ಬಿಡುಗಡೆಯಾದ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಚಿತ್ರಗಳು

ಫೋಕ್ಸ್ ವ್ಯಾಗನ್ ಒಡೆತನದ ಜೆಕ್ ಮೂಲದ ಕಾರು ತಯಾರಕ ಕಂಪನಿ ಸ್ಕೋಡಾ ತನ್ನ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಕಾರಿನ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಸೆಡಾನ್ ಕಾರನ್ನು ಇದೇ ತಿಂಗಳಿನಲ್ಲಿ ಅಪ್ ಡೇಟ್ ಮಾಡಲಾಗುವುದು. ಬಿಡುಗಡೆಯಾಗಿರುವ ಚಿತ್ರಗಳಲ್ಲಿ ಸೂಕ್ಷ್ಮವಾದ ಆದರೆ ಗಮನಾರ್ಹವಾದ ಅಪ್‍‍ಗ್ರೇಡ್‍‍ಗಳನ್ನು ಕಾಣಬಹುದು.

ಬಿಡುಗಡೆಯಾದ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಚಿತ್ರಗಳು

ಹೊಸ ಆವೃತ್ತಿಯಲ್ಲೂ ಸ್ಕೋಡಾ ಸೂಪರ್ಬ್ ತನ್ನ ಟ್ರೇಡ್‍‍ಮಾರ್ಕ್ ಆದ ಬಟರ್‍‍ಫ್ಲೈ ಗ್ರಿಲ್‍‍ಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಆದರೆ ಹೆಡ್ ಲೈಟ್, ಬಂಪರ್ ಮತ್ತು ಅಲಾಯ್ ವ್ಹೀಲ್‍‍ಗಳನ್ನು ಮರುವಿನ್ಯಾಸಗೊಳಿಸಲಾಗಿದೆ. 2019ರಲ್ಲಿ ಸ್ಲೊವಾಕಿಯಾದ ಬ್ರಟಿಸ್ಲಾವಾದಲ್ಲಿ ನಡೆಯಲಿರುವ ಐಐಹೆಚ್‍ಎಫ್ ಹಾಕಿ ವರ್ಲ್ಡ್ ಚಾಂಪಿಯನ್‍‍ಶಿಪ್‍‍ನಲ್ಲಿ ಅಧಿಕೃತವಾಗಿ ಹೊಸ ಸ್ಕೋಡಾ ಸೂಪರ್ಬ್ ಆವೃತ್ತಿಯನ್ನು ಅನಾವರಣಗೊಳಿಸಲಾಗುವುದು.

ಬಿಡುಗಡೆಯಾದ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಚಿತ್ರಗಳು

ಈಗಿರುವ ಸ್ಕೋಡಾ ಸೂಪರ್ಬ್ ಮಾದರಿಯನ್ನು 2015ರಿಂದ ಮಾರಾಟ ಮಾಡಲಾಗುತ್ತಿದ್ದು, ಈಗ ಅಪ್‍‍ಡೇಟ್ ಮಾಡಲಾಗುತ್ತಿದೆ. 2020ರ ಸ್ಕೋಡಾ ಸೂಪರ್ಬ್‍‍ನಲ್ಲಿ ಹೊಸ ಎಲ್‍ಇ‍‍ಡಿ ಹೆಡ್‍‍ಲೈಟ್‍‍ಗಳಿದ್ದು, ಈಗಿರುವ ಬೈಕ್ಸೆನಾನ್ ಹೆಡ್‍‍ಲೈಟ್‍‍ಗಳ ಬದಲಿಗೆ ಅಳವಡಿಸಲಾಗಿದೆ.

ಬಿಡುಗಡೆಯಾದ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಚಿತ್ರಗಳು

ಇದರ ಜೊತೆಗೆ ಡೇ ಟೈಮ್ ರನ್ನಿಂಗ್ ಲೈಟ್‍‍ಗಳು, ಅಗಲವಾದ ಬಟರ್‍‍‍ಫ್ಲೈ ಗ್ರಿಲ್ ಹೊಂದಿರಲಿದೆ. ಹಿಂಭಾಗದಲ್ಲಿ ಹೊಸ ಬಂಪರ್ ಡಿಸೈನ್, ಹೊಸ ರ್‍ಯಾಪ್ ಟೇಲ್ ಲೈಟ್ ಮತ್ತು ಬೂಟ್ ಲಿಪ್ ಮೇಲಿರುವ ಬ್ಯಾಡ್ಜ್ ಗಳ ಮೇಲೆ ಕಂಪನಿಯ ಹೆಸರನ್ನು ಹೊಂದಿರಲಿದೆ.

ಬಿಡುಗಡೆಯಾದ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಚಿತ್ರಗಳು

ಎಂಜಿನ್‍‍ನಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. 2020ರ ಸ್ಕೋಡಾ ಸೂಪರ್ಬ್ ಸಹ ಈಗಿರುವ ಎಂಜಿನ್ ಮಾದರಿಯನ್ನೇ ಹೊಂದಿರುವ ಸಾಧ್ಯತೆಗಳಿವೆ. ವದಂತಿಗಳ ಪ್ರಕಾರ, ಫೋಕ್ಸ್ ವ್ಯಾಗನ್ ಪಸ್ಸಾಟ್ ಜಿ‍‍ಟಿ‍ಇ ನಲ್ಲಿ ಅಳವಡಿಸಲಾಗಿದ್ದ 1.4 ಲೀಟರ್ ಟಿ‍ಎಸ್‍ಐ ಪೆಟ್ರೋಲ್ - ಎಲೆಕ್ಟ್ರಿಕ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ ಜಂಟಿಯಾಗಿ 250 ಬಿಹೆಚ್‍‍ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಾಹನವು ಎಲೆಕ್ಟ್ರಿಕ್ ಮೋಟಾರ್‍‍ನ ಸಹಾಯದಿಂದ 50 ಕಿ.ಮೀ ದೂರವನ್ನು ಕ್ರಮಿಸುತ್ತದೆ.

ಬಿಡುಗಡೆಯಾದ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಚಿತ್ರಗಳು

2020ರ ಹೊಸ ಸೂಪರ್ಬ್ ಆವೃತ್ತಿಯ ಇಂಟಿರಿಯರ್‍‍ನಲ್ಲಿ ಹಲವಾರು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಇದರಲ್ಲಿ ನಿರೀಕ್ಷಿಸಬಹುದಾದ ಫೀಚರ್‍‍ಗಳೆಂದರೆ - ಲಾರ್ಜ್ ಟಚ್‍‍ಸ್ಕ್ರೀನ್ ಇನ್ಫೊಟೆನ್‍‍ಮೆಂಟ್ ಸಿಸ್ಟಂ, ಆಂಡ್ರಾಯಿಡ್ ಆಟೋ, ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಮತ್ತು ಒವರ್ ದಿ ಏರ್ ಫೀಚರ್‍‍ಗಳು. ಜೊತೆಗೆ ಇತರೆ ಕ್ರಿಯೆಚರ್ ಕಂಫರ್ಟ್‍‍ಗಳಿರಲಿವೆ.

MOST READ: ಪ್ರೀಮಿಯಂ ಕಾರುಗಳ ಲೀಸ್ ಸೇವೆ ಆರಂಭಿಸಲಿದೆ ಫಿಯೆಟ್

ಬಿಡುಗಡೆಯಾದ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಚಿತ್ರಗಳು

ಸ್ಕೋಡಾ ಮೋಟರ್ಸ್‍‍ನಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನವೆಂದರೆ ಅದು ಸ್ಕೋಡಾ ಸೂಪರ್ಬ್. 2020ರ ಹೊಸ ಸೂಪರ್ಬ್ ಆವೃತ್ತಿಯನ್ನು ಮುಂದಿನ ವರ್ಷ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ ಫೋಕ್ಸ್ ವ್ಯಾಗನ್ ಪಸ್ಸಾಟ್, ಹೋಂಡಾ ಅಕಾರ್ಡ್ ಹೈಬ್ರಿಡ್ ಮತ್ತು ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಾಹನಗಳಿಗೆ ಪೈಪೋಟಿ ನೀಡಲಿದೆ.

ಬಿಡುಗಡೆಯಾದ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಚಿತ್ರಗಳು

ಬೆಲೆಗಳ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯು ದೊರೆತಿಲ್ಲ, ಆದರೆ ಭಾರತದಲ್ಲಿನ ಎಕ್ಸ್ ಶೋ ರೂಂ ದರದಂತೆ ರೂ.36 ಲಕ್ಷಗಳಾಗಬಹುದು.

ಬಿಡುಗಡೆಯಾದ ಹೊಸ ಆವೃತ್ತಿಯ ಸ್ಕೋಡಾ ಸೂಪರ್ಬ್ ಚಿತ್ರಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಚಿತ್ರದಲ್ಲಿ ಈ ಸೆಡಾನ್ ವಾಹನವು ದೊಡ್ಡದಾಗಿ, ಕಠಿಣವಾಗಿ ಕಾಣಿಸುತ್ತದೆ. ಫೋಕ್ಸ್ ವ್ಯಾಗನ್, ಸ್ಕೋಡಾ ಸೂಪರ್ಬ್ ವಾಹನವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದೆ. ಈಗ ಇದರ ಅಪ್‍‍ಡೇಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸರಿಯಾದ ಸಮಯ. ಈಗ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ವಾಹನಗಳಲ್ಲಿ ಒಂದಾಗಿದೆ, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಆವೃತ್ತಿಯು ಸಹ ಹೆಚ್ಚು ಮಾರಾಟವಾಗುವ ನಿರೀಕ್ಷೆಯಿದೆ.

Article Published On: Friday, May 10, 2019, 18:43 [IST]
English summary
Skoda Superb Facelift Official Sketches Revealed — The Czechs Take Over The 2019 IIHF Championship - Read in kannada
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+