ಬಿಡುಗಡೆಗೂ ಮುನ್ನ ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿ ಬಿಡುಗಡೆಗೊಳಿಸಿದ್ದು, ಇದೀಗ ನ್ಯೂ ಜನರೇಷನ್ ಸಿಟಿ ಸೆಡಾನ್ ಮಾದರಿಯನ್ನು ಸಹ ಭಾರೀ ಬದಲಾವಣೆಯೊಂದಿಗೆ ಬಿಡುಗಡೆ ಮಾಡುತ್ತಿದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಮಾಹಿತಿಗಳ ಪ್ರಕಾರ ಹೊಸ ಸಿಟಿ ಸೆಡಾನ್ ಕಾರು ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್‌ಗಳಲ್ಲಿ ಹೊಸ ಕಾರನ್ನು ಸ್ಟಾಕ್ ಮಾಡಲಾಗುತ್ತಿದೆ. ಹೊಸ ಕಾರು ಖರೀದಿಗಾಗಿ ಈಗಾಗಲೇ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದ್ದು, ಹೊಸ ಕಾರಿನ ಅಧಿಕೃತ ಮಾಹಿತಿಯುಳ್ಳ ಕೈಪಿಡಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿರುವ ಮಾಹಿತಿಯೆಂತೆ ಹೊಸ ಕಾರು ಸಿ ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿವಾಗಿ ಹೊಸ ಕಾರು ವಿ, ವಿಎಕ್ಸ್, ಜೆಡ್ಎಕ್ಸ್ ಆವೃತ್ತಿಗಳೊಂದಿಗೆ ವಿವಿಧ ಮಾದರಿಯ ತಾಂತ್ರಿಕ ಅಂಶಗಳನ್ನು ಹೊಂದಿದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

5ನೇ ತಲೆಮಾರಿನ ಸಿಟಿ ಸೆಡಾನ್ ಕಾರನ್ನು ಈಗಾಗಲೇ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಹೋಂಡಾ ಕಂಪನಿಯು ಇದೀಗ ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು 4,549 ಎಂಎಂ ಉದ್ದ, 1,748 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಮೂಲಕ ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಳಲ್ಲೇ ಆಕರ್ಷಕ ಲುಕ್ ಹೊಂದಿದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಹೊಸ ಕಾರಿನಲ್ಲಿ ಕಟಿಂಗ್ ಎಡ್ಜ್ ಎಲ್ಇಡಿ ಹೆಡ್‍‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್, ಎಲ್ ಶೇಪ್ಡ್ ಎಲ್ಇಡಿ ಟರ್ನ್ ಸಿಗ್ನಲ್, ಡೈನಾಮಿಕ್ ಇಂಡಿಕೇಟರ್ ನೀಡಲಾಗಿದ್ದು, ಹೊಸ ಕಾರು 10ನೇ ತಲೆಮಾರಿನ ಸಿವಿಕ್ ಸೆಡಾನ್ ಮಾದರಿಯಿಂದಲೂ ಹಲವಾರು ಫೀಚರ್ಸ್‌ಗಳನ್ನು ಎರವಲು ಪಡೆದುಕೊಂಡಿದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಹೊಸ ಸಿಟಿ ಕಾರಿನ ಇಂಟಿರಿಯರ್‍ ಈ ಸಾಕಷ್ಟು ಹೊಸತನದೊಂದಿಗೆ ಅಭಿವೃದ್ದಿಗೊಂಡಿದ್ದು, ಸಾಫ್ಟ್ ಟಚ್ ಮಟಿರಿಯಲ್‌ನೊಂದಿಗೆ ಸಾಫ್ಟ್ ಟಚ್ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಇನ್‌ಟೈನ್‌ಮೆಂಟ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍‍‍ರೆಸ್ಟ್, ಡಿಜಿ‍ಟಲ್ ಇನ್ಸ್ ಟ್ರೂ‍‍ಮೆಂಟ್ ಕನ್ಸೋಲ್, ಹೊಸ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಜೊತೆಗೆ ಸ್ಪೋರ್ಟಿ ವಿನ್ಯಾಸದ ಲೆದರ್ ಸೀಟುಗಳು, ಮ್ಯಾನುವಲ್ ಸನ್‌ರೂಫ್, ಹಿಂಭಾಗದ ಎಸಿ ವೆಂಟ್ಸ್, ಹಿಂಭಾಗದ ಆಸನದಲ್ಲೂ ಸೆಂಟರ್ ಆರ್ಮ್ ರೆಸ್ಟ್‌ನೊಂದಿಗೆ ಕಪ್ ಹೋಲ್ಡರ್ ನೀಡಲಾಗಿದ್ದು, ಹೊಸ ಕಾರು ಹಲವಾರು ಕನೆಕ್ವಿಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಸಿಟಿ ಕಾರಿನಲ್ಲಿ ಈ ಬಾರಿ ಡಬಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್15ಬಿ) ನೀಡಲಾಗುತ್ತಿದ್ದು, ಈ ಹೊಸ ಎಂಜಿನ್ 120-ಬಿಎಚ್‌ಪಿ ಮತ್ತು 145-ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಹಾಗೆಯೇ ಡೀಸೆಲ್ ಮಾದರಿಯು 1.5-ಲೀಟರ್ 100-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಸ್ಟ್ಯಾಂಡರ್ಡ್ ಆಗಿ ಎರಡು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಪೆಟ್ರೋಲ್ ಹೈ ಎಂಡ್ ಮಾದರಿಯಲ್ಲಿ ಮಾತ್ರವೇ 7-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 17ರಿಂದ 18 ಕಿ.ಮೀ ಮತ್ತು ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 22ರಿಂದ 23 ಕಿ.ಮೀ ಇಂಧನ ದಕ್ಷತೆಯನ್ನು ಹೊಂದಿರಲಿದೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಸುರಕ್ಷಾ ಸೌಲಭ್ಯಗಳು ಸಿ-ಸೆಗ್ಮೆಂಟ್ ಸೆಡಾನ್ ಕಾರಿನಲ್ಲೇ ಅತಿಹೆಚ್ಚು ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಸಿಟಿ ಕಾರಿನಲ್ಲಿ ಈ ಬಾರಿ ಮತ್ತಷ್ಟು ಸುಧಾರಿತ ಸುರಕ್ಷಾ ಅಂಶಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಹ್ಯಾಂಡ್‌ಲಿಂಗ್ ಅಸಿಸ್ಟ್, ಹಿಲ್ ಸ್ಟಾರ್ಟ್, 6-ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಮತ್ತು 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳಿವೆ.

ನ್ಯೂ ಜನರೇಷನ್ ಸಿಟಿ ಕಾರಿನ ಅಧಿಕೃತ ತಾಂತ್ರಿಕ ಮಾಹಿತಿ ಸೋರಿಕೆ

ಹೈ ಎಂಡ್ ಮಾದರಿಯಾದ ಸಿಟಿ ಝೆಡ್ಎಕ್ಸ್ ನಲ್ಲಿ ಲೇನ್ ವಾಚ್ ಕ್ಯಾಮೆರಾ ಸಿಸ್ಟಂ ಇದ್ದು, ಇದನ್ನು ಎಡ ಭಾಗದ ರಿಯರ್ ವ್ಯೂ ಮಿರರ್‌‌ನಲ್ಲಿ ಅಳವಡಿಸಲಾಗಿರುವ‌ ಕ್ಯಾಮೆರಾ ಮೂಲಕ ಗರಿಷ್ಠ ಸುರಕ್ಷತೆ ಪಡೆದುಕೊಳ್ಳಬಹುದಾಗಿದೆ.

More from DriveSpark

Article Published On: Saturday, July 11, 2020, 8:45 [IST]
English summary
2020 Honda City Features Detailed Brochure Leaked. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+