ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಮೋಟಾರ್ ವೆಹಿಕಲ್ ಆಕ್ಟ್ ಅನ್ವಯ ಪ್ರತಿ ವಾಹನವು ಕೂಡಾ ಥರ್ಡ್ ಪಾರ್ಟಿ ವಿಮೆ ಹೊಂದಿರಲೇಬೇಕಿದ್ದು, ಎದುರಾಳಿ ವಾಹನ ಅಪಘಾತಕ್ಕೀಡಾಗಿ ಅದರಲ್ಲಿ ಜೀವಹಾನಿಯಾಗಿ ಇಲ್ಲವೇ ವಾಹನಕ್ಕೆ ಹಾನಿಯಾದ ಸಂದರ್ಭದಲ್ಲಿ ನಷ್ಟ ಪರಿಹಾರಕ್ಕಾಗಿ ಥರ್ಡ್ ಪಾರ್ಟಿ ವಿಮೆ ವಾಹನ ಮಾಲೀಕರ ನೆರವಿಗೆ ಬರಲಿದೆ. ಹೀಗಾಗಿ ಈ ನಿಯಮವನ್ನು ಈಗಾಗಲೇ ಕಡ್ಡಾಯಗೊಳಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಮುಂಬರುವ ದಿನಗಳಲ್ಲಿ ಇದೇ ಥರ್ಡ್ ಪಾರ್ಟಿ ವಿಮಾ ಪಾಲಿಸಿಯಲ್ಲಿ ಕೆಲವು ಬದಲಾವಣೆಗೆ ಮುಂದಾಗಿದೆ.

ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಹೌದು, ಅಪಘಾತದ ಸಂದರ್ಭದಲ್ಲಿ ಸಾವನ್ನಪ್ಪಿದವರಿಗೆ ಇತ್ತೀಚೆಗೆ ಪರಿಹಾರದ ಮೊತ್ತವನ್ನು ದ್ವಿಗುಣಗೊಳಿಸಿರುವ ಕೇಂದ್ರ ಸರ್ಕಾರವು ಥರ್ಡ್ ಪಾರ್ಟಿ ವಿಮಾ ಪಾಲಿಸಿಯ ಪ್ರೀಮಿಯಂ ಮೊತ್ತಗಳ ಏರಿಕೆಗೆ ಮುಂದಾಗಿದ್ದು, ಮೂಲಗಳ ಪ್ರಕಾರ ಹೊಸ ವಿಮಾ ಪ್ರೀಮಿಯಂ ದರಗಳು ಶೇ.10 ರಿಂದ ಶೇ.15 ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾರು ಖರೀದಿ ಪ್ರಕ್ರಿಯೆಯು ಇನ್ಮುಂದೆ ಮತ್ತಷ್ಟು ದುಬಾರಿಯಾಗಿ ಪರಿಣಮಿಸಲಿದ್ದು, ಇನ್ಸುರೆನ್ಸ್ ರೆಗ್ಯೂಲೆಟರಿ ಆ್ಯಂಡ್ ಡೆವೆಲಪ್ಮೆಂಟ್ ಅಥಾರಟಿ ಆಫ್ ಇಂಡಿಯಾ (IRDAI) ಸಂಸ್ಥೆಯ ಶಿಫಾರಸ್ಸು ಅನ್ವಯ ಹೊಸ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ.

ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಸದ್ಯ ಮಾರ್ಚ್ ಅಂತ್ಯಕ್ಕೆ 2018-19ರ ಹಣಕಾಸು ವರ್ಷ ಕೊನೆಗೊಳ್ಳುತ್ತಿದ್ದು, 2019-20ರ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಏಪ್ರಿಲ್ 1ರಿಂದಲೇ ಹೊಸ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ಮೊತ್ತಗಳನ್ನು ಜಾರಿಗೆ ಮಾಡುವುದು ಬಹುತೇಕ ಖಚಿತವಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಆದ್ರೆ ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎಂಬ ಕುರಿತು ಇನ್ನು ಕೆಲವು ಗೊಂದಲಗಳಿದ್ದು, ಇದೇ ತಿಂಗಳು ಅಂತ್ಯಕ್ಕೆ ಹೊಸ ದರ ಪಟ್ಟಿಯು ಅಂತಿಮಗೊಳಿಸಲು ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಜೊತೆಗೆ ಈ ಬಾರಿ ಕಾರುಗಳ ವಿಮಾ ಪ್ರೀಮಿಯಂ ಮೊತ್ತ ಪಾವತಿಸುವಲ್ಲಿ ಆಗುತ್ತಿರುವ ಕೆಲವು ಲೋಪಗಳನ್ನು ಸರಿಪಡಿಸಲು ಟೆಲಿಮ್ಯಾಟ್ರಿಕ್ಸ್ ತಂತ್ರಜ್ಞಾನ ಬಳಕೆಗೆ ಮುಂದಾಗಿದ್ದು, ಕಾರು ಮಾಲೀಕರ ಚಾಲನಾ ಪದ್ದತಿಯ ಮೇಲೂ ಹೆಚ್ಚಿನ ಮಟ್ಟದ ದರ ನಿಗದಿ ಮಾಡುವ ಬಗೆಗೆ ಚಿಂತನೆ ನಡೆಸಲಾಗಿದೆ.

ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಟೆಲಿಮ್ಯಾಟ್ಕಿಕ್ಸ್ ತಂತ್ರಜ್ಞಾನವನ್ನು ಕಾರುಗಳಲ್ಲಿ ಅಳವಡಿಸಿದ್ದಲ್ಲಿ ಕಾರು ಮಾಲೀಕನು ಸಾರಿಗೆ ನಿಯಮಗಳಿಗೆ ಅನುಗುಣವಾಗಿ ಚಾಲನೆ ಮಾಡುತ್ತಿದ್ದಾನೋ ಇಲ್ಲವೋ ಅಥವಾ ಸಾರಿಗೆ ನಿಯಮಗಳಿಗೆ ವಿರುದ್ದವಾಗಿ ಬೇಕಾಬಿಟ್ಟಿ ಚಾಲನೆ ಮಾಡುತ್ತಾನೋ ಎನ್ನುವುದನ್ನ ಟೆಲಿಮ್ಯಾಟ್ರಿಕ್ ತಂತ್ರಜ್ಞಾನವು ಸಂಪೂರ್ಣ ಮಾಹಿತಿ ಕಲೆಹಾಕುತ್ತಿರುತ್ತೆ. ಒಂದು ವೇಳೆ ಅಪಘಾತಗಳನ್ನು ಮಾಡಿ ಪರಿಹಾರಕ್ಕಾಗಿ ವಿಮಾ ಸಂಸ್ಥೆಗಳಿಗೆ ಬಳಿ ಹೋದಾಗ ಟೆಲಿಮ್ಯಾಟ್ರಿಕ್ಸ್ ತಂತ್ರಜ್ಞಾನ ಸಹಾಯದಿಂದ ಕಾರು ಮಾಲೀಕನ ಬಂಡವಾಳವನ್ನು ಬಿಚ್ಚಿಡಲಾಗುತ್ತೆ. ಆಗ ಬೇಕೆಂದೇ ತಪ್ಪು ಮಾಡಿದ್ದಲ್ಲಿ ಕಾರು ಮಾಲೀಕನಿಂದ ಹೆಚ್ಚುವರಿ ವಿಮಾ ಮೊತ್ತವನ್ನು ವಸೂಲಿ ಮಾಡುವ ಪದ್ಧತಿ ಇದಾಗಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಈ ಹೊಸ ಪದ್ದತಿ ಈಗಾಗಲೇ ವಿದೇಶಿಗಳಲ್ಲಿ ಜಾರಿಗೆಯಲ್ಲಿದ್ದು, ಭಾರತದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಈ ಯೋಜನೆಯನ್ನು ಪರಿಚಯಿಸುವ ಸಲುವಾಗಿ ಕೇಂದ್ರ ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿರುವ ಐಆರ್‌ಡಿಎಆರ್ ಸಂಸ್ಥೆಯು ಸದ್ಯದಲ್ಲೇ ವಾಹನ ಮಾಲೀಕರಿಗೆ ಭರ್ಜರಿ ಶಾಕ್ ನೀಡಲು ತಯಾರಿ ನಡೆಸಿದೆ.

ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಮೋಟಾರು ವಿಮೆಯ ಅಗತ್ಯವೇನು?

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

More from DriveSpark

Article Published On: Thursday, March 14, 2019, 12:57 [IST]
English summary
Pay More For Motor Vehicle Insurance From April 2019 — Here’s Why? Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+