2022ರ ಸಿವಿಕ್ ಕಾರಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾದ ಸಿವಿಕ್ ಸೆಡಾನ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಹೋಂಡಾ ಕಂಪನಿಯು ಈ ಜನಪ್ರಿಯ ಸಿವಿಕ್ ಕಾರನ್ನು ಹಲವು ಬಾರಿ ನವೀಕರಣವನ್ನು ನಡೆಸಿದ್ದಾರೆ.

2022ರ ಸಿವಿಕ್ ಕಾರಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಕಂಪನಿಯು ಮುಂದಿನ ವಾರ 2022ರ ಸಿವಿಕ್ ಕಾರಿನ ಮೂಲ ಮಾದರಿಯನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದು ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ. ಟೀಸರ್ ವೀಡಿಯೋದಲ್ಲಿ, 2022ರ ಸಿವಿಕ್ ಸ್ಟೈಲಿಂಗ್ ಸೆಡಾನ್ ಪ್ರಿಯರನ್ನು ಮತ್ತೊಮ್ಮೆ ರೋಮಾಂಚನಗೊಳಿಸುವಂತಿದೆ. 11ನೇ ತಲೆಮಾರಿನ ಹೋಂಡಾ ಸಿವಿಕ್ ಕಾರನ್ನು ಖರೀದಿದಾರರ ಬೇಡಿಕೆಗಳು ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ವಿನ್ಯಾಸ ಮಾಡಿರುವಂತೆ ವೀಡಿಯೋದಲ್ಲಿ ಕಂಡುಬಂದಿದೆ.

2022ರ ಸಿವಿಕ್ ಕಾರಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

11ನೇ ತಲೆಮಾರಿನ ಹೋಂಡಾ ಸಿವಿಕ್ ಕಾರು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ನೀಡಲಾಗಿದೆ. ಇನ್ನು ಈ ಹೊಸ ಕಾರಿನಲ್ಲಿ ಕ್ರೋಮ್‌ನಲ್ಲಿ ಹೋಂಡಾ ಬ್ಯಾಡ್ಜ್ ಜೊತೆಗೆ ಗ್ಲೋಸ್ ಬ್ಲ್ಯಾಕ್ ಗ್ರಿಲ್ ಅನ್ನು ಹೊಂದಿದ್ದು, ಇದರೊಂದಿಗೆ ಕಾರಿನ ಮುಂಭಾಗದ ಆಕರ್ಷಕವಾಗಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

2022ರ ಸಿವಿಕ್ ಕಾರಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಇನ್ನು ಹೆಚ್ಚುವರಿಯಾಗಿ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ತೆಳುವಾದ ಮತ್ತು ಸೊಗಸಾದ ಎಲ್ಇಡಿ ಲೈಟ್ಸ್ ಅನ್ನು ನೀಡಲಾಗಿದೆ. ಆದರೂ ಕೂಡ ಸಿವಿಲ್ ಮೂಲದ ಮಾದರಿಯಂತಿದೆ. ಆದರೆ ವಿನ್ಯಾಸದಲ್ಲಿ ಕೆಲವು ನವೀಕರಣಗಳನ್ನು ನಡೆಸಲಾಗಿದೆ.

2022ರ ಸಿವಿಕ್ ಕಾರಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

11ನೇ ತಲೆಮಾರಿನ ಹೋಂಡಾ ಸಿವಿಕ್ ಕಾರಿನ ಎಂಜಿನ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಇದರಲ್ಲಿ ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2022ರ ಸಿವಿಕ್ ಕಾರಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಕಂಪನಿಯು ತನ್ನ ಎಲ್ಲಾ ಜನಪ್ರಿಯ ಮಾದರಿಗಳಲ್ಲಿ ಮಾರುಕಟ್ಟೆಯ ಬೇಡಿಕೆಯನ್ನು ಪರಿಗಣಿಸಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತಿದೆ. ಇನ್ನು ಹೊಸ ಸಿವಿಕ್ ಕಾರಿನಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಕೂಡ ಸ್ಟಾಂಡರ್ಡ್ ಆಗಿ ನೀಡಬಹುದು.

2022ರ ಸಿವಿಕ್ ಕಾರಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಸಿವಿಕ್ ಡೀಸೆಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಸಿವಿಕ್ ಡಿಸೇಲ್ ಆವೃತ್ತಿಯು ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಈ ಬಿಎಸ್-6 ಸಿವಿಕ್ ಡೀಸೆಲ್ ಆವೃತ್ತಿಯಲ್ಲಿ 1.5-ಲೀಟರ್ ಐ-ಡಿಟಿಇಸಿ ಟರ್ಬೋಚಾರ್ಜ್ಡ್ ಯುನಿಟ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 4000 ಆರ್‌ಪಿಎಂನಲ್ಲಿ 118 ಬಿಹೆಚ್‌ಪಿ ಮತ್ತು 2000 ಆರ್‌ಪಿಎಂನಲ್ಲಿ 300 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

2022ರ ಸಿವಿಕ್ ಕಾರಿನ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಇನ್ನು 2022ರ ಸಿವಿಕ್ ಕಾರು ಹಲವಾರು ಸ್ಟೈಲಿಂಗ್ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಟವಾಗುತ್ತಿರುವ ಮಾರಾಟಕ್ಕೆ ಹೋಲಿಸಿದರೆ ಸಾಕಷ್ಟು ಸ್ಟೈಲಿಶ್ ಆಗಿದೆ ಎಂದು ಹೇಳಬಹುದು. ಸೆಡಾನ್ ಪ್ರಿಯರಿಗೆ ಹೊಸ ಟೀಸರ್ ಮೂಲಕ ಇನ್ನು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.

Most Read Articles

Kannada
Read more on ಹೋಂಡಾ honda
English summary
Honda Civic 2022 Teased. Read In Kannada.
Story first published: Friday, November 13, 2020, 13:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X