ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಭಾರತದಲ್ಲಿ ಸದ್ಯ ಮಧ್ಯಮ ಗಾತ್ರದ ಎಸ್‌ಯುವಿಗಳ ಸದ್ದು ಜೋರಾಗಿದ್ದು, ಸ್ಕೋಡಾ ಕೂಡಾ ಇದೇ ನಿಟ್ಟಿನಲ್ಲಿ ಹೊಸ ಮಾದರಿಯ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆ ಮಾಡುತ್ತಿದೆ. ಸದ್ಯ ಉತ್ಪಾದನೆ ಹಂತದಲ್ಲಿರುವ ಹೊಸ ಕಾರಿನ ಮೊದಲ ಟೀಸರ್ ಇಂದು ಬಿಡುಗಡೆಯಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

2019ರ ಮಾರ್ಚ್‌ನಲ್ಲಿ ನಡೆಯಲಿರುವ ಜಿನೆವಾ ಆಟೋ ಮೇಳದಲ್ಲಿ ಸ್ಕೋಡಾ ಬಿಡುಗಡೆ ಮಾಡಲಿರುವ ವಿಷನ್ ಎಕ್ಸ್ ಕಾನ್ಸೆಪ್ಟ್ ಮಾದರಿಯು ಅನಾವರಣಗೊಳ್ಳಲಿದ್ದು, ಹೊಸ ಕಾರಿಗೆ ಕಾಮಿಕ್ ಎಂದು ನಾಮಕರಣ ಮಾಡಲಾಗಿದೆ ಎಂಬ ಮಹತ್ವದ ಮಾಹಿತಿ ಲಭ್ಯವಾಗಿದೆ.

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕೊಡಿಯಾಕ್ ಎಸ್‌ಯುವಿ ಮಾದರಿಯಲ್ಲೇ ಮುಂಭಾಗದ ಡಿಸೈನ್ ಹೊಂದಿರುವ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕಾರು ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಭಾರತದಲ್ಲಿ ಜನಪ್ರಿಯವಾಗುತ್ತಿರುವ ಹ್ಯುಂಡೈ ಕ್ರೇಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಾಮಿಕ್ ಕಾರನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ಸ್ಕೋಡಾ ಇಂಡಿಯಾ ಮತ್ತಷ್ಟು ಮಾಹಿತಿ ಬಿಡುಗಡೆ ಮಾಡಲಿದೆ.

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಇತ್ತ ಫೋಕ್ಸ್‌ವ್ಯಾಗನ್ ಜೊತೆಗಿನ 'ಇಂಡಿಯಾ 2.0 ಪ್ರೋಜೆಕ್ಟ್' ಸಹ ಭಾರತೀಯ ಗ್ರಾಹಕರನ್ನು ಗುರಿಯಾಗಿಸಿ ಅಗ್ಗದ ಬೆಲೆಯ ಕಾರುಗಳನ್ನು ಅಭಿವೃದ್ಧಿ ಮಾಡಲು ಒಪ್ಪಿಗೆ ಸೂಚಿಸಿರುವ ಸ್ಕೋಡಾ, ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ MQB ಪ್ಲ್ಯಾಟ್‌ಫಾರ್ಮ್ ಆಧರಿಸಿ ಕಾರು ಅಭಿವೃದ್ಧಿ ಮಾಡುತ್ತಿರುವ ಉತ್ತಮ ಬೆಳವಣಿಗೆ ಎನ್ನಬಹುದು.

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಅಗ್ಗದ ಬೆಲೆಗಳಲ್ಲಿ ಉತ್ತಮ ಎಸ್‌ಯುವಿಗಳ ಖರೀದಿಗೆ ಭಾರತೀಯ ಗ್ರಾಹಕರು ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ.12 ಲಕ್ಷದಿಂದ ರೂ.16 ಲಕ್ಷದ ಒಳಗಿನ ಕಾರು ಮಾದರಿಗಳು ಬಹುತೇಕ ಯಶಸ್ವಿಯಾಗಿರುವುದು ಕಾಮಿಕ್ ಕಾರು ಅಭಿವೃದ್ದಿಗೆ ಪ್ರೇರಣೆಯಾಗಿದೆ.

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಹೀಗಾಗಿಯೇ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸಹ ಭಾರತೀಯ ಮಾರುಕಟ್ಟೆ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗಾಗಿ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, 'ಇಂಡಿಯಾ 2.0 ಪ್ರೋಜೆಕ್ಟ್' ಎನ್ನುವ ಬೃಹತ್ ಯೋಜನೆ ಒಂದನ್ನು ಸಿದ್ದಪಡಿಸಿದೆ.

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಈ ಹೊಸ ಯೋಜನೆಯ ಜವಾಬ್ದಾರಿಯನ್ನು ಸ್ಕೋಡಾ ಸಂಸ್ಥೆಯೇ ವಹಿಸಿಕೊಂಡಿದ್ದು, ಮುಂಬರುವ ಫೋಕ್ಸ್‌ವ್ಯಾಗನ್ ಸಂಸ್ಥೆಯ ಪ್ರತಿಯೊಂದು ಕಾರು ಮಾದರಿಯು ಸಹ ಸ್ಕೋಡಾ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿವೆ.

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಇದರಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯ ಟಿ-ಕ್ರಾಸ್ ಎಸ್‌ಯುವಿ ಕೂಡಾ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಇದೇ ಕಾರಿನ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಸ ಕಾಮಿರ್ ಕಾರಿನಲ್ಲೂ ಸಹ ಬಳಕೆ ಮಾಡುವ ಸಾಧ್ಯತೆಗಳಿವೆ.

MOST READ: ಭಾರತದಲ್ಲಿ ಹಾರುವ ಕಾರುಗಳನ್ನು ಬಿಡಲು ಸಿದ್ದವಾದ ಪಿಎಲ್-ವಿ ಲಿಬರ್ಟಿ

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಭಾರತವನ್ನು ಹೊರತುಪಡಿಸಿ ಜಾಗತಿಕ ಮಾರುಕಟ್ಟೆಗಳಿಗಾಗಿ ಪೆಟ್ರೋಲ್ ಜೊತೆಗೆ ಸಿಎನ್‌ಜಿ ಹೈಬ್ರಿಡ್ ಎಂಜಿನ್ ಆಯ್ಕೆಯು ಸಹ ಹೊಸ ಕಾಮಿಕ್ ಕಾರಿನಲ್ಲಿದ್ದು, ಎಂಜಿನ್‌ ಸಾಮರ್ಥ್ಯದಲ್ಲಿ ತುಸು ಕಡಿಮೆ ಅನ್ನಿಸಿದರೂ ಸಹ ಪರ್ಫಾಮೆನ್ಸ್ ವಿಚಾರದಲ್ಲಿ ಗಮನಸೆಳೆಯಲಿವೆ.

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಬಿಡುಗಡೆ ಮತ್ತು ಬೆಲೆ(ಅಂದಾಜು)

ಮುಂಬರುವ ಮಾರ್ಚ್‌ನಲ್ಲಿ ನಡೆಯಲಿರುವ ಜಿನೆವಾ ಆಟೋ ಮೇಳದಲ್ಲಿ ಅನಾವರಣಗೊಳ್ಳಲಿರುವ ಹೊಸ ಕಾಮಿಕ್ ಕಾರು ಮೊದಲಿಗೆ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ತದನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ವರ್ಷಾಂತ್ಯಕ್ಕೆ ರಸ್ತೆಗಿಳಿಯುವ ಸಾಧ್ಯತೆಗಳಿವೆ.

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಕಾಮಿಕ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಎ‌ಸ್‌ಯುವಿ ಕಾರು..!

ಅದೇ ರೀತಿ ಫೋಕ್ಸ್‌ವ್ಯಾಗನ್ ನಿರ್ಮಾಣದ ಟಿ-ಕ್ರಾಸ್ ಎಸ್‌ಯುವಿ ಕೂಡಾ ಇದೇ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಟಿ-ಕ್ರಾಸ್ ಬಿಡುಗಡೆಯ ನಂತರವಷ್ಟೇ ಕಾಮಿಕ್ ಕಾರು ಗ್ರಾಹಕರ ಕೈಸೆೇರಲಿದೆ.

Article Published On: Saturday, January 26, 2019, 9:30 [IST]
English summary
New Skoda Kamiq SUV To Make Official Debut At Geneva Motor Show 2019. Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+