ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಅನಾವರಣ

ಮಾರುತಿ ಸುಜುಕಿ ಸದ್ಯ ಹೊಸ ಕಾರುಗಳ ಬಿಡುಗಡೆ ಮೇಲೆ ಹೆಚ್ಚಿನ ಗಮನಹರಿಸಿದ್ದು, ವರ್ಷದ ಆರಂಭದಲ್ಲಿ ಆದ ಕಾರು ಮಾರಾಟದಲ್ಲಿನ ಕುಸಿತದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಹೊಸ ಉತ್ಪನ್ನಗಳ ಮೊರೆಹೋಗಿದೆ. ಇದರಲ್ಲಿ ಇದೀಗ ಬಿಡುಗಡೆಯಾಗುತ್ತಿರುವ ಎರ್ಟಿಗಾ ಹೊಸ ಮಾದರಿಯಾದ 6-ಸೀಟರ್ ಸೌಲಭ್ಯದ ಎರ್ಟಿಗಾ ಕ್ರಾಸ್ ಆವೃತ್ತಿಯು ಕೂಡಾ ಒಂದಾಗಿದೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ಎರ್ಟಿಗಾ ಎಂಪಿವಿ ಮಾದರಿಯಲ್ಲಿ ಈಗಾಗಲೇ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ 6-ಸೀಟರ್ ಎರ್ಟಿಗಾ ಕ್ರಾಸ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾದರಿಯನ್ನು ಬಿಡುಗಡೆಗೂ ಮುನ್ನ ಅನಾವರಣಗೊಳಿಸಲಾಗಿದೆ. ಹೊಸ ವಿನ್ಯಾಸದ ಎರ್ಟಿಗಾ ಕ್ರಾಸ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಹಲವು ಬೇಡಿಕೆಗಳಿಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದ್ದು, ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ವಿವಿಧ ಕಾರಣಗಳಿಂದಾಗಿ ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು 2019ರ ಆರಂಭದಿಂದ ಮೇ ಅವಧಿಯಲ್ಲಿ ಭಾರೀ ಪ್ರಮಾಣದ ಹೊಸ ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿದ್ದು, ಸದ್ಯ ಆಟೋ ಉದ್ಯಮವು ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಮಾರುತಿ ಸುಜುಕಿ ಸಂಸ್ಥೆಯು ಎರ್ಟಿಗಾ ಕ್ರಾಸ್ ಮಾದರಿಯನ್ನು ಹಲವು ವಿಶೇಷತೆಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಇದು ಸಾಮಾನ್ಯ ಎರ್ಟಿಗಾ ಮಾದರಿಗಿಂತ ಭಿನ್ನವಾಗಿರಲಿದೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ಮಾಹಿತಿಗಳ ಪ್ರಕಾರ ಹೊಸ ಎರ್ಟಿಗಾ ಕ್ರಾಸ್ ಮಾದರಿಯು ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದ್ದು, ಪ್ರೀಮಿಯಂ ಫೀರ್ಚಸ್‌ಗಳಿಂದಾಗಿ ಹೊಸ ಕಾರು ನೆಕ್ಸಾ ಡೀಲರ್ಸ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗುತ್ತಿರುವ ಬಗ್ಗೆ ವರದಿಯಾಗಿದೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಎರಡು ಮಾದರಿಯ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಸಾಮಾನ್ಯ ಕಾರುಗಳನ್ನು ಕಾರುಗಳನ್ನು ಅರೆನಾ ಡೀಲರ್ಸ್‌ಗಳಲ್ಲಿ ಮಾರಾಟ ಮಾಡಿದ್ದಲ್ಲಿ, ಪ್ರೀಮಿಯಂ ಫೀಚರ್ಸ್ ಕಾರುಗಳನ್ನು ನೆಕ್ಸಾ ಡೀಲರ್ಸ್‌ಗಳಲ್ಲಿ ಮಾರಾಟ ಮಾಡುತ್ತದೆ. ಇದೀಗ ಬಿಡುಗಡೆಯಾಗಲಿರುವ ಎರ್ಟಿಗಾ ಕ್ರಾಸ್ ನೆಕ್ಸಾದಲ್ಲಿ ಮಾತ್ರ ಖರೀದಿ ಲಭ್ಯವಾಗಲಿದೆಯೆಂತೆ. ಹೀಗಾಗಿ ಇದು ಸಾಮಾನ್ಯ ಎರ್ಟಿಗಾಗಿಂತಲೂ ಅತ್ಯುತ್ತಮ ತಾಂತ್ರಿಕ ಸೌಲಭ್ಯ ಹೊಂದಿರಲಿದೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ವಿನೂತನವಾದ ಫ್ಲೇರ್ಡ್ ವ್ಹೀಲ್ ಆರ್ಚೆಸ್, ಹೊಸ ಕ್ರೋಮ್ ಗ್ರಿಲ್ ಅನ್ನು ನೀಡಲಾಗಿದೆ. ಹಾಗೆಯೇ ಆಕರ್ಷಕವಾದ ಹೆಡ್‍ಲೈಟ್‍ಗಳು ಮತ್ತು ಎಲ್ಇಡಿ ಡಿಆರ್‍ಎಲ್ ಅನ್ನು ಅಳವಡಿಸಲಾಗಿದ್ದು, ಉತ್ತಮ ಡ್ರೈವ್ ಅನುಭವಕ್ಕಾಗಿ ಹೈ ಗ್ರೌಂಡ್ ಕ್ಲಿಯರೆನ್ಸ್, ರೂಫ್ ರೈಲ್ಸ್ ಮತ್ತು ಇನ್ನಿತರೆ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಮುಖ್ಯವಾಗಿ ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರು 6 ಆಸನಗಳನ್ನು ಹೊಂದಿರಲಿದ್ದು, ಮಧ್ಯಭಾಗದಲ್ಲಿನ ಸೀಟ್‍‍ಗಳನ್ನು ಕ್ಯಾಪ್ಟನ್ ಸೀಟ್ ಮಾದರಿಗಳಲ್ಲಿ ನೀಡುವ ಸಾಧ್ಯತೆಗಳಿವೆ. ಎರ್ಟಿಗಾ ಬ್ಲಾಕ್ ಎಡಿಷನ್‍ನಂತೆಯೇ ಈ ಕಾರು ಕೂಡಾ ಒಳಭಾಗದಲ್ಲಿ ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಪಡೆಯಲಿದ್ದು, ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಕ್ರಾಸ್ ಕಾರು ಮಾದರಿಯು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಇದು 104-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ. ಹಾಗೆಯೇ ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರಲಿದೆ ಎನ್ನಲಾಗಿದೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ಸದ್ಯ ಮಾರುಕಟ್ಟೆಯಲ್ಲಿ ಎರಡನೇ ತಲೆಮಾರಿನ ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ಎಂಪಿವಿ ವಿಭಾಗದಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದ್ದು, ಕಳೆದ ಅಗಸ್ಟ್‌ನಿಂದ ಇಲ್ಲಿಯ ತನಕ ಸುಮಾರು 50 ಸಾವಿರಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ಎರಡನೇ ತಲೆಮಾರಿನ ಎರ್ಟಿಗಾ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 11.21 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಬಿಡುಗಡೆಯಾಗಲಿರುವ 6-ಸೀಟರ್ ಮಾರುತಿ ಸುಜುಕಿ ಎರ್ಟಿಗಾ ಕಾರು ಬಹಿರಂಗ

ಇದೀಗ ಬಿಡುಗಡೆಯಾಗುತ್ತಿರುವ ಹೊಸ ಎರ್ಟಿಗಾ ಕ್ರಾಸ್ ವೆರಿಯೆಂಟ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ 13 ವೆರಿಯೆಂಟ್‌ಗಳಿಂತಲೂ ತುಸು ಭಿನ್ನವಾಗಿರಲಿದೆ. ವಿಶೇಷವಾಗಿ ಇದು ವ್ಯಯಕ್ತಿಕ ಕಾರು ಬಳಕೆದಾರರ ಬೇಡಿಕೆಯೆಂತೆ ಎರ್ಟಿಗಾ ಕ್ರಾಸ್ ಮಾದರಿಯನ್ನು ಅಭಿವೃದ್ಧಿಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Article Published On: Friday, July 19, 2019, 14:02 [IST]
English summary
Suzuki has unveiled Ertiga cross 6 seater concept at the ongoing 2019 GIIAS auto show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+