ಮರ್ಸಿಡಿಸ್ ಜಿ ವ್ಯಾಗನ್‍ನಂತೆ ಮಾಡಿಫೈಗೊಂಡ ಟಾಟಾ ಸುಮೋ
ಟಾಟಾ ಸುಮೋ ದೇಶಿಯ ಮಾರುಕಟ್ಟೆಯಲ್ಲಿರುವ ಹಳೆಯ ಎಂಯುವಿ ವಾಹನಗಳಲ್ಲಿ ಒಂದಾಗಿದೆ. ಭಾರತದ ರಸ್ತೆಗಳಲ್ಲಿ ಇಂದಿಗೂ ಸಹ ಈ ವಾಹನವನ್ನು ಕಾಣುತ್ತೇವೆ. ಇಂದಿನವರೆಗೂ ಸುಮೋ ತನ್ನ ಒರಿಜಿನಲ್ ಬಾಕ್ಸಿ ಡಿಸೈನ್‍ನಿಂದ ಗಮನಸೆಳೆಯುತ್ತಲೇ ಇದೆ. ಈ ಡಿಸೈನ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ನಾಗರಿಕರಿಗಾಗಿ ಮಾರಾಟ ಮಾಡಲಾದ ಸುಮೋ ಕಾರು, ಭಾರೀ ಪ್ರಮಾಣದ ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿದ್ದರೂ ಸಹ 4x4 ಡ್ರೈವ್‍ಟ್ರೇನ್‍ನಲ್ಲಿ ಬಿಡುಗಡೆಗೊಳಿಸಲೇ ಇಲ್ಲ.

ಸೇನೆಗಾಗಿ ನಿರ್ಮಿಸಲಾದ ಸುಮೋ ಆವೃತ್ತಿಯು 4x4 ಡ್ರೈವ್‍ಟ್ರೇನ್ ಹೊಂದಿತ್ತು. ಈ ಆವೃತ್ತಿಯ ಕಾರುಗಳನ್ನು ಸೇನೆಯು ಹರಾಜಿನಲ್ಲಿ ಮಾರಾಟ ಮಾಡಿದ ನಂತರ ಜನಸಾಮಾನ್ಯರು ಸಹ ಈ ಕಾರುಗಳನ್ನು ಹೊಂದುವಂತಾಯಿತು. ಸೇನಾ ಆವೃತ್ತಿಯ, ಮಾಡಿಫೈಗೊಳಿಸಲಾದ ಟಾಟಾ ಸುಮೋ 4x4 ಡ್ರೈವ್‍ಟ್ರೇನ್ ಕಾರಿನ ಬಗ್ಗೆ ನಾವು ಹೇಳುತ್ತಿದ್ದು, ಮಾಲೀಕರ ಅಭಿರುಚಿಗೆ ತಕ್ಕಂತೆ ಮಾಡಿಫೈ ಮಾಡಲಾಗಿದೆ.

ಕೇಶಿ ರಾಮ್‌ಗರ್ಹಿಯಾ ಒಡೆತನದ ಈ ಟಾಟಾ ಸುಮೋ ಕಾರ್ ಅನ್ನು ಮರ್ಸಿಡಿಸ್ ಜಿ ವ್ಯಾಗನ್‌ನಂತೆಯೇ ಮಾಡಿಫೈ ಮಾಡಲಾಗಿದೆ. ಮರ್ಸಿಡಿಸ್ ಜಿ ವ್ಯಾಗನ್ ವಿಶ್ವದ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಜನಪ್ರಿಯ ಎಸ್‍ಯುವಿಯಾದ ಹೊಸ ಜಿ63 ಎಎಂಜಿ, ಎಲ್ಲಿಯಾದರೂ ಸಾಗಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಮಾಡಿಫೈಗೊಂಡ ಟಾಟಾ ಸುಮೋ ವಿಭಿನ್ನವಾಗಿ ಕಾಣುತ್ತದೆ. ರಸ್ತೆಯಲ್ಲಿರುವ ಎಲ್ಲಾ ವಾಹನಗಳ ಮಧ್ಯೆ ಎದ್ದು ಕಾಣುತ್ತದೆ.

ಈ ವಾಹನವು 2002ರ ಮಾದರಿಯ ಟಾಟಾ ಸುಮೋ ಆಗಿದ್ದು, ಮಾಡಿಫೈ ಮಾಡಲು ರೂ.5 ಲಕ್ಷ ಖರ್ಚು ಮಾಡಲಾಗಿದೆ. ಈ ಲುಕ್ ಪಡೆಯಲು ಸುಮಾರು 5-6 ತಿಂಗಳುಗಳಷ್ಟು ಸಮಯವನ್ನು ವ್ಯಯಿಸಲಾಗಿದ್ದರೂ, ಅದ್ಭುತವಾಗಿ ಮೂಡಿಬಂದಿದೆ. ಫ್ರಂಟ್ ಎಂಡ್‍ನಲ್ಲಿ ಜಿ ವ್ಯಾಗನ್‍ನಲ್ಲಿರುವಂತಹ ಎಲ್ಇಡಿ ಡಿಆರ್‍ಎಲ್‍ಗಳಿರುವ ರೌಂಡ್ ಹೆಡ್‍ಲ್ಯಾಂಪ್‍ಗಳನ್ನು ಹೊಂದಿದೆ. ಮುಂಭಾಗದ ಬಂಪರ್ ಕಸ್ಟಮ್ ಆಫ್ ರೋಡ್ ಮಾದರಿಯಲ್ಲಿದ್ದು, ಚಿಕ್ಕ ಫಾಗ್ ಲೈಟ್‍ಗಳನ್ನು ಅಳವಡಿಸಲಾಗಿದೆ.

ಬಾನೆಟ್‌ನ ಮೇಲಿರುವ ಫೆಂಡರ್ ಹಾಗೂ ಸ್ಲಾಟ್‍ಗಳು ಆರ್ಮಿ ಮಾದರಿಯ ಸುಮೋದಲ್ಲಿ ಸ್ಟಾಂಡರ್ಡ್ ಆಗಿ ಬರುತ್ತವೆ. ರೂಫ್ ಮೇಲಿರುವ ಎಲ್ಇಡಿ ಬಾರ್ ಕತ್ತಲೆಯಲ್ಲಿ ಹಾಗೂ ಅಗತ್ಯವಿದ್ದಾಗ ಹೆಚ್ಚಿನ ಪ್ರಮಾಣದ ಬೆಳಕನ್ನು ನೀಡುತ್ತದೆ. ಸೈಡ್‍ನಲ್ಲಿರುವ ದೊಡ್ಡ ಗಾತ್ರದ ಆಫ್ ರೋಡ್ ಮಾದರಿಯ ಟಯರ್‌ಗಳು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವುದರ ಹೊರತಾಗಿ ಭವ್ಯವಾದ ನೋಟವನ್ನು ನೀಡುತ್ತವೆ. ಈ ಟಯರ್‍ಗಳು 35×12.5-16 ಮಾದರಿಯಲ್ಲಿದ್ದು, ಆಫ್ ರೋಡ್‍ನಲ್ಲಿ ಅಗತ್ಯವಿರುವ ಟ್ರಾಕ್ಷನ್ ನೀಡುತ್ತವೆ.

ಸೈಡಿನಲ್ಲಿರುವ ಅಂಶಗಳಲ್ಲಿ ಕಸ್ಟಮ್ ಒಆರ್‌ವಿಎಂಗಳು ಹಾಗೂ ಸೈಡ್ ಟೈಲ್‌ಪೈಪ್‌ಗಳು ಸೇರಿವೆ. ಇವುಗಳನ್ನು ಜಿ ವ್ಯಾಗನ್‌ನಿಂದ ಪಡೆಯಲಾಗಿದೆ. ಹಿಂಭಾಗದಲ್ಲಿ ಟಿಪಿಕಲ್ ಜಿ ವ್ಯಾಗನ್ ಶೈಲಿಯ ಟೈನಿ ಟೇಲ್ ಲೈಟ್‍ಗಳಿವೆ. ಇಲ್ಲಿರುವ ಕಸ್ಟಮ್ ಬಂಪರ್, ಸ್ಪೇರ್ ಟಯರ್ ಮೌಂಟ್‍ನಂತೆ ಕಾಣುತ್ತದೆ. ಈ ನವೀಕೃತ ಸುಮೋದಲ್ಲಿರುವ ಇನ್ನಿತರ ಅಂಶಗಳೆಂದರೆ ಸ್ಟ್ಯಾಂಡರ್ಡ್ ಸಸ್ಪೆಂಷನ್, ಪವರ್ ಸ್ಟೀಯರಿಂಗ್, ಏರ್ ಕಂಡೀಷನ್ ಹಾಗೂ ಇಂಡಿಪೆಂಡೆಂಟ್ ಫ್ರಂಟ್ ಸಸ್ಪೆಂಷನ್‍ಗಳು.

ಮಾಡಿಫಿಕೇಷನ್‍ಗಳನ್ನು ಹೊರಭಾಗಕ್ಕೆ ಮಾತ್ರ ಸೀಮಿತಗೊಳಿಸಲಾಗಿಲ್ಲ. ಇಂಟಿರಿಯರ್ ಅನ್ನು ಸಹ ಸಂಪೂರ್ಣವಾಗಿ ಐಷಾರಾಮಿಯಾಗಿ ನವೀಕರಿಸಲಾಗಿದೆ. ಇಂಟಿರಿಯರ್‍ನಲ್ಲಿರುವ ರೂಫ್ ಹಾಗೂ ಡೋರ್‍ಗಳ ಮೇಲೆ ಪ್ಯಾಡಿಂಗ್‍ನೊಂದಿಗೆ ಲೆದರ್ ಹೊದಿಕೆಯನ್ನು ಅಳವಡಿಸಲಾಗಿದೆ. ಮುಂಭಾಗದ ಸೀಟುಗಳು ಪೂರ್ಣವಾದ ಅಡ್ಜಸ್ಟಬಲ್ ಎಲೆಕ್ಟ್ರಿಕ್ ಯೂನಿಟ್‍ಗಳಾಗಿವೆ. ಇವುಗಳು ಆರಾಮವನ್ನು ಹೆಚ್ಚಿಸುವ ಜೊತೆಗೆ ಸುಮೋ ಕಾರಿನ ಚಾಲನಾ ಅನುಭವವನ್ನು ಹೆಚ್ಚಿಸುತ್ತವೆ.

ಈ ಕಾರು ಏರ್ ಕಂಡೀಷನ್ ಹಾಗೂ ಪವರ್ ಸ್ಟೀಯರಿಂಗ್‌ನಂತಹ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಇದುವರೆಗೂ ನೋಡಿರುವ ವಿವಿಧ ಬಗೆಯ ಮಾಡಿಫೈಗೊಂಡ ಸುಮೋ ವಾಹನಗಳ ಪೈಕಿ ಈ ಸುಮೋ ವಿಭಿನ್ನವಾಗಿ ಕಾಣುವುದು ಮಾತ್ರವಲ್ಲದೇ 4×4 ವಾಹನವಾಗಿರುವುದರಿಂದ ಅತ್ಯುತ್ತಮವಾಗಿ ಕಾಣುತ್ತದೆ. ನವೀಕರಿಸಲಾದ ಇಂಟಿರಿಯರ್‍ಗಳು ಕಾರಿನ ವಿನ್ಯಾಸವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ರೀತಿಯ ಉತ್ತಮವಾದ ಸುಮೋವನ್ನು ಮಾಡಿಫೈ ಮಾಡಿದ್ದಕ್ಕಾಗಿ ಈ ವಾಹನದ ಮಾಲೀಕರಿಗೆ ಅಭಿನಂದನೆಗಳು.


Click it and Unblock the Notifications








