ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಸ್ಕೋಡಾ ಕಂಪನಿಯು ಇತ್ತೀಚಿಗಷ್ಟೇ ಹೊಸ ಸೂಪರ್ಬ್ ವಾಹನವನ್ನು ಅನಾವರಣಗೊಳಿಸಿದೆ. ಈ ಸೆಡಾನ್ ವಾಹನದಲ್ಲಿ ಹೊಸ ತಂತ್ರಜ್ಞಾನ ಹಾಗೂ ಹೊಸ ಇಂಟಿರಿಯರ್‍‍ಗಳನ್ನು ಅಳವಡಿಸಲಾಗಿದೆ. ಇದೇ ಮೊದಲ ಬಾರಿಗೆ, ಹೊಸ ಬಗೆಯ ಎಲ್‍ಇ‍‍ಡಿ ಮ್ಯಾಟ್ರಿಕ್ಸ್ ಹೆಡ್‍‍ಲೈಟ್‍‍ಗಳನ್ನು ಹಾಗೂ ಇತರ ಅಸಿಸ್ಟಂನ್ಸ್ ಸಿಸ್ಟಂಗಳನ್ನು ಹೊಸ ಸ್ಕೋಡಾ ಸೂಪರ್ಬ್ ವಾಹನದಲ್ಲಿ ಅಳವಡಿಸಲಾಗಿದೆ.

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಸೂಪರ್ಬ್ ವಾಹನವು ಆಲ್ ಎಲ್‍ಇ‍‍ಡಿ ಮ್ಯಾಟ್ರಿಕ್ಸ್ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದುತ್ತಿರುವ ಸ್ಕೋಡಾದ ಮೊದಲ ವಾಹನವಾಗಿದೆ. ಅಡಾಪ್ಟಿವ್, ಕ್ರಿಸ್ಟಲಿನ್ ಎಫೆಕ್ಟ್, ಎಲ್‍ಇ‍‍ಡಿ ಮಾಟ್ರಿಕ್ಸ್ ಹೆಡ್ ಲೈಟ್‍‍ಗಳು ವಿವಿಧ ರೀತಿಯ ಚಾಲನೆಗೆ ಹಾಗೂ ವೆದರ್ ಕಂಡಿಷನ್‍‍ಗಳಿಗೆ ವಿಭಿನ್ನ ಬಗೆಯ ಲೈಟ್‍‍ಗಳನ್ನು ನೀಡುತ್ತವೆ. ಹೊಸ ಸ್ಕೋಡಾ ಸೂಪರ್ಬ್‍ ವಾಹನದಲ್ಲಿ ಹೊಸ ಆವೃತ್ತಿಯ ಪ್ರಿಡಿಕ್ಟಿವ್ ಕ್ರೂಸ್ ಕಂಟ್ರೋಲ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಈ ತಂತ್ರಜ್ಞಾನವು ವಿಂಡ್‍‍ಸ್ಕ್ರೀನ್‍ ಕ್ಯಾಮರಾದಲ್ಲಿರುವ ಚಿತ್ರಗಳನ್ನು ಹಾಗೂ ನ್ಯಾವಿಗೇಶನ್‍‍ನಲ್ಲಿರುವ ಡೇಟಾವನ್ನು ಬಳಸಿ, ಸ್ಪೀಡ್ ರೆಸ್ಟ್ರಿಕ್ಷನ್ ಹಾಗೂ ಕಾರ್ನರ್‍‍ಗಳನ್ನು ಗುರುತಿಸಿ ಆಟೊಮ್ಯಾಟಿಕ್ ಆಗಿ ವೇಗವನ್ನು ನಿಯಂತ್ರಿಸುತ್ತದೆ.

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಈ ವಾಹನದಲ್ಲಿ ಮಲ್ಟಿ ಲೇನ್ ರೋಡುಗಳಿಗಾಗಿ ಹೊಸ ಎಮರ್ಜೆನ್ಸಿ ಅಸಿಸ್ಟ್ ಸಿಸ್ಟಂ‍‍ಗಳಿವೆ. ಈ ಫೀಚರ್‍‍ನಿಂದಾಗಿ ಎಮರ್ಜೆನ್ಸಿ ಸಂದರ್ಭಗಳಲ್ಲಿ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಲಿದೆ. ಇದು ರಸ್ತೆಯ ಉಳಿದ ಲೇನ್‍‍ಗಳಲ್ಲಿರುವ ಟ್ರಾಫಿಕ್ ಅನ್ನು ಗಣನೆಗೆ ತೆಗೆದುಕೊಂಡು, ಕಾರನ್ನು ಸುರಕ್ಷಿತವಾಗಿ ನಿಲ್ಲಿಸುತ್ತದೆ.

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಇದಕ್ಕಾಗಿ ಲೇನ್ ಅಸಿಸ್ಟ್, ಅಸಿಸ್ಟ್ ಹಾಗೂ ರಾಡಾರ್ ಸೆನ್ಸಾರ್‍‍ಗಳನ್ನು ಬಳಸಿಕೊಳ್ಳುತ್ತದೆ. ಇದರ ಜೊತೆಗೆ ಹೊಸ ಸ್ಕೋಡಾ ಸೂಪರ್ಬ್‍‍ನಲ್ಲಿ ಫ್ರಂಟ್ ಅಸಿಸ್ಟ್ ಇದ್ದು, ಇದರಲ್ಲಿ ಪ್ರೆಡಿಕ್ಟಿವ್ ಪೆಡೆಸ್ಟ್ರಿಯನ್ ಪ್ರೊಟೆಕ್ಷನ್ ಅಳವಡಿಸಲಾಗಿದೆ. ಹೊಸ ಸೂಪರ್ಬ್‍ ವಾಹನದಲ್ಲಿ ಎಲೆಕ್ಟ್ರೊ ಮೆಕಾನಿಕಲ್ ಬ್ರೇಕ್ ಬೂಸ್ಟರ್ ಇದ್ದು, ಏರೋಡೈನಾಮಿಕ್ ಹಿಂಭಾಗದ ಆಕ್ಸೆಲ್ ಸಸ್ಪೆಂಷನ್ ಕವರ್ ಮಾಡಿ, ಚಾಲನೆಯ ಸ್ಥಿರತೆಯನ್ನು ಸುಧಾರಿಸುತ್ತದೆ.

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಪ್ಲಗ್ ಇನ್ ಹೈಬ್ರಿಡ್ ಮಾದರಿಯಾದ ಸ್ಕೋಡಾ ಸೂಪರ್ಬ್ 4, ಮೊದಲ ಪ್ರೊಡಕ್ಷನ್ ಮಾದರಿಯಾಗಿದ್ದು, ಪ್ಲಗ್ ಇನ್ ಹೈಬ್ರಿಡ್ ಡ್ರೈವ್ ಅಳವಡಿಸಲಾಗಿದೆ. 1.4 ಲೀಟರಿನ ಟಿ‍ಎಸ್‍ಐ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಜಂಟಿಯಾಗಿ 215 ಬಿಹೆಚ್‍‍ಪಿ ಪವರ್ ಉತ್ಪಾದಿಸುತ್ತವೆ. ಎಲೆಕ್ಟ್ರಿಕ್‍ ಎಂಜಿನ್‍‍ನ ವ್ಯಾಪ್ತಿಯು 55 ಕಿ.ಮೀ ಆಗಿದ್ದರೆ, ಪೆಟ್ರೋಲ್ ಎಂಜಿನ್‍‍ನ ಜೊತೆಯಲ್ಲಿ ಬಳಸಿದರೆ 850 ಕಿ.ಮೀ ವ್ಯಾಪ್ತಿ ಹೊಂದಲಿದೆ. ಲಿಥಿಯಂ ಹೈ ವೊಲ್ಟೇಜ್ ಬ್ಯಾಟರಿಯನ್ನು ಹಿಂಭಾಗದಲ್ಲಿರುವ ಆಕ್ಸೆಲ್‍‍ನ ಚಾಸೀಸ್ ಫ್ಲೋರ್‍‍ನ ಬಳಿ ಇಡಲಾಗಿದೆ.

MOST READ: ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ ಸ್ಯಾಂಗ್‍‍ಯಾಂಗ್ ಟಿವೊಲಿ

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಹೊಸ ಸ್ಕೋಡಾ ಸೂಪರ್ಬ್‍ ವಾಹನದ ಹೊರ ಭಾಗದಲ್ಲಿ ಹಲವು ಬದಲಾವಣೆಗಳಾಗಿವೆ. ಮುಂಭಾಗದ ಬಂಪರ್‍‍ಗೆ ಹೊಸ ವಿನ್ಯಾಸವನ್ನು ಅಳವಡಿಸಲಾಗಿದ್ದು, ಇದರಿಂದಾಗಿ ಕಾರಿನ ಉದ್ದವು 8 ಎಂಎಂ ನಷ್ಟು ಜಾಸ್ತಿಯಾಗಿದೆ. ಗ್ರಿಲ್‍‍ನಲ್ಲಿ ದೊಡ್ಡದಾಗಿರುವ ಡಬಲ್ ಸ್ಲಾಟ್‍‍ಗಳಿದ್ದು, ಮುಂಭಾಗದ ಬಂಪರ್‍‍ಗಿಂತ ಸ್ವಲ್ಪ ಮುಂದೆ ಬರುವಂತೆ ಅಳವಡಿಸಲಾಗಿದೆ. ಈ ಕಾರಿನಲ್ಲಿ ಹೊಸ 18 ಹಾಗೂ 19 ಇಂಚಿನ ಅಲಾಯ ವ್ಹೀಲ್‍‍ಗಳಿವೆ.

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಸೂಪರ್ಬ್‍ ವಾಹನದ ಕ್ಯಾಬಿನ್‍‍ನ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಹಾಗೂ ಡೋರ್ ಟ್ರಿಮ್ ಮೇಲೆ, ಕ್ರೋಮ್ ಹೈಲೈಟ್‍‍ಗಳಿವೆ. ಹೊಸ ಸ್ಕೋಡಾ ಸೂಪರ್ಬ್‍ ವಾಹನದಲ್ಲಿ ವರ್ಚುಯಲ್ ಕಾಕ್‍‍ಪೀಟ್ ಆಯ್ಕೆಗಳಿದ್ದು, ಖರೀದಿದಾರರಿಗೆ ಮೂರು ಭಿನ್ನ ಇನ್ಫೊಟೇನ್‍‍ಮೆಂಟ್ ಸಿಸ್ಟಂ ಆಯ್ಕೆಗಳು ಸಿಗಲಿವೆ. ಇದರಲ್ಲಿರುವ ಎರಡು ಆಯ್ಕೆಗಳು ನ್ಯಾವಿಗೇಶನ್ ಒದಗಿಸುತ್ತವೆ. ಬೊಲೆರೋ ರೇಡಿಯೊ ಹಾಗೂ ಅಮುಂಡ್‍‍ಸೆನ್ ನ್ಯಾವಿಗೇಶನ್ ಸಿಸ್ಟಂಗಳು 8 ಇಂಚಿನ ಟಚ್‍‍ಸ್ಕ್ರೀನ್‍‍ನಲ್ಲಿರಲಿವೆ.

MOST READ: ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಕೊಲಂಬಸ್ ಇನ್ಫೊಟೇನ್‍‍ಮೆಂಟ್ ಸಿಸ್ಟಂ‍‍ನಲ್ಲಿ 9.2 ಇಂಚಿನ ಟಚ್‍‍ಸ್ಕ್ರೀನ್, ಗೆಸ್ಚರ್ ಹಾಗೂ ವಾಯ್ಸ್ ಕಂಟ್ರೋಲ್, ಡಿ‍‍ವಿ‍‍ಡಿ ಪ್ಲೇಯರ್, ಮ್ಯೂಸಿಕ್‍‍‍ಗಾಗಿ ಹಾಗೂ ವೀಡಿಯೊಗಾಗಿ ಹಾರ್ಡ್ ಡ್ರೈವ್ ಗಳಿವೆ. ಸ್ಕೋಡಾದ ಸ್ಮಾರ್ಟ್ ಲಿಂಕ್ ಟೆಕ್ನಾಲಜಿಯು ಎಲ್ಲಾ ಸಿಸ್ಟಂಗಳಿಗೂ ಸ್ಟಾಂಡರ್ಡ್ ಆಗಿ ಒಂದೇ ಇರುತ್ತದೆ. ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಡಿಸ್‍‍ಪ್ಲೇ ಮೂಲಕ ಸ್ಮಾರ್ಟ್‍‍ಫೋನ್ ಆಪ್‍‍ಗಳಿಗೆ ಆಕ್ಸೆಸ್ ನೀಡುತ್ತದೆ.

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಇದರಲ್ಲಿರುವ ಇನ್ ಬಿಲ್ಟ್ ಸಿಮ್ ಕಾರ್ಡ್ ಇಂಟರ್‍‍ನೆಟ್ ಸಂಪರ್ಕ ಒದಗಿಸುವುದರ ಜೊತೆಗೆ, ವೈ-ಫೈ ಹಾಟ್‍‍ಸ್ಪಾಟ್ ಹಾಗೂ ಸ್ಕೋಡಾ ಕನೆಕ್ಟ್ ಮೋಬೈಲ್ ಆನ್‍‍ಲೈನ್ ಸರ್ವಿಸ್‍‍ಗಳಿಗೆ ಸಂಪರ್ಕ ನೀಡುತ್ತದೆ. ಈ ಕಾರು ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ, 2020ರ ಕೊನೆಯ ಭಾಗದಲ್ಲಿ ಬಿಡುಗಡೆಯಾಗುವ ಸಂಭವಗಳಿವೆ.

ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಆವೃತ್ತಿಯ ವಾಹನವನ್ನು ನೋಡಿದಾಗ ಸ್ಕೋಡಾ ಕಂಪನಿಯು ಗಮನಾರ್ಹ ಬದಲಾವಣೆಗಳನ್ನು ಮಾಡಿರುವುದು ಎದ್ದು ಕಾಣುತ್ತದೆ. ಈ ಎಲ್ಲಾ ಬದಲಾವಣೆಗಳ ನಂತರ ಕಾರು ಹೇಗೆ ಕಾರ್ಯನಿರ್ವಹಿಸಲಿದೆ ಎಂದು ಕಾದು ನೋಡಬೇಕಿದೆ.

Article Published On: Saturday, May 25, 2019, 13:01 [IST]
English summary
Skoda Unveils 2020 Superb — Tech Overload - Read in kannada
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+