ಶಾಕಿಂಗ್ ಸುದ್ದಿ- ಫೊಕ್ಸ್‌ವ್ಯಾಗನ್ ಸಂಸ್ಥೆಗೆ ರೂ.500 ಕೋಟಿ ದಂಡ ವಿಧಿಸಿದ ಎನ್‌ಜಿಟಿ..!
2015ರಲ್ಲಿ ಇಡೀ ಆಟೋಮೊಬೈಲ್ ಕ್ಷೇತ್ರವನ್ನೇ ತಲ್ಲಣಗೊಳಿಸಿದ್ದ ಫೋಕ್ಸ್‌ವ್ಯಾಗನ್ ಮಾಲಿನ್ಯ ಮೋಸ ಪ್ರಕರಣಕ್ಕೆ(ಡಿಸೇಲ್ ಗೇಟ್) ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪೀಠವು ಮಹತ್ವದ ತೀರ್ಪು ನೀಡಿದ್ದು, ಮಾಡಿದ ತಪ್ಪಿಗೆ ಬರೋಬ್ಬರಿ ರೂ.500 ಕೋಟಿ ಪರಿಹಾರ ನೀಡುವಂತೆ ಆದೇಶ ನೀಡಿದೆ.

ದೋಷಪೂರಿತ ಡೀಸೆಲ್ ಎಂಜಿನ್ ಮೂಲಕ ಎಮಿಷನ್ ನಿಯಮಗಳನ್ನು ಗಾಳಿಗೆ ತೂರಿದ್ದ ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತ ಸೇರಿದಂತೆ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಮಿಲಿಯನ್‌ಗಟ್ಟಲೇ ಡಿಸೇಲ್ ಕಾರುಗಳನ್ನು ಮಾರಾಟ ಮಾಡಿದ್ದು, ಇದುವರೆಗೆ ಆದ ಮಾಲಿನ್ಯ ಉತ್ಪದಾನೆಯಿಂದ ಆದ ನಷ್ಟಕ್ಕೆ ಭಾರೀ ಪ್ರಮಾಣದ ದಂಡ ಹಾಕಲಾಗಿದೆ.
ಯುರೋಪ್ ಮಾರುಕಟ್ಟೆಯಲ್ಲಿ ಈಗಾಗಲೇ ಫೋಕ್ಸ್‌ವ್ಯಾಗನ್ ಡೀಸೆಲ್ ಕಾರುಗಳ ಮೇಲೆ ನಿಷೇಧ ಹೇರಿದ್ದ ಯುರೋಪ್ ಫೆಡರೇಷನ್, ಫೋಕ್ಸ್‌ವ್ಯಾಗನ್ ಭಾರೀ ಪ್ರಮಾಣದ ದಂಡವನ್ನು ಸಹ ವಸೂಲಿ ಮಾಡಿತ್ತು.
ಭಾರತದಲ್ಲೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ರಾಷ್ಟ್ರೀಯ ಹಸಿರು ಪೀಠದಲ್ಲಿ ಪ್ರಕರಣ ದಾಖಲಿಸಿದ್ದ ಕೇಂದ್ರ ಆರೋಗ್ಯ ಇಲಾಖೆಯು ಫೋಕ್ಸ್‌ವ್ಯಾಗನ್ ಡಿಸೇಲ್ ಕಾರುಗಳಿಂದಾಗಿರುವ ಆರೋಗ್ಯ ನಷ್ಟಕ್ಕೆ ಭಾರೀ ಪ್ರಮಾಣದ ಪರಿಹಾರ ಕೋರಿತ್ತು.

2015 ಸೆಪ್ಟೆಂಬರ್ ತಿಂಗಳಲ್ಲಿ ಫೋಕ್ಸ್‌ವ್ಯಾಗನ್ ವಿರುದ್ಧ ಮಾಲಿನ್ಯ ಮೋಸ ಪ್ರಕರಣವು ಬಯಲುಗೊಳ್ಳುತ್ತಿದ್ದಂತೆ, ಫೋಕ್ಸ್‌ವ್ಯಾಗ್ ಸಹ ಬ್ರಾಂಡ್‌ಗಳಾದ ಆಡಿ, ಪೋರ್ಷೆ ಮತ್ತು ಸ್ಕೋಡಾ ಸೇರಿದಂತೆ 11 ದಶ ಲಕ್ಷದಷ್ಟು ಡೀಸೆಲ್ ಕಾರುಗಳಲ್ಲಿ ದೋಷ ಕಂಡುಬಂದಿತ್ತು.
ಇಲ್ಲಿ ಇನ್ನೊಂದು ಆತಂಕಕಾರಿ ವಿಚಾರ ಅಂದ್ರೆ, ಅಮೆರಿಕ ಮಾಲಿನ್ಯ ತಪಾಸಣೆಯ (ಎಮಿಷನ್ ಟೆಸ್ಟ್) ವೇಳೆ ತಪಾಸಣೆಯ ಮಾನದಂಡವನ್ನು ಮರೆಮಾಚಲು ಫೋಕ್ಸ್ ವ್ಯಾಗನ್ ಸಂಸ್ಥೆಯು ವಿಶೇಷ ರೀತಿಯ ಸಾಫ್ಟ್ ವೇರ್ ವೊಂದನ್ನು ಬಳಕೆ ಮಾಡಿದ್ದು ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ಸಾಫ್ಟ್‌ವೇರ್ ಮೂಲಕ ಕಾರಿನ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ಸರಾಗವಾಗಿ ತೇರ್ಗಡೆ ಹೊಂದುತ್ತಿದ್ದವು. ಆದ್ರೆ ಅಸಲಿಗೆ ಬಂದಲ್ಲಿ ಇತರೆ ಡೀಸೆಲ್ ಕಾರುಗಳಿಂತ ಮೂರು ಪಟ್ಟು ಹೆಚ್ಚು ಮಾಲಿನ್ಯವನ್ನು ಉತ್ಪತ್ತಿ ಮಾಡಿದ್ದ ಕಾರುಗಳು ವಿಶೇಷ ಸಾಫ್ಟ್‌ವೇರ್ ಬಳಕೆ ಮೂಲಕ ಮೋಸ ಮಾಡಲಾಗುತ್ತಿತ್ತು.

ಇದನ್ನು ಕೊನೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದ ಅಮೆರಿಕ ಟ್ರಾನ್ಸ್‌ಪೋರ್ಟ್ ಅಥಾರಿಟಿಯು ಫೋಕ್ಸ್‌ವ್ಯಾಗನ್ ಕಳ್ಳಾಟವನ್ನು ಕೆಲವೇ ದಿನಗಳಲ್ಲಿ ಬಯಲು ಮಾಡಿತ್ತು. ಈ ಹೊತ್ತಿಗಾಗಲೇ ವಿಶ್ವಾದ್ಯಂತ 3 ಮಿಲಿಯನ್‌ನಷ್ಟು ಕಾರುಗಳು ಮಾರಾಟಗೊಂಡಿದ್ದವು.
ಕೊನೆಗೂ ಫೋಕ್ಸ್‌ವ್ಯಾಗನ್ ಮೇಲೆ ನಿಷೇಧ ಹೇರುವ ಮೂಲಕ ಎಂಜಿನ್ ಬದಲಾವಣೆ ಮಾಡಿದ್ದ ಅಮೆರಿಕ ಮತ್ತು ಯುರೋಪ್ ಒಕ್ಕೂಟಗಳು ಪರಿಹಾರವಾಗಿ ಸಾವಿರ ಕೋಟಿ ಲೆಚ್ಚದಲ್ಲಿ ದಂಡ ವಸೂಲಿ ಮಾಡಿದ್ದವು. ಇದೀಗ ಭಾರತದಲ್ಲೂ ಇದೇ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಆರೋಗ್ಯ ಇಲಾಖೆ ಕೂಡಾ ಫೋಕ್ಸ್‌ವ್ಯಾಗನ್ ಪರಿಹಾರ ಕೋರಿತ್ತು.
ಕೇವಲ ಭಾರತದಲ್ಲೇ ಬರೋಬ್ಬರಿ 435 ಟನ್‌ನಷ್ಟು ನೈಟ್ರೋಸ್ ಆಕ್ಸೈಡ್(NOx) ಮತ್ತು NO2 ಉತ್ಪಾದನೆ ಕಾರಣವಾಗಿರುವ ಫೋಕ್ಸ್‌ವ್ಯಾಗನ್ ಡಿಸೇಲ್ ಕಾರುಗಳು ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಅತಿಹೆಚ್ಚು ಮಾಲಿನ್ಯ ಉಂಟು ಮಾಡಿದ್ದವು.

ಇದರಿಂದ ಜನರ ಆರೋಗ್ಯ ಸಮಸ್ಯೆ ಉಲ್ಬಣಗೊಂಡು ಸಾವಿರಾರು ಅಮಾಯಕರು ಉಸಿರಾಟ ತೊಂದರೆಯಿಂದ ಪ್ರಾಣಕಳೆದುಕೊಂಡಿದ್ದಲ್ಲದೇ ದೆಹಲಿಯಲ್ಲಿ ಉಲ್ಬಣಗೊಂಡಿದ್ದ ಅತಿಯಾದ ಮಾಲಿನ್ಯ ಮತ್ತು ಆಮ್ಲ ಮಳೆಗೂ ಇದೇ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಿತ್ತು ಎನ್ನುವುದನ್ನು ಪತ್ತೆಮಾಡಲಾಗಿತ್ತು.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ 2018ರ ಡಿಸೆಂಬರ್‌ನಲ್ಲಿ ಮಹತ್ವದ ತೀರ್ಪು ನೀಡಿದ್ದ ರಾಷ್ಟ್ರೀಯ ಹಸಿರು ಪೀಠದ ಮುಖ್ಯಸ್ಥ ಹಾಗೂ ಮುಖ್ಯ ನ್ಯಾಯಮೂರ್ತಿಯೂ ಆದ ಆದರ್ಶ್ ಕುಮಾರ್ ಗೋಯಲ್ ಅವರು ಬರೋಬ್ಬರಿ ರೂ.100 ಕೋಟಿ ದಂಡ ಪಾವತಿಸುವಂತೆ ಆದೇಶಿಸಿದ್ದರು.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!
ಆದಾಗ ಬಳಿಕ ಇದೇ ವರ್ಷ 2019ರ ಜನವರಿ ಆರಂಭದಲ್ಲಿ ಮತ್ತೆ ವಿಚಾರಣೆ ನಡೆಸಿದ್ದ ಎನ್‌ಜಿಟಿಯು ರೂ.171 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಹೀಗಾಗಿ ಕೋರ್ಟ್ ಆದೇಶದಂತೆ ರೂ.171 ಕೋಟಿ ಮರುಪಾವತಿ ಮಾಡಿದರು ಸಹ ಇದೀಗ ಮತ್ತೊಮ್ಮೆ ಸಂಕಷ್ಟು ಎದುರಾಗಿದೆ.

ದಂಡದ ಮೊತ್ತವನ್ನು ರೂ.171 ಕೋಟಿಯಿಂದ ರೂ.500 ಕೋಟಿ ಏರಿಕೆ ಮಾಡಿ ಆದೇಶಿಸಿರುವ ಎನ್‌ಜಿಟಿಯು ರಾಷ್ಟ್ರೀಯ ಆರೋಗ್ಯ ಇಲಾಖೆಯ ಮೇಲ್ಮನವಿಯೆಂತೆ ದೇಶಾದ್ಯಂತ ಆಗಿರುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ರೂ.171 ಕೋಟಿ ಸಾಲದು ಕನಿಷ್ಠ ರೂ.500 ಕೋಟಿ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.
ಮುಂದಿನ 2 ತಿಂಗಳ ಒಳಗಾಗಿ ದಂಡ ಮರುಪಾತಿಸುವಂತೆ ಸೂಚಿಸಲಾಗಿದ್ದು, ತಪ್ಪಿದ್ದಲ್ಲಿ ಮತ್ತೆ ದಂಡದ ಮೊತ್ತವನ್ನು ಹೆಚ್ಚಿಸುವ ಖಡಕ್ ಆದೇಶ ನೀಡಿದೆ. ಆದ್ರೆ ಎನ್‌ಜಿಟಿ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ ಮೊರೆಹೋಗಲು ನಿರ್ಧಿರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಏನಾಗುತ್ತೊ ಗೊತ್ತಿಲ್ಲ.


Click it and Unblock the Notifications








