ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಸಿಟಿ ಕಾರು

ಹೋಂಡಾ ಕಂಪನಿಯು ತನ್ನ 2020ರ ಸಿಟಿ ಕಾರನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಹೋಂಡಾ ಕಂಪನಿಯು ತನ್ನ ಹೊಸ ಸಿಟಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲು ಭಾರತದ ರಸ್ತೆಯಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಸಿಟಿ ಕಾರು

ಹೋಂಡಾ ಕಂಪನಿಯು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಥಾಯ್‍‍ಲ್ಯಾಂಡ್‍ನ 2019ರ ಥಾಯ್ ಮೋಟಾರ್ ಎಕ್ಸ್ ಪೋದಲ್ಲಿ ತನ್ನ ಹೊಸ ಸಿಟಿ ಕಾರನ್ನು ಜಾಗತಿಕವಾಗಿ ಬಿಡುಗಡೆಗೊಳಿಸಿತ್ತು.ಹೋಂಡಾ ಕಂಪನಿಯು 2020ರ ಹೋಂಡಾ ಸಿಟಿ ಕಾರನ್ನು ಮುಂದಿನ ಮಾರ್ಚ್ 16ರಂದು ಭಾರತದಲ್ಲಿ ಅನಾವರಣಗೊಳಿಸಲಿದೆ. ಈ ಹೋಂಡಾ ಸಿಟಿ ಕಾರಿನ ಬುಕ್ಕಿಂಗ್ ಕೂಡ ಅದೇ ದಿನ ಪ್ರಾರಂಭವಾಗುವ ಸಾಧ್ಯತೆಗಳಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಸಿಟಿ ಕಾರು

ಹೋಂಡಾ ಸಿಟಿ ಮಾದರಿಯು ಹೋಂಡಾ ಕಂಪನಿಯ ಸರಣಿಯ ಕಾರುಗಳಲ್ಲಿ ಹಲವು ವರ್ಷಗಳಿಂದ ಹೆಚ್ಚು ಮಾರಾಟವಾಗುವ ಕಾರು ಆಗಿದೆ. ಹೋಂಡಾ ಸಿಟಿ ಕಾರು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್‍‍ಲೇನ್ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಸಿಟಿ ಕಾರು

ಪ್ರಸುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ವಾಗುತ್ತಿರುವ ಕಾರಗಳಾದ ಸಿಟಿ 4440 ಎಂಎಂ, ವರ್ನಾ 4440 ಎಂಎಂ ಮತ್ತು ಸಿಯಾಜ್ 4490 ಎಂಎಂ ಉದ್ದವನ್ನು ಹೊಂದಿವೆ. ಹೊಸ ಹೋಂಡಾ ಸಿಟಿ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೋಂಡಾ ಸಿವಿಕ್ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಸಿಟಿ ಕಾರು

2020ರ ಹೋಂಡಾ ಸಿಟಿ ಶಾರ್ಪರ್ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿರಲಿದೆ. ಇನ್ನೂ ಈ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್‍ಇಡಿ ಯು‍‍ನಿ‍ಟ್‍‍ಗಳು, ಹೋಂಡಾ ಸಿಗ್ನೇಚರ್ ಕ್ರೋಮ್ ಬಾರ್, ಕೂಪ್ ಸ್ಟೈಲ್ ಸ್ಲೋಪಿಂಗ್ ರೂಫ್‍‍ಲೈನ್ ಮತ್ತು ದೊಡ್ಡ ಒ‍ಆರ್‍‍ವಿಎಂ‍ಗಳಿವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಸಿಟಿ ಕಾರು

ಇನ್ನೂ ಹೊಸ ಹೋಂಡಾ ಕಾರಿನಲ್ಲಿ ಶಾರ್ಕ್ ಫಿನ್ ಆಂಟೆನಾ, ಟೇಲ್ ಸೆಗ್‍ಮೆಂಟ್ ಮತ್ತು ಉತ್ತಮವಾದ ಬೂಟ್ ಲಿ‍ಡ್‍‍‍ಗಳಿವೆ. ಹೊಸ ಹೋಂಡಾ ಸಿಟಿ ಕಾರಿನ ಇಂಟಿರಿಯರ್‍‍ನಲ್ಲಿ ಡ್ಯುಯಲ್ ಟೋನ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍‍‍ರೆಸ್ಟ್, ಡಿಜಿ‍ಟಲ್ ಇನ್ಸ್ ಟ್ರೂ‍‍ಮೆಂಟ್ ಕನ್ಸೋಲ್, ಹೊಸ ಟಚ್‍‍ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಸಿಟಿ ಕಾರು

ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್‍‍ನಲ್ಲಿ ಕಂಡುಬರುವ ಕನೆಕ್ಟಿವಿಟಿ ತಂತ್ರಜ್ಞಾನಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಹೋಂಡಾ ಸಂಸ್ಥೆಯು ಭಾರತ ಸೇರಿದಂತೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಜನಪ್ರಿಯ ಸಿಟಿ ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಸಿಟಿ ಕಾರು

ಹೊಸ ಸಿಟಿ ಕಾರು 1.5 ಲೀಟರ್ ಐ-ವಿಟಿಇಸಿ ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 100 ಬಿ‍‍ಹೆಚ್‍‍ಪಿ ಪವರ್ ಮತ್ತು 200 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 117 ಬಿ‍‍ಹೆಚ್‍‍ಪಿ ಪವರ್ ಮತ್ತು 145 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು ಸಿವಿ‍ಟಿ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಹೊಂದಿರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಸಿಟಿ ಕಾರು

ಹೊಸ ಹೋಂಡಾ ಸಿಟಿ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Friday, February 28, 2020, 16:50 [IST]
English summary
2020 Honda City BS6 Spied During Emission Test. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+