ಶೋರುಂ ತಲುಪುತ್ತಿರುವ ಮಹೀಂದ್ರಾ ಥಾರ್ 700 ಸ್ಪೆಷಲ್ ಎಡಿಷನ್ ಕಾರು

ಮಹೀಂದ್ರಾ & ಮಹೀಂದ್ರಾ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ತಮ್ಮ ಜನಪ್ರಿಯ ಥಾರ್ ಕಾರಿನ ಸ್ಪೆಷಲ್ ಎಡಿಷನ್ ಥಾರ್ 700 ಮಾದರಿಯನ್ನು ಬಿಡುಗಡೆ ಮಾಡುದ್ದು, ಹೆಸರಿಗೆ ತಕ್ಕ ಹಾಗೆ ಈ ಕಾರು ಕೇವಲ 700 ಯೂನಿಟ್ ಮಾತ್ರ ಮಾರಾಟಕ್ಕಿರುತ್ತದೆ. ಈ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 9.99 ಲಕ್ಷ ಬೆಲೆಯನ್ನು ಪಡೆದುಕೊಂಡಿದೆ. 4X4 ಇಂಡಿಯಾ ಗ್ರೂಪ್ ವರದಿ ಪ್ರಕಾರ ಮಹೀಂದ್ರಾ ಥಾರ್ 700 ಕಾರು ಶೋರುಂ ಅನ್ನು ತಲುಪುತ್ತಿದ್ದು, ಈ ಕುರಿತಾದ ಚಿತ್ರಗಳು ಇಲ್ಲಿವೆ ನೋಡಿ.

ಶೋರುಂ ತಲುಪ್ಪುತ್ತಿರುವ ಮಹೀಂದ್ರಾ ಥಾರ್ 700 ಸ್ಪೆಷಲ್ ಎಡಿಷನ್ ಕಾರು

ಮಹೀಂದ್ರಾ ಸಂಸ್ಥೆಯು ಸದ್ಯ ತನ್ನ ಕಾರು ಮಾರಾಟ ವಿಭಾಗದಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಥಾರ್ ಸೇರಿದಂತೆ ಹಲವು ಕಾರು ಮಾದರಿಗಳನ್ನು ನೆಕ್ಸ್ಟ್ ಜನರೇಷನ್ ವಿನ್ಯಾಸಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಅದಕ್ಕೂ ಮುನ್ನ ಥಾರ್ 700 ಎನ್ನುವ ಲಿಮಿಟೆಡ್ ಆವೃತ್ತಿಯನ್ನು ರಸ್ತೆಗಿಳಿಸಿತು.

ಶೋರುಂ ತಲುಪ್ಪುತ್ತಿರುವ ಮಹೀಂದ್ರಾ ಥಾರ್ 700 ಸ್ಪೆಷಲ್ ಎಡಿಷನ್ ಕಾರು

ಭಾರತದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಹೀಂದ್ರಾ ತನ್ನ ಆಫ್ ರೋಡ್ ಖ್ಯಾತಿಯ ಥಾರ್ ಅಭಿಮಾನಿಗಳಿಗಾಗಿ ವಿನೂತನ ಸೌಲಭ್ಯವುಳ್ಳ ಲಿಮಿಟೆಡ್ ಎಡಿಷನ್ 'ಥಾರ್ 700' ಬಿಡುಗಡೆ ಮಾಡಿದ್ದು, ಈ ಹೊಸ ಕಾರು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿವೆ.

ಶೋರುಂ ತಲುಪ್ಪುತ್ತಿರುವ ಮಹೀಂದ್ರಾ ಥಾರ್ 700 ಸ್ಪೆಷಲ್ ಎಡಿಷನ್ ಕಾರು

ಮಹೀಂದ್ರಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ 70 ವರ್ಷ ಪೂರೈಸುತ್ತಿದ್ದು, ಇದರ ಸವಿನೆನಪಿಗಾಗಿ ಆಫ್ ರೋಡ್ ಕಿಂಗ್ ಥಾರ್ ಕಾರಿನ 700 ಯನಿಟ್‌ಗಳನ್ನು ಲಿಮಿಟೆಡ್ ಎಡಿಷನ್ ಮಾದರಿಗಾಗಿ ಪರಿಚಯಿಸಿದೆ.

ಶೋರುಂ ತಲುಪ್ಪುತ್ತಿರುವ ಮಹೀಂದ್ರಾ ಥಾರ್ 700 ಸ್ಪೆಷಲ್ ಎಡಿಷನ್ ಕಾರು

1949ರಲ್ಲಿ ತನ್ನ ಮೊದಲ ವಾಹನ ಮಾದರಿಯನ್ನು ರಸ್ತೆಗಿಳಿಸಿ ಯಶಸ್ವಿಯಾದ ಮಹೀಂದ್ರಾ ಅಂದಿನಿಂದ ಇದುವರೆಗೂ ದೇಶಿಯ ಮಾರುಕಟ್ಟೆಯ ವಾಹನ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿದ್ದು, ವಿದೇಶಿ ಮಾರುಕಟ್ಟೆಗಳಲ್ಲೂ ಜನಪ್ರಿಯತೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿರುವ ಹಲವು ಕಾರು ಸಂಸ್ಥೆಗಳಲ್ಲಿ ಪಾಲುದಾರಿಕೆ ಹೊಂದುವ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರಯಾಣಿಕರ ಕಾರು ಮಾರಾಟದಲ್ಲಿ ನಂ.1 ಸ್ಥಾನದತ್ತ ಮುನ್ನುಗ್ಗುವ ಗುರಿಹೊಂದಿದೆ.

ಶೋರುಂ ತಲುಪ್ಪುತ್ತಿರುವ ಮಹೀಂದ್ರಾ ಥಾರ್ 700 ಸ್ಪೆಷಲ್ ಎಡಿಷನ್ ಕಾರು

ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಕಾರು ಮಾರಾಟದಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿರುವ ಮಹೀಂದ್ರಾ ಸಂಸ್ಥೆಯು ವಾಹನಗಳ ಎಂಜಿನ್, ಪರ್ಫಾಮೆನ್ಸ್, ಗ್ರಾಹಕರ ಸೇವೆಗಳು, ಮಾರುಕಟ್ಟೆ ನಿರ್ವಹಣೆಯಲ್ಲಿ ಗುರುತರ ಬದಲಾವಣೆಗೆ ಕಾರಣವಾಗಿದೆ.

MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆಗೆ ಸಿಕ್ತು ಗ್ರೀನ್ ಸಿಗ್ನಲ್ - ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ.?

ಶೋರುಂ ತಲುಪ್ಪುತ್ತಿರುವ ಮಹೀಂದ್ರಾ ಥಾರ್ 700 ಸ್ಪೆಷಲ್ ಎಡಿಷನ್ ಕಾರು

ಇದರಿಂದಾಗಿಯೇ ಕಳೆದ 2 ವರ್ಷಗಳಲ್ಲಿ ಮಹೀಂದ್ರಾ ಸಂಸ್ಥೆಯ ಪ್ರಯಾಣಿಕ ಬಳಕೆಯ ವಾಹನ ಮಾರಾಟವು ದುಪ್ಪಟ್ಟಾಗಿದ್ದು, ಅದರಲ್ಲೂ ಮಹೀಂದ್ರಾ ಸಂಸ್ಥೆಗೆ ಬಹುದಿನಗಳಿಂದಲೂ ಉತ್ತಮ ಹೆಸರು ತಂದುಕೊಟ್ಟಿರುವ 4x4 ಥಾರ್ ಕಾರನ್ನು 70ನೇ ಸಂಭ್ರಮಕ್ಕಾಗಿ ಲಿಮಿಟೆಡ್ ಎಡಿಷನ್ ಮಾದರಿಯಾಗಿ ಆಯ್ಕೆ ಮಾಡಲಾಗಿದೆ.

MOST READ: ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

ಶೋರುಂ ತಲುಪ್ಪುತ್ತಿರುವ ಮಹೀಂದ್ರಾ ಥಾರ್ 700 ಸ್ಪೆಷಲ್ ಎಡಿಷನ್ ಕಾರು

ಲಿಮಿಟೆಡ್ ಎಡಿಷನ್ ಮಾದರಿಯು ಈ ಹಿಂದಿನಂತೆಯೇ 2.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯಲ್ಲೇ ಬಿಡುಗಡೆ ಮಾಡಲಾಗಿದ್ದು, ಕಾರಿನ ಹೊರಭಾಗದ ವಿನ್ಯಾಸಗಳಲ್ಲಿ ಮಾತ್ರ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. ಹೊಸ ಕಾರಿನ ಹೊರಭಾಗದಲ್ಲಿ ಜೋಡಿಸಲಾಗಿರುವ ಲಿಮಿಟೆಡ್ ಎಡಿಷನ್ ಬ್ಯಾಡ್ಜ್‌ನಲ್ಲಿ 700 ಸಂಖ್ಯೆಯ ಜೊತೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಸಹಿ ಕೂಡಾ ಇರಲಿದ್ದು, ಹೊಸ ಕಾರು ಹೆಚ್ಚುವರಿಯಾಗಿ ಎರಡು ವಿನೂತನ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

MOST READ: 2030ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣ ಬಂದ್..

ಶೋರುಂ ತಲುಪ್ಪುತ್ತಿರುವ ಮಹೀಂದ್ರಾ ಥಾರ್ 700 ಸ್ಪೆಷಲ್ ಎಡಿಷನ್ ಕಾರು

ಸಾಮಾನ್ಯ ಬಣ್ಣಗಳನ್ನು ಹೊರತುಪಡಿಸಿ ಲಿಮಿಟೆಡ್ ಎಡಿಷನ್ ಥಾರ್ 700 ಮಾದರಿಯು ಅಕ್ವಾ ಮರಿನ್ ಮತ್ತು ನಪೊಲಿ ಬ್ಲ್ಯಾಕ್ ಬಣ್ಣಗಳಲ್ಲೂ ಖರೀದಿಸಬಹುದಾಗಿದ್ದು, ಆಫ್ ರೋಡ್ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

More from DriveSpark

Article Published On: Thursday, June 27, 2019, 9:27 [IST]
English summary
Special Edition Mahindra Thar 700 Started Reacing Showroom. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+