ಶ್ರಮ ಕಡಿಮೆಗೊಳಿಸಲಿದೆ ಈ ಸೋಲಾರ್ ರಿಕ್ಷಾ

ಸುರೇಶ್ ಕುಮಾರ್‍‍ರವರು 2002ರಿಂದ ಐಐಟಿ ದೆಹಲಿಯಲ್ಲಿ ಜನರನ್ನು ಸಾಗಿಸಲು ಪೆಡಲ್ ರಿಕ್ಷಾ ತುಳಿಯುತ್ತಿದ್ದಾರೆ. ಆದರೆ ಈಗ ಸೋಲಾರ್ ಹೈಬ್ರಿಡ್ ರಿಕ್ಷಾ ಬಿಡುಗಡೆಗೊಳಿಸಲಾಗಿದ್ದು, ಇನ್ನೂ ಮುಂದೆ ದೆಹಲಿಯ ಐಐಟಿ ಕ್ಯಾಂಪನ್‍‍ನಲ್ಲಿ ಸುರೇಶ್ ಕುಮಾರ್‍‍ರವರ ರೀತಿಯಲ್ಲಿ ರಿಕ್ಷಾ ಎಳೆಯುವವರ ಕೆಲಸದ ಹೊರೆ ಕಡಿಮೆಯಾಗಲಿದೆ.

ಶ್ರಮ ಕಡಿಮೆಗೊಳಿಸಲಿದೆ ಈ ಸೋಲಾರ್ ರಿಕ್ಷಾ

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಯೋಜನೆಯಡಿಯಲ್ಲಿ ದೆಹಲಿಯ ಐಐಟಿ ಕ್ಯಾಂಪಸ್‍‍ನಲ್ಲಿ ರಿಕ್ಷಾಎಳೆಯುವವರಿಗೆ ಈ ವಾಹನಗಳನ್ನು ನೀಡಲು ನಿರ್ಧರಿಸಿದ ಕೇಂದ್ರ ಸರ್ಕಾರಿ ಉದ್ಯಮವಾದ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) 10 ರಿಕ್ಷಾಗಳನ್ನು ಹಸ್ತಾಂತರಿಸಿದೆ. ಈ ರಿಕ್ಷಾಗಳು ಐ‍‍ಐಟಿ ಕ್ಯಾಂಪಸ್‌ನಲ್ಲಿ ಚಲಿಸಲಿವೆ. ಸಿಇಎಲ್, ರಿಕ್ಷಾಗಳ ಮೇಲೆ ರೂಫ್‍ ಆಗಿ ಬಳಸಲು ವಿಶೇಷ 300 ವ್ಯಾಟ್‍‍ನ ಸೌರ ಫಲಕಗಳನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ.

ಶ್ರಮ ಕಡಿಮೆಗೊಳಿಸಲಿದೆ ಈ ಸೋಲಾರ್ ರಿಕ್ಷಾ

ಈ ಪ್ಯಾನೆಲ್‍‍ಗಳು, ದಿನವಿಡೀ ಚಾರ್ಜ್ ಆಗುವುದರಿಂದ, ರಿಕ್ಷಾಗಳು ಒಂದು ದಿನದಲ್ಲಿ ಚಲಿಸಬಹುದಾದ ದೂರವನ್ನು ಪರಿಣಾಮಕಾರಿಯಾಗಿ ದ್ವಿಗುಣಗೊಳಿಸಲಿವೆ. ಸೋಲಾರ್ ರಿಕ್ಷಾಗಳು, ರಿಕ್ಷಾ ಎಳೆಯುವವರ ದೈಹಿಕ ಶ್ರಮವನ್ನು ಕಡಿಮೆಗೊಳಿಸುವುದರ ಜೊತೆಗೆ ಹೆಚ್ಚು ಆದಾಯ ಗಳಿಸಲು ಸಹಾಯ ಮಾಡುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಐಟಿ ನಿರ್ದೇಶಕ ರಾಮ್ ಗೋಪಾಲ್ ರಾವ್ ಇದನ್ನು ತಂತ್ರಜ್ಞಾನ, ಸಂಪ್ರದಾಯ ಹಾಗೂ ಅನುಭೂತಿ ಸಾಮಾಜಿಕ ಉದ್ದೇಶಕ್ಕಾಗಿ ಒಟ್ಟಿಗೆ ಸೇರುವ ಉದಾಹರಣೆ ಎಂದು ಕರೆದಿದ್ದಾರೆ.

ಶ್ರಮ ಕಡಿಮೆಗೊಳಿಸಲಿದೆ ಈ ಸೋಲಾರ್ ರಿಕ್ಷಾ

ಈ ಆವಿಷ್ಕಾರವು ಸಾಂಪ್ರದಾಯಿಕ ಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸಿ ಪರಿಸರ, ಉದ್ಯೋಗದ ಅಗತ್ಯ ಹಾಗೂ ಅನುಕೂಲತೆಯ ನಡುವೆ ಸಾಮರಸ್ಯವನ್ನು ಸೃಷ್ಟಿಸಲಿವೆ ಎಂದು ಹೇಳಿದರು. ರಿಕ್ಷಾ ಎಳೆಯುವವರ ಶ್ರಮದ ಬಗ್ಗೆ ಜನರು ಕೆಟ್ಟ ಅಭಿಪ್ರಾಯ ಹೊಂದಿದ್ದಾರೆ. ಈ ಕೆಲಸವನ್ನು ನಿಲ್ಲಿಸುವಂತೆ ರಿಕ್ಷಾ ಎಳೆಯುವವರನ್ನು ಕೇಳಿದರೆ ಅವರು ಜೀವನವನ್ನು ಹೇಗೆ ನಡೆಸುತ್ತಾರೆ ಎಂಬುದು ನಮ್ಮ ಯೋಚನೆಯಾಗಿತ್ತು ಎಂದು ಅವರು ಹೇಳಿದರು.

ಶ್ರಮ ಕಡಿಮೆಗೊಳಿಸಲಿದೆ ಈ ಸೋಲಾರ್ ರಿಕ್ಷಾ

ಸೋಲಾರ್ ರಿಕ್ಷಾ ಯೋಜನೆಯನ್ನು ಉತ್ತಮವಾದ ಯೋಜನೆ ಎಂದು ಕರೆದ ಅವರು, ರಿಕ್ಷಾ ಎಳೆಯುವವರು 2002-03ರಿಂದ ಐಐಟಿ ಕ್ಯಾಂಪ‍‍ಸನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಈಗಾಗಲೇ 2 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದರಿಂದ, ರೂಫ್‍‍ಟಾಪ್ ಸೋಲಾರ್ ಬಳಸುತ್ತಿದ್ದೇವೆ ಎಂದು ತಿಳಿಸಿದರು. ಸೋಲಾರ್ ಹೈಬ್ರಿಡ್ ವ್ಯವಸ್ಥೆಯಿಂದಾಗಿ ಅಕ್ಸೆಲರೇಷನ್‍‍ಗೆ ಅನುಕೂಲವಾಗಿ, ಕಠಿಣ ಸವಾರಿಗಳ ಸಮಯದಲ್ಲಿ ರಿಕ್ಷಾವನ್ನು ಯಾವುದೇ ಶ್ರಮವಿಲ್ಲದೇ ಎಳೆಯುತ್ತದೆ ಎಂದು ಸೋಲಾರ್ ರಿಕ್ಷಾಗಳನ್ನು ತಯಾರಿಸುತ್ತಿರುವ ಸುಕೂನ್ ಸೊಲ್ಯೂಷನ್ಸ್‌ನ ಡಾ.ಅಮೋದ್ ಕುಮಾರ್ ಹೇಳಿದರು.

ಶ್ರಮ ಕಡಿಮೆಗೊಳಿಸಲಿದೆ ಈ ಸೋಲಾರ್ ರಿಕ್ಷಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ಮಾತನ್ನು ಒಪ್ಪುವ ರಿಕ್ಷಾ ಎಳೆಯುವ ಉತ್ತರ ಪ್ರದೇಶ ಮೂಲದ 45 ವರ್ಷ ವಯಸ್ಸಿನ ಕಮಲೇಶ್ ಕುಮಾರ್ ಈ ಸೋಲಾರ್ ರಿಕ್ಷಾಗಳಿಂದ ಸಹಾಯವಾಗಲಿದ್ದು, ದೈಹಿಕ ಶ್ರಮವು ಕಡಿಮೆಯಾಗಲಿದೆ ಎಂದು ಕಿರುನಗೆ ಬೀರುತ್ತಾನೆ. ಗಂಟೆಗೆ 10 ರಿಂದ 15 ಕಿ.ಮೀ ವೇಗದಲ್ಲಿ ಸಾಗುವ ಚೀನಾದಿಂದ ಆಮದು ಮಾಡಿಕೊಳ್ಳಲಾಗಿರುವ ಮೋಟರ್‌ಗಳು, ಈ ರಿಕ್ಷಾವನ್ನು 25 ಕಿ.ಮೀ ವೇಗದವರೆಗೆ ಚಲಿಸುವಂತೆ ಮಾಡಲಿವೆ ಎಂದು ಈ ರಿಕ್ಷಾಗಳನ್ನು ತಯಾರಿಸಿರುವವರು ಹೇಳಿದ್ದಾರೆ.

ಶ್ರಮ ಕಡಿಮೆಗೊಳಿಸಲಿದೆ ಈ ಸೋಲಾರ್ ರಿಕ್ಷಾ

ಈ ಸೋಲಾರ್ ರಿಕ್ಷಾದ ಬೆಲೆ ಸುಮಾರು ರೂ.1.25 ಲಕ್ಷಗಳಾಗಿದೆ. ಹೈಬ್ರಿಡ್ ರಿಕ್ಷಾದ ಬೆಲೆ ರೂ.68,000ಗಳಾಗಿದೆ. ಆದರೆ, ಈ ವಾಹನಗಳನ್ನು ದೆಹಲಿಯ ಐಐಟಿ ಕ್ಯಾಂಪಸ್‌ನ ಒಳಗೆ ಮಾತ್ರ ಚಲಾಯಿಸಬೇಕು. ಈ ಸೋಲಾರ್ ರಿಕ್ಷಾಗಳನ್ನು ಮೋಟಾರು ವಾಹನಗಳ ಕಾಯ್ದೆಯಡಿ ನೋಂದಾಯಿಸಲು ಸಾಧ್ಯವಿಲ್ಲ.

ಶ್ರಮ ಕಡಿಮೆಗೊಳಿಸಲಿದೆ ಈ ಸೋಲಾರ್ ರಿಕ್ಷಾ

ಈ ಮೊದಲು ನಾವು ಗಾಜಿಯಾಬಾದ್‌ನಲ್ಲಿರುವ ಸಾಹಿಬಾಬಾದ್‌ನಲ್ಲಿ 150 ರಿಕ್ಷಾಗಳನ್ನು ಓಡಿಸಲು ಪ್ರಯತ್ನ ಪಟ್ಟಿದ್ದೇವು. ಆದರೆ ಪೊಲೀಸರು ದಂಡ ವಿಧಿಸಿದ್ದರು. ಇನ್ನು ಮುಂದೆ ನಿಯಮಗಳಲ್ಲಿ ಬದಲಾವಣೆಗಳಾಗ ಬಹುದೆಂದು ನಾವು ಭಾವಿಸುತ್ತೇವೆ ಎಂದು ಡಾ.ಅಮೋದ್ ಕುಮಾರ್ ಹೇಳಿದರು.

Most Read Articles

Kannada
English summary
Solar rickshaws make debut on IIT-Delhi campus - Read in kannada
Story first published: Monday, July 22, 2019, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more