ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಬೊಲೆರೊ

ಎಸ್‍ಯುವಿ ಕಾರುಗಳ ನಿರ್ಮಾಣದಲ್ಲಿ ಜನಪ್ರೀಯತೆಯನ್ನು ಪಡೆದಿರುವ ಮಹೀಂದ್ರಾ ಸಂಸ್ಥೆಯು ತಮ್ಮ ಬೊಲೆರೊ ಕಾರನ್ನು ಮತ್ತಷ್ಟು ವೈಶಿಷ್ಟ್ಯತೆಗಳನ್ನು ಅಳವಡಿಸಿ ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾದುವ ಯೋಜನೆಯಲಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಬಿಡುಗಡೆ ಮಾಡಲಿರುವ ಬೊಲೆರೊ ಕಾರಿನ ಎಂಜಿನ್ ಕಾರ್ಯಕ್ಷಮೆತೆಯನ್ನು ಪರೀಕ್ಷಿಸುವಾಗ ತಮಿಳುನಾಡಿನ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಬೊಲೆರೊ

2019ರ ಮಹೀಂದ್ರಾ ಬೊಲೆರೊ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನಲ್ಲಿ ಕೇಂದ್ರ ಸರ್ಕಾರದ ಹೊಸ ನಿಯಮಗಳಿಗೆ ಅನುಗುಣವಾಗಿ ಕೆಲವು ಮಹತ್ಪದ ಬದಲಾವಣೆಗಳನ್ನು ತರಲಾಗುತ್ತಿದೆ. 2020ರ ಏಪ್ರಿಲ್ 1 ರಿಂದ ಕಡ್ಡಾಯವಾಗಿ ಜಾರಿಯಾಗಲಿರುವ ಬಿಎಸ್ 6 ಕಾಯ್ದೆಯು ಜಾರಿಯಾಗುವ ಮುನ್ನವೇ ಹೊಸ ಕಾರುಗಳಲ್ಲಿ ಬಿಎಸ್ 6 ಎಂಜಿನ್ ಅಳವಡಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನಲ್ಲಿ ಗುಣಮಟ್ಟದ ಸುರಕ್ಷಾ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಬೊಲೆರೊ

ಈ ಬಗ್ಗೆ ಈಗಾಗಲೇ ಮಾಹಿತಿ ನೀಡಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯ ಆಟೊಮೊಬೈಲ್ ವಿಭಾಗದ ಅಧ್ಯಕ್ಷ ಪವನ್ ಗೋಯಂಕಾ ಅವರು, ದೇಶಿಯ ಮಾರುಕಟ್ಟೆಯಲ್ಲಿ ಕಳೆದ 19 ವರ್ಷಗಳಿಂದ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಬೊಲೆರೊ ಮಾದರಿಯು ಮುಂಬರುವ ದಿನಗಳಲ್ಲಿ ಹಲವು ಹೊಸತನಗಳೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ ಎಂದಿದ್ದಾರೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಬೊಲೆರೊ

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಬೊಲೆರೊ ಕಾರಿನ ವಿನ್ಯಾಸಕ್ಕೂ ಮತ್ತು ಹೊಸ ಬೊಲೆರೊ ಕಾರಿನ ವಿನ್ಯಾಸಕ್ಕೂ ತುಸು ಬದಲಾವಣೆಗಳಾಗಲಿದ್ದು, ಕ್ರ್ಯಾಶ್ ಟೆಸ್ಟಿಂಗ್ ನಿಯಮಕ್ಕೆ ಅನುಗುಣವಾಗಿ ಮುಂಭಾಗದ ವಿನ್ಯಾಸಗಳನ್ನು ಮರು ಅಭಿವೃದ್ಧಿಪಡಿಸಿ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಮಹೀಂದ್ರಾ ಸಂಸ್ಥೆಯು ಹೊಸ ಕಾರುಗಳನ್ನು ಡೀಲರ್ಸ್ ಯಾರ್ಡ್‌ನಲ್ಲಿ ಸ್ಟಾಕ್ ಮಾಡುತ್ತಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಬೊಲೆರೊ

ಇನ್ನು ಜಾರಿಯಾಗಲಿರುವ ಬಿಎಸ್ 6 ನಿಯಮದಿಂದಾಗಿ ಎಂಜಿನ್ ವಿಭಾಗದಲ್ಲೂ ಹೆಚ್ಚಿನ ಬದಲಾವಣೆಗಳಾಗಲಿದ್ದು, ಬಿಎಸ್ 6 ಎಂಜಿನ್‌ನಿಂದಾಗಿ ಹೊಗೆ ಉಗುಳುವ ಪ್ರಮಾಣವು ತಗ್ಗುವ ಮೂಲಕ ಮಾಲಿನ್ಯವನ್ನು ಪರಿಣಾಮಕಾರಿ ತಗ್ಗಿಸಬಹುದಾಗಿದೆ. ಈಗಾಗಲೇ ಜಾಗತಿಕವಾಗಿ ಪ್ರಮುಖ ರಾಷ್ಟ್ರಗಳು ಬಿಎಸ್ 6 ನಿಯಮಕ್ಕೆ ಸರಿಸಮನಾದ ಕೆಲವು ಹೊಸ ಕಾಯ್ದೆಗಳನ್ನು ಜಾರಿಗೊಳಿಸಿದ್ದು, 2017ರಲ್ಲೇ ಯುರೋಪ್ ರಾಷ್ಟ್ರಗಳಲ್ಲಿ ಜಾರಿಯಾಗಿರುವ ಯುರೋ 6 ನಿಯಮದಿಂದಾಗಿ ವಾಹನಗಳು ಹೊರಸೂಸುವ ಮಾಲಿನ್ಯ ಪ್ರಮಾಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಬೊಲೆರೊ

ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಸಹ ಬಿಎಸ್ 4 ನಂತರ ಬಿಎಸ್ 6 ವಾಹನಗಳನ್ನ ಕಡ್ಡಾಯಗೊಳಿಸುತ್ತಿದ್ದು, ಹೊಸ ನಿಯಮದ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ವಾಹನಗಳು ಹೆಚ್ಚಿನ ಮಟ್ಟದ ಸುರಕ್ಷೆ ಮತ್ತು ಗುಣಮಟ್ಟದ ಎಂಜಿನ್ ಒದಗಿಸಬೇಕಾಗುತ್ತೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಬೊಲೆರೊ

ವೈಶಿಷ್ಟ್ಯತೆಗಳು

ಮಹೀಂದ್ರಾ ಸಹ ಇದೇ ನಿಟ್ಟಿನಲ್ಲಿ ಹೊಸ ನಿಯಮಕ್ಕೆ ಅನುಗುಣವಾಗಿ ಬೊಲೆರೊ ಸೇರಿದಂತೆ ತನ್ನ ಎಲ್ಲ ಪ್ರಮುಖ ಕಾರುಗಳನ್ನು ಉನ್ನತಿಕರಣ ಮಾಡುತ್ತಿದ್ದು, ಹೊಸ ಬೊಲೆರೊ ಕಾರಿನಲ್ಲಿ ಈ ಬಾರಿ ಎಬಿಎಸ್ ಜೊತೆ ಇಬಿಡಿ, ಡ್ಯುಯಲ್ ಏರ್‌ಬ್ಯಾಗ್, ಹೈ ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್ ಅಲರ್ಟ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನು ಸೇರಿಸಲಾಗಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಬೊಲೆರೊ

ಎಂಜಿನ್ ಸಾಮರ್ಥ್ಯ

ಬೊಲೆರೊ ಕಾರುಗಳು ಎರಡು ಮಾದರಿಯ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 2.5-ಲೀಟರ್ ಎಂ2ಡಿಸಿಆರ್ ಡೀಸೆಲ್ ಎಂಜಿನ್ ಮಾದರಿಯು 63-ಬಿಎಚ್‌ಪಿ, 195-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಬೊಲೆರೊ ಪವರ್ ಪ್ಲಸ್ ಮಾದರಿಯು 1.5-ಲೀಟರ್ ಎಂಹ್ವಾಕ್‌ಡಿ70 ಡೀಸೆಲ್ ಎಂಜಿನ್ ಮಾದರಿಯು 71-ಬಿಎಚ್‌ಪಿ, 195-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಬೊಲೆರೊ

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಹೊಸ ಬಿಎಸ್ 6 ಎಂಜಿನ್‌ನಿಂದಾಗಿ ಹೊಗೆಯ ಪ್ರಮಾಣ ಕಡಿಮೆಯಾಗುವುದಲ್ಲದೇ ಮೈಲೇಜ್ ಪ್ರಮಾಣದಲ್ಲಿ ಗ್ರಾಹಕರಿಗೆ ವರದಾನವಾಗಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆಯ ಎಂಜಿನ್‌ನಿಂದಾಗಿ ಕಾರುಗಳ ಬೆಲೆಯಲ್ಲೂ ತುಸು ದುಬಾರಿ ಎನ್ನಿಸಲಿವೆ.

Source: Vikatan

More from DriveSpark

Article Published On: Monday, May 20, 2019, 9:50 [IST]
English summary
Updated Mahindra Bolero Spotted TesTing In Tamilnadu With Airbags And ABS. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+