Read Articles

Kannada
English summary
Renault Triber Prices Hiked. Read in Kannada.
Story first published: Wednesday, December 18, 2019, 11:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X