ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ವೊಲ್ವೊ ಎಕ್ಸ್‌ಸಿ 90, ಎಕ್ಸೆಲೆನ್ಸ್ ಲೌಂಜ್ ಕಂಸೋಲ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.42 ಕೋಟಿಗಳಾಗಿದೆ. ಭಾರತದಲ್ಲಿ ವೊಲ್ವೊ ಎಕ್ಸ್‌ಸಿ 90 ಕಾರಿನ 15 ಯುನಿಟ್‍‍ಗಳನ್ನು ಮಾತ್ರ ಮಾರಾಟ ಮಾಡಲಾಗುವುದು.

ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ಹೊಸ ವೊಲ್ವೊ ಎಕ್ಸ್‌ಸಿ 90 ಎಕ್ಸೆಲೆನ್ಸ್ ಲೌಂಜ್ ಕಂಸೋಲ್ ಕಾರ್ ಅನ್ನು ಆರ್ಡರ್ ಮಾಡಿದವರಿಗೆ ಮಾತ್ರವೇ ಮಾರಾಟ ಮಾಡಲಾಗುವುದು. ಈ ಎಸ್‌ಯುವಿ, ಎರಡನೇ ಸಾಲಿನಲ್ಲಿ ವಿಮಾನಗಳಲ್ಲಿರುವಂತಹ ಸೀಟುಗಳನ್ನು ಹೊಂದಿದೆ. ಈ ಎಸ್‍‍ಯುವಿ ಭಾರತದಲ್ಲಿರುವ ಮೂರು ಸೀಟುಗಳ ಪ್ರೀಮಿಯಂ ಎಸ್‍‍ಯುವಿಯಾಗಿದೆ.

ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ಹೊಸ ಎಕ್ಸಲೆನ್ಸ್ ಲೌಂಜ್ ಕಂಸೋಲ್ ಭಾರತದಲ್ಲಿರುವ ಸ್ಟ್ಯಾಂಡರ್ಡ್ ಎಕ್ಸ್‌ಸಿ 90 ಎಸ್‌ಯುವಿಯ ಮೇಲೆ ಆಧಾರಿತವಾಗಿದೆ. ಆದರೆ, ಹೊಸ ಎಕ್ಸ್‌ಕ್ಲೂಸಿವ್ ಮಾದರಿಯು ಮುಂಭಾಗದಲ್ಲಿರುವ ಪ್ರಯಾಣಿಕ ಸೀಟಿನ ಬದಲಿಗೆ ಹೊಸ ಯುನಿಟ್ ಅನ್ನು ಹೊಂದಿದೆ.

ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ಈ ಹೊಸ ಯುನಿಟ್ ರೈಸಿಂಗ್ ಲೆಗ್ ರೆಸ್ಟ್, ಸ್ಟೋರೇಜ್ ಕಂಪಾರ್ಟ್‍‍ಮೆಂಟ್ ಹಾಗೂ ಪಾಪ್ ಅಪ್ ಟಚ್‌ಸ್ಕ್ರೀನ್ ಡಿಸ್‍‍ಪ್ಲೇ‍ಗಳನ್ನು ಹೊಂದಿದೆ. ಹೊಸ ಎಸ್‍‍ಯುವಿಯಲ್ಲಿ ಕ್ರಿಸ್ಟಲ್ ಗ್ಲಾಸ್, ಇನ್ ಕಾರ್ ರೆಫ್ರಿಜರೇಟರ್ ಹಾಗೂ ಷಾಂಪೇನ್ ಫ್ಲೂಟ್ ಹೋಲ್ಡರ್‍‍ನಂತಹ ಐಷಾರಾಮಿ ಫೀಚರ್‍‍ಗಳಿವೆ.

ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ವೊಲ್ವೊ ಎಕ್ಸ್‌ಸಿ 90 ಎಕ್ಸಲೆನ್ಸ್ ಲೌಂಜ್ ಕಂಸೋಲ್‍‍ನಲ್ಲಿ 20 ಸ್ಪೀಕರ್, 1400 ವ್ಯಾಟ್ ಬೋವರ್ಸ್ ಹಾಗೂ ವಿಲ್ಕೆನ್ಸ್ ಸರೌಂಡ್ ಸೌಂಡ್ ಸಿಸ್ಟಂ, ನಪ್ಪಾ ಲೆದರ್ ವ್ರಾಪ್ಡ್ ಸೀಟುಗಳು, ಒಪನ್ ಪೋರ್ ವುಡ್‍‍ಗಳಿದ್ದು ಕ್ಯಾಬಿನ್‌ಗೆ ಐಷಾರಾಮಿತನವನ್ನು ನೀಡುತ್ತವೆ.

ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ಎಕ್ಸ್‌ಸಿ 90 ಎಕ್ಸಲೆನ್ಸ್ ಲೌಂಜ್ ಕನ್ಸೋಲ್ ಓರೆಫೋರ್ಸ್‌ನ ಕ್ರಿಸ್ಟಲ್ ಗೇರ್ ಶಿಫ್ಟರ್‌ ಹೊಂದಿದೆ. ಇದು ಕಾರಿನ ಐಷಾರಾಮಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇವುಗಳ ಜೊತೆಗೆ ಸ್ಟ್ಯಾಂಡರ್ಡ್ ಮಾದರಿಯ ಎಸ್‍‍ಯುವಿಯಿಂದ ಪಡೆದ ಹಲವಾರು ಫೀಚರ್‍‍ಗಳಿವೆ.

ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ಮೆಕ್ಯಾನಿಕಲ್‌ ಅಂಶಗಳ ಬಗ್ಗೆ ಹೇಳುವುದಾದರೆ, ವೊಲ್ವೊ ಎಕ್ಸ್‌ಸಿ 90 ಎಕ್ಸಲೆನ್ಸ್ ಲೌಂಜ್ ಕಂಸೋಲ್ ಸ್ಟಾಂಡರ್ಡ್ ಎಸ್‍‍ಯುವಿಯಲ್ಲಿರುವಂತಹ ಟಿ 8 ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. ಈ 2.0 ಲೀಟರಿನ ಟರ್ಬೋಚಾರ್ಜ್ಡ್ ಹಾಗೂ ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು, ಎಲೆಕ್ಟ್ರಿಕ್ ಮೋಟರಿಗೆ ಜೋಡಿಸಲಾಗಿದೆ.

ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ಈ ಎರಡೂ ಎಂಜಿನ್‍‍ಗಳು ಜೊತೆಗೂಡಿ 401 ಬಿ‍‍ಹೆಚ್‍‍ಪಿ ಪವರ್ ಹಾಗೂ 640 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಸ್ಟಾಂಡರ್ಡ್ ಆಗಿ ಅಳವಡಿಸಲಾಗಿದೆ. ಈ ಟ್ರಾನ್ಸ್ ಮಿಷನ್ ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೆ ಎಡಬ್ಲ್ಯೂಡಿ ಸಿಸ್ಟಂ ಮೂಲಕ ಪವರ್ ನೀಡುತ್ತದೆ.

ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ಹೊಸ ವೊಲ್ವೊ ಎಕ್ಸ್‌ಸಿ 90 ಎಕ್ಸಲೆನ್ಸ್ ಲೌಂಜ್ ಕಂಸೋಲ್‍‍ಗಾಗಿ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ. ಆರ್ಡರ್ ಮಾಡಿದವರಿಗೆ ಮಾತ್ರ ಮಾರಾಟ ಮಾಡಲಾಗುವುದು. ಈ ಪ್ರೀಮಿಯಂ ಎಸ್‍‍ಯುವಿಯನ್ನು ಖರೀದಿಸ ಬಯಸುವವರು ರೂ.10 ಲಕ್ಷ ನೀಡಿ ಬುಕ್ಕಿಂಗ್ ಮಾಡಬಹುದು. ಬುಕ್ಕಿಂಗ್ ಮಾಡಿದ 7 ದಿನಗಳ ನಂತರ ಈ ಎಸ್‍‍ಯುವಿಯನ್ನು ಡೆಲಿವರಿ ಮಾಡಲಾಗುವುದು.

ಭಾರತಕ್ಕೆ ಕಾಲಿಟ್ಟ ವೊಲ್ವೊ ಎಕ್ಸ್‌ಸಿ 90

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವೊಲ್ವೊ ಎಕ್ಸ್‌ಸಿ 90 ಎಕ್ಸಲೆನ್ಸ್ ಲೌಂಜ್ ಕಂಸೋಲ್ ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯಂತ ಐಷಾರಾಮಿಯಾದ ಎಸ್‍‍ಯುವಿಯಾಗಿದೆ. ಕೇವಲ 15 ಯುನಿಟ್‍‍ಗಳನ್ನು ಮಾರಾಟ ಮಾಡಲಾಗುವ ಈ ಎಸ್‍‍ಯುವಿ ಭಾರತದ ತನ್ನ ಗ್ರಾಹಕರಿಗೆ ಐಷಾರಾಮಿ ಹಾಗೂ ಹಲವು ವಿಶೇಷತೆಗಳನ್ನು ನೀಡಲಿದೆ. ವೊಲ್ವೊ ಎಕ್ಸ್‌ಸಿ 90 ದೇಶಿಯ ಮಾರುಕಟ್ಟೆಯಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್ 7 ಹಾಗೂ ಆಡಿ ಕ್ಯೂ8 ಎಸ್‍‍ಯುವಿಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Wednesday, September 4, 2019, 18:03 [IST]
English summary
Volvo XC90 Excellence Lounge Console Launched In India: Priced At Rs 1.42 Crore - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+