ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಹೊಸ ಕಾರುಗಳ ಉತ್ಪಾದನೆದಲ್ಲಿ ಮತ್ತು ಮಾರಾಟ ವಿಭಾಗದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಮುಂಬರುವ ಒಂದು ವರ್ಷದ ಅವಧಿಯಲ್ಲಿ ವಿವಿಧ ಮಾದರಿಯ ಐದು ಹೊಸ ಕಾರು ಮಾದರಿಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಸ್ಕೋಡಾ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯ ಜೊತೆಗೂಡಿ ಇಂಡಿಯಾ 2.0 ಎನ್ನುವ ಯೋಜನೆಗೆ ಚಾಲನೆ ನೀಡಿದ್ದು, ಕಾರು ಉತ್ಪಾದನೆಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆ ಮತ್ತು ಮಾರಾಟ ಮಳಿಗೆಗಳ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಹೀಗಾಗಿ ಹೊಸ ಯೋಜನೆ ಅಡಿ ಮತ್ತೈದು ಹೊಸ ಕಾರು ಮಾದರಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಇದಕ್ಕೆ ಪೂರಕವಾಗಿ ಹೊಸ ಕಾರುಗಳನ್ನು ಇದೇ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್‌ಗೆ ಚಾಲನೆ ನೀಡಿದ್ದು, ಕಾಮಿಕ್ ಕಾರು ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಸ್ಕೋಡಾ ಸಂಸ್ಥೆಯು ಇಂಡಿಯಾ ಸದ್ಯ 2.0 ಯೋಜನೆಗಾಗಿ ಬರೋಬ್ಬರಿ ರೂ.200 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಕಾರು ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗಾಗಿ ಫೋಕ್ಸ್‌ವ್ಯಾಗನ್ ಕೂಡಾ ಸ್ಕೋಡಾ ಜೊತೆ ಕೈಜೋಡಿಸಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಹೊಸ ಯೋಜನೆ ಅಡಿಯಲ್ಲಿ ಕಾರು ಉತ್ಪಾದನೆಯಲ್ಲಿ ಬದಲಾವಣೆ ತರುವುದಲ್ಲದೇ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿದ್ದು, ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಕರೋಕ್ ಎಸ್‌ಯುವಿ ಸೇರಿದಂತೆ ಒಟ್ಟು ಐದು ಕಾರುಗಳು ರಸ್ತೆಗಿಳಿಸಲಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಸದ್ಯ ಮಾರುಕಟ್ಟೆಯಲ್ಲಿ ಸ್ಕೋಡಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಸೆಡಾನ್, ಒಕ್ಟಿವಿಯಾ ಸೆಡಾನ್, ಸೂರ್ಪಬ್ ಸೆಡಾನ್ ಮತ್ತು ಕೊಡಿಯಾಕ್ ಎಸ್‌ಯುವಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಬಿಡುಗಡೆಯಾಗಲಿರುವ ಐದು ಕಾರುಗಳಲ್ಲಿ ಎರಡು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಾದ ಕಾರು ಮಾದರಿಗಳಾದರೆ ಇನ್ನುಳಿದ ಮೂರು ಹೊಸ ಕಾರುಗಳು ಇಂಡಿಯಾ 2.0 ಯೋಜನೆಯಡಿ ಭಾರತದಲ್ಲೇ ಸಿದ್ದಗೊಳ್ಳಲಿವೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಕೇಂದ್ರ ಸರ್ಕಾರವು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದ್ದು, 2,500 ಕಾರುಗಳನ್ನು ಯಾವುದೇ ಹೆಚ್ಚುವರಿ ತೆರಿಗೆ ಇಲ್ಲದೇ ವಿದೇಶಿ ಮಾರುಕಟ್ಟೆಗಳಿಂದ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡುವ ಅವಕಾಶ ಒದಗಿಸಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಈ ಹಿನ್ನಲೆಯಲ್ಲಿ ಬಹುತೇಕ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳು ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಕೆಲವು ಕಾರು ಮಾದರಿಗಳನ್ನು ಹೊಸ ಆಮದು ನೀತಿಯಡಿ ಮಾರಾಟ ಮಾಡಲು ನಿರ್ಧರಿಸಿವೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಸ್ಕೋಡಾ ಇಂಡಿಯಾ ಕೂಡಾ ಇದೇ ನಿಟ್ಟಿನಲ್ಲಿ ಯುರೋಪ್ ಮಾರುಕಟ್ಟೆಯಿಂದ ಎರಡು ಐಷಾರಾಮಿ ಕಾರು ಆವೃತ್ತಿಗಳನ್ನು ಆಮದು ಮಾಡಿಕೊಳ್ಳಲಿದ್ದು, ಇನ್ನುಳಿದ ಮೂರು ಕಾರು ಮಾದರಿಗಳಾದ ಕಾಮಿಕ್, ಕರೋಕ್ ಮತ್ತು ಹೊಸ ತಲೆಮಾರಿನ ರ‍್ಯಾಪಿಡ್ ಸೆಡಾನ್ ಕಾರುಗಳನ್ನು ಇಲ್ಲಿಯೇ ಉತ್ಪಾದನೆ ಮಾಡಿ ಮಾರಾಟ ಮಾಡಲಿದೆ.

MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಈ ಕುರಿತಂತೆ ಸುದ್ದಿಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡಿದ್ದ ಸ್ಕೋಡಾ ಇಂಡಿಯಾ ಅಧ್ಯಕ್ಷ ಜಾಕ್ ಹೊಲಿಸ್ ಅವರು ಮುಂದಿನ ಒಂದು ವರ್ಷದೊಳಗಾಗಿ ಐದು ಹೊಸ ಕಾರುಗಳು ಮಾರಾಟಕ್ಕೆ ಸಿದ್ದವಾಗುತ್ತಿದ್ದು, ಫೋಕ್ಸ್‌ವ್ಯಾಗನ್ ಜೊತೆಗಿನ ಇಂಡಿಯಾ 2.0 ಯೋಜನೆಯು ಹೊಸ ಭರವಸೆಗೆ ಕಾರಣವಾಗಿದೆ ಎಂದಿದ್ದರು.

MOST READ: ಬರೋಬ್ಬರಿ 12 ಕೋಟಿ ಮೌಲ್ಯದ ಬೆಂಟ್ಲಿ ಮೊಜಾನ್ ಕಾರು ಖರೀದಿಸಿದ ಬೆಂಗಳೂರು ಉದ್ಯಮಿ

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಇನ್ನು 2.0-ಇಂಡಿಯಾ ಯೋಜನೆಗಾಗಿ ಸ್ಕೋಡಾ ಸಂಸ್ಥೆಯು ರೂ.200 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯು 1 ಬಿಲಿಯನ್ ಯುರೋ(ರೂ.8 ಸಾವಿರ ಕೋಟಿ) ಬಂಡವಾಳ ಹೂಡಿಕೆಯೊಂದಿಗೆ ಹಲವು ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದೆ.

ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸ್ಕೋಡಾ ಕಾಮಿಕ್

ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಕಾರುಗಳು ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿದ್ದು, ಬೆಲೆ ವಿಚಾರವಾಗಿ ಮಹತ್ವದ ನಿರ್ಣಯ ಕೈಗೊಳ್ಳುತ್ತಿದೆ. ಒಂದು ವೇಳೆ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ರೂ.13 ಲಕ್ಷದಿಂದ ರೂ.18 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಿದ್ದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Source: Autocarindia

Most Read Articles

Kannada
Read more on ಸ್ಕೋಡಾ skoda
English summary
Skoda Kamiq SUV spied in India. Read in Kannada.
Story first published: Thursday, November 7, 2019, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more