ಬಿಡುಗಡೆಯಾದವು ಹೊಸ ಸ್ಕೋಡಾ ಕಾರುಗಳು

ಸ್ಕೋಡಾ ಇಂಡಿಯಾ ಕಾರ್ಪೊರೇಟ್ ಆವೃತ್ತಿಗಳಾದ ಸೂಪರ್ಬ್ ಮತ್ತು ಕೊಡಿಯಾಕ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಭಾರತ ಎಕ್ಸ್ ಶೋರೂಂ ಪ್ರಕಾರ ಸ್ಕೋಡಾ ಸುಪರ್ಬ್ ಕಾಪೋರೇಟ್ ಆವೃತ್ತಿಯ ಬೆಲೆ ರೂ.25.99 ಲಕ್ಷ ವಾಗಿದ್ದರೆ ಕೊಡಿಯಾಕ್ ಆವೃತ್ತಿಗೆ ರೂ.32.99 ಲಕ್ಷ ದರ ಹೊಂದಿದೆ.

ಬಿಡುಗಡೆಯಾದವು ಹೊಸ ಸ್ಕೋಡಾ ಕಾರುಗಳು

ಸ್ಕೋಡಾ ಸೂಪರ್ಬ್ ಮತ್ತು ಕೊಡಿಯಾಕ್ ಕಾಪೋರೇಟ್ ಆವೃತ್ತಿಗಳು ಬೆಸ್-ಸ್ಪೆಕ್ ಸ್ಟೈಲ್ ರೂಪಾಂತರವನ್ನು ಆಧರಿಸಿದೆ. ಸ್ಕೋಡಾ ಈ ಹಿಂದೆ ಸೂಪರ್ಬ್ ಮತ್ತು ಕೊಡಿಯಾಕ್ ಮತ್ತು ಕೊಡಿಯಾಕ್ ಕಾರ್ಪೋರೇಟ್ ಆವೃತ್ತಿಗಳನ್ನು ವಿಭಿನ್ನ ಸಮಯದಲ್ಲಿ ಬಿಡುಗಡೆಗೊಳಿಸಿದ್ದರು. ಬ್ರ್ಯಾಂಡ್‍‍ನ ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಮಾತ್ರ ಸೀಮಿತಗೊಳಿಸಲಾಗಿದೆ. ಸ್ಕೋಡ್ ಈಗ ಎರಡು ಕಾರುಗಳ ಕಾರ್ಪೊರೇಟ್ ಆವೃತ್ತಿಯನ್ನು ಹೊಸ ಗ್ರಾಹಕರಿಗೆ ಆಹ್ವಾನಿಸಿದೆ.

ಬಿಡುಗಡೆಯಾದವು ಹೊಸ ಸ್ಕೋಡಾ ಕಾರುಗಳು

ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿಯು 2.0 ಲೀಟರ್ ಟಿ‍ಡಿಐ ಡೀಸೆಲ್ ಎಂಜಿನ್ 150 ಬಿಎಚ್‍ಪಿ ಪವರ್ ಮತ್ತು 340 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍‍ನ್‍ನೊಂದಿಗೆ 7-ಸ್ಪೀಡ್ ಡಿ‍ಎಸ್‍ಜಿ ಸ್ಟ್ಯಾಂಡರ್ಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾದವು ಹೊಸ ಸ್ಕೋಡಾ ಕಾರುಗಳು

ಸ್ಕೋಡಾ ಸುಪರ್ಬ್ ಕಾರ್ಪೊರೇಟ್ ಆವೃತ್ತಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.8 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ 180 ಬಿಎಚ್‍ಪಿ ಮತ್ತು 250 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದು ಆಯ್ಕೆ 2.0 ಲೀಟರ್ ಟಿಡಿಐ ಡೀಸೆಲ್ ಯು‍ನಿ‍ಟ್ 177 ಬಿಎ‍ಚ್‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್‍ಗಳಲ್ಲಿ ಸ್ಟ್ಯಾಂಡರ್ಡ್ 7-ಸ್ಪೀಡ್ ಡಿಎಸ್‍ಜಿ ಆಟೋ‍ಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾದವು ಹೊಸ ಸ್ಕೋಡಾ ಕಾರುಗಳು

ಸ್ಕೋಡಾ ಸುಪರ್ಬ್ ಮತ್ತು ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿಗಳು ಸ್ಟೈಲ್ ರೂಪಾಂತರದಂತೆ ಫೀಚರ್ಸ್ ಮತ್ತು ಉಪಕರಣಗಳನ್ನು ಹೊಂದಿದೆ. ಇದರಲ್ಲಿ 3 ಝೋನ್ ಕ್ಲೈಮೇಟ್ ಕಂಟ್ರೋಲ್, 8.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್‍‍ಮೆಂಟ್ ಸಿಸ್ಟಂ, ಆ್ಯಪಲ್ ಕಾರ್‍‍ಪ್ಲೇ ಮತ್ತು ಮೀರರ್‍‍‍ಲಿಂಕ್ ಮತ್ತು ಮಡಚಿಕೊಳ್ಳಬಹುದಾದ ಡ್ರೈವೇರ್ ಸೀಟ್ ಅಳವಡಿಸಲಾಗಿದೆ.

ಬಿಡುಗಡೆಯಾದವು ಹೊಸ ಸ್ಕೋಡಾ ಕಾರುಗಳು

ಹೊಸ ಸ್ಕೋಡಾ ಸೂಪರ್ಬ್ ಮತ್ತು ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿಗಳು ಪ್ರಯಾಣಿಕರ ಸುರಕ್ಷತೆಗಾಗಿ 9 ಏರ್‍‍ಬ್ಯಾಗ್, ಎ‍ಬಿಎಸ್ ಜೊತೆ ಇ‍ಬಿಡಿ , ಹೈಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.

ಬಿಡುಗಡೆಯಾದವು ಹೊಸ ಸ್ಕೋಡಾ ಕಾರುಗಳು

ಸ್ಟೈಲ್ ರೂಪಾಂತರಕ್ಕೆ ಹೋಲಿಸಿದರೆ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಆವೃತ್ತಿ ಬೆಲೆಯಲ್ಲಿ ರೂ.1.80 ಲಕ್ಷ ಕಡಿಮೆ ಇದೆ. ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿಯು ಸ್ಟ್ಯಾಂಡರ್ಡ್ ಆವೃತ್ತಿಗಿಂತ ರೂ.35.36 ಲಕ್ಷ ಕಡಿಮೆ ಇದೆ.

ಬಿಡುಗಡೆಯಾದವು ಹೊಸ ಸ್ಕೋಡಾ ಕಾರುಗಳು

ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ಕೂಡಾ ಸ್ಟ್ಯಾಂಡರ್ಡ್ ಆವೃತ್ತಿಗೆ ಹಬ್ಬಗಳ ವಿಶೇಷ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಿದ್ದಾರೆ. ಸ್ಕೋಡಾ ಕಂಪನಿಯ ಕೊಡಿಯಾಕ್, ಸೂಪರ್ಬ್ ಮತ್ತು ರ್ಯಾಪಿಡ್ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದಾರೆ.

ಬಿಡುಗಡೆಯಾದವು ಹೊಸ ಸ್ಕೋಡಾ ಕಾರುಗಳು

ಕಾರ್ಪೊರೇಟ್ ಆವೃತ್ತಿಯ ಮಾದರಿಗಳಾದ ಸ್ಕೋಡಾ ಸೂಪರ್ಬ್ ಮತ್ತು ಕೊಡಿಯಾಕ್ ಕಾರುಗಳನ್ನು ಕಳೆದ ಬಾರಿ ಅಸ್ವಿತ್ವದಲ್ಲಿ ಇರುವ ಗ್ರಾಹಕರಿಗಾಗಿ ಬಿಡುಗಡೆಗೊಳಿಸಿದ್ದರು. ಆದರೆ ಹೊಸ ಮಾದರಿಗಳನ್ನು ಬಿಡುಗಡೆ ಮಾಡವ ಮೂಲಕ ಗ್ರಾಹಕರನ್ನು ಹೆಚ್ಚಿಸಿದೆ. ಹಬ್ಬದ ಸಮಯದಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ರಿಯಾಯಿತಿ ಮತ್ತು ಕೊಡುಗೆಗಳನು ಘೋಷಿಸಿದೆ. ಸ್ಕೋಡಾ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ತಂತ್ರಗಳನ್ನು ರೂಪಿಸುತ್ತದೆ.

Article Published On: Tuesday, September 24, 2019, 18:03 [IST]
English summary
Skoda Superb & Kodiaq Corporate Edition Launched In India: Prices Start At Rs 25.99 Lakh - Read in Kannada
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+